Luke 9:30
ಇಗೋ, ಮೋಶೆ ಮತ್ತು ಎಲೀಯ ಎಂಬ ಇಬ್ಬರು ಪುರುಷರು ಆತನೊಂದಿಗೆ ಮಾತನಾಡುತ್ತಿದ್ದರು.
Luke 9:30 in Other Translations
King James Version (KJV)
And, behold, there talked with him two men, which were Moses and Elias:
American Standard Version (ASV)
And behold, there talked with him two men, who were Moses and Elijah;
Bible in Basic English (BBE)
And two men, Moses and Elijah, were talking with him;
Darby English Bible (DBY)
And lo, two men talked with him, who were Moses and Elias,
World English Bible (WEB)
Behold, two men were talking with him, who were Moses and Elijah,
Young's Literal Translation (YLT)
And lo, two men were speaking together with him, who were Moses and Elijah,
| And, | καὶ | kai | kay |
| behold, | ἰδού, | idou | ee-THOO |
| there talked with | ἄνδρες | andres | AN-thrase |
| him | δύο | dyo | THYOO-oh |
| two | συνελάλουν | synelaloun | syoon-ay-LA-loon |
| men, | αὐτῷ | autō | af-TOH |
| which | οἵτινες | hoitines | OO-tee-nase |
| were | ἦσαν | ēsan | A-sahn |
| Moses | Μωσῆς | mōsēs | moh-SASE |
| and | καὶ | kai | kay |
| Elias: | Ἠλίας | ēlias | ay-LEE-as |
Cross Reference
ಇಬ್ರಿಯರಿಗೆ 3:3
ಮನೆಗಿಂತ ಮನೆಕಟ್ಟಿದವನಿಗೆ ಹೆಚ್ಚಾದ ಗೌರವವಿರುವದರಿಂದ ಮೋಶೆಗಿಂತ ಈತನು (ಕ್ರಿಸ್ತ ಯೇಸು) ಹೆಚ್ಚಾದ ಮಾನಕ್ಕೆ ಯೋಗ್ಯನೆಂದೆಣಿಸ ಲ್ಪಟ್ಟಿದ್ದಾನೆ.
2 ಕೊರಿಂಥದವರಿಗೆ 3:7
ಆದರೆ ಮರಣದ ಸೇವೆಯು ಕಲ್ಲಿನ ಮೇಲೆ ಲಿಖಿತವಾದ ಅಕ್ಷರಗಳಲ್ಲಿದ್ದರೂ ಪ್ರಭಾವದಿಂದ ಕೂಡಿದ್ದಾಗಿತ್ತು; ಆ ಪ್ರಭಾವದಿಂದ ಮೋಶೆಯ ಮುಖಕ್ಕೆ ಬಂದ ಪ್ರಕಾಶವು ಕುಂದಿ ಹೋಗುವಂಥ ದ್ದಾಗಿದ್ದರೂ ಅದರ ನಿಮಿತ್ತ ಇಸ್ರಾಯೇಲ್ಯರು ಅವನ ಮುಖವನ್ನು ದೃಷ್ಟಿಸಿ ನೋಡಲಾರದೆ ಇದ್ದರು.
ರೋಮಾಪುರದವರಿಗೆ 3:21
ಈಗಲಾದರೋ ದೇವರ ನೀತಿಯು ನ್ಯಾಯ ಪ್ರಮಾಣವಿಲ್ಲದೆ ಪ್ರಕಟವಾಗಿದೆ. ಅದು ನ್ಯಾಯ ಪ್ರಮಾಣದಿಂದಲೂ ಪ್ರವಾದಿಗಳಿಂದಲೂ ಸಾಕ್ಷಿಗೊಂ ಡಿದೆ.
ಯೋಹಾನನು 1:17
ನ್ಯಾಯಪ್ರಮಾಣವು ಮೋಶೆಯ ಮುಖಾಂತರ ವಾಗಿ ಕೊಡಲ್ಪಟ್ಟಿತು; ಆದರೆ ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮುಖಾಂತರವಾಗಿ ಬಂದವು.
