Skip to content
CHRIST SONGS .IN
TAMIL CHRISTIAN SONGS .IN
  • Lyrics
  • Chords
  • Bible
  • /
  • A
  • B
  • C
  • D
  • E
  • F
  • G
  • H
  • I
  • J
  • K
  • L
  • M
  • N
  • O
  • P
  • Q
  • R
  • S
  • T
  • U
  • V
  • W
  • X
  • Y
  • Z

Index
  • A
  • B
  • C
  • D
  • E
  • F
  • G
  • H
  • I
  • J
  • K
  • L
  • M
  • N
  • O
  • P
  • Q
  • R
  • S
  • T
  • U
  • V
  • W
  • X
  • Y
  • Z
Zechariah 5 KJV ASV BBE DBY WBT WEB YLT

Zechariah 5 in Kannada WBT Compare Webster's Bible

Zechariah 5

1 ಆಗ ನಾನು ತಿರಿಗಿಕೊಂಡು ನನ್ನ ಕಣ್ಣು ಗಳನ್ನೆತ್ತಿ ನೋಡಲು ಇಗೋ, ಹಾರುವ ಸುರಳಿ.

2 ಆಗ ಅವನು ನನಗೆ--ಏನು ನೋಡುತ್ತೀ ಅಂದಾಗ ನಾನು--ಹಾರುವ ಸುರಳಿಯನ್ನು ನೋಡು ತ್ತೇನೆ; ಅದರ ಉದ್ದವು ಇಪ್ಪತ್ತು ಮೊಳಗಳಾಗಿಯೂ ಅದರ ಅಗಲವು ಹತ್ತು ಮೊಳಗಳಾಗಿಯೂ ಇದೆ ಅಂದೆನು.

3 ಆಗ ಅವನು ನನಗೆ ಹೇಳಿದ್ದೇನಂದರೆ--ದೇಶದ ಮೇಲೆಲ್ಲಾ ಹೊರಡುವ ಶಾಪವು ಇದೇ; ಕಳ್ಳತನ ಮಾಡುವವರೆಲ್ಲರು ಈ ದಿಕ್ಕಿನ ಪ್ರಕಾರ ತೆಗೆದುಹಾಕಲ್ಪಡುವರು; ಆಣೆ ಇಡುವವರೆಲ್ಲರು ಆ ಕಡೆ ಅದರ ಪ್ರಕಾರ ತೆಗೆದುಹಾಕಲ್ಪಡುವರು.

4 ನಾನು ಅದನ್ನು ಹೊರಗೆ ತರುತ್ತೇನೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಅದು ಕಳ್ಳನ ಮನೆಯಲ್ಲಿಯೂ ನನ್ನ ಹೆಸರಿನಿಂದ ಸುಳ್ಳಾಗಿ ಆಣೆಯಿಡುವವನ ಮನೆಯ ಲ್ಲಿಯೂ ಪ್ರವೇಶಿಸಿ ಅವನ ಮನೆಯ ಮಧ್ಯದಲ್ಲಿ ನಿಂತು ಅದರ ಮರಗಳನ್ನೂ ಅದರ ಕಲ್ಲುಗಳನ್ನೂ ಅಳಿಸಿಬಿಡುವದು ಅಂದನು.

5 ಆಗ ನನ್ನ ಸಂಗಡ ಮಾತನಾಡಿದ ದೂತನು ಹೊರಟು--ನಿನ್ನ ಕಣ್ಣುಗಳನ್ನೆತ್ತಿ ಹೊರಡುವಂಥದ್ದು ಏನೆಂದು ನೋಡು ಎಂದು ನನಗೆ ಹೇಳಿದನು.

6 ನಾನು --ಇದೇನು ಅಂದಾಗ ಅವನು--ಇದು ಹೊರಡು ವಂಥ ಎಫವು ಅಂದನು; ಇದಲ್ಲದೆ ಅವನು--ಇದೇ ಸಮಸ್ತ ಭೂಮಿಯಲ್ಲಿ ಅವರ ಹೋಲಿಕೆ ಅಂದನು.

7 ಇಗೋ, ಸೀಸದ ಮಣವು ಎತ್ತಲ್ಪಟ್ಟಿತು; ಎಫದ ಮಧ್ಯದಲ್ಲಿ ಒಬ್ಬ ಸ್ತ್ರೀ ಕೂತುಕೊಂಡಿದ್ದಳು. ಆಗ ಅವನು --ಇದು ದುಷ್ಟತ್ವವು ಎಂತಂದು

8 ಅವಳನ್ನು ಎಫದ ಮಧ್ಯದಲ್ಲಿ ಹಾಕಿ ಆ ನೂಲಿನ ಸೀಸದ ಭಾರವನ್ನು ಅದರ ಬಾಯಿಯ ಮೇಲೆ ಇಟ್ಟನು.

9 ಆಗ ನಾನು ಕಣ್ಣುಗಳನ್ನೆತ್ತಿ ನೋಡಿದಾಗ ಇಗೋ, ಇಬ್ಬರು ಸ್ತ್ರೀಯರು ಹೊರಟರು; ಅವರ ರೆಕ್ಕೆಗಳಲ್ಲಿ ಗಾಳಿ ಇತ್ತು; ಹೌದು, ಅವರ ರೆಕ್ಕೆಗಳು ಕೊಕ್ಕರೆಯ ರೆಕ್ಕೆಗಳ ಹಾಗಿದ್ದವು; ಅವರು ಎಫವನ್ನು ಆಕಾಶಕ್ಕೂ ಭೂಮಿಗೂ ಮಧ್ಯದಲ್ಲಿ ಎತ್ತಿದರು.

10 ಆಗ ನಾನು ನನ್ನ ಸಂಗಡ ಮಾತನಾಡಿದ ದೂತನಿಗೆ--ಇವರು ಎಫವನ್ನು ಎಲ್ಲಿಗೆ ಹೊತ್ತು ಕ್ಕೊಂಡು ಹೋಗುತ್ತಾರೆ ಅಂದೆನು.

11 ಅವನು ನನಗೆ --ಶಿನಾರ್‌ ದೇಶದಲ್ಲಿ ಅದಕ್ಕೆ ಮನೆ ಕಟ್ಟುವದಕ್ಕಾಗಿ ತಕ್ಕೊಂಡು ಹೋಗುತ್ತಾರೆ; ಅಲ್ಲಿ ಅದು ಸ್ಥಾಪಿಸಲ್ಪಟ್ಟು ತನ್ನ ಸ್ಥಾನದಲ್ಲಿ ಇರಿಸಲ್ಪಡುವದು ಅಂದನು.

  • Tamil
  • Hindi
  • Malayalam
  • Telugu
  • Kannada
  • Gujarati
  • Punjabi
  • Bengali
  • Oriya
  • Nepali

By continuing to browse the site, you are agreeing to our use of cookies.

Close