Bible

Ruth 3 - ASV (Kannada)

1 And Naomi her mother-in-law said unto her, My daughter, shall I not seek rest for thee, that it may be well with thee?ಅವಳ ಅತ್ತೆಯಾದ ನೊವೊಮಿಯು ಅವಳಿಗೆ ನನ್ನ ಮಗಳೇ, ನಿನಗೆ ಒಳ್ಳೇದಾಗುವದಕ್ಕೋಸ್ಕರ ನಾನು ನಿನಗೆ ವಿಶ್ರಾಂತಿ ಯನ್ನು ಹುಡುಕಬೇಕಲ್ಲವೋ?

2 And now is not Boaz our kinsman, with whose maidens thou wast? Behold, he winnoweth barley to-night in the threshing-floor.ಈಗ ನೀನು ಯಾರ ದಾಸಿಗಳ ಸಂಗಡ ಇದ್ದಿಯೋ ಆ ಬೋವಜನು ನಮ್ಮ ಸಂಬಂಧಿಕನಾಗಿದ್ದಾನಲ್ಲಾ? ಇಗೋ, ಅವನು ರಾತ್ರಿ ಯಲ್ಲಿ ಕಣದೊಳಗೆ ಜವೆಗೋಧಿಯನ್ನು ತೂರುವನು.

3 Wash thyself therefore, and anoint thee, and put thy raiment upon thee, and get thee down to the threshing-floor, but make not thyself known unto the man, until he shall have done eating and drinking.ನೀನು ಸ್ನಾನಮಾಡಿ ಎಣ್ಣೆ ಹಚ್ಚಿಕೊಂಡು ನಿನ್ನ ವಸ್ತ್ರಗಳನ್ನು ಧರಿಸಿಕೊಂಡು ಆ ಕಣಕ್ಕೆ ಹೋಗು. ಆದರೆ ಆ ಮನುಷ್ಯನು ಅನ್ನಪಾನಗಳನ್ನು ತೆಗೆದು ಕೊಳ್ಳುವ ವರೆಗೂ ಅವನಿಗೆ ನೀನು ತಿಳಿಯದಂತೆ ಮರೆಯಾಗಿರು.

4 And it shall be, when he lieth down, that thou shalt mark the place where he shall lie, and thou shalt go in, and uncover his feet, and lay thee down; and he will tell thee what thou shalt do.ಅವನು ಮಲಗಿಕೊಂಡಾಗ ಅವನು ಮಲಗಿರುವ ಸ್ಥಳವನ್ನು ನೀನು ತಿಳುಕೊಂಡಿದ್ದು ಹೋಗಿ ಅವನ ಕಾಲುಗಳ ಮೇಲೆ ಹೊದ್ದಿದ್ದನ್ನು ತೆಗೆದು ಮಲಗಿಕೋ. ಆಗ ನೀನು ಮಾಡಬೇಕಾದದ್ದೇನೆಂದು ಅವನು ನಿನಗೆ ತಿಳಿಸುವನು ಅಂದಳು.

5 And she said unto her, All that thou sayest I will do.ಅದಕ್ಕೆ ಇವಳು ನೀನು ನನಗೆ ಹೇಳಿದ್ದೆಲ್ಲಾ ಮಾಡುವೆನು ಅಂದಳು.

6 And she went down unto the threshing-floor, and did according to all that her mother-in-law bade her.ಅವಳು ಆ ಕಣಕ್ಕೆ ಹೋಗಿ ತನ್ನ ಅತ್ತೆ ತನಗೆ ಆಜ್ಞಾಪಿಸಿದ ಪ್ರಕಾರವೆಲ್ಲಾ ಮಾಡಿದಳು.

7 And when Boaz had eaten and drunk, and his heart was merry, he went to lie down at the end of the heap of grain: and she came softly, and uncovered his feet, and laid her down.ಏನಂದರೆ, ಬೋವಜನು ತಿಂದು ಕುಡಿದು ಹೃದಯ ಸಂತೋಷ ವಾಗಿದ್ದು ಕಾಳಿನ ರಾಶಿಯ ಕೊನೆಯಲ್ಲಿ ಬಂದು ಮಲಗಿದನು. ಆಗ ಅವಳು ಮೆಲ್ಲಗೆ ಬಂದು ಅವನ ಕಾಲುಗಳ ಮೇಲೆ ಹೊದ್ದಿದ್ದನ್ನು ತೆಗೆದು ಮಲಗಿದಳು.

