Psalm 34:1
ನಾನು ಎಲ್ಲಾ ಕಾಲಗಳಲ್ಲಿ ಕರ್ತನನ್ನು ಸ್ತುತಿಸುವೆನು; ಆತನ ಸ್ತೋತ್ರವು ಯಾವಾ ಗಲೂ ನನ್ನ ಬಾಯಲ್ಲಿ ಇರುವದು.
I will bless | אֲבָרֲכָ֣ה | ʾăbārăkâ | uh-va-ruh-HA |
אֶת | ʾet | et | |
the Lord | יְהוָ֣ה | yĕhwâ | yeh-VA |
at all | בְּכָל | bĕkāl | beh-HAHL |
times: | עֵ֑ת | ʿēt | ate |
his praise | תָּ֝מִ֗יד | tāmîd | TA-MEED |
shall continually | תְּֽהִלָּת֥וֹ | tĕhillātô | teh-hee-la-TOH |
be in my mouth. | בְּפִֽי׃ | bĕpî | beh-FEE |
Cross Reference
1 Thessalonians 5:18
ಎಲ್ಲಾದರಲ್ಲಿಯೂ ಕೃತಜ್ಞತಾ ಸ್ತುತಿ ಮಾಡಿರಿ; ಯಾಕಂದರೆ ಇದೇ ನಿಮ್ಮ ವಿಷಯ ವಾಗಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಚಿತ್ತವಾಗಿದೆ.
Psalm 145:1
ಓ ಅರಸನಾದ ನನ್ನ ದೇವರೇ, ನಿನ್ನನ್ನು ಘನಪಡಿಸುವೆನು; ನಿನ್ನ ಹೆಸರನ್ನು ಎಂದೆಂದಿಗೂ ಸ್ತುತಿಸುವೆನು.
Colossians 3:17
ನೀವು ಮಾತಿನಿಂದಾಗಲಿ ಕ್ರಿಯೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನು ಕರ್ತನಾದ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ. ಆತನ ಮೂಲಕ ತಂದೆ ಯಾದ ದೇವರಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ.
Acts 16:25
ಮಧ್ಯರಾತ್ರಿಯಲ್ಲಿ ಪೌಲನೂ ಸೀಲನೂ ಪ್ರಾರ್ಥನೆ ಮಾಡಿದವರಾಗಿ ದೇವರಿಗೆ ಸ್ತುತಿಪದಗಳನ್ನು ಹಾಡುತ್ತಿದ್ದರು. ಸೆರೆಯಲ್ಲಿದ್ದವರು ಅವುಗಳನ್ನು ಕೇಳುತ್ತಿದ್ದರು.
Psalm 71:14
ಆದರೆ ನಾನು ಬಿಟ್ಟುಬಿಡದೆ ನಿನ್ನನ್ನು ನಿರೀಕ್ಷಿ ಸುತ್ತಾ ನಿನ್ನನ್ನು ಇನ್ನೂ ಹೆಚ್ಚೆಚ್ಚಾಗಿ ಸುತ್ತಿಸುವೆನು.
2 Thessalonians 2:13
ಕರ್ತನಿಗೆ ಪ್ರಿಯರಾಗಿರುವ ಸಹೊದರರೇ, ನೀವು ಆತ್ಮನಿಂದ ಶುದ್ಧೀಕರಿಸಲ್ಪಟ್ಟವರಾಗಿ ಸತ್ಯದ ಮೇಲೆ ನಂಬಿಕೆಯನ್ನಿಟ್ಟು ರಕ್ಷಣೆಯನ್ನು ಪಡೆಯುವದಕ್ಕಾಗಿ ದೇವರು ನಿಮ್ಮನ್ನು ಆದಿಯಿಂದ ಆರಿಸಿಕೊಂಡದ್ದರಿಂದ ನಾವು ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಕೃತಜ್ಞತಾಸ್ತುತಿ ಮಾಡುವದಕ್ಕೆ ಬದ್ದರಾಗಿದ್ದೇವೆ
Ephesians 5:20
ಯಾವಾಗಲೂ ಎಲ್ಲಾ ಕಾರ್ಯಗಳಿ ಗೋಸ್ಕರ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ತಂದೆಯಾದ ದೇವರಿಗೆ ಸ್ತೋತ್ರ ಮಾಡುತ್ತಾ ಇರ್ರಿ.
