Psalm 147:5
ನಮ್ಮ ಕರ್ತನು ದೊಡ್ಡವನೂ, ಪರಾ ಕ್ರಮಿಯೂ, ವಿವೇಕಕ್ಕೆ ಎಣೆಯಿಲ್ಲ.
Psalm 147:5 in Other Translations
King James Version (KJV)
Great is our Lord, and of great power: his understanding is infinite.
American Standard Version (ASV)
Great is our Lord, and mighty in power; His understanding is infinite.
Bible in Basic English (BBE)
Great is our Lord, and great his power; there is no limit to his wisdom.
Darby English Bible (DBY)
Great is our Lord, and of great power: his understanding is infinite.
World English Bible (WEB)
Great is our Lord, and mighty in power. His understanding is infinite.
Young's Literal Translation (YLT)
Great `is' our Lord, and abundant in power, Of His understanding there is no narration.
| Great | גָּד֣וֹל | gādôl | ɡa-DOLE |
| is our Lord, | אֲדוֹנֵ֣ינוּ | ʾădônênû | uh-doh-NAY-noo |
| great of and | וְרַב | wĕrab | veh-RAHV |
| power: | כֹּ֑חַ | kōaḥ | KOH-ak |
| his understanding | לִ֝תְבוּנָת֗וֹ | litbûnātô | LEET-voo-na-TOH |
| is infinite. | אֵ֣ין | ʾên | ane |
| מִסְפָּֽר׃ | mispār | mees-PAHR |
Cross Reference
Isaiah 40:28
ನಿನಗೆ ಗೊತ್ತಿಲ್ಲವೋ? ನೀನು ಕೇಳಲಿಲ್ಲವೋ? ಕರ್ತನು ನಿರಂತರವಾದ ದೇವರೂ ಭೂಮಿಯ ಅಂತ್ಯಗಳನ್ನು ಸೃಷ್ಟಿಸಿದವನೂ ದಣಿಯುವದಿಲ್ಲ ಇಲ್ಲವೆ ಬಳಲುವ ದಿಲ್ಲ; ಆತನ ತಿಳುವಳಿಕೆಯು ಪರಿಶೋಧನೆಗೆ ಅಗಮ್ಯ.
Psalm 48:1
ನಮ್ಮ ದೇವರ ಪಟ್ಟಣದಲ್ಲಿ ಆತನ ಪರಿಶುದ್ಧ ಪರ್ವತದಲ್ಲಿ ಕರ್ತನು ದೊಡ್ಡ ವನೂ ಬಹಳವಾಗಿ ಸ್ತುತಿಸಲ್ಪಡುವಾತನೂ ಆಗಿದ್ದಾನೆ.
Nahum 1:3
ಕರ್ತನು ಕೋಪಿಸುವದರಲ್ಲಿ ನಿಧಾನ ಮಾಡುವವನಾದರೂ ಶಕ್ತಿಯಲ್ಲಿ ಮಹತ್ತಾದವನು; ದುರ್ಮಾರ್ಗದವರನ್ನು ಎಷ್ಟು ಮಾತ್ರಕ್ಕೂ ನಿರ್ಮಲರೆಂದು ತೀರ್ಮಾನಿಸ ದವನು; ಕರ್ತನ ಮಾರ್ಗವು ಸುಳಿಗಾಳಿಯಲ್ಲಿಯೂ ಬಿರುಗಾಳಿಯಲ್ಲಿಯೂ ಉಂಟು; ಮೇಘಗಳು ಆತನ ಕಾಲುಗಳ ಧೂಳೇ.
Romans 11:33
ಹಾ, ದೇವರ ಜ್ಞಾನದ ಮತ್ತು ತಿಳುವಳಿಕೆಯ ಐಶ್ವರ್ಯವು ಎಷ್ಟೋ ಅಗಾಧ ವಾಗಿದೆ! ಆತನ ತೀರ್ಪುಗಳು ಪರಿಶೋಧನೆಗೂ ಆತನ ಮಾರ್ಗಗಳು ಕಂಡು ಹಿಡಿಯುವದಕ್ಕೂ ಅಸಾಧ್ಯ ವಾಗಿವೆ!