8 And it came to pass at midnight, that the man was afraid, and turned himself; and, behold, a woman lay at his feet.ಆದರೆ ಅರ್ಧ ರಾತ್ರಿಯಲ್ಲಿ ಆ ಮನುಷ್ಯನು ಹೆದರಿ ತಿರುಗಿಕೊಂಡಾಗ ಇಗೋ, ಒಬ್ಬ ಸ್ತ್ರೀ ತನ್ನ ಕಾಲುಗಳ ಬಳಿಯಲ್ಲಿ ಮಲಗಿದ್ದಳು.

9 And he said, Who art thou? And she answered, I am Ruth thy handmaid: spread therefore thy skirt over thy handmaid; for thou art a near kinsman.ಆಗ ಅವನು ನೀನು ಯಾರು ಅಂದನು. ಅದಕ್ಕವಳು ನಾನು ನಿನ್ನ ದಾಸಿಯಾದ ರೂತಳು; ನೀನು ನಿನ್ನ ದಾಸಿಯ ಮೇಲೆ ನಿನ್ನ ಅಂಚನ್ನು ಹರಡು; ಯಾಕಂದರೆ ನೀನು ಹತ್ತಿರ ಸಂಬಂಧಿಕನು ಅಂದಳು.

10 And he said, Blessed be thou of Jehovah, my daughter: thou hast showed more kindness in the latter end than at the beginning, inasmuch as thou followedst not young men, whether poor or rich.ಅದಕ್ಕೆ ಅವನು ಹೇಳಿದ್ದೇನಂದರೆ ನನ್ನ ಮಗಳೇ, ಕರ್ತನಿಂದ ನಿನಗೆ ಆಶೀರ್ವಾದವಾಗಲಿ; ಬಡವರೂ ಐಶ್ವರ್ಯವಂತರೂ ಆದ ಯೌವನಸ್ಥರ ಹಿಂದೆ ನೀನು ಹೋಗದೆ ಇದ್ದದರಿಂದ ಮೊದಲು ತೋರಿಸಿದ್ದಕ್ಕಿಂತ ಕಡೆಯಲ್ಲಿ ನೀನು ತೋರಿಸಿದದಯೆಯು ಹೆಚ್ಚಾಗಿದೆ.

11 And now, my daughter, fear not; I will do to thee all that thou sayest; for all the city of my people doth know that thou art a worthy woman.ಈಗ ನನ್ನ ಮಗಳೇ, ನೀನು ಭಯಪಡಬೇಡ; ನಿನಗೆ ಬೇಕಾಗಿರುವದನ್ನು ನಿನಗೆ ಮಾಡುವೆನು; ಯಾಕಂದರೆ ನೀನು ಗುಣವತಿ ಯಾದ ಸ್ತ್ರೀ ಎಂದು ಪಟ್ಟಣದಲ್ಲಿರುವ ನನ್ನ ಜನರೆಲ್ಲರು ಬಲ್ಲರು.

12 And now it is true that I am a near kinsman; howbeit there is a kinsman nearer than I.ಈಗ ನಾನು ನಿನ್ನ ಸವಿಾಪ ಬಂಧು ವಾಗಿದ್ದೇನೆ ಎಂಬದು ನಿಜವೇ; ಆದರೆ ನನಗಿಂತಲೂ ಸವಿಾಪಸ್ಥನಾದ ಬಂಧುವು ಒಬ್ಬನಿದ್ದಾನೆ.

13 Tarry this night, and it shall be in the morning, that if he will perform unto thee the part of a kinsman, well; let him do the kinsman's part: but if he will not do the part of a kinsman to thee, then will I do the part of a kinsman to thee, as Jehovah liveth: lie down until the morning.ಈ ರಾತ್ರಿಯಲ್ಲಿ ಇಲ್ಲಿರು; ನಾಳೆ ಬೆಳಿಗ್ಗೆ ಅವನು ನಿನಗೆ ಸಂಬಂಧಿಕನ ಕಾರ್ಯ ಮಾಡಿದರೆ ಒಳ್ಳೇದಾಯಿತು; ಅವನು ನಿನಗೆ ಸಂಬಂಧಿಕನ ಕಾರ್ಯಮಾಡಲು ಮನಸ್ಸಿಲ್ಲದೆ ಇದ್ದರೆ ಕರ್ತನ ಜೀವದಾಣೆ--ನಾನೇ ನಿನಗೆ ಸಂಬಂಧಿಕನ ಕಾರ್ಯ ಮಾಡುತ್ತೇನೆ. ಉದಯ ಕಾಲದ ವರೆಗೂ ಮಲಗಿರು ಅಂದನು.

