Ruth 3 - DBY (Kannada)
1 And Naomi her mother-in-law said to her, My daughter, shall I not seek rest for thee, that it may be well with thee?ಅವಳ ಅತ್ತೆಯಾದ ನೊವೊಮಿಯು ಅವಳಿಗೆ ನನ್ನ ಮಗಳೇ, ನಿನಗೆ ಒಳ್ಳೇದಾಗುವದಕ್ಕೋಸ್ಕರ ನಾನು ನಿನಗೆ ವಿಶ್ರಾಂತಿ ಯನ್ನು ಹುಡುಕಬೇಕಲ್ಲವೋ?
2 And now, is not Boaz of our kindred, with whose maidens thou wast? Behold, he is winnowing barley in the threshing-floor to-night.ಈಗ ನೀನು ಯಾರ ದಾಸಿಗಳ ಸಂಗಡ ಇದ್ದಿಯೋ ಆ ಬೋವಜನು ನಮ್ಮ ಸಂಬಂಧಿಕನಾಗಿದ್ದಾನಲ್ಲಾ? ಇಗೋ, ಅವನು ರಾತ್ರಿ ಯಲ್ಲಿ ಕಣದೊಳಗೆ ಜವೆಗೋಧಿಯನ್ನು ತೂರುವನು.
3 Wash thyself therefore, and anoint thyself, and put thy raiment upon thee, and go down to the floor; make not thyself known to the man, until he shall have done eating and drinking.ನೀನು ಸ್ನಾನಮಾಡಿ ಎಣ್ಣೆ ಹಚ್ಚಿಕೊಂಡು ನಿನ್ನ ವಸ್ತ್ರಗಳನ್ನು ಧರಿಸಿಕೊಂಡು ಆ ಕಣಕ್ಕೆ ಹೋಗು. ಆದರೆ ಆ ಮನುಷ್ಯನು ಅನ್ನಪಾನಗಳನ್ನು ತೆಗೆದು ಕೊಳ್ಳುವ ವರೆಗೂ ಅವನಿಗೆ ನೀನು ತಿಳಿಯದಂತೆ ಮರೆಯಾಗಿರು.
4 And it shall be, when he lies down, that thou shalt mark the place where he shall have lain down, and thou shalt go in, and uncover his feet, and lay thyself down; and he will shew thee what thou shalt do.ಅವನು ಮಲಗಿಕೊಂಡಾಗ ಅವನು ಮಲಗಿರುವ ಸ್ಥಳವನ್ನು ನೀನು ತಿಳುಕೊಂಡಿದ್ದು ಹೋಗಿ ಅವನ ಕಾಲುಗಳ ಮೇಲೆ ಹೊದ್ದಿದ್ದನ್ನು ತೆಗೆದು ಮಲಗಿಕೋ. ಆಗ ನೀನು ಮಾಡಬೇಕಾದದ್ದೇನೆಂದು ಅವನು ನಿನಗೆ ತಿಳಿಸುವನು ಅಂದಳು.
5 And she said to her, All that thou sayest will I do.ಅದಕ್ಕೆ ಇವಳು ನೀನು ನನಗೆ ಹೇಳಿದ್ದೆಲ್ಲಾ ಮಾಡುವೆನು ಅಂದಳು.
6 And she went down to the floor, and did according to all that her mother-in-law had bidden her.ಅವಳು ಆ ಕಣಕ್ಕೆ ಹೋಗಿ ತನ್ನ ಅತ್ತೆ ತನಗೆ ಆಜ್ಞಾಪಿಸಿದ ಪ್ರಕಾರವೆಲ್ಲಾ ಮಾಡಿದಳು.
7 And Boaz ate and drank, and his heart was merry, and he went to lie down at the end of the heap of corn. Then she went softly, and uncovered his feet, and laid herself down.ಏನಂದರೆ, ಬೋವಜನು ತಿಂದು ಕುಡಿದು ಹೃದಯ ಸಂತೋಷ ವಾಗಿದ್ದು ಕಾಳಿನ ರಾಶಿಯ ಕೊನೆಯಲ್ಲಿ ಬಂದು ಮಲಗಿದನು. ಆಗ ಅವಳು ಮೆಲ್ಲಗೆ ಬಂದು ಅವನ ಕಾಲುಗಳ ಮೇಲೆ ಹೊದ್ದಿದ್ದನ್ನು ತೆಗೆದು ಮಲಗಿದಳು.
