Bible

Psalm 9 - YLT (Kannada)

1 To the Overseer, `On the Death of Labben.' -- A Psalm of David. I confess, O Jehovah, with all my heart, I recount all Thy wonders,ಓ ಕರ್ತನೇ, ನಾನು ಪೂರ್ಣ ಹೃದಯದಿಂದ ನಿನ್ನನ್ನು ಕೊಂಡಾಡುತ್ತೇನೆ; ನಿನ್ನ ಅದ್ಭುತ ಕಾರ್ಯಗಳನ್ನೆಲ್ಲಾ ತೋರಿಸುವೆನು.

2 I rejoice and exult in Thee, I praise Thy Name, O Most High.ನಿನ್ನಲ್ಲಿ ಸಂತೋಷಿಸಿ ಉತ್ಸಾಹಪಡುವೆನು; ಓ ಮಹೋ ನ್ನತನೇ, ನಿನ್ನ ಹೆಸರನ್ನು ಸ್ತುತಿಸಿ ಹಾಡುವೆನು.

3 In mine enemies turning backward, they stumble and perish from Thy face.ನನ್ನ ಶತ್ರುಗಳು ಹಿಂದಕ್ಕೆ ತಿರುಗಿ ನಿನ್ನ ಸಮ್ಮುಖ ದಿಂದ ಬಿದ್ದು ನಾಶವಾಗುವರು.

4 For Thou hast done my judgment and my right. Thou hast sat on a throne, A judge of righteousness.ನೀನು ನನ್ನ ನ್ಯಾಯ ವನ್ನೂ ವ್ಯಾಜ್ಯವನ್ನೂ ಸ್ಥಾಪಿಸಿದ್ದೀ. ನೀತಿಯುಳ್ಳ ನ್ಯಾಯಾ ಧಿಪತಿಯಾಗಿ ಸಿಂಹಾಸನದಲ್ಲಿ ಕೂತುಕೊಂಡಿದ್ದೀ.

5 Thou hast rebuked nations, Thou hast destroyed the wicked, Their name Thou hast blotted out to the age and for ever.ನೀನು ಜನಾಂಗಗಳನ್ನು ಗದರಿಸಿ ದುಷ್ಟರನ್ನು ನಾಶ ಮಾಡಿದ್ದೀ; ಅವರ ಹೆಸರನ್ನು ಯುಗ ಯುಗಾಂತರ ಗಳ ವರೆಗೂ ಅಳಿಸಿ ಬಿಟ್ಟಿದ್ದೀ.

6 O thou Enemy, Finished have been destructions for ever, As to cities thou hast plucked up, Perished hath their memorial with them.ಓ ಶತ್ರುವೇ, ನಾಶನ ಗಳು ಸದಾಕಾಲಕ್ಕೆ ಮುಗಿದಿವೆ; ನೀನು ಪಟ್ಟಣಗಳನ್ನು ನಾಶಮಾಡಿದ್ದೀ; ಅವರ ಜ್ಞಾಪಕವು ಅವರೊಂದಿಗೆ ನಾಶವಾಯಿತು.

7 And Jehovah to the age abideth, He is preparing for judgment His throne.ಆದರೆ ಕರ್ತನು ಸದಾ ಇರುವಾತನು; ಆತನು ನ್ಯಾಯಕ್ಕಾಗಿ ತನ್ನ ಸಿಂಹಾಸನವನ್ನು ಸಿದ್ಧಮಾಡಿದ್ದಾನೆ.

8 And He judgeth the world in righteousness, He judgeth the peoples in uprightness.ಆತನೇ ನೀತಿಯಿಂದ ಲೋಕಕ್ಕೆ ನ್ಯಾಯತೀರಿಸುವನು; ಆತನು ಪ್ರಜೆಗಳಿಗೆ ಯಥಾರ್ಥವಾಗಿ ನ್ಯಾಯತೀರ್ಪು ಕೊಡುವನು.

9 And Jehovah is a tower for the bruised, A tower for times of adversity.ಕರ್ತನು ಕುಗ್ಗಿದವರಿಗೆ ಆಶ್ರಯವಾಗಿರುವನು, ಇಕ್ಕಟ್ಟಿನ ಸಮಯದಲ್ಲಿ ಸಹ ಆಶ್ರಯವಾಗಿರುವನು.

10 They trust in Thee who do know Thy name, For Thou hast not forsaken Those seeking Thee, O Jehovah.ನಿನ್ನ ಹೆಸರನ್ನು ತಿಳಿದವರು ನಿನ್ನಲ್ಲಿ ಭರವಸೆ ಇಡು ವರು; ಓ ಕರ್ತನೇ, ನಿನ್ನನ್ನು ಹುಡುಕುವವರನ್ನು ನೀನು ತೊರೆದುಬಿಡಲಿಲ್ಲ.

