Ruth 4 - WBT (Kannada)
1 Then Boaz went up to the gate, and sat down there: and behold, the kinsman of whom Boaz spoke came by; to whom he said, Ho, such a one! turn aside, sit down here. And he turned aside, and sat down.ಬೋವಜನು ಪಟ್ಟಣದ ಬಾಗಲಲ್ಲಿ ಹೋಗಿ ಕುಳಿತಿರುವಾಗ ಇಗೋ, ಬೋವಜನು ಹೇಳಿದ್ದ ಆ ಸಂಬಂಧಿಕನು ಹಾದು ಹೋಗುತ್ತಿದ್ದನು. ಆಗ ಅವನು ಓ ಮನುಷ್ಯನೇ, ಈ ಕಡೆಗೆ ಬಂದು ಇಲ್ಲಿ ಕೂತುಕೋ ಅಂದನು. ಅವನು ಬಂದು ಕೂತುಕೊಂಡನು.
2 And he took ten men of the elders of the city, and said, Sit ye down here. And they sat down.ಆಗ ಬೋವಜನು ಪಟ್ಟಣದ ಹಿರಿಯರಲ್ಲಿ ಹತ್ತು ಮಂದಿ ಯನ್ನು ಕರೆದು ಅವರಿಗೆ ಇಲ್ಲಿ ಕುಳಿತುಕೊಳ್ಳಿರಿ ಅಂದನು. ಅವರು ಕುಳಿತರು.
3 And he said to the kinsman, Naomi, that has come again out of the country of Moab, selleth a parcel of land, which was our brother Elimelech's:ಆಗ ಅವನು ಆ ಬಂಧುವಿಗೆ ಹೇಳಿದ್ದೇನಂದರೆ ಮೋವಾಬ್ ಸೀಮೆ ಯಿಂದ ತಿರಿಗಿ ಬಂದ ನೊವೊಮಿಯು ನಮ್ಮ ಸಹೋದರನಾದ ಎಲೀಮೆಲೆಕನಿಗೆ ಇದ್ದ ಹೊಲದ ಪಾಲನ್ನು ಮಾರಿ ಬಿಡಬೇಕೆಂದಿರುತ್ತಾಳೆ.
4 And I thought to advertise thee, saying, Buy it before the inhabitants, and before the elders of my people. If thou wilt redeem it, redeem it: but if thou wilt not redeem it, then tell me, that I may know: for there is none to redeem it besides thee; and I am after thee. And he said, I will redeem it.ನಾನು ನಿನಗೆ ಹೇಳಬೇಕೆಂದಿದ್ದೇನಂದರೆ -- ನಿವಾಸಿಗಳ ಮುಂದೆಯೂ ನನ್ನ ಜನರಾದ ಹಿರಿಯರ ಮುಂದೆಯೂ ಅದನ್ನು ಕೊಂಡುಕೊಂಡು ಬಿಡಿಸಿಕೊಂಡರೆ ಬಿಡಿಸಿಕೋ ಬಿಡಿಸಿಕೊಳ್ಳದಿದ್ದರೆ ನಾನು ತಿಳುಕೊಳ್ಳುವ ಹಾಗೆ ನನಗೆ ಹೇಳು; ಯಾಕಂದರೆ ನೀನೂ ನಿನ್ನ ತರುವಾಯ ನಾನೂ ಅಲ್ಲದೆ ಬಿಡಿಸಿಕೊಳ್ಳುವವನು ಯಾರೂ ಇಲ್ಲ ಅಂದನು.