8 And it came to pass at midnight, that the man was startled, and turned himself; and behold, a woman lay at his feet.ಆದರೆ ಅರ್ಧ ರಾತ್ರಿಯಲ್ಲಿ ಆ ಮನುಷ್ಯನು ಹೆದರಿ ತಿರುಗಿಕೊಂಡಾಗ ಇಗೋ, ಒಬ್ಬ ಸ್ತ್ರೀ ತನ್ನ ಕಾಲುಗಳ ಬಳಿಯಲ್ಲಿ ಮಲಗಿದ್ದಳು.
9 And he said, Who art thou? And she answered, I am Ruth, thy handmaid: spread thy skirt over thy handmaid; for thou hast the right of redemption.ಆಗ ಅವನು ನೀನು ಯಾರು ಅಂದನು. ಅದಕ್ಕವಳು ನಾನು ನಿನ್ನ ದಾಸಿಯಾದ ರೂತಳು; ನೀನು ನಿನ್ನ ದಾಸಿಯ ಮೇಲೆ ನಿನ್ನ ಅಂಚನ್ನು ಹರಡು; ಯಾಕಂದರೆ ನೀನು ಹತ್ತಿರ ಸಂಬಂಧಿಕನು ಅಂದಳು.
10 And he said, Blessed be thou of Jehovah, my daughter! Thou hast shewn more kindness at the end than at the first, inasmuch as thou followedst not young men, whether poor or rich.ಅದಕ್ಕೆ ಅವನು ಹೇಳಿದ್ದೇನಂದರೆ ನನ್ನ ಮಗಳೇ, ಕರ್ತನಿಂದ ನಿನಗೆ ಆಶೀರ್ವಾದವಾಗಲಿ; ಬಡವರೂ ಐಶ್ವರ್ಯವಂತರೂ ಆದ ಯೌವನಸ್ಥರ ಹಿಂದೆ ನೀನು ಹೋಗದೆ ಇದ್ದದರಿಂದ ಮೊದಲು ತೋರಿಸಿದ್ದಕ್ಕಿಂತ ಕಡೆಯಲ್ಲಿ ನೀನು ತೋರಿಸಿದದಯೆಯು ಹೆಚ್ಚಾಗಿದೆ.
11 And now, my daughter, fear not: all that thou sayest will I do to thee; for all the gate of my people knows that thou art a woman of worth.ಈಗ ನನ್ನ ಮಗಳೇ, ನೀನು ಭಯಪಡಬೇಡ; ನಿನಗೆ ಬೇಕಾಗಿರುವದನ್ನು ನಿನಗೆ ಮಾಡುವೆನು; ಯಾಕಂದರೆ ನೀನು ಗುಣವತಿ ಯಾದ ಸ್ತ್ರೀ ಎಂದು ಪಟ್ಟಣದಲ್ಲಿರುವ ನನ್ನ ಜನರೆಲ್ಲರು ಬಲ್ಲರು.
12 And now, truly I am one that has the right of redemption, yet there is one that has the right of redemption who is nearer than I.ಈಗ ನಾನು ನಿನ್ನ ಸವಿಾಪ ಬಂಧು ವಾಗಿದ್ದೇನೆ ಎಂಬದು ನಿಜವೇ; ಆದರೆ ನನಗಿಂತಲೂ ಸವಿಾಪಸ್ಥನಾದ ಬಂಧುವು ಒಬ್ಬನಿದ್ದಾನೆ.
13 Stay over to-night, and it shall be in the morning, if he will redeem thee, well -- let him redeem; but if he like not to redeem thee, then will I redeem thee, [as] Jehovah liveth. Lie down until the morning.ಈ ರಾತ್ರಿಯಲ್ಲಿ ಇಲ್ಲಿರು; ನಾಳೆ ಬೆಳಿಗ್ಗೆ ಅವನು ನಿನಗೆ ಸಂಬಂಧಿಕನ ಕಾರ್ಯ ಮಾಡಿದರೆ ಒಳ್ಳೇದಾಯಿತು; ಅವನು ನಿನಗೆ ಸಂಬಂಧಿಕನ ಕಾರ್ಯಮಾಡಲು ಮನಸ್ಸಿಲ್ಲದೆ ಇದ್ದರೆ ಕರ್ತನ ಜೀವದಾಣೆ--ನಾನೇ ನಿನಗೆ ಸಂಬಂಧಿಕನ ಕಾರ್ಯ ಮಾಡುತ್ತೇನೆ. ಉದಯ ಕಾಲದ ವರೆಗೂ ಮಲಗಿರು ಅಂದನು.
