Leviticus 24 - BBE (Kannada)
1 And the Lord said to Moses,ತರುವಾಯ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
2 Give orders to the children of Israel to give you clean olive oil for the light, so that a light may be burning at all times,ಬೆಳಕಿ ಗೋಸ್ಕರ ದೀಪಗಳು ಯಾವಾಗಲೂ ಉರಿಯುತ್ತಿ ರುವಂತೆ ಅವರು ಕುಟ್ಟಿದ ಶುದ್ಧವಾದ ಹಿಪ್ಪೇ ಎಣ್ಣೆಯನ್ನು ನಿನ್ನ ಬಳಿಗೆ ತರುವಂತೆ ನೀನು ಇಸ್ರಾಯೇಲ್ ಮಕ್ಕಳಿಗೆ ಆಜ್ಞಾಪಿಸಬೇಕು.
3 Outside the veil of the ark in the Tent of meeting; let Aaron see that it is burning from evening till morning at all times before the Lord: it is a rule for ever through all your generations.ಸಭೆಯ ಗುಡಾರದೊಳಗೆ ಸಾಕ್ಷಿಯ ಪರದೆಯ ಹೊರಗಡೆ ಕರ್ತನ ಸನ್ನಿಧಿಯಲ್ಲಿ ಸಾಯಂಕಾಲದಿಂದ ಬೆಳಗಿನ ವರೆಗೂ ಇರುವಂತೆ ಆರೋನನು ಅದನ್ನು ಕ್ರಮಪಡಿಸಬೇಕು. ಇದು ನಿಮ್ಮ ಸಂತತಿಯವರೊಳಗೆ ಶಾಶ್ವತವಾದ ನಿಯಮವಾಗಿ ರುವದು.
4 Let Aaron put the lights in order on the support before the Lord at all times.ದೀಪಗಳು ಶುದ್ಧವಾದ ದೀಪಸ್ತಂಭದ ಮೇಲೆ ಕರ್ತನ ಸನ್ನಿಧಿಯಲ್ಲಿ ಯಾವಾಗಲೂ ಇರುವಂತೆ ಅವನು ಕ್ರಮಪಡಿಸಬೇಕು.
5 And take the best meal and make twelve cakes of it, a fifth part of an ephah in every cake.ನೀನು ನಯವಾದ ಹಿಟ್ಟನ್ನು ತೆಗೆದುಕೊಂಡು ಹನ್ನೆರಡು ರೊಟ್ಟಿಗಳನ್ನು ಸುಡಬೇಕು; ಹತ್ತರಲ್ಲಿ ಎರಡು ಪಾಲು ಒಂದು ರೊಟ್ಟಿಯಲ್ಲಿ ಇರಬೇಕು.
6 And put them in two lines, six in a line, on the holy table before the Lord.ಅವುಗಳನ್ನು ಶುದ್ಧವಾದ ಮೇಜಿನ ಮೇಲೆ ಕರ್ತನ ಸನ್ನಿಧಿಯಲ್ಲಿ ಒಂದು ಸಾಲಿನಲ್ಲಿ ಆರರಂತೆ ಎರಡು ಸಾಲುಗಳನ್ನಾಗಿ ಇಡಬೇಕು.
7 And on the lines of cakes put clean sweet-smelling spices, for a sign on the bread, an offering made by fire to the Lord.ರೊಟ್ಟಿಯ ಮೇಲೆ ಅದು ಜ್ಞಾಪಕಾರ್ಥವಾ ಗಿರುವಂತೆಯೂ ಬೆಂಕಿಯ ಮೂಲಕ ಕರ್ತನಿಗೆ ಸಮ ರ್ಪಣೆಯಾಗುವಂತೆಯೂ ಪ್ರತಿಯೊಂದು ಸಾಲಿನ ಮೇಲೆ ಶುದ್ಧವಾದ ಸಾಂಬ್ರಾಣಿಯನ್ನು ಹಾಕಬೇಕು.
8 Every Sabbath day regularly, the priest is to put it in order before the Lord: it is offered for the children of Israel, an agreement made for ever.ಪ್ರತಿಯೊಂದು ಸಬ್ಬತ್ತಿನಲ್ಲಿ ಕರ್ತನ ಎದುರಿನಲ್ಲಿ ಯಾವಾಗಲೂ ಅವನು ಅದನ್ನು ಕ್ರಮ ಪಡಿಸಬೇಕು; ಇದು ಇಸ್ರಾಯೇಲ್ ಮಕ್ಕಳ ಕಡೆಯಿಂದ ನಿತ್ಯವಾದ ಒಡಂಬಡಿಕೆಯಾಗಿರಬೇಕು.