Psalm 145:3
ಕರ್ತನು ದೊಡ್ಡವನೂ ಬಹಳವಾಗಿ ಸ್ತುತಿಸಲ್ಪಡತಕ್ಕವನೂ ಆಗಿದ್ದಾನೆ; ಆತನ ದೊಡ್ಡಸ್ತಿಕೆಯು ಅಶೋಧ್ಯವಾದದ್ದು.
Psalm 139:17
ಓ ದೇವರೇ, ನಿನ್ನ ಆಲೋಚನೆಗಳು ನನಗೆ ಎಷ್ಟೋ ಪ್ರಿಯವಾಗಿವೆ! ಅವುಗಳ ಸಂಖ್ಯೆ ಎಷ್ಟೋ ದೊಡ್ಡ ದಾಗಿದೆ.
Psalm 99:2
ಕರ್ತನು ಚೀಯೋನಿನಲ್ಲಿ ದೊಡ್ಡವನಾಗಿಯೂ ಎಲ್ಲಾ ಜನಗಳ ಮೇಲೆ ಉನ್ನತನಾಗಿಯೂ ಇದ್ದಾನೆ.
Psalm 96:4
ಕರ್ತನು ದೊಡ್ಡವನೂ ಬಹಳವಾಗಿ ಸ್ತುತಿಸ ಲ್ಪಡತಕ್ಕವನೂ ಆಗಿದ್ದಾನೆ; ಆತನಿಗೇ ಭಯಪಡ ತಕ್ಕದ್ದು.
Psalm 40:5
ಓ ನನ್ನ ದೇವರಾದ ಕರ್ತನೇ, ನೀನು ಮಾಡಿದ ನಿನ್ನ ಅದ್ಭುತ ಕಾರ್ಯಗಳೂ ನಮ್ಮ ಕಡೆಗಿರುವ ನಿನ್ನ ಯೋಚನೆಗಳೂ ಬಹಳ; ಅವುಗಳನ್ನು ಕ್ರಮವಾಗಿ ನಿನ್ನ ಮುಂದೆ ಎಣಿಸಲಾರೆನು; ಅವುಗಳನ್ನು ನಾನು ತಿಳಿಸಿ ಹೇಳಬೇಕಾದರೆ ಎಣಿಸುವದಕ್ಕಿಂತ ಹೆಚ್ಚಾಗಿವೆ.
1 Chronicles 16:25
ಯಾಕಂದರೆ ಕರ್ತನು ದೊಡ್ಡವನೂ ಬಹಳವಾಗಿ ಸ್ತುತಿಸಲ್ಪಡತಕ್ಕವನೂ;
Revelation 15:3
ಅವರು ದೇವರ ಸೇವಕನಾದ ಮೋಶೆಯ ಹಾಡನ್ನೂ ಕುರಿಮರಿಯಾದಾತನ ಹಾಡನ್ನೂ ಹಾಡುತ್ತಾ--ಸರ್ವಶಕ್ತನಾಗಿರುವ ದೇವ ರಾದ ಕರ್ತನೇ, ನಿನ್ನ ಕ್ರಿಯೆಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ; ಪರಿಶುದ್ಧರ ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ.
Jeremiah 32:17
ಓ ಕರ್ತನಾದ ದೇವರೇ, ಇಗೋ, ನೀನು ನಿನ್ನ ಮಹಾಬಲದಿಂದ ನಿನ್ನ ಕೈಚಾಚಿ ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದ್ದೀ; ನಿನಗೆ ಕಠಿಣವಾದ ಕಾರ್ಯ ಒಂದೂ ಇಲ್ಲ.
Jeremiah 10:6
ಓ ಕರ್ತನೇ, ನಿನ್ನ ಹಾಗೆ ಯಾರೂ ಇಲ್ಲ; ನೀನು ಮಹೋ ತ್ತಮನು, ನಿನ್ನ ಹೆಸರು ಪರಾಕ್ರಮದಲ್ಲಿ ದೊಡ್ಡದು.
Psalm 135:5
ಕರ್ತನು ದೊಡ್ಡವನು; ನಮ್ಮ ಕರ್ತನು ಎಲ್ಲಾ ದೇವರುಗಳಿ ಗಿಂತ ದೊಡ್ಡವನೆಂದು ನಾನು ತಿಳಿದಿದ್ದೇನೆ.