Luke 19:10
ಯಾಕಂದರೆ ಮನುಷ್ಯಕುಮಾರನು ತಪ್ಪಿ ಹೋದದ್ದನ್ನು ಹುಡುಕಿ ರಕ್ಷಿಸುವದಕ್ಕೆ ಬಂದನು ಎಂದು ಹೇಳಿದನು.
Luke 19:10 in Other Translations
King James Version (KJV)
For the Son of man is come to seek and to save that which was lost.
American Standard Version (ASV)
For the Son of man came to seek and to save that which was lost.
Bible in Basic English (BBE)
For the Son of man came to make search for those who are wandering from the way, and to be their Saviour.
Darby English Bible (DBY)
for the Son of man has come to seek and to save that which is lost.
World English Bible (WEB)
For the Son of Man came to seek and to save that which was lost."
Young's Literal Translation (YLT)
for the Son of Man came to seek and to save the lost.'
| For | ἦλθεν | ēlthen | ALE-thane |
| the | γὰρ | gar | gahr |
| Son | ὁ | ho | oh |
| of | υἱὸς | huios | yoo-OSE |
| man | τοῦ | tou | too |
| is come | ἀνθρώπου | anthrōpou | an-THROH-poo |
| seek to | ζητῆσαι | zētēsai | zay-TAY-say |
| and | καὶ | kai | kay |
| to save | σῶσαι | sōsai | SOH-say |
| that which | τὸ | to | toh |
| was lost. | ἀπολωλός | apolōlos | ah-poh-loh-LOSE |
Cross Reference
ಯೆಹೆಜ್ಕೇಲನು 34:16
ಕಳೆದು ಹೋದದ್ದನ್ನು ನಾನೇ ಹುಡುಕುವೆನು; ಓಡಿಸಲ್ಪಟ್ಟಿದ್ದನ್ನು ನಾನೇ ಮತ್ತೆ ತರುವೆನು, ಮುರಿದದ್ದನ್ನು ನಾನೇ ಕಟ್ಟುವೆನು, ಬಲಹೀನವಾದದ್ದನ್ನು ನಾನೇ ಬಲಪಡಿಸುವೆನು. ಆದರೆ ಕೊಬ್ಬಿದ್ದನ್ನೂ ಬಲಿಷ್ಠವಾದದ್ದನ್ನೂ ನಾನೇ ಸಂಹರಿಸು ವೆನು; ನಾನೇ ಅವುಗಳಿಗೆ ನ್ಯಾಯದಂಡನೆ ಎಂಬ ಮೇವನ್ನು ಮೇಯಿಸುವೆನು.
1 ತಿಮೊಥೆಯನಿಗೆ 1:13
ಮೊದಲು ದೇವದೂಷಕನೂ ಹಿಂಸಕನೂ ಕೇಡು ಮಾಡುವವನೂ ಆಗಿದ್ದ ನಾನು ಅವಿಶ್ವಾಸಿಯಾಗಿ ತಿಳಿಯದೆ ಹಾಗೆ ಮಾಡಿದ್ದರಿಂದ ನನ್ನ ಮೇಲೆ ಕರುಣೆ ಉಂಟಾಯಿತು.
ಲೂಕನು 15:4
ನಿಮ್ಮಲ್ಲಿ ಯಾವ ಮನುಷ್ಯನು ತನಗೆ ನೂರು ಕುರಿಗಳಿರಲಾಗಿ ಅವುಗಳಲ್ಲಿ ಒಂದನ್ನು ಕಳೆದು ಕೊಂಡರೆ ಅವನು ತೊಂಭತ್ತೊಂಭತ್ತನ್ನು ಅಡವಿಯಲ್ಲಿ ಬಿಟ್ಟು ಕಳೆದುಹೋದದ್ದು ಸಿಕ್ಕುವ ವರೆಗೆ ಅದನ್ನು ಹುಡುಕಿಕೊಂಡು ಹೋಗದಿರುವನೇ?
ಲೂಕನು 15:32
ಆದರೆ ಈ ನಿನ್ನ ತಮ್ಮನು ಸತ್ತವನಾಗಿದ್ದನು, ತಿರಿಗಿ ಬದುಕಿದ್ದಾನೆ; ಕಳೆದು ಹೋದ ವನಾಗಿದ್ದನು, ಸಿಕ್ಕಿದ್ದಾನೆ. ಆದಕಾರಣ ನಾವು ಸಂತೋ ಷಿಸಿ ಆನಂದಪಡುವದು ಯುಕ್ತವಾದದ್ದೇ ಎಂದು ಹೇಳಿದನು ಅಂದನು.
