Bible

Psalm 7 - WEB (Kannada)

1 > Yahweh, my God, I take refuge in you. Save me from all those who pursue me, and deliver me,ನನ್ನ ದೇವರಾದ ಓ ಕರ್ತನೇ, ನಿನ್ನಲ್ಲಿ ಭರವಸವಿಟ್ಟಿದ್ದೇನೆ. ನನ್ನನ್ನು ಹಿಂಸಿಸುವ ವರಿಂದ ತಪ್ಪಿಸಿ ಕಾಪಾಡು;

2 Lest they tear apart my soul like a lion, Ripping it in pieces, while there is none to deliver.ಇಲ್ಲವಾದರೆ ಅವನು ನನ್ನ ಪ್ರಾಣವನ್ನು ಸಿಂಹದಂತೆ ಹರಿದು ತುಂಡು ತುಂಡು ಮಾಡುವನು.

3 Yahweh, my God, if I have done this, If there is iniquity in my hands,ನನ್ನ ದೇವರಾದ ಓ ಕರ್ತನೇ, ನಾನು ಇದನ್ನು ಮಾಡಿದರೆ, ಅಂದರೆ ನನ್ನ ಕೈಗಳಲ್ಲಿ ಅಪರಾ ಧವಿದ್ದರೆ,

4 If I have rewarded evil to him who was at peace with me (Yes, I have delivered him who without cause was my adversary),ಹೌದು, ನನ್ನೊಂದಿಗೆ ಸಮಾಧಾನದಿಂದ ಇದ್ದವನಿಗೆ ನಾನು ಕೇಡು ಮಾಡಿದ್ದರೆ, ಯಾವ ಕಾರಣವಿಲ್ಲದೆ ನನಗೆ ವೈರಿಯಾಗಿರುವವನನ್ನು ನಾನು ಶತ್ರುವಿಗೆ ತಪ್ಪಿಸಿಬಿಟ್ಟೆನಲ್ಲಾ,

5 Let the enemy pursue my soul, and overtake it; Yes, let him tread my life down to the earth, And lay my glory in the dust. Selah.ವೈರಿಯು ನನ್ನ ಪ್ರಾಣ ವನ್ನು ಹಿಡಿದು ಹಿಂಸಿಸಿ ನನ್ನ ಜೀವವನ್ನು ಭೂಮಿಗೆ ತುಳಿದು ನನ್ನ ಗೌರವವನ್ನು ಧೂಳಿನೊಳಗೆ ಹಾಕಿ ಬಿಡಲಿ--ಸೆಲಾ.

6 Arise, Yahweh, in your anger. Lift up yourself against the rage of my adversaries. Awake for me. You have commanded judgment.ಓ ಕರ್ತನೇ, ನಿನ್ನ ಕೋಪದಿಂದ ಏಳು; ನನ್ನ ವೈರಿಗಳ ಉಗ್ರತೆಗಾಗಿ ಎದ್ದೇಳು; ನನ್ನ ನಿಮಿತ್ತ ಎಚ್ಚರಗೊಳ್ಳು; ನೀನು ನ್ಯಾಯತೀರ್ವಿಕೆಯನ್ನು ಆಜ್ಞಾ ಪಿಸಿದ್ದೀಯಲ್ಲಾ.

7 Let the congregation of the peoples surround you. Rule over them on high.ಹೀಗೆ ಪ್ರಜೆಗಳ ಸಭೆಯು ನಿನ್ನನ್ನು ಸುತ್ತಿಕೊಳ್ಳುವದು. ಆದದರಿಂದ ಅವರ ನಿಮಿತ್ತ ನೀನು ಉನ್ನತಕ್ಕೆ ತಿರುಗಿಕೋ.

8 Yahweh administers judgment to the peoples. Judge me, Yahweh, according to my righteousness, And to my integrity that is in me.ಕರ್ತನು ಜನಗಳಿಗೆ ನ್ಯಾಯ ತೀರಿಸುವನು. ಓ ಕರ್ತನೇ, ನನ್ನಲ್ಲಿರುವ ನನ್ನ ನೀತಿಯ ಪ್ರಕಾರವೂ ಯಥಾರ್ಥತೆಯ ಪ್ರಕಾರವೂ ನನಗೆ ನ್ಯಾಯತೀರಿಸು.

