Psalm 89 - WEB (Kannada)
1 > I will sing of the loving kindness of Yahweh forever. With my mouth, I will make known your faithfulness to all generations.ಕರ್ತನ ಕರುಣೆಗಳನ್ನು ಯುಗಯುಗಕ್ಕೂ ಹಾಡುವೆನು; ತಲತಲಾಂತರಕ್ಕೂ ನಿನ್ನ ನಂಬಿಗಸ್ತಿಕೆಯನ್ನು ನನ್ನ ಬಾಯಿಂದ ತಿಳಿಯಪಡಿ ಸುವೆನು.
2 I indeed declare, "Love stands firm forever. You established the heavens. Your faithfulness is in them."ಎಂದೆಂದಿಗೂ ಕರುಣೆಯು ಸ್ಥಾಪಿಸಲ್ಪಡು ವದು; ಆಕಾಶಗಳಲ್ಲಿಯೂ ನಿನ್ನ ನಂಬಿಗಸ್ತಿಕೆಯನ್ನು ಸ್ಥಿರಪಡಿಸುವಿ ಎಂದು ಹೇಳಿದ್ದೇನೆ.
3 "I have made a covenant with my chosen one, I have sworn to David, my servant,ನಾನು ಆದು ಕೊಂಡವನೊಂದಿಗೆ ಒಡಂಬಡಿಕೆ ಮಾಡಿದ್ದೇನೆ; ನನ್ನ ಸೇವಕನಾದ ದಾವೀದನಿಗೆ ಆಣೆ ಇಟ್ಟು ಹೇಳಿದ್ದೇ ನಂದರೆ--
4 'I will establish your seed forever, And build up your throne to all generations.'" Selah.ಎಂದೆಂದಿಗೂ ನಿನ್ನ ಸಂತತಿಯನ್ನು ಸ್ಥಿರ ಪಡಿಸುವೆನು; ತಲತಲಾಂತರಕ್ಕೂ ನಿನ್ನ ಸಿಂಹಾಸನವನ್ನು ಕಟ್ಟುವೆನು ಸೆಲಾ.
5 The heavens will praise your wonders, Yahweh; Your faithfulness also in the assembly of the holy ones.ಇದಲ್ಲದೆ, ಆಕಾಶಗಳು ಓ ಕರ್ತನೇ, ನಿನ್ನ ಅದ್ಭುತಗಳನ್ನು ಪರಿಶುದ್ಧರ ಸಭೆಯಲ್ಲಿ ನಿನ್ನ ನಂಬಿಗಸ್ತಿಕೆಯನ್ನು ಸಹ ಕೊಂಡಾಡುವವು.
6 For who in the skies can be compared to Yahweh? Who among the sons of the heavenly beings is like Yahweh,ಪರ ಲೋಕದಲ್ಲಿ ಕರ್ತನಿಗೆ ಸಮಾನವಾದವನು ಯಾರು? ಪರಾಕ್ರಮಶಾಲಿಗಳ ಮಕ್ಕಳಲ್ಲಿ ಕರ್ತನಿಗೆ ಸಮಾನನಾದವನು ಯಾರು?
7 A very awesome God in the council of the holy ones, To be feared above all those who are around him?ದೇವರು ಪರಿಶುದ್ಧರ ಸಭೆಯಲ್ಲಿ ಬಹಳ ಭೀಕರನೂ ತನ್ನ ಸುತ್ತಲಿರುವವರೆಲ್ಲರಿಗೆ ಭಯಂ ಕರನೂ ಆಗಿದ್ದಾನೆ.
8 Yahweh, God of hosts, who is a mighty one, like you? Yah, your faithfulness is around you.ಸೈನ್ಯಗಳ ದೇವರಾದ ಕರ್ತನೇ, ನಿನ್ನ ಹಾಗೆ ಶಕ್ತನಾದ ಕರ್ತನು ಯಾರು? ಇಲ್ಲವೆ ನಿನ್ನ ನಂಬಿಗಸ್ತಿಕೆಯು ನಿನ್ನ ಸುತ್ತಲೂ ಅದೆ.
9 You rule the pride of the sea. When its waves rise up, you calm them.ನೀನು ಸಮುದ್ರದ ಉಬ್ಬರವನ್ನು ಆಳುತ್ತೀ; ಅದರ ತೆರೆಗಳು ಏಳುವಾಗ ಅವುಗಳನ್ನು ಸುಮ್ಮನಿರಿಸುತ್ತೀ.