Psalm 71:8
ನನ್ನ ಬಾಯಿ ನಿನ್ನ ಸ್ತೋತ್ರದಿಂದಲೂ ದಿನವೆಲ್ಲಾ ನಿನ್ನ ಗೌರವದಿಂದಲೂ ತುಂಬಿರಲಿ.
Proverbs 29:25
ಮನುಷ್ಯನ ಭಯವು ಉರುಲನ್ನು ತರುತ್ತದೆ; ಕರ್ತನಲ್ಲಿ ಭರವಸ ವಿಡುವವನು ಕ್ಷೇಮದಿಂದಿರುವನು.
Psalm 71:6
ಗರ್ಭದಿಂದಲೇ ನಿನ್ನ ಮೇಲೆ ಆತುಕೊಂಡಿದ್ದೇನೆ; ತಾಯಿಯ ಗರ್ಭದಿಂದ ನೀನು ನನ್ನನ್ನು ಹೊರಗೆ ತಂದಿದ್ದಿ. ಯಾವಾಗಲೂ ನಿನ್ನಲ್ಲಿ ನನ್ನ ಸ್ತೋತ್ರವು ಇರುವದು.
1 Samuel 21:13
ಅವರ ಕಣ್ಣುಮುಂದೆ ತನ್ನ ಬುದ್ಧಿಯನ್ನು ಮಾರ್ಪಡಿಸಿ ತನ್ನನ್ನು ಹುಚ್ಚನ ಹಾಗೆ ತೋರಮಾಡಿ ದ್ವಾರದ ಕದಗಳನ್ನು ಕೆರೆಯುತ್ತಾ ತನ್ನ ಬಾಯಿಯ ಜೊಲ್ಲನ್ನು ತನ್ನ ಗಡ್ಡದ ಮೇಲೆ ಸುರಿಸಿಕೊಂಡನು.
2 Thessalonians 1:3
ಸಹೋದರರೇ, ನಾವು ಯಾವಾಗಲೂ ನಿಮ್ಮ ವಿಷಯದಲ್ಲಿ ದೇವರಿಗೆ ಕೃತಜ್ಞತಾಸ್ತುತಿ ಮಾಡುವದಕ್ಕೆ ಬದ್ಧರಾಗಿದ್ದೇವೆ. ಹಾಗೆ ಮಾಡುವದು ಯೋಗ್ಯ; ಯಾಕಂದರೆ ನಿಮ್ಮ ನಂಬಿಕೆಯು ಬಹಳ ಅಭಿವೃದ್ಧಿ ಹೊಂದುತ್ತಾ ಪರಸ್ಪರವಾದ ಪ್ರೀತಿಯು ನಿಮ್ಮೆಲ್ಲ ರಲ್ಲಿಯೂ ಹೆಚ್ಚುತ್ತಾ ಬರುತ್ತದೆ.
Acts 5:41
ಆತನ ಹೆಸರಿಗಾಗಿ ಅವಮಾನಪಡುವದಕ್ಕೆ ತಾವು ಯೋಗ್ಯರೆಂದು ಎಣಿಸ ಲ್ಪಟ್ಟದ್ದಕ್ಕಾಗಿ ಅವರು ಸಂತೋಷಿಸುತ್ತಾ ಆಲೋಚನಾ ಸಭೆಯಿಂದ ಹೊರಟುಹೋದರು.
Isaiah 24:15
ಆದದರಿಂದ ನೀವು ಕರ್ತನಿಗೆ ಬೆಂಕಿಯಲ್ಲಿಯೂ ಸಮುದ್ರದ ದ್ವೀಪಗಳಲ್ಲಿಯೂ ಇಸ್ರಾಯೇಲ್ಯರ ದೇವ ರಾದ ಕರ್ತನ ಹೆಸರನ್ನು ಘನಪಡಿಸಿರಿ.
Genesis 20:2
ಅಬ್ರಹಾಮನು ತನ್ನ ಹೆಂಡತಿಯಾದ ಸಾರಳ ವಿಷಯವಾಗಿ--ಅವಳು ನನ್ನ ತಂಗಿ ಎಂದು ಹೇಳಿ ದನು. ಆದದರಿಂದ ಗೆರಾರಿನ ಅರಸನಾದ ಅಬೀಮೆಲೆ ಕನು ಸಾರಳನ್ನು ಕರೆಯಿಸಿ ತೆಗೆದುಕೊಂಡನು.