9 Oh let the wickedness of the wicked come to an end, But establish the righteous; Their minds and hearts are searched by the righteous God.ದುಷ್ಟರ ದುಷ್ಟತನವು ಮುಗಿದು ಹೋಗಲಿ, ಆದರೆ ನೀತಿವಂತನನ್ನು ದೃಢಪಡಿಸು. ನೀತಿಯುಳ್ಳ ದೇವರು ಹೃದಯವನ್ನೂ ಅಂತರಿಂದ್ರಿ ಯಗಳನ್ನೂ ಶೋಧಿಸುತ್ತಾನಲ್ಲಾ.

10 My shield is with God, Who saves the upright in heart.ಯಥಾರ್ಥ ಹೃದ ಯವುಳ್ಳವನನ್ನು ರಕ್ಷಿಸುವ ದೇವರಲ್ಲಿ ನನ್ನ ರಕ್ಷಣೆ ಉಂಟು.

11 God is a righteous judge, Yes, a God who has indignation every day.ದೇವರು ನೀತಿವಂತರಿಗೆ ನ್ಯಾಯತೀರಿಸುತ್ತಾನೆ. ದೇವರು ಪ್ರತಿದಿನ ದುಷ್ಟರ ಮೇಲೆ ರೋಷವುಳ್ಳ ವನಾಗಿದ್ದಾನೆ.

12 If a man doesn't relent, he will sharpen his sword; He has bent and strung his bow.ಅವನು ತಿರಿಗಿಕೊಳ್ಳದಿದ್ದರೆ ಆತನು ತನ್ನ ಕತ್ತಿ ಮಸೆಯುವನು: ತನ್ನ ಬಿಲ್ಲು ಬಗ್ಗಿಸಿ ಅದನ್ನು ಸಿದ್ಧಮಾಡಿದ್ದಾನೆ.

13 He has also prepared for himself the instruments of death. He makes ready his flaming arrows.ಅವನಿಗೆ ಮರಣಾಯುಧಗಳನ್ನು ಸಹ ಸಿದ್ಧಮಾಡಿ, ಹಿಂಸಿಸುವವರಿಗೋಸ್ಕರ ತನ್ನ ಬಾಣಗಳನ್ನು ಸಿದ್ಧಮಾಡುತ್ತಾನೆ.

14 Behold, he travails with iniquity; Yes, he has conceived mischief, And brought forth falsehood.ಇಗೋ, ಅವನು ದುಷ್ಟತನದಿಂದ ಪ್ರಸವವೇದನೆ ಪಡುತ್ತಾನೆ. ಕೇಡನ್ನು ಗರ್ಭಧರಿಸಿಕೊಂಡು ಸುಳ್ಳನ್ನು ಹೆರುವನು.

15 He has dug a hole, And has fallen into the pit which he made.ಅವನು ಕುಣಿಯನ್ನು ಅಗೆದಿದ್ದಾನೆ. ಆದರೆ ತಾನು ಅಗೆದ ಕುಣಿಯೊಳಗೆ ತಾನೇ ಬಿದ್ದಿದ್ದಾನೆ.

16 The trouble he causes shall return to his own head. His violence shall come down on the crown of his own head.ಅವನ ಕೇಡು ಅವನ ಸ್ವಂತ ತಲೆಯ ಮೇಲೆ ತಿರುಗುವದು; ಅವನ ನೆತ್ತಿಯ ಮೇಲೆ ಅವನ ಬಲಾತ್ಕಾರವು ಇಳಿಯುವದು;

17 I will give thanks to Yahweh according to his righteousness, And will sing praise to the name of Yahweh Most High.ಕರ್ತನನ್ನು ಆತನ ನೀತಿಯ ಪ್ರಕಾರ ನಾನು ಕೊಂಡಾಡುವೆನು; ಮಹೋನ್ನತನಾದ ಕರ್ತನ ನಾಮ ವನ್ನು ಕೀರ್ತಿಸುವೆನು.

Kannada Bible