10 You have broken Rahab in pieces, like one of the slain. You have scattered your enemies with your mighty arm.ಕೊಲ್ಲ ಲ್ಪಟ್ಟ ಒಬ್ಬನಂತೆ ನೀನು ರಾಹಬನ್ನು ತುಂಡಾಗುವಂತೆ ಒಡೆದಿದ್ದೀ. ನಿನ್ನ ಬಲದ ತೋಳಿನಿಂದ ನಿನ್ನ ಶತ್ರು ಗಳನ್ನು ಚದರಿಸಿ ಬಿಟ್ಟಿದ್ದೀ.
11 The heavens are yours. The earth also is yours; The world and its fullness. You have founded them.ಆಕಾಶಗಳು ನಿನ್ನವು; ಭೂಮಿಯು ಸಹ ನಿನ್ನದು; ಲೋಕವನ್ನೂ ಅದರ ಪೂರ್ಣತೆಯನ್ನೂ ನೀನು ಉಂಟುಮಾಡಿದ್ದೀ.
12 The north and the south, you have created them. Tabor and Hermon rejoice in your name.ಉತ್ತರವನ್ನೂ ದಕ್ಷಿಣವನ್ನೂ ನೀನೇ ನಿರ್ಮಿಸಿದ್ದೀ; ತಾಬೋರೂ ಹೆರ್ಮೋನೂ ನಿನ್ನ ಹೆಸರಿನಲ್ಲಿ ಉತ್ಸಾಹ ಧ್ವನಿಗೈಯುತ್ತವೆ.
13 You have a mighty arm. Your hand is strong, and your right hand is exalted.ನಿನಗೆ ಪರಾಕ್ರಮವುಳ್ಳ ತೋಳು ಉಂಟು; ಕೈ ಬಲವುಳ್ಳದ್ದು. ನಿನ್ನ ಬಲಗೈ ಉನ್ನತವಾ ದದ್ದು.
14 Righteousness and justice are the foundation of your throne. Loving kindness and truth go before your face.ನೀತಿಯೂ ನ್ಯಾಯವೂ ನಿನ್ನ ಸಿಂಹಾಸನದ ಸ್ಥಳವಾಗಿದೆ ಕೃಪೆಯೂ ಸತ್ಯವೂ ನಿನ್ನ ಮುಂದೆ ಹೋಗುತ್ತವೆ;
15 Blessed are the people who learn to acclaim you. They walk in the light of your presence, Yahweh.ಉತ್ಸಾಹ ಧ್ವನಿಯನ್ನು ತಿಳಿದ ಜನರು ಧನ್ಯರು; ಕರ್ತನೇ, ನಿನ್ನ ಮುಖದ ಬೆಳಕಿನಲ್ಲಿ ಅವರು ನಡೆದುಕೊಳ್ಳುವರು.
16 In your name they rejoice all day. In your righteousness, they are exalted.ನಿನ್ನ ಹೆಸರಿನಿಂದ ದಿನವೆಲ್ಲಾ ಉಲ್ಲಾಸಪಟ್ಟು ನಿನ್ನ ನೀತಿಯಲ್ಲಿ ಅವರು ಉನ್ನತಕ್ಕೇರು ವರು.
17 For you are the glory of their strength. In your favor, our horn will be exalted.ಅವರ ಬಲದ ಮಹಿಮೆಯು ನೀನೇ ಮತ್ತು ನಿನ್ನ ಕಟಾಕ್ಷದಿಂದ ನಮ್ಮ ಕೊಂಬು ಉನ್ನತವಾಗುವದು.
18 For our shield belongs to Yahweh; Our king to the Holy One of Israel.ನಮ್ಮ ಗುರಾಣಿಯು ಕರ್ತನೇ; ನಮ್ಮ ಅರಸನು ಇಸ್ರಾಯೇಲಿನ ಪರಿಶುದ್ಧನೇ.
19 Then you spoke in vision to your saints, And said, "I have bestowed strength on the warrior. I have exalted a young man from the people.ಆಗ ದರ್ಶನದಲ್ಲಿ ನಿನ್ನ ಪರಿಶುದ್ಧನ ಸಂಗಡ ಮಾತಾಡಿ ಹೇಳಿದ್ದೇನಂದರೆ --ಪರಾಕ್ರಮಶಾಲಿಯ ಮೇಲೆ ಸಹಾಯವನ್ನು ಇಟ್ಟಿ ದ್ದೇನೆ. ಆಯಲ್ಪಟ್ಟವನನ್ನು ಜನರೊಳಗಿಂದ ಉನ್ನತಕ್ಕೇರಿ ಸಿದ್ದೇನೆ.
