Bible

Psalm 8 - BBE (Kannada)

1 <To the chief music-maker on the Gittith. A Psalm. Of David.> O Lord, our Lord, whose glory is higher than the heavens, how noble is your name in all the earth!ನಮ್ಮ ದೇವರಾದ ಓ ಕರ್ತನೇ, ನಿನ್ನ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ಶ್ರೇಷ್ಠವಾಗಿದೆ. ನಿನ್ನ ಮಹಿಮೆಯನ್ನು ಆಕಾಶಗಳ ಮೇಲೆ ಇರಿಸಿದ್ದೀ.

2 You have made clear your strength even out of the mouths of babies at the breast, because of those who are against you; so that you may put to shame the cruel and violent man.ಶತ್ರುವನ್ನೂ ಮುಯ್ಯಿಗೆ ಮುಯ್ಯಿ ಕೊಡುವವನನ್ನೂ ನಿಲ್ಲಿಸಿಬಿಡುವದಕ್ಕೆ ನಿನ್ನ ವೈರಿಗಳ ನಿಮಿತ್ತ ಶಿಶುಗಳ ಮತ್ತು ಮೊಲೆ ಕೂಸುಗಳ ಬಾಯಿಂದ ನೀನು ನಿನ್ನ ಬಲವನ್ನು ಸ್ಥಾಪಿಸಿದ್ದೀ.

3 When I see your heavens, the work of your fingers, the moon and the stars, which you have put in their places;ನಿನ್ನ ಕೈಕೆಲಸವಾದ ಆಕಾಶಗಳನ್ನೂ ನೀನು ಸಿದ್ಧ ಮಾಡಿದ ಚಂದ್ರ ನಕ್ಷತ್ರಗಳನ್ನೂ ನಾನು ಆಲೋ ಚಿಸುವಾಗ

4 What is man, that you keep him in mind? the son of man, that you take him into account?ಮನುಷ್ಯನನ್ನು ನೆನಸುವ ಹಾಗೆ ಅವನು ಎಷ್ಟರವನು? ಅವನನ್ನು ದರ್ಶಿಸುವ ಹಾಗೆ ಮನುಷ್ಯನ ಮಗನು ಎಷ್ಟರವನು?

5 For you have made him only a little lower than the gods, crowning him with glory and honour.ಅವನನ್ನು ದೂತರಿಗಿಂತ ಸ್ವಲ್ಪಕಡಿಮೆ ಮಾಡಿ ಪ್ರಭಾವವನ್ನೂ ಘನವನ್ನೂ ಅವನಿಗೆ ಕಿರೀಟವಾಗಿ ಇಟ್ಟಿದ್ದೀ.

6 You have made him ruler over the works of your hands; you have put all things under his feet;ನಿನ್ನ ಕೈಕೆಲಸಗಳ ಮೇಲೆ ಅವನನ್ನು ಆಳುವಂತೆ ಮಾಡಿದ್ದೀ;

7 All sheep and oxen, and all the beasts of the field;ಎಲ್ಲಾ ಕುರಿದನಗಳನ್ನೂ ಹೌದು, ಅಡವಿಯ ಮೃಗಗಳನ್ನೂ

8 The birds of the air and the fish of the sea, and whatever goes through the deep waters of the seas.ಆಕಾಶದ ಪಕ್ಷಿ ಗಳನ್ನೂ ಸಮುದ್ರದ ವಿಾನುಗಳನ್ನೂ ಸಮುದ್ರದಲ್ಲಿ ಸಂಚರಿಸುವಂಥದ್ದನ್ನೆಲ್ಲಾ ಅವನ ಪಾದಗಳ ಕೆಳಗೆ ಹಾಕಿದ್ದೀ.

9 O Lord, our Lord, how noble is your name in all the earth!ಓ ಕರ್ತನೇ, ನಮ್ಮ ಕರ್ತನೇ, ನಿನ್ನ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ಶ್ರೇಷ್ಠವಾಗಿದೆ.

Kannada Bible