9 And it will be for Aaron and his sons; they are to take it for food in a holy place: it is the most holy of all the offerings made by fire to the Lord, a rule for ever.ಅದು ಆರೋನನ ಮತ್ತು ಅವನ ಕುಮಾರರದ್ದಾಗಿರಬೇಕು; ಅವರು ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು; ಅದು ನಿತ್ಯವಾದ ನಿಯಮವಾಗಿ ಕರ್ತನಿಗೆ ಬೆಂಕಿಯಿಂದ ಮಾಡಿ ಸಮರ್ಪಿಸುವವುಗಳಲ್ಲಿ ಅವನಿಗೆ ಅತಿ ಪರಿಶುದ್ಧವಾಗಿರುವದು.
10 And a son of an Israelite woman, whose father was an Egyptian, went out among the children of Israel and had a fight with a man of Israel by the tents;ಇದಲ್ಲದೆ ಇಸ್ರಾಯೇಲಿನವಳಾದ ಒಬ್ಬ ಸ್ತ್ರೀಗೂ ಐಗುಪ್ತನಾದ ಪುರುಷನಿಗೂ ಹುಟ್ಟಿದ ಮಗನು ಇಸ್ರಾಯೇಲ್ ಮಕ್ಕಳ ಮಧ್ಯದೊಳಗಿಂದ ಹೊರಗೆ ಬಂದನು; ಇಸ್ರಾಯೇಲಿನವಳಾದ ಸ್ತ್ರೀಯ ಈ ಮಗನು ಇಸ್ರಾಯೇಲಿನ ಒಬ್ಬ ಮನುಷ್ಯನೊಂದಿಗೆ ಪಾಳೆಯದಲ್ಲಿ ಒಬ್ಬರಿಗೊಬ್ಬರು ಜಗಳವಾಡಿದರು.
11 And the son of the Israelite woman said evil against the holy Name, with curses; and they took him to Moses. His mother's name was Shelomith, the daughter of Dibri, of the tribe of Dan.ಇಸ್ರಾಯೇಲ್ ಸ್ತ್ರೀಯ ಮಗನು ಕರ್ತನ ನಾಮವನ್ನು ದೂಷಿಸಿ ಶಪಿಸಿ ದನು. ಅವರು ಅವನನ್ನು ಮೋಶೆಯ ಬಳಿಗೆ ತಂದರು; (ಅವನ ತಾಯಿಯ ಹೆಸರು ದಾನನ ಕುಲದವನಾದ ದಿಬ್ರೀಯ ಮಗಳಾದ ಶೆಲೋವಿಾತ್).
12 And they kept him shut up, till a decision might be given by the mouth of the Lord.ಅವನ ವಿಷಯವಾಗಿ ಅವರು ಕರ್ತನ ತೀರ್ಪನ್ನು ತಿಳಿದು ಕೊಳ್ಳುವದಕೋಸ್ಕರ ಅವನನ್ನು ಕಾವಲಲ್ಲಿ ಇಟ್ಟರು.
13 And the Lord said to Moses,ಆಗ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
14 Take the curser outside the tent-circle; and let all in whose hearing the words were said put their hands on his head, and let him be stoned by all the people.ಶಪಿಸಿದವನನ್ನು ಪಾಳೆಯದ ಆಚೆಗೆ ತೆಗೆದುಕೊಂಡು ಹೋಗಿರಿ; ಅವನಿಂದ ಕೇಳಿದ ವರೆಲ್ಲರು ಅವನ ತಲೆಯ ಮೇಲೆ ತಮ್ಮ ಕೈಗಳನ್ನಿಡಲಿ, ಸಭೆಯವರೆಲ್ಲರೂ ಅವನಿಗೆ ಕಲ್ಲೆಸೆಯಲಿ.
15 And say to the children of Israel, As for any man cursing God, his sin will be on his head.ನೀನು ಇಸ್ರಾಯೇಲ್ ಮಕ್ಕಳೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳಬೇಕು--ತನ್ನ ದೇವರನ್ನು ಶಪಿಸುವವನು ತನ್ನ ಪಾಪವನ್ನು ಹೊತ್ತುಕೊಳ್ಳಬೇಕು.
