Bible

Psalm 122 - BBE (Kannada)

1 <A Song of the going up. Of David.> I was glad because they said to me, We will go into the house of the Lord.ಕರ್ತನ ಆಲಯಕ್ಕೆ ಹೋಗೋಣ ಎಂದು ಅವರು ನನಗೆ ಹೇಳಿದಾಗ ನನಗೆ ಸಂತೋಷವಾಯಿತು.

2 At last our feet were inside your doors, O Jerusalem.ಓ ಯೆರೂಸಲೇಮೇ, ನಮ್ಮ ಪಾದಗಳು ನಿನ್ನ ಬಾಗಲುಗಳಲ್ಲಿ ನಿಲ್ಲುತ್ತವೆ.

3 O Jerusalem, you are like a town which is well joined together;ಯೆರೂಸಲೇಮು ಒಟ್ಟಾಗಿ ಜೋಡಿಸಲ್ಪಟ್ಟ ಪಟ್ಟ ಣದ ಹಾಗೆ ಕಟ್ಟಲ್ಪಟ್ಟಿದೆ.

4 To which the tribes went up, even the tribes of the Lord, for a witness to Israel, to give praise to the name of the Lord.ಅಲ್ಲಿಗೆ ಗೋತ್ರಗಳು, ಕರ್ತನ ಗೋತ್ರಗಳು, ಇಸ್ರಾಯೇಲಿಗೆ ಸಾಕ್ಷಿಯಾಗಿ, ಕರ್ತನ ಹೆಸರನ್ನು ಕೊಂಡಾಡುವದಕ್ಕೆ ಹೋಗುತ್ತದೆ.

5 For there seats for the judges were placed, even the rulers' seats of the line of David.ಅಲ್ಲಿ ನ್ಯಾಯತೀರ್ವಿಕೆಗೆ ಸಿಂಹಾಸನಗಳೂ ದಾವೀದನ ಮನೆಯ ಸಿಂಹಾಸನಗಳೂ ಇರುತ್ತವೆ.

6 O make prayers for the peace of Jerusalem; may they whose love is given to you do well.ಯೆರೂಸಲೇಮಿನ ಸಮಾಧಾನಕ್ಕಾಗಿ ಪ್ರಾರ್ಥಿಸಿರಿ. ಯೆರೂಸಲೇಮನ್ನು ಪ್ರೀತಿಮಾಡುವವರು ಅಭಿವೃದ್ಧಿ ಯಾಗುವರು.

7 May peace be inside your walls, and wealth in your noble houses.ನಿನ್ನ ಪ್ರಾಕಾರದಲ್ಲಿ ಸಮಾಧಾನವೂ ಅರಮನೆಗಳಲ್ಲಿ ಅಭಿವೃದ್ಧಿಯೂ ಇರಲಿ.

8 Because of my brothers and friends, I will now say, Let peace be with you.ನನ್ನ ಸಹೋದರರ ನಿಮಿತ್ತವೂ ನನ್ನ ಸ್ನೇಹಿತರ ನಿಮಿತ್ತವೂ ನಿನ್ನಲ್ಲಿ ಸಮಾಧಾನವಿರಲೆಂದು ಈಗ ಹೇಳುತ್ತೇನೆ.

9 Because of the house of the Lord our God, I will be working for your good.ನಮ್ಮ ದೇವರಾದ ಕರ್ತನ ಆಲಯದ ನಿಮಿತ್ತ ನಿನಗೆ ಒಳ್ಳೇದನ್ನು ಹುಡುಕುತ್ತೇನೆ.

Kannada Bible