20 I have found David, my servant. I have anointed him with my holy oil,ನನ್ನ ಸೇವಕನಾದ ದಾವೀದನನ್ನು ಕಂಡು ಕೊಂಡಿದ್ದೇನೆ; ನನ್ನ ಪರಿಶುದ್ಧ ಎಣ್ಣೆಯಿಂದ ಅವನನ್ನು ಅಭಿಷೇಕಿಸಿದ್ದೇನೆ.
21 With whom my hand shall be established. My arm will also strengthen him.ಅವನ ಸಂಗಡಲೇ ನನ್ನ ಕೈ ಸ್ಥಿರವಾಗಿರುವದು; ನನ್ನ ತೋಳು ಅವನನ್ನು ಬಲಪಡಿಸು ವುದು.
22 No enemy will tax him. No wicked man will oppress him.ಶತ್ರುವು ಅವನನ್ನು ಬಲಾತ್ಕಾರ ಮಾಡನು; ಯಾವ ದುಷ್ಟನೂ ಅವನನ್ನು ಹಿಂಸೆ ಪಡಿಸನು.
23 I will beat down his adversaries before him, And strike those who hate him.ಇದ ಲ್ಲದೆ ಅವನ ಮುಂದೆ ವೈರಿಗಳನ್ನು ಹೊಡೆದು ಬಿಡು ವೆನು; ಅವನ ಹಗೆಯವರನ್ನು ಸಂಕಟಪಡಿಸುವೆನು.
24 But my faithfulness and my loving kindness will be with him. In my name, his horn will be exalted.ಆದರೆ ನನ್ನ ನಂಬಿಗಸ್ತಿಕೆಯೂ ಕರುಣೆಯೂ ಅವನ ಸಂಗಡ ಇರುವವು. ನನ್ನ ಹೆಸರಿನಲ್ಲಿ ಅವನ ಕೊಂಬು ಉನ್ನತವಾಗುವದು.
25 I will set his hand also on the sea, And his right hand on the rivers.ಸಮುದ್ರದಲ್ಲಿ ಅವನ ಕೈ ಯನ್ನೂ ನದಿಗಳಲ್ಲಿ ಅವನ ಬಲಗೈಯನ್ನೂ ಇರಿಸು ವೆನು.
26 He will call to me, 'You are my Father, My God, and the rock of my salvation!'ಅವನು--ನೀನು ನನ್ನ ತಂದೆಯೂ ದೇವರೂ ರಕ್ಷಣೆಯ ಬಂಡೆಯೂ ಎಂದು ನನಗೆ ಮೊರೆಯಿಡು ವನು.
27 I will also appoint him my firstborn, The highest of the kings of the earth.ನಾನು ಅವನನ್ನು ನನ್ನ ಚೊಚ್ಚಲ ಮಗನ ನ್ನಾಗಿಯೂ ಭೂಮಿಯ ಅರಸರಿಗಿಂತ ಉನ್ನತನನ್ನಾ ಗಿಯೂ ಮಾಡುವೆನು.
28 I will keep my loving kindness for him forevermore. My covenant will stand firm with him.ಎಂದೆಂದಿಗೂ ಅವನಿಗೋ ಸ್ಕರ ನನ್ನ ಕರುಣೆಯನ್ನು ಕಾದಿಡುವೆನು. ನನ್ನ ಒಡಂಬಡಿಕೆಯು ಅವನೊಂದಿಗೆ ದೃಢವಾಗಿರುವದು.
29 I will also make his seed endure forever, And his throne as the days of heaven.ಅವನ ಸಂತತಿ ಯನ್ನು ಸಹ ಎಂದೆಂದಿಗೂ ಅವನ ಸಿಂಹಾಸನವನ್ನು ಆಕಾಶದ ದಿವಸಗಳ ಹಾಗೆಯೂ ಮಾಡುವೆನು.