ಮತ್ತಾಯನು 1:21
ಆಕೆಯು ಒಬ್ಬ ಮಗನನ್ನು ಹೆರುವಳು; ನೀನು ಆತನಿಗೆ ಯೇಸು ಎಂದು ಕರೆಯಬೇಕು; ಯಾಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು ಅಂದನು.
ಮತ್ತಾಯನು 15:24
ಆದರೆ ಆತನು ಪ್ರತ್ಯು ತ್ತರವಾಗಿ-- ತಪ್ಪಿಸಿಕೊಂಡ ಕುರಿಗಳಾಗಿರುವ ಇಸ್ರಾ ಯೇಲಿನ ಮನೆತನದವರ ಬಳಿಗೆ ಮಾತ್ರ ನಾನು ಕಳುಹಿಸಲ್ಪಟ್ಟಿದ್ದೇನೆ ಅಂದನು.
ಮತ್ತಾಯನು 10:6
ಆದರೆ ತಪ್ಪಿಸಿಕೊಂಡ ಕುರಿಗಳಾದ ಇಸ್ರಾಯೇಲಿನ ಮನೆತನದವರ ಬಳಿಗೆ ಮಾತ್ರ ಹೋಗಿರಿ.
ಇಬ್ರಿಯರಿಗೆ 7:25
ಆದಕಾರಣ ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವದಕ್ಕೆ ಶಕ್ತನಾಗಿದ್ದಾನೆ; ಅವರಿ ಗೋಸ್ಕರ ವಿಜ್ಞಾಪನೆಮಾಡುವದಕ್ಕೆ ಯಾವಾಗಲೂ ಬದುಕವವನಾಗಿದ್ದಾನೆ.
ಮತ್ತಾಯನು 9:12
ಆದರೆ ಯೇಸು ಅದನ್ನು ಕೇಳಿ ಅವರಿಗೆ--ಕ್ಷೇಮದಿಂದಿರುವವರಿಗೆ ಅಲ್ಲ, ಆದರೆ ಕ್ಷೇಮವಿಲ್ಲದವ ರಿಗೆ ವೈದ್ಯನು ಬೇಕು.
ರೋಮಾಪುರದವರಿಗೆ 5:6
ನಾವು ಅಶಕ್ತರಾಗಿದ್ದಾಗಲೇ ಕ್ರಿಸ್ತನು ನೇಮಿತ ಕಾಲ ದಲ್ಲಿ ಭಕ್ತಿಹೀನರಿಗೋಸ್ಕರ ಪ್ರಾಣಕೊಟ್ಟನು.
ಲೂಕನು 5:31
ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ಕ್ಷೇಮದಲ್ಲಿ ಇರುವವರಿಗೆ ಅಲ್ಲ, ಆದರೆ ಕ್ಷೇಮವಿಲ್ಲದವರಿಗೆ ವೈದ್ಯನು ಬೇಕು.
1 ಯೋಹಾನನು 4:9
ನಾವು ಆತನ ಮೂಲಕ ಜೀವಿಸು ವದಕ್ಕಾಗಿ ದೇವರು ತನ್ನ ಒಬ್ಬನೇ ಮಗನನ್ನು ಲೋಕಕ್ಕೆ ಕಳುಹಿಸಿಕೊಟ್ಟದ್ದರಲ್ಲಿಯೇ ದೇವರ ಪ್ರೀತಿಯು ನಮ್ಮ ಕಡೆಗೆ ಪ್ರತ್ಯಕ್ಷವಾಗಿದೆ.
ಮತ್ತಾಯನು 18:10
ಚಿಕ್ಕವರಲ್ಲಿ ಒಬ್ಬನನ್ನಾದರೂ ನೀವು ತಾತ್ಸಾರ ಮಾಡದಂತೆ ನೋಡಿಕೊಳ್ಳಿರಿ; ಯಾಕಂದರೆ ನಾನು ನಿಮಗೆ ಹೇಳುವದೇನಂದರೆ--ಪರಲೋಕದಲ್ಲಿ ಅವರ ದೂತರು ಪರಲೋಕದಲ್ಲಿರುವ ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಾರೆ.