Bible

Psalm 71 - DBY (Kannada)

1 In thee, Jehovah, do I trust: let me never be ashamed.ಓ ಕರ್ತನೇ, ನಾನು ನಿನ್ನಲ್ಲಿ ಭರವಸವನ್ನಿಟ್ಟಿದ್ದೇನೆ; ನನಗೆ ಎಂದಿಗೂ ಆಶಾ ಭಂಗವಾಗದಿರಲಿ.

2 Deliver me in thy righteousness, and rescue me; incline thine ear unto me, and save me.ನಿನ್ನ ನೀತಿಯಲ್ಲಿ ನನ್ನನ್ನು ಬಿಡಿಸಿ ನನ್ನನ್ನು ತಪ್ಪಿಸು; ನಿನ್ನ ಕಿವಿಯನ್ನು ನನ್ನ ಕಡೆಗೆ ತಿರುಗಿಸಿ ನನ್ನನ್ನು ರಕ್ಷಿಸು.

3 Be to me a rock of habitation, whereunto I may continually resort: thou hast given commandment to save me; for thou art my rock and my fortress.ನೀನು ಯಾವಾಗಲೂ ನಾನು ಆಶ್ರಯಿಸಿಕೊಳ್ಳುವ ಬಲಸ್ಥಾನವಾಗಿರು. ನನ್ನನ್ನು ರಕ್ಷಿಸುವದಕ್ಕೆ ಆಜ್ಞಾಪಿಸಿದ್ದೀ, ನನ್ನ ಬಂಡೆಯೂ ಕೋಟೆಯೂ ನೀನೇ.

4 My God, rescue me out of the hand of the wicked, out of the hand of the unrighteous and cruel man.ಓ ನನ್ನ ದೇವರೇ, ದುಷ್ಟನ ಕೈಗೂ ಅನ್ಯಾಯ ಮಾಡುವ ಕ್ರೂರನ ಕೈಗೂ ನನ್ನನ್ನು ತಪ್ಪಿಸು.

5 For thou art my hope, O Lord Jehovah, my confidence from my youth.ಓ ಕರ್ತನಾದ ದೇವರೇ, ನೀನು ನನ್ನ ನಿರೀಕ್ಷೆಯೂ ನನ್ನ ಯೌವನದಿಂದ ನನ್ನ ಭರವಸವೂ ಆಗಿದ್ದೀ.

6 On thee have I been stayed from the womb; from the bowels of my mother thou didst draw me forth: my praise shall be continually of thee.ಗರ್ಭದಿಂದಲೇ ನಿನ್ನ ಮೇಲೆ ಆತುಕೊಂಡಿದ್ದೇನೆ; ತಾಯಿಯ ಗರ್ಭದಿಂದ ನೀನು ನನ್ನನ್ನು ಹೊರಗೆ ತಂದಿದ್ದಿ. ಯಾವಾಗಲೂ ನಿನ್ನಲ್ಲಿ ನನ್ನ ಸ್ತೋತ್ರವು ಇರುವದು.

7 I have been as a wonder unto many; but thou art my strong refuge.ಅನೇಕರಿಗೆ ನಾನು ಆಶ್ಚರ್ಯದಂತಿದ್ದೇನೆ. ಆದರೆ ನೀನು ನನ್ನ ಬಲವಾದ ಆಶ್ರಯವಾಗಿದ್ದೀ.

8 My mouth shall be filled with thy praise, with thy glory, all the day.ನನ್ನ ಬಾಯಿ ನಿನ್ನ ಸ್ತೋತ್ರದಿಂದಲೂ ದಿನವೆಲ್ಲಾ ನಿನ್ನ ಗೌರವದಿಂದಲೂ ತುಂಬಿರಲಿ.

9 Cast me not off in the time of old age; forsake me not when my strength faileth.ನನ್ನ ಮುಪ್ಪಿನ ಕಾಲದಲ್ಲಿ ನನ್ನನ್ನು ತಳ್ಳಿಬಿಡಬೇಡ. ನನ್ನ ಶಕ್ತಿಯು ಕುಂದಿಹೋಗುವಾಗ ನನ್ನನ್ನು ಕೈಬಿಡ ಬೇಡ.

10 For mine enemies speak against me, and they that watch for my soul consult together,ನನ್ನ ಶತ್ರುಗಳು ನನಗೆ ವಿರೋಧವಾಗಿ ಮಾತನಾಡುತ್ತಾರೆ; ನನ್ನ ಪ್ರಾಣಕ್ಕೆ ಹೊಂಚು ಹಾಕುವ ವರು ಕೂಡಿಕೊಂಡು ಆಲೋಚನೆ ಮಾಡುತ್ತಾ--

11 Saying, God hath forsaken him; pursue and seize him, for there is none to deliver.ದೇವರು ಅವನನ್ನು ಕೈ ಬಿಟ್ಟಿದ್ದಾನೆ; ಅವನನ್ನು ಹಿಂಸಿಸಿ, ಹಿಡಿದುಕೊಳ್ಳಿರಿ; ಅವನನ್ನು ಬಿಡಿಸುವವನು ಯಾರೂ ಇಲ್ಲ ಎಂದು ಅವರು ಅನ್ನುತ್ತಾರೆ.

12 O God, be not far from me; my God, hasten to my help.ಓ ದೇವರೇ, ನನ್ನಿಂದ ದೂರವಾಗಿರ ಬೇಡ. ಓ ದೇವರೇ, ನನ್ನ ಸಹಾಯಕ್ಕೆ ತ್ವರೆಪಡು.

13 Let them be ashamed, let them be consumed, that are adversaries to my soul; let them be covered with reproach and dishonour that seek my hurt.ನನ್ನ ಪ್ರಾಣವನ್ನು ಎದುರಿಸುವವರು ನಾಚಿಕೆಪಟ್ಟು ನಾಶವಾಗಲಿ; ನಿಂದೆಯೂ ಅವಮಾನವೂ ನನ್ನ ಕೇಡಿಗಾಗಿ ಹುಡುಕು ವವರನ್ನು ಸುತ್ತಿಕೊಳ್ಳಲಿ.

14 But as for me, I will hope continually, and will praise thee yet more and more.ಆದರೆ ನಾನು ಬಿಟ್ಟುಬಿಡದೆ ನಿನ್ನನ್ನು ನಿರೀಕ್ಷಿ ಸುತ್ತಾ ನಿನ್ನನ್ನು ಇನ್ನೂ ಹೆಚ್ಚೆಚ್ಚಾಗಿ ಸುತ್ತಿಸುವೆನು.

15 My mouth shall declare thy righteousness, [and] thy salvation all the day: for I know not the numbers [thereof].ನನ್ನ ಬಾಯಿ ದಿನವೆಲ್ಲಾ ನಿನ್ನ ನೀತಿಯನ್ನೂ ರಕ್ಷಣೆ ಯನ್ನೂ ಪ್ರಕಟಿಸುವದು. ಅವುಗಳ ಸಂಖ್ಯೆಗಳು ನನಗೆ ತಿಳಿಯದು.

16 I will go in the might of the Lord Jehovah; I will recall thy righteousness, thine alone.ಕರ್ತನಾದ ದೇವರ ಶಕ್ತಿಯಲ್ಲಿ ನಾನು ಹೋಗುವೆನು, ನಿನ್ನ ನೀತಿಯನ್ನು ಹೌದು, ನಿನ್ನದನ್ನೇ ತಿಳಿಸುವೆನು.

17 O God, thou hast taught me from my youth, and hitherto have I proclaimed thy marvellous works:ಓ ದೇವರೇ, ನನ್ನ ಯೌವನದಿಂದ ನನಗೆ ನೀನು ಕಲಿಸಿದ್ದೀ; ಈ ವರೆಗೂ ನಿನ್ನ ಅದ್ಭುತ ಕಾರ್ಯಗಳನ್ನು ತಿಳಿಸುವೆನು.

18 Now also, when I am old and greyheaded, O God, forsake me not, until I have proclaimed thine arm unto [this] generation, thy might to every one that is to come.ಓ ದೇವರೇ, ನಾನು ಮುಪ್ಪಿನವನೂ ನರೆ ಕೂದಲಿನವನೂ ಆದಾಗ ಈ ಸಂತತಿಯವರಿಗೆ ನಿನ್ನ ಶಕ್ತಿಯನ್ನೂ ಮುಂದೆ ಬರುವ ಪ್ರತಿಯೊಬ್ಬನಿಗೆ ನಿನ್ನ ಅಧಿಕಾರವನ್ನೂ ತಿಳಿಸುವ ವರೆಗೂ ನನ್ನನ್ನು ಕೈಬಿಡಬೇಡ.

19 And thy righteousness, O God, reacheth on high, thou who hast done great things: O God, who is like unto thee?ಓ ದೇವರೇ, ಮಹತ್ಕಾರ್ಯಗಳನ್ನು ಮಾಡಿದ ನಿನ್ನ ನೀತಿಯು ಬಹಳ ಉನ್ನತವಾಗಿದೆ. ಓ ದೇವರೇ, ನಿನ್ನ ಹಾಗೆ ಯಾರಿದ್ದಾರೆ!

20 Thou, who hast shewn us many and sore troubles, wilt revive us again, and wilt bring us up again from the depths of the earth;ಕಠಿಣವಾದ ಇಕ್ಕಟ್ಟುಗಳನ್ನು ನೋಡಮಾಡಿದ ನನ್ನನ್ನು ನೀನು ತಿರಿಗಿ ಬದುಕಿಸಿದಿ; ಭೂಮಿಯ ಆಗಾಧ ಗಳೊಳಗಿಂದ ನನ್ನನ್ನು ಮೇಲಕ್ಕೆ ತರುತ್ತೀ.

21 Thou wilt increase my greatness, and comfort me on every side.ನೀನು ನನ್ನ ಗೌರವವನ್ನು ಹೆಚ್ಚಿಸಿ ಎಲ್ಲಾ ಕಡೆಯಿಂದಲೂ ನನ್ನನ್ನು ಆದರಿಸುವಿ.

22 I will also praise thee with the psaltery, even thy truth, my God; unto thee will I sing psalms with the harp, thou holy One of Israel.ಓ ನನ್ನ ದೇವರೇ, ನಾನು ಸಹ ನಿನ್ನನ್ನೂ ನಿನ್ನ ಸತ್ಯವನ್ನೂ ವೀಣೆಯಿಂದ ಕೊಂಡಾಡುವೆನು; ಓ ಇಸ್ರಾಯೇಲಿನ ಪರಿಶುದ್ದನೇ, ಕಿನ್ನರಿಯಿಂದ ನಿನ್ನನ್ನು ಕೀರ್ತಿಸುವೆನು.

23 My lips shall exult when I sing psalms unto thee; and my soul, which thou hast redeemed.ನಾನು ನಿನ್ನನ್ನು ಕೀರ್ತಿಸುವಾಗ ನನ್ನ ತುಟಿಗಳೂ ನೀನು ವಿಮೋಚಿಸಿದ ನನ್ನ ಪ್ರಾಣವೂ ಉತ್ಸಾಹ ಧ್ವನಿಗೈಯುವವು.

24 My tongue also shall talk of thy righteousness all the day; for they shall be ashamed, for they shall be brought to confusion, that seek my hurt.ನನ್ನ ನಾಲಿಗೆಯು ಸಹ ದಿನವೆಲ್ಲಾ ನಿನ್ನ ನೀತಿಯನ್ನು ಮಾತನಾಡುವದು; ನನಗೆ ಕೇಡನ್ನು ಹುಡುಕುವವರು ನಾಚಿಕೊಂಡು ಲಜ್ಜೆಪಡುತ್ತಾರೆ.

Kannada Bible