5 Then said Boaz, What day thou buyest the field of the hand of Naomi, thou must buy it also of Ruth the Moabitess, the wife of the dead, to raise up the name of the dead upon his inheritance.ಅದಕ್ಕೆ ಅವನು ನಾನು ಬಿಡಿಸಿಕೊಳ್ಳುವೆನು ಅಂದನು. ಆಗ ಬೋವಜನು ನೀನು ನೊವೊಮಿಯಿಂದ ಆ ಹೊಲವನ್ನು ಕೊಂಡು ಕೊಳ್ಳುವ ದಿವಸದಲ್ಲಿ ಸತ್ತವನ ಬಾಧ್ಯತೆಯಲ್ಲಿ ಅವನ ಹೆಸರನ್ನು ಸ್ಥಿರಮಾಡುವ ಹಾಗೆ ಅವನ ಹೆಂಡತಿಯಾಗಿರುವ ಮೋವಾಬ್ಯಳಾದ ರೂತ ಳಿಂದಲೂ ಅದನ್ನು ಕೊಂಡುಕೊಳ್ಳಬೇಕು ಅಂದನು.
6 And the kinsman said, I cannot redeem it for myself, lest I mar my own inheritance: redeem thou my right to thyself; for I cannot redeem it.ಅದಕ್ಕೆ ಬಂಧುವು ನಾನು ನನ್ನ ಬಾಧ್ಯತೆಯನ್ನು ಕೆಡಿಸಿಕೊಳ್ಳದ ಹಾಗೆ ಅದನ್ನು ಬಿಡಿಸಿಕೊಳ್ಳಲಾರೆನು; ನಾನು ಬಿಡಿಸಿಕೊಳ್ಳತಕ್ಕದ್ದನ್ನು ನೀನು ಬಿಡಿಸಿಕೋ;
7 Now this was the manner in former time in Israel concerning redeeming and concerning changing, for confirming all things; a man plucked off his shoe, and gave it to his neighbor: and this was a testimony in Israel.ನಾನು ಬಿಡಿಸಿಕೊಳ್ಳಲಾರೆನು ಅಂದನು. ಬಿಡಿಸಿಕೊಳ್ಳು ವದರಲ್ಲಿಯೂ ಬದಲು ಮಾಡುವದರಲ್ಲಿಯೂ ಸಕಲ ಕಾರ್ಯಗಳೂ ದೃಢವಾಗುವ ಹಾಗೆ ಇಸ್ರಾಯೇಲಿನಲ್ಲಿ ಪೂರ್ವದವಾಡಿಕೆ ಏನಂದರೆ, ಒಬ್ಬನು ತನ್ನ ಕೆರವನ್ನು ತೆಗೆದು ತನ್ನ ನೆರೆಯವನಿಗೆ ಕೊಡುವನು. ಇದು ಇಸ್ರಾಯೇಲಿನಲ್ಲಿ ಸಾಕ್ಷಿಗಾದದ್ದು.
8 Therefore the kinsman said to Boaz, Buy it for thyself. So he drew off his shoe.ಹಾಗೆಯೇ ಆ ಬಂಧುವು ಬೋವಜನಿಗೆ--ನೀನು ನಿನಗೋಸ್ಕರ ಅದನ್ನು ಕೊಂಡುಕೋ ಎಂದು ತನ್ನ ಕೆರವನ್ನು ತೆಗೆದು ಹಾಕಿದನು.
9 And Boaz said to the elders, and to all the people, Ye are witnesses this day, that I have bought all that was Elimelech's, and all that was Chilion's and Mahlon's, of the hand of Naomi.ಆಗ ಬೋವಜನು ಹಿರಿಯರಿಗೂ ಸಮಸ್ತ ಜನ ರಿಗೂ ನಾನು ಎಲೀಮೆಲೆಕನಿಗೆ ಇದ್ದ ಎಲ್ಲವನ್ನೂ ಕಿಲ್ಯೋನನಿಗೂ ಮಹ್ಲೋನನಿಗೂ ಇದ್ದ ಎಲ್ಲವನ್ನೂ ನೊವೊಮಿಯ ಕೈಯಿಂದ ಕೊಂಡುಕೊಂಡೆನು ಎಂಬ ದಕ್ಕೆ ಈ ಹೊತ್ತು ನೀವು ಸಾಕ್ಷಿಗಳಾಗಿದ್ದೀರಿ ಅಂದನು.
