1ತರುವಾಯ ಮೋಶೆಯೂ ಆರೋನನೂ ಹೋಗಿ ಫರೋಹನಿಗೆ--ಇಸ್ರಾಯೇಲಿನ ದೇವರಾದ ಕರ್ತನು--ಅರಣ್ಯದಲ್ಲಿ ನನ್ನ ಜನರು ನನಗೆ ಹಬ್ಬವನ್ನಾಚರಿಸುವದಕ್ಕೆ ಅವರನ್ನು ಹೋಗಗೊಡಿಸು ಎಂದು ಹೇಳುತ್ತಾನೆ ಅಂದರು.And afterward Moses and Aaron went in, and told Pharaoh, Thus saith the LORD God of Israel, Let my people go, that they may hold a feast unto me in the wilderness.
2ಫರೋಹನು--ನಾನು ಆತನ ಸ್ವರಕ್ಕೆ ವಿಧೇಯನಾಗಿ ಇಸ್ರಾಯೇಲ್ಯರನ್ನು ಕಳುಹಿಸಿ ಬಿಡುವಂತೆ ಆ ಕರ್ತನು ಯಾರು? ಆ ಕರ್ತನನ್ನು ನಾನರಿಯೆನು ಮತ್ತು ಇಸ್ರಾಯೇಲ್ಯರನ್ನು ಕಳುಹಿಸುವದಿಲ್ಲ ಅಂದನು.And Pharaoh said, Who is the LORD, that I should obey his voice to let Israel go? I know not the LORD, neither will I let Israel go.
3ಆಗ ಅವರು ಫರೋಹ ನಿಗೆ--ಇಬ್ರಿಯರ ದೇವರು ನಮ್ಮನ್ನು ಎದುರುಗೊಂಡಿ ದ್ದಾನೆ; ಆದದರಿಂದ ನಾವು ಅರಣ್ಯದಲ್ಲಿ ಮೂರು ದಿನ ಪ್ರಯಾಣಮಾಡಿ ನಮ್ಮ ದೇವರಾದ ಕರ್ತನಿಗೆ ಬಲಿ ಅರ್ಪಿಸುವದಕ್ಕಾಗಿ ನಾವು ಹೋಗಬೇಕು; ಇಲ್ಲ ವಾದರೆ ಆತನು ವ್ಯಾಧಿಯಿಂದಲಾದರೂ ಕತ್ತಿಯಿಂದ ಲಾದರೂ ನಮ್ಮನ್ನು ಸಂಹಾರ ಮಾಡಾನು ಎಂದು ಅಂದರು.And they said, The God of the Hebrews hath met with us: let us go, we pray thee, three days' journey into the desert, and sacrifice unto the LORD our God; lest he fall upon us with pestilence, or with the sword.
4ಐಗುಪ್ತದ ಅರಸನು ಅವರಿಗೆ--ಮೋಶೆಯೇ, ಆರೋನನೇ, ಜನರು ತಮ್ಮ ಕೆಲಸ ಗಳನ್ನು ಮಾಡದಂತೆ ಯಾಕೆ ಮಾಡುತ್ತೀರಿ? ನಿಮ್ಮ ಬಿಟ್ಟೀಕೆಲಸಗಳಿಗೆ ಹೋಗಿರಿ ಅಂದನು.And the king of Egypt said unto them, Wherefore do ye, Moses and Aaron, let the people from their works? get you unto your burdens.
5ಫರೋ ಹನು--ಇಗೋ, ಈಗ ದೇಶದ ಜನರು ಹೆಚ್ಚಿದ್ದಾರೆ; ನೀವು ಅವರನ್ನು ಅವರ ಬಿಟ್ಟೀಕೆಲಸಗಳಿಂದ ನಿಲ್ಲಿಸಿ ಬಿಡುತ್ತೀರಿ ಅಂದನು.And Pharaoh said, Behold, the people of the land now are many, and ye make them rest from their burdens.