16 And he who says evil against the name of the Lord will certainly be put to death; he will be stoned by all the people; the man who is not of your nation and one who is an Israelite by birth, whoever says evil against the holy Name is to be put to death.ಕರ್ತನ ನಾಮವನ್ನು ದೂಷಣೆ ಮಾಡುವವನಿಗೆ ನಿಶ್ಚಯವಾಗಿ ಮರಣವನ್ನು ವಿಧಿಸಬೇಕು ಮತ್ತು ಸಭೆಯವರೆಲ್ಲರು ನಿಶ್ಚಯವಾಗಿ ಅವನಿಗೆ ಕಲ್ಲೆಸೆಯಬೇಕು. ಇದಲ್ಲದೆ ದೇಶದೊಳಗೆ ಹುಟ್ಟಿದ ಪರಕೀಯನು ಕರ್ತನ ಹೆಸರನ್ನು ದೂಷಣೆ ಮಾಡಿದಾಗ ಅವನನ್ನು ಮರಣಕ್ಕೆ ಒಳಪಡಿಸಬೇಕು.
17 And anyone who takes another's life is certainly to be put to death.ಯಾವನಾದರೂ ಮನುಷ್ಯನನ್ನು ಕೊಲ್ಲುವವನು ನಿಶ್ಚಯವಾಗಿ ಮರಣಕ್ಕೆ ಒಳಪಡಬೇಕು.
18 And anyone wounding a beast and causing its death, will have to make payment for it: a life for a life.ಪಶುವನ್ನು ಕೊಲ್ಲುವವನು ಅದಕ್ಕೆ ಪ್ರತಿಯಾಗಿ ಪಶುವನ್ನು ಕೊಡಬೇಕು.
19 And if a man does damage to his neighbour, as he has done, so let it be done to him;ಯಾವನಾದರೂ ತನ್ನ ನೆರೆಯವನಿಗೆ ಊನ ವಾಗುವಂತೆ ಮಾಡಿದರೆ ಅವನು ಮಾಡಿದಂತೆಯೇ ಅವನಿಗೆ ಮಾಡಬೇಕು;
20 Wound for wound, eye for eye, tooth for tooth; whatever damage he has done, so let it be done to him.ಮುರಿತಕ್ಕೆ ಮುರಿತ, ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಅವನು ಒಬ್ಬನಿಗೆ ಊನಮಾಡಿದ ಹಾಗೆಯೇ ಅವನಿಗೂ ಮಾಡಬೇಕು.
21 He who puts a beast to death will have to make payment for it; he who puts a man to death will himself be put to death.ಪಶುವನ್ನು ಕೊಲ್ಲುವವನು ಅದಕ್ಕೆ ಬದಲು ಕೊಡಬೇಕು; ಮನುಷ್ಯ ನನ್ನು ಕೊಲ್ಲುವವನನ್ನು ಮರಣಕ್ಕೆ ಒಳಪಡಿಸಬೇಕು.
22 You are to have the same law for a man of another nation living among you as for an Israelite; for I am the Lord your God.ನಿಮಗೆ ಒಂದೇ ವಿಧವಾದ ನ್ಯಾಯಪ್ರಮಾಣವಿರ ಬೇಕು. ಸ್ವದೇಶಸ್ಥನಿಗೆ ಇರುವಂತೆಯೇ ಪರಕೀಯನಿಗೂ ಇರಬೇಕು. ನಿಮ್ಮ ದೇವರಾಗಿರುವ ಕರ್ತನು ನಾನೇ.
23 And Moses said these words to the children of Israel, and they took the man who had been cursing outside the tent-circle and had him stoned. The children of Israel did as the Lord gave orders to Moses.ಶಪಿಸಿದವನನ್ನು ಪಾಳೆಯದ ಹೊರಗೆ ತಂದು ಅವನನ್ನು ಕಲ್ಲೆಸೆಯುವಂತೆ ಮೋಶೆಯು ಇಸ್ರಾಯೇಲ್ ಮಕ್ಕಳೊಂದಿಗೆ ಮಾತನಾಡಿದನು. ಆಗ ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲ್ ಮಕ್ಕಳು ಮಾಡಿದರು.
Kannada Bible