11 Sing ye praise to Jehovah, inhabiting Zion, Declare ye among the peoples His acts,ಚೀಯೋನಿನಲ್ಲಿ ವಾಸಿಸುವ ಕರ್ತನನ್ನು ಕೀರ್ತಿಸಿರಿ; ಆತನ ಕ್ರಿಯೆಗಳನ್ನು ಜನಗಳಲ್ಲಿ ತಿಳಿಸಿರಿ.

12 For He who is seeking for blood Them hath remembered, He hath not forgotten the cry of the afflicted.ಆತನು ರಕ್ತಾಪರಾಧವನ್ನು ವಿಚಾರಿಸುವಾಗ ಅವರನ್ನು ಜ್ಞಾಪಕಮಾಡಿಕೊಳ್ಳುವನು; ಆತನು ದೀನರ ಕೂಗನ್ನು ಮರೆತುಬಿಡನು.

13 Favour me, O Jehovah, See mine affliction by those hating me, Thou who liftest me up from the gates of death,ಓ ಕರ್ತನೇ, ನನ್ನ ಮೇಲೆ ಕರುಣೆತೋರಿಸು; ನನ್ನನ್ನು ಹಗೆಮಾಡುವವರಿಂದ ನನಗೆ ಬಂದ ಶ್ರಮೆ ಯನ್ನು ನೋಡು. ಮರಣದ ಬಾಗಲುಗಳಿಂದ ನನ್ನನ್ನು ಎತ್ತುವಾತನೇ,

14 So that I recount all Thy praise, In the gates of the daughter of Zion. I rejoice on Thy salvation.ನಾನು ನಿನ್ನ ಸ್ತುತಿಯನ್ನೆಲ್ಲಾ ಚೀಯೋನಿನ ಮಗಳ ಬಾಗಲುಗಳಲ್ಲಿ ಸಾರುವಹಾಗೆ ನಿನ್ನ ರಕ್ಷಣೆಯಲ್ಲಿ ಉಲ್ಲಾಸಪಡುವೆನು.

15 Sunk have nations in a pit they made, In a net that they hid hath their foot been captured.ಜನಾಂಗಗಳು ತಾವು ಅಗೆದ ಕುಣಿಯಲ್ಲಿ ತಾವೇ ಬಿದ್ದಿದ್ದಾರೆ; ಅವರು ಅಡಗಿಸಿಟ್ಟ ಬಲೆಯಲ್ಲಿ ಅವರ ಕಾಲು ಸಿಕ್ಕಿಕೊಂಡಿತು.

16 Jehovah hath been known, Judgment He hath done, By a work of his hands Hath the wicked been snared. Meditation. Selah.ಕರ್ತನು ತಾನು ತೀರಿಸಿದ ನ್ಯಾಯತೀರ್ಪಿನಿಂದ ತನ್ನನ್ನು ಪ್ರಕಟಪಡಿಸಿಕೊಂಡಿ ದ್ದಾನೆ; ದುಷ್ಟನು ತನ್ನ ಕೈಕೆಲಸದಲ್ಲಿಯೇ ಸಿಕ್ಕಿಬಿದ್ದಿ ದ್ದಾನೆ. ಹಿಗ್ಗಾಯೋನ್‌. ಸೆಲಾ.

17 The wicked do turn back to Sheol, All nations forgetting God.ದುಷ್ಟರೂ ದೇವರನ್ನು ಮರೆಯುವ ಎಲ್ಲಾ ಜನಾಂಗಗಳೂ ನರಕಕ್ಕೆ ಇಳಿಯುವರು.

18 For not for ever is the needy forgotten, The hope of the humble lost to the age.ಆತನು ಬಡವನನ್ನು ಸದಾಕಾಲಕ್ಕೆ ಮರೆಯುವದಿಲ್ಲ. ಬಡವರ ನಿರೀಕ್ಷೆ ಎಂದೆಂದಿಗೂ ನಾಶವಾಗುವದಿಲ್ಲ.

19 Rise, O Jehovah, let not man be strong, Let nations be judged before Thy face.ಓ ಕರ್ತನೇ, ಏಳು; ಮನುಷ್ಯನು ಬಲಗೊಳ್ಳದೆ ಇರಲಿ; ನಿನ್ನ ಸಮ್ಮುಖದಲ್ಲಿ ಜನಾಂಗಗಳಿಗೆ ನ್ಯಾಯ ತೀರ್ವಿಕೆ ಆಗಲಿ.

20 Appoint, O Jehovah, a director to them, Let nations know they `are' men! Selah.ಓ ಕರ್ತನೇ, ಅವರಿಗೆ ಭಯವನ್ನು ಹುಟ್ಟಿಸು; ಆಗ ಜನಾಂಗಗಳು ತಾವು ಮನುಷ್ಯರೇ ಎಂದು ತಿಳುಕೊಳ್ಳುವರು. ಸೆಲಾ.

Kannada Bible