6ಅದೇ ದಿನದಲ್ಲಿ ಫರೋಹನು ಬಿಟ್ಟೀಕೆಲಸ ಮಾಡಿಸುವವರಿಗೂ ಅವರ ಅಧಿಕಾರಿ ಗಳಿಗೂ--And Pharaoh commanded the same day the taskmasters of the people, and their officers, saying,
7ನೀವು ಇನ್ನು ಇಟ್ಟಿಗೆಗಳನ್ನು ಮಾಡುವದಕ್ಕೆ ಮೊದಲಿನ ಹಾಗೆ ಜನರಿಗೆ ಹುಲ್ಲನ್ನು ಕೊಡಬೇಡಿರಿ. ಅವರೇ ಹೋಗಿ ಹುಲ್ಲನ್ನು ಕೂಡಿಸಿಕೊಳ್ಳಲಿ.Ye shall no more give the people straw to make brick, as heretofore: let them go and gather straw for themselves.
8ಅವರು ಈ ವರೆಗೆ ಮಾಡಿದ ಇಟ್ಟಿಗೆಗಳ ಲೆಕ್ಕದಲ್ಲಿ ಏನೂ ಕಡಿಮೆ ಮಾಡಬಾರದೆಂದು ಅವರಿಗೆ ಹೇಳಬೇಕು. ಅವರು ಮೈಗಳ್ಳರೇ; ಆದದರಿಂದ ಅವರು--ನಾವು ಹೋಗಿ ನಮ್ಮ ದೇವರಿಗೆ ಬಲಿ ಅರ್ಪಿಸೋಣ ಎಂದು ಕೂಗುತ್ತಾರೆ.And the tale of the bricks, which they did make heretofore, ye shall lay upon them; ye shall not diminish ought thereof: for they be idle; therefore they cry, saying, Let us go and sacrifice to our God.
9ಈ ಜನರು ವ್ಯರ್ಥವಾದ ಮಾತುಗಳಿಗೆ ಲಕ್ಷ್ಯಕೊಡದಂತೆ ಅವರ ಮೇಲೆ ಹೆಚ್ಚು ಕೆಲಸಗಳನ್ನು ಹೊರಿಸಿರಿ, ಅವರು ದುಡಿಯಲಿ ಎಂದು ಆಜ್ಞಾಪಿಸಿದನು.Let there more work be laid upon the men, that they may labor therein; and let them not regard vain words.
10ಆಗ ಬಿಟ್ಟೀಕೆಲಸವನ್ನು ಮಾಡಿಸುವವರೂ ಅಧಿ ಕಾರಿಗಳೂ ಹೊರಗೆಹೋಗಿ ಜನರಿಗೆ--ಫರೋಹನು ಹೀಗೆ ಹೇಳುತ್ತಾನೆ--ನಾನು ನಿಮಗೆ ಹುಲ್ಲು ಕೊಡು ವದಿಲ್ಲ.And the taskmasters of the people went out, and their officers, and they spake to the people, saying, Thus saith Pharaoh, I will not give you straw.
11ನಿಮಗೆ ಹುಲ್ಲು ಎಲ್ಲಿ ದೊರಕುವದೋ ಅಲ್ಲಿಗೆ ನೀವೇ ಹೋಗಿ ತಕ್ಕೊಳ್ಳಿರಿ; ಆದಾಗ್ಯೂ ನಿಮ್ಮ ಕೆಲಸವು ಏನೂ ಕಡಿಮೆಯಾಗಬಾರದು ಎಂದು ಹೇಳಿ ದ್ದಾನೆ ಅಂದನು.Go ye, get you straw where ye can find it: yet not ought of your work shall be diminished.