14 And she lay at his feet until the morning; and she rose up before one could know another. And he said, Let it not be known that a woman came into the threshing-floor.ಅವಳು ಹಾಗೆಯೇ ಉದಯ ಕಾಲದ ವರೆಗೂ ಅವನ ಪಾದ ಗಳ ಬಳಿಯಲ್ಲಿ ಮಲಗಿದ್ದು ಒಬ್ಬನಿಗೂ ಗೊತ್ತಾಗ ಬಾರದೆಂದು ಇನ್ನೂ ಕತ್ತಲಿರುವಾಗಲೇ ಎದ್ದಳು. ಅವನು ಒಬ್ಬ ಹೆಂಗಸು ಕಣದಲ್ಲಿ ಬಂದಳೆಂದು ಯಾರಿಗೂ ತಿಳಿಯಲ್ಪಡದಿರಲಿ ಅಂದನು.
15 And he said, Bring the cloak that thou hast upon thee, and hold it. And she held it, and he measured six [measures] of barley, and laid [it] on her; and he went into the city.ಇದಲ್ಲದೆ ಅವನು ನೀನು ಹೊದ್ದುಕೊಂಡಿರುವ ವಸ್ತ್ರವನ್ನು ತಂದು ಹಿಡಿ ಅಂದನು. ಅವಳು ಅದನ್ನು ಹಿಡಿದಾಗ ಅವನು ಅದ ರಲ್ಲಿ ಆರು ಸೊಲಿಗೆ ಜವೆಗೋಧಿಯನ್ನು ಅಳೆದು ಹಾಕಿ ಆಕೆಯ ಮೇಲೆ ಹೊರಿಸಿದನು. ಆಗ ಅವಳು ಪಟ್ಟಣಕ್ಕೆ ಬಂದಳು.
16 And she came to her mother-in-law; and she said, Who art thou, my daughter? And she told her all that the man had done to her.ಅವಳು ತನ್ನ ಅತ್ತೆಯ ಬಳಿಗೆ ಬಂದಾಗ ಅವಳ ಅತ್ತೆಯು ನನ್ನ ಮಗಳೇ, ನಿನ್ನ ಕಾರ್ಯ ಏನಾಯಿತು? ಅಂದಳು. ಆಗ ಅವಳು ಆ ಮನುಷ್ಯನು ತನಗೆ ಮಾಡಿದ್ದನ್ನೆಲ್ಲಾ ಅವಳಿಗೆ ತಿಳಿಸಿದಳು;
17 And she said, These six [measures] of barley gave he me; for he said to me, Go not empty to thy mother-in-law.ನೀನು ನಿನ್ನ ಅತ್ತೆಯ ಬಳಿಗೆ ಬರಿ ಕೈಯಾಗಿ ಹೋಗಬಾರದೆಂದು ಅವನು ಈ ಆರು ಸೊಲಿಗೆ ಜವೆಗೋಧಿಯನ್ನು ನನಗೆ ಕೊಟ್ಟನು ಅಂದಳು.
18 Then she said, Be still, my daughter, until thou know how the matter will fall; for the man will not rest until he have completed the matter this day.ಅದಕ್ಕೆ ಅವಳು ನನ್ನ ಮಗಳೇ, ಈ ಕಾರ್ಯ ಏನಾಗುವದೋ ಎಂದು ನೀನು ತಿಳಿಯುವ ವರೆಗೂ ಸುಮ್ಮನೆ ಇರು; ಯಾಕಂದರೆ ಆ ಮನುಷ್ಯನು ಈ ಹೊತ್ತು ಈ ಕಾರ್ಯವನ್ನು ತೀರಿಸುವ ವರೆಗೂ ವಿಶ್ರಾಂತಿಯಲ್ಲಿ ಇರನು ಅಂದಳು.
Kannada Bible