14 And she lay at his feet until the morning. And she rose up before one could discern another. For he said, Let it not be known that the woman came to the threshing-floor.ಅವಳು ಹಾಗೆಯೇ ಉದಯ ಕಾಲದ ವರೆಗೂ ಅವನ ಪಾದ ಗಳ ಬಳಿಯಲ್ಲಿ ಮಲಗಿದ್ದು ಒಬ್ಬನಿಗೂ ಗೊತ್ತಾಗ ಬಾರದೆಂದು ಇನ್ನೂ ಕತ್ತಲಿರುವಾಗಲೇ ಎದ್ದಳು. ಅವನು ಒಬ್ಬ ಹೆಂಗಸು ಕಣದಲ್ಲಿ ಬಂದಳೆಂದು ಯಾರಿಗೂ ತಿಳಿಯಲ್ಪಡದಿರಲಿ ಅಂದನು.

15 And he said, Bring the mantle that is upon thee, and hold it; and she held it; and he measured six `measures' of barley, and laid it on her: and he went into the city.ಇದಲ್ಲದೆ ಅವನು ನೀನು ಹೊದ್ದುಕೊಂಡಿರುವ ವಸ್ತ್ರವನ್ನು ತಂದು ಹಿಡಿ ಅಂದನು. ಅವಳು ಅದನ್ನು ಹಿಡಿದಾಗ ಅವನು ಅದ ರಲ್ಲಿ ಆರು ಸೊಲಿಗೆ ಜವೆಗೋಧಿಯನ್ನು ಅಳೆದು ಹಾಕಿ ಆಕೆಯ ಮೇಲೆ ಹೊರಿಸಿದನು. ಆಗ ಅವಳು ಪಟ್ಟಣಕ್ಕೆ ಬಂದಳು.

16 And when she came to her mother-in-law, she said, Who art thou, my daughter? And she told her all that the man had done to her.ಅವಳು ತನ್ನ ಅತ್ತೆಯ ಬಳಿಗೆ ಬಂದಾಗ ಅವಳ ಅತ್ತೆಯು ನನ್ನ ಮಗಳೇ, ನಿನ್ನ ಕಾರ್ಯ ಏನಾಯಿತು? ಅಂದಳು. ಆಗ ಅವಳು ಆ ಮನುಷ್ಯನು ತನಗೆ ಮಾಡಿದ್ದನ್ನೆಲ್ಲಾ ಅವಳಿಗೆ ತಿಳಿಸಿದಳು;

17 And she said, These six `measures' of barley gave he me; for he said, Go not empty unto thy mother-in-law.ನೀನು ನಿನ್ನ ಅತ್ತೆಯ ಬಳಿಗೆ ಬರಿ ಕೈಯಾಗಿ ಹೋಗಬಾರದೆಂದು ಅವನು ಈ ಆರು ಸೊಲಿಗೆ ಜವೆಗೋಧಿಯನ್ನು ನನಗೆ ಕೊಟ್ಟನು ಅಂದಳು.

18 Then said she, Sit still, my daughter, until thou know how the matter will fall; for the man will not rest, until he have finished the thing this day.ಅದಕ್ಕೆ ಅವಳು ನನ್ನ ಮಗಳೇ, ಈ ಕಾರ್ಯ ಏನಾಗುವದೋ ಎಂದು ನೀನು ತಿಳಿಯುವ ವರೆಗೂ ಸುಮ್ಮನೆ ಇರು; ಯಾಕಂದರೆ ಆ ಮನುಷ್ಯನು ಈ ಹೊತ್ತು ಈ ಕಾರ್ಯವನ್ನು ತೀರಿಸುವ ವರೆಗೂ ವಿಶ್ರಾಂತಿಯಲ್ಲಿ ಇರನು ಅಂದಳು.

Kannada Bible