ಲೂಕನು 24:44
ಆಗ ಆತನು ಅವರಿಗೆ--ಮೋಶೆಯ ನ್ಯಾಯ ಪ್ರಮಾಣದಲ್ಲಿಯೂ ಪ್ರವಾದನೆಗಳಲ್ಲಿಯೂ ಕೀರ್ತನೆ ಗಳಲ್ಲಿಯೂ ನನ್ನನ್ನು ಕುರಿತಾಗಿ ಬರೆಯಲ್ಪಟ್ಟವು ಗಳೆಲ್ಲವು ನೆರವೇರುವದು ಅಗತ್ಯವಾಗಿದೆ ಎಂಬ ಈ ಮಾತುಗಳನ್ನು ನಾನು ನಿಮ್ಮೊಂದಿಗೆ ಇದ್ದಾಗಲೇ ಹೇಳಿದ್ದೆನು ಅಂದನು.
ಲೂಕನು 24:27
ಮೋಶೆಯ ಮತ್ತು ಎಲ್ಲಾ ಪ್ರವಾದಿ ಗಳಿಂದ ಆರಂಭಿಸಿ ಸಮಸ್ತ ಬರಹಗಳಲ್ಲಿ ತನ್ನ ವಿಷಯವಾದವುಗಳನ್ನು ಅವರಿಗೆ ವಿವರಿಸಿದನು.
ಲೂಕನು 9:19
ಅವರು ಪ್ರತ್ಯುತ್ತರವಾಗಿ--ಬಾಪ್ತಿಸ್ಮ ಮಾಡಿಸುವ ಯೋಹಾನನು ಅನ್ನುತ್ತಾರೆ; ಆದರೆ ಕೆಲವರು--ಎಲೀಯನು; ಬೇರೆ ಕೆಲವರು--ಪೂರ್ವಕಾಲದ ಪ್ರವಾದಿಗಳಲ್ಲಿ ಒಬ್ಬನು ತಿರಿಗಿ ಎದ್ದಿದ್ದಾನೆ ಅನ್ನುತ್ತಾರೆ ಎಂದು ಹೇಳಿದರು.
ಲೂಕನು 1:17
ಅವನು ತಂದೆಗಳ ಹೃದಯಗಳನ್ನು ಮಕ್ಕಳಕಡೆಗೂ ಅವಿಧೇಯರನ್ನು ನೀತಿವಂತರ ಜ್ಞಾನಕ್ಕೂ ತಿರುಗಿಸಿ ಕರ್ತನಿಗೋಸ್ಕರ ಜನರನ್ನು ಸಿದ್ಧಮಾಡುವದಕ್ಕೆ ಎಲೀಯನ ಆತ್ಮದಲ್ಲಿ ಯೂ ಬಲದಲ್ಲಿಯೂ ಆತನ ಮುಂದೆ ಹೋಗುವನು ಎಂದು ಹೇಳಿದನು.
ಮಾರ್ಕನು 9:4
ಆಗ ಅಲ್ಲಿ ಎಲೀಯನು ಮೋಶೆ ಯೊಂದಿಗೆ ಅವರಿಗೆ ಕಾಣಿಸಿಕೊಂಡು ಯೇಸುವಿನೊ ಂದಿಗೆ ಮಾತನಾಡುತ್ತಿದ್ದರು.
ಮತ್ತಾಯನು 17:3
ಇಗೋ, ಮೋಶೆಯೂ ಎಲೀಯನೂ ಅವರಿಗೆ ಕಾಣಿಸಿಕೊಂಡು ಆತನ ಕೂಡ ಮಾತನಾಡು ತ್ತಿದ್ದರು.
ಯಾಕೋಬನು 5:17
ಎಲೀಯನು ನಮ್ಮಂಥ ಸ್ವಭಾವವುಳ್ಳವ ನಾಗಿದ್ದನು; ಅವನು ಮಳೆ ಬರಬಾರದೆಂದು ಆಸಕ್ತಿ ಯಿಂದ ಪ್ರಾರ್ಥಿಸಲು ಮೂರು ವರುಷ ಆರು ತಿಂಗಳ ವರೆಗೂ ಮಳೆ ಬೀಳಲಿಲ್ಲ.