10 Moreover, Ruth the Moabitess, the wife of Mahlon, have I purchased to be my wife, to raise up the name of the dead upon his inheritance, that the name of the dead be not cut off from among his brethren, and from the gate of his place: ye are witnesses this day.ಇದಲ್ಲದೆ ಸತ್ತವನ ಸಹೋದರರಿಂದಲೂ ಅವನ ಸ್ಥಳದ ಬಾಗಲದಿಂದಲೂ ಅವನ ಹೆಸರು ಕಡಿದು ಹಾಕಲ್ಪಡದ ಹಾಗೆ ಸತ್ತವನ ಬಾಧ್ಯತೆಯಲ್ಲಿ ಅವನ ಹೆಸರನ್ನು ಸ್ಥಿರಮಾಡಲು ನಾನು ಮಹ್ಲೋನನ ಹೆಂಡತಿಯಾಗಿದ್ದ ಮೋವಾಬ್ಯಳಾದ ರೂತಳನ್ನು ನನಗೆ ಹೆಂಡತಿಯಾಗಿ ಕೊಂಡುಕೊಂಡೆನು.
11 And all the people that were in the gate, and the elders said, We are witnesses. The LORD make the woman that hath come into thy house like Rachel and like Leah, which two did build the house of Israel: and do thou worthily in Ephratah, and be famous in Beth-lehem:ಇದಕ್ಕೆ ಈ ಹೊತ್ತು ನೀವು ಸಾಕ್ಷಿಗಳಾಗಿದ್ದೀರಿ ಅಂದನು. ಆಗ ಬಾಗಲಲ್ಲಿರುವ ಸಮಸ್ತ ಜನರೂ ಹಿರಿಯರೂ ಹೇಳಿದ್ದೇನಂದರೆ--ನಾವು ಸಾಕ್ಷಿಗಳೇ; ನಿನ್ನ ಮನೆಯಲ್ಲಿ ಬಂದ ಸ್ತ್ರೀಯನ್ನು ಕರ್ತನು ಇಸ್ರಾಯೇಲ್ ಮನೆಯನ್ನು ಕಟ್ಟಿದ ಇಬ್ಬರಾದ ರಾಹೇಲಳ ಹಾಗೆಯೂ ಲೇಯಳ ಹಾಗೆಯೂ ಮಾಡುವ ವನಾಗಲಿ; ಎಫ್ರಾತದಲ್ಲಿ ಯೋಗ್ಯ ಕಾರ್ಯ ಮಾಡು, ಬೇತ್ಲೆಹೇಮಿನಲ್ಲಿ ಹೆಸರುಗೊಂಡವನಾಗಿರು.
12 And let thy house be like the house of Pharez, whom Tamar bore to Judah, of the seed which the LORD shall give thee of this young woman.ಈ ಹುಡುಗಿಯಿಂದ ಕರ್ತನು ನಿನಗೆ ಕೊಡುವ ಸಂತಾನದಿಂದ ನಿನ್ನ ಮನೆಯೂ ತಾಮರಳು ಯೂದ ನಿಗೆ ಹೆತ್ತ ಪೆರೆಚನ ಮನೆಯ ಹಾಗೆಯೇ ಆಗಲಿ ಅಂದರು.
13 So Boaz took Ruth, and she was his wife: and when he went in to her, the LORD gave her conception, and she bore a son.ಬೋವಜನು ರೂತಳನ್ನು ತೆಗೆದುಕೊಂಡನು; ಅವಳು ಅವನಿಗೆ ಹೆಂಡತಿಯಾದಳು. ಅವನು ಅವಳನ್ನು ಕೂಡಿದಾಗ ಕರ್ತನು ಅವಳಿಗೆ ಗರ್ಭ ತೆರೆದದ್ದರಿಂದ ಅವಳು ಮಗನನ್ನು ಹೆತ್ತಳು.
