Bible

Psalm 128 - BBE (Kannada)

1 <A Song of the going up.> Happy is the worshipper of the Lord, who is walking in his ways.ಕರ್ತನಿಗೆ ಭಯಪಟ್ಟು ಆತನ ಮಾರ್ಗಗಳಲ್ಲಿ ನಡೆದುಕೊಳ್ಳುವ ಪ್ರತಿಯೊಬ್ಬನು ಧನ್ಯನು.

2 You will have the fruit of the work of your hands: happy will you be, and all will be well for you.ಹೀಗಾದರೆ ನಿನ್ನ ಕೈಗಳ ಕಷ್ಟಾರ್ಜಿತವನ್ನು ನೀನು ಊಟಮಾಡಿ ಸಂತೋಷ ವುಳ್ಳವನಾಗಿರುವಿ, ನಿನಗೆ ಒಳ್ಳೇಯದಾಗುವದು.

3 Your wife will be like a fertile vine in the inmost parts of your house: your children will be like olive plants round your table.ನಿನ್ನ ಹೆಂಡತಿಯು ನಿನ್ನ ಮನೆಯ ಪಕ್ಕದಲ್ಲಿರುವ ಫಲಭರಿತ ವಾದ ದ್ರಾಕ್ಷೇಗಿಡದ ಹಾಗೆಯೂ ನಿನ್ನ ಮೇಜಿನ ಸುತ್ತಲಿರುವ ನಿನ್ನ ಮಕ್ಕಳು ಎಣ್ಣೇಮರಗಳ ಸಸಿಗಳ ಹಾಗೆಯೂ ಇರುವರು.

4 See! this is the blessing of the worshipper of the Lord.ಇಗೋ, ಕರ್ತನಿಗೆ ಭಯಪಡುವ ಮನುಷ್ಯನು ಹೀಗೆಯೇ ಆಶೀರ್ವದಿಸಲ್ಪಡುವನು.

5 May the Lord send you blessing out of Zion: may you see the good of Jerusalem all the days of your life.ಕರ್ತನು ನಿನ್ನನ್ನು ಚೀಯೋನಿನೊಳಗಿಂದ ಆಶೀರ್ವದಿಸುವನು; ನಿನ್ನ ಜೀವನದ ದಿವಸಗಳೆಲ್ಲಾ ನೀನು ಯೆರೂಸಲೇಮಿನ ಒಳ್ಳೆಯದನ್ನು ನೋಡುವಿ.

6 May you see your children's children. Peace be on Israel.ಹೌದು, ನಿನ್ನ ಮಕ್ಕಳ ಮಕ್ಕಳನ್ನೂ ಇಸ್ರಾಯೇಲಿನ ಮೇಲಿರುವ ಸಮಾಧಾನ ವನ್ನೂ ನೀನು ನೋಡುವಿ.

Kannada Bible