12ಆಗ ಜನರು ಹುಲ್ಲಿಗೆ ಬದಲಾಗಿ ಕೂಳೆ ಕೂಡಿಸಿಕೊಳ್ಳುವದಕ್ಕೆ ಐಗುಪ್ತದೇಶದಲ್ಲೆಲ್ಲಾ ಚದರಿಹೋದರು.So the people were scattered abroad throughout all the land of Egypt to gather stubble instead of straw.
13ಇದಲ್ಲದೆ ಬಿಟ್ಟೀಕೆಲಸ ಮಾಡಿಸು ವವರು--ಹುಲ್ಲು ಇದ್ದಾಗ ನಿಮ್ಮ ಕೆಲಸಗಳನ್ನು ಮಾಡಿ ದಂತೆಯೇ ಪ್ರತಿಯೊಂದು ದಿನದಲ್ಲಿ ಆ ದಿನದ ಕೆಲಸ ವನ್ನು ತೀರಿಸಿಬಿಡಬೇಕು ಎಂದು ಹೇಳಿ ಅವರನ್ನು ತ್ವರೆಪಡಿಸಿದರು.And the taskmasters hasted them, saying, Fulfil your works, your daily tasks, as when there was straw.
14ಇಸ್ರಾಯೇಲ್ಯರು ಬಿಟ್ಟೀಕೆಲಸ ಮಾಡಿಸುವಂತೆ ಫರೋಹನ ಅಧಿಕಾರಿಗಳು ನೇಮಿಸಿ ದವರಿಗೆ--ನೀವು ಮೊದಲು ಇಟ್ಟಿಗೆಗಳ ಲೆಕ್ಕವನ್ನು ಒಪ್ಪಿಸಿದಂತೆ ನಿನ್ನೆ ಈ ಹೊತ್ತು ಯಾಕೆ ಒಪ್ಪಿಸಲಿಲ್ಲ ಎಂದು ಹೇಳಿ ಅವರನ್ನು ಹೊಡಿಸಿದರು.And the officers of the children of Israel, which Pharaoh's taskmasters had set over them, were beaten, and demanded, Wherefore have ye not fulfilled your task in making brick both yesterday and to day, as heretofore?
15ಇಸ್ರಾಯೇಲ್ ಮಕ್ಕಳ ಅಧಿಕಾರಿಗಳು ಫರೋ ಹನ ಬಳಿಗೆ ಹೋಗಿ--ಯಾಕೆ ನಿನ್ನ ದಾಸರಿಗೆ ಹೀಗೆ ಮಾಡುತ್ತೀ?Then the officers of the children of Israel came and cried unto Pharaoh, saying, Wherefore dealest thou thus with thy servants?
16ನಿನ್ನ ದಾಸರಿಗೆ ಅವರು ಹುಲ್ಲು ಕೊಡದೆ--ಇಟ್ಟಿಗೆಗಳನ್ನು ಮಾಡಿರಿ ಎಂದು ನಮಗೆ ಹೇಳುತ್ತಾರೆ. ಇಗೋ, ನಿನ್ನ ದಾಸರನ್ನು ಹೊಡೆಯುತ್ತಾರೆ. ಆದರೆ ನಿನ್ನ ಸ್ವಂತ ಜನರಲ್ಲಿಯೇ ತಪ್ಪು ಇದೆ ಅಂದರು.There is no straw given unto thy servants, and they say to us, Make brick: and, behold, thy servants are beaten; but the fault is in thine own people.
17ಅದಕ್ಕೆ ಅವನು--ನೀವು ಮೈಗಳ್ಳರು, ನೀವು ಮೈಗಳ್ಳರಾದ ಕಾರಣ--ನಾವು ಹೋಗಿ ಕರ್ತನಿಗೆ ಬಲಿಯರ್ಪಿಸುತ್ತೇವೆ ಎಂದು ಅನ್ನುತ್ತೀರಿ.But he said, Ye are idle, ye are idle: therefore ye say, Let us go and do sacrifice to the LORD.