14 And the women said to Naomi, Blessed be the LORD, who hath not left thee this day without a kinsman, that his name may be famous in Israel.ಆಗ ಸ್ತ್ರೀಯರು ನೊವೊಮಿಗೆ ಹೇಳಿದ್ದೇನಂದರೆ--ಇಸ್ರಾಯೇಲಿನಲ್ಲಿ ಹೆಸರುಗೊಳ್ಳುವ ಸಂಬಂಧಿಕನು ನಿನಗೆ ಒಬ್ಬನಿಲ್ಲದ ಹಾಗೆ ಮಾಡದೆ ಇರುವ ಕರ್ತನು ಆಶೀರ್ವದಿಸಲ್ಪಡಲಿ.
15 And he shall be to thee a restorer of thy life, and a nourisher of thy old age: for thy daughter-in-law, who loveth thee, who is better to thee than seven sons, hath borne him.ಅವನು ನಿನಗೆ ಪ್ರಾಣವನ್ನು ಪುನರ್ಜೀವಿಸುವವ ನಾಗಿಯೂ ನಿನ್ನ ವೃದ್ಧ ವಯಸ್ಸಿನಲ್ಲಿ ಸಂರಕ್ಷಿಸುವವ ನಾಗಿಯೂ ಇರುವನು. ಯಾಕಂದರೆ ನಿನ್ನನ್ನು ಪ್ರೀತಿ ಮಾಡುವ ಏಳು ಮಂದಿ ಮಕ್ಕಳಿಗಿಂತ ನಿನಗೆ ಉತ್ತಮ ಳಾಗಿರುವ ನಿನ್ನ ಸೊಸೆಯು ಅವನನ್ನು ಹೆತ್ತಳು ಅಂದರು.
16 And Naomi took the child, and laid it in her bosom, and became its nurse.ನೊವೊಮಿಯು ಆ ಮಗುವನ್ನು ಎತ್ತಿ ತನ್ನ ಉಡಿಲಲ್ಲಿ ಇಟ್ಟುಕೊಂಡು ಅದಕ್ಕೆ ದಾದಿಯಾದಳು.
17 And the women, her neighbors, gave it a name, saying, There is a son born to Naomi; and they called his name Obed: he is the father of Jesse, the father of David.ಆಗ ನೆರೆಮನೆಯ ಸ್ತ್ರೀಯರು--ನೊವೊಮಿಗೆ ಒಬ್ಬ ಮಗನು ಹುಟ್ಟಿದ್ದಾನೆಂದು ಹೇಳಿ ಅವನಿಗೆ ಓಬೇದನೆಂದು ಹೆಸರಿಟ್ಟರು. ಇವನೇ ದಾವೀದನ ತಂದೆಯಾದ ಇಷಯನಿಗೆ ತಂದೆ ಯಾದವನು.
18 Now these are the generations of Pharez: Pharez begat Hezron,ಪೆರೆಚನ ಸಂತತಿ ಯಾವದಂದರೆ--ಪೆರೆಚನು, ಹೆಚ್ರೋನನನ್ನು ಪಡೆದನು; ಹೆಚ್ರೋನನು ರಾಮ ನನ್ನು ಪಡೆದನು;
19 And Hezron begat Ram, and Ram begat Amminadab,ರಾಮನು ಅವ್ಮೆಾನಾದಾಬನನ್ನು ಪಡೆದನು;
20 And Amminadab begat Nahshon, and Nahshon begat Salmon,ಅವ್ಮೆಾನಾದಾಬನು ನಹಶೋನನನ್ನು ಪಡೆದನು;
21 And Salmon begat Boaz, and Boaz begat Obed,ನಹಶೋನನು ಸಲ್ಮೋನನನ್ನು ಪಡೆ ದನು; ಸಲ್ಮೋನನು ಬೋವಜನನ್ನು ಪಡೆದನು;
22 And Obed begat Jesse, and Jesse begat David.ಬೋವಜನು ಓಬೇದನನ್ನು ಪಡೆದನು; ಓಬೇದನು ಇಷಯನನ್ನು ಪಡೆದನು; ಇಷಯನು ದಾವೀದನನ್ನು ಪಡೆದನು.
Kannada Bible