30 If his children forsake my law, And don't walk in my ordinances;ಅವನ ಮಕ್ಕಳು ನನ್ನ ನ್ಯಾಯ ಪ್ರಮಾಣವನ್ನು ಬಿಟ್ಟು, ನನ್ನ ನ್ಯಾಯಗಳಲ್ಲಿ ನಡೆಯದೇ ಹೋದರೆ,
31 If they break my statutes, And don't keep my commandments;ಅವರು ನನ್ನ ನೇಮಕಗಳನ್ನು ಮುರಿದು ನನ್ನ ಆಜ್ಞೆಗಳನ್ನು ಕೈಕೊಳ್ಳದೇ ಹೋದರೆ,
32 Then I will punish their sin with the rod, And their iniquity with stripes.ಕೋಲಿ ನಿಂದ ಅವರ ದ್ರೋಹವನ್ನೂ ಪೆಟ್ಟುಗಳಿಂದ ಅವರ ಅಕ್ರಮವನ್ನೂ ದಂಡಿಸುವೆನು.
33 But I will not completely take my loving kindness from him, Nor allow my faithfulness to fail.ಆದಾಗ್ಯೂ ನನ್ನ ಪ್ರೀತಿ ಕರುಣೆಯನ್ನು ಅವನಿಂದ ಸಂಪೂರ್ಣವಾಗಿ ತೊಲಗಿಸೆನು; ಇಲ್ಲವೇ ನನ್ನ ನಂಬಿಗಸ್ತಿಕೆಯನ್ನು ವ್ಯರ್ಥ ಮಾಡೆನು.
34 I will not break my covenant, Nor alter what my lips have uttered.ನನ್ನ ಒಡಂಬಡಿಕೆಯನ್ನು ನಾನು ಮುರಿ ಯೆನು; ಇಲ್ಲವೆ ನನ್ನ ತುಟಿಗಳಿಂದ ಹೊರಟದ್ದನ್ನು ಬದಲಾಯಿಸೆನು.
35 Once have I sworn by my holiness, I will not lie to David.ಒಂದು ಸಾರಿ ನನ್ನ ಪರಿಶುದ್ಧತ್ವ ದಿಂದ ಆಣೆಯಿಟ್ಟು ಹೇಳಿದ್ದೇನೆ; ದಾವೀದನಿಗೆ ಸುಳ್ಳಾ ಡೆನು.
36 His seed will endure forever, His throne like the sun before me.ಅವನ ಸಂತತಿಯು ಯುಗ ಯುಗಕ್ಕೂ ಅವನ ಸಿಂಹಾಸನವು ನನ್ನ ಮುಂದೆ ಸೂರ್ಯನ ಹಾಗೆಯೂ ಇರುವದು.
37 It will be established forever like the moon, The faithful witness in the sky." Selah.ಚಂದ್ರನ ಹಾಗೆ ಅದು ಯುಗಯುಗಕ್ಕೂ, ಸ್ಥಿರವಾಗಿರುವದು; ಪರಲೋಕದಲ್ಲಿ ರುವ ಸಾಕ್ಷಿಯ ಹಾಗೆ ನಂಬಿಕೆ ಯುಳ್ಳದ್ದಾಗಿರುವದು ಸೆಲಾ.
38 But you have rejected and spurned. You have been angry with your anointed.ಆದರೆ ನೀನು ಅಸಹ್ಯಿಸಿಬಿಟ್ಟು ತಿರಸ್ಕರಿಸಿ ನಿನ್ನ ಅಭಿಷಕ್ತನ ಮೇಲೆ ಉಗ್ರನಾದಿ;
39 You have renounced the covenant of your servant. You have defiled his crown in the dust.ನಿನ್ನ ಸೇವಕನ ಒಡಂಬಡಿಕೆಯನ್ನು ಅಸಡ್ಡೆಮಾಡಿ, ಅವನ ಕಿರೀಟವನ್ನು ನೆಲಕ್ಕೆ ಹಾಕಿ ಹೊಲೆ ಮಾಡಿದ್ದೀ.
40 You have broken down all his hedges. You have brought his strongholds to ruin.ಅವನ ಬೇಲಿಗಳ ನ್ನೆಲ್ಲಾ ಮುರಿದು ಅವನ ಕೋಟೆಗಳನ್ನು ಹಾಳು ಮಾಡಿದ್ದೀ.
41 All who pass by the way rob him. He has become a reproach to his neighbors.ಮಾರ್ಗಸ್ಥರೆಲ್ಲರು ಅವನನ್ನು ಕೊಳ್ಳೇ ಹೊಡೆಯುತ್ತಾರೆ; ತನ್ನ ನೆರೆಯವರಿಗೆ ಅವನು ನಿಂದೆ ಯಾಗಿದ್ದಾನೆ.
42 You have exalted the right hand of his adversaries. You have made all of his enemies rejoice.ಅವನ ವೈರಿಗಳ ಬಲಗೈಯನ್ನು ಉನ್ನತ ಮಾಡಿದ್ದೀ; ಶತ್ರುಗಳೆಲ್ಲರನ್ನು ಸಂತೋಷಪಡಿಸಿದ್ದೀ.