18ಆದದ ರಿಂದ ಈಗ ಹೋಗಿ ಕೆಲಸಮಾಡಿರಿ, ಹುಲ್ಲನ್ನು ನಿಮಗೆ ಕೊಡುವದಕ್ಕಾಗುವದಿಲ್ಲ. ಆದಾಗ್ಯೂ ನೇಮಿಸಿದ್ದ ಇಟ್ಟಿಗೆಗಳನ್ನು ನೀವು ಕೊಡಬೇಕು ಅಂದನು.Go therefore now, and work; for there shall no straw be given you, yet shall ye deliver the tale of bricks.
19ದಿನದಿನವೂ ಒಪ್ಪಿಸಬೇಕಾದ ಇಟ್ಟಿಗೆಗಳ ಲೆಕ್ಕ ಕಡಿಮೆಯಾಗಬಾರದೆಂದು ಅಪ್ಪಣೆಯಾದದ್ದರಿಂದ ಇಸ್ರಾಯೇಲ್ ಅಧಿಕಾರಿಗಳು ತಾವು ದುರವಸ್ಥೆಯಲ್ಲಿ ದ್ದೇವೆಂದು ತಿಳುಕೊಂಡರು.And the officers of the children of Israel did see that they were in evil case, after it was said, Ye shall not minish ought from your bricks of your daily task.
20ಅವರು ಫರೋಹ ನಿಂದ ಹೊರಗೆ ಬಂದಾಗ ದಾರಿಯಲ್ಲಿ ನಿಂತಿದ್ದ ಮೋಶೆಯನ್ನೂ ಆರೋನನನ್ನೂ ಸಂಧಿಸಿAnd they met Moses and Aaron, who stood in the way, as they came forth from Pharaoh:
21ಅವ ರಿಗೆ--ಕರ್ತನು ನಿಮ್ಮನ್ನು ನೋಡಿ ನ್ಯಾಯತೀರಿಸಲಿ; ನೀವೇ ಫರೋಹನ ಮುಂದೆಯೂ ಅವನ ದಾಸರ ಮುಂದೆಯೂ ನಮ್ಮನ್ನು ಅವರು ಹೇಸಿಕೊಳ್ಳುವಂತೆ ಮಾಡಿದಿರಿ, ನಮ್ಮನ್ನು ಸಂಹರಿಸುವದಕ್ಕೆ ನೀವು ಅವರ ಕೈಗೆ ಕತ್ತಿಯನ್ನು ಕೊಟ್ಟಿರಿ ಅಂದರು.And they said unto them, The LORD look upon you, and judge; because ye have made our savor to be abhorred in the eyes of Pharaoh, and in the eyes of his servants, to put a sword in their hand to slay us.
22ಆಗ ಮೋಶೆಯು ಕರ್ತನ ಬಳಿಗೆ ಬಂದು--ಕರ್ತನೇ, ಈ ಜನರಿಗೆ ಯಾಕೆ ಕೇಡನ್ನು ಮಾಡಿದಿ? ಯಾಕೆ ನನ್ನನ್ನು ಕಳುಹಿಸಿದಿ?And Moses returned unto the LORD, and said, LORD, wherefore hast thou so evil entreated this people? why is it that thou hast sent me?
23ನಾನು ಫರೋಹನ ಬಳಿಗೆ ಬಂದು ನಿನ್ನ ಹೆಸರಿನಲ್ಲಿ ಮಾತನಾಡಿದಂದಿನಿಂದ ಈ ಜನರಿಗೆ ಅವನು ಕೇಡನ್ನೇ ಮಾಡುತ್ತಾನೆ. ನೀನು ನಿನ್ನ ಜನರನ್ನು ತಪ್ಪಿಸಲಿಲ್ಲವಲ್ಲಾ ಅಂದನು.For since I came to Pharaoh to speak in thy name, he hath done evil to this people; neither hast thou delivered thy people at all.