43 Yes, you turn back the edge of his sword, And haven't supported him in battle.ಅವನ ಕತ್ತಿಯ ಬಾಯನ್ನು ಹಿಂದಿರುಗಿಸಿ, ಯುದ್ಧ ದಲ್ಲಿ ಅವನನ್ನು ನಿಲ್ಲುವಂತೆ ಮಾಡಲಿಲ್ಲ.
44 You have ended his splendor, And thrown his throne down to the ground.ಅವನ ಪ್ರಭೆಯನ್ನು ತಡೆದಿ; ಅವನ ಸಿಂಹಾಸನವನ್ನು ನೆಲಕ್ಕೆ ಹಾಕಿದ್ದೀ.
45 You have shortened the days of his youth. You have covered him with shame. Selah.ಅವನ ಯೌವನದ ದಿವಸಗಳನ್ನು ಕಡಿಮೆಮಾಡಿ, ನಾಚಿಕೆಯಿಂದ ಅವನನ್ನು ಮುಚ್ಚಿದ್ದೀ ಸೆಲಾ.
46 How long, Yahweh? Will you hide yourself forever? Will your wrath burn like fire?ಕರ್ತನೇ, ಎಷ್ಟರ ವರೆಗೆ? ಸದಾಕಾಲಕ್ಕೆ ನೀನು ಮರೆಯಾಗಿರುವಿ? ನಿನ್ನ ಸಿಟ್ಟು ಬೆಂಕಿಯ ಹಾಗೆ ಉರಿಯುವದೋ?
47 Remember how short my time is! For what vanity have you created all the children of men!ನನ್ನ ಆಯುಸ್ಸು ಎಷ್ಟು ಕಡಿಮೆ ಯೆಂದು ಜ್ಞಾಪಕಮಾಡಿಕೋ; ಎಲ್ಲಾ ಮನುಷ್ಯರನ್ನು ಯಾಕೆ ವ್ಯರ್ಥವಾಗಿ ನಿರ್ಮಿಸಿದ್ದೀ?
48 What man is he who shall live and not see death, Who shall deliver his soul from the power of Sheol? Selah.ಮರಣವನ್ನು ನೋಡದೆ ಬದುಕುವಂಥ, ಸಮಾಧಿಯ ವಶದಿಂದ ತನ್ನ ಪ್ರಾಣವನ್ನು ತಪ್ಪಿಸಿಕೊಳ್ಳುವಂಥ, ಪುರುಷನು ಯಾರು ಸೆಲಾ.
49 Lord, where are your former loving kindnesses, Which you swore to David in your faithfulness?ಕರ್ತನೇ, ನಿನ್ನ ಸತ್ಯದಲ್ಲಿ ನೀನು ದಾವೀದನಿಗೆ ಆಣೆ ಇಟ್ಟ ನಿನ್ನ ಮುಂಚಿನ ಪ್ರೀತಿ ಕರುಣೆಯು ಎಲ್ಲಿ?
50 Remember, Lord, the reproach of your servants, How I bear in my heart the taunts of all the mighty peoples,ಕರ್ತನೇ, ನಿನ್ನ ಸೇವಕರ ನಿಂದೆ ಯನ್ನು, ಎಲ್ಲಾ ಪರಾಕ್ರಮಿಗಳ ನಿಂದೆಯನ್ನು ನಾನು ಹೇಗೆ ನನ್ನ ಎದೆಯಲ್ಲಿ ಹೊತ್ತೆನೆಂದೂ ಜ್ಞಾಪಕ ಮಾಡಿಕೋ.
51 With which your enemies have mocked, Yahweh, With which they have mocked the footsteps of your anointed one.ಕರ್ತನೇ, ನಿನ್ನ ಶತ್ರುಗಳು ನಿಂದಿಸುತ್ತಾ ರಲ್ಲಾ? ನಿನ್ನ ಅಭಿಷಿಕ್ತನ ಹೆಜ್ಜೆಗಳನ್ನು ನಿಂದಿಸುತ್ತಾ ರಲ್ಲಾ?
52 Blessed be Yahweh forevermore. Amen, and Amen.ಕರ್ತನಿಗೆ ಯುಗಯುಗಕ್ಕೂ ಸ್ತುತಿಯಾಗಲಿ. ಆಮೆನ್, ಅಮೆನ್.
Kannada Bible