Bible

Psalm 146 - WEB (Kannada)

1 Praise Yah! Praise Yahweh, my soul.ಕರ್ತನನ್ನು ಸ್ತುತಿಸಿರಿ. ನನ್ನ ಪ್ರಾಣವೇ, ಕರ್ತನನ್ನು ಸ್ತುತಿಸು.

2 While I live, I will praise Yahweh. I will sing praises to my God as long as I exist.ನನ್ನ ಪ್ರಾಣವಿರುವ ವರೆಗೂ ಕರ್ತನನ್ನು ಸ್ತುತಿಸುವೆನು; ನನ್ನ ಜೀವಮಾನವೆಲ್ಲಾ ನನ್ನ ದೇವರನ್ನು ಕೀರ್ತಿ ಸುವೆನು.

3 Don't put your trust in princes, Each a son of man in whom there is no help.ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನ ವರನ್ನು ನೆಚ್ಚಬೇಡಿರಿ, ಅವನು ಸಹಾಯಮಾಡ ಶಕ್ತ ನಲ್ಲ;

4 His spirit departs, and he returns to the earth. In that very day, his thoughts perish.ಅವನ ಉಸಿರು ಹೋಗಲು ಅವನು ಮಣ್ಣಿಗೆ ಹಿಂತಿರುಗುವನು; ಅದೇ ದಿನದಲ್ಲಿ ಅವನ ಸಂಕಲ್ಪ ಗಳೆಲ್ಲಾ ನಾಶವಾಗುತ್ತವೆ.

5 Happy is he who has the God of Jacob for his help, Whose hope is in Yahweh, his God:ಯಾಕೋಬನ ದೇವರನ್ನು ತನ್ನ ಸಹಾಯವನ್ನಾಗಿ ಮಾಡಿಕೊಂಡವನು ಧನ್ಯನು; ಅವನು ತನ್ನ ದೇವರಾದ ಕರ್ತನ ಮೇಲೆ ತನ್ನ ನಿರೀಕ್ಷೆ ಇಡುವನು.

6 Who made heaven and earth, The sea, and all that is in them; Who keeps truth forever;ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಎಲ್ಲವನ್ನೂ ಉಂಟುಮಾಡಿದಾತನೇ ಎಂದೆಂದಿಗೂ ವಾಗ್ದಾನ ನೆರವೇರಿಸುತ್ತಾನೆ.

7 Who executes justice for the oppressed; Who gives food to the hungry. Yahweh frees the prisoners.ಹಿಂಸೆಗೆ ಗುರಿಯಾದವರ ನ್ಯಾಯವನ್ನು ಸ್ಥಾಪಿಸುವವನೂ ಹಸಿ ದವರಿಗೆ ಆಹಾರ ಕೊಡುವವನೂ ಆತನೇ.

8 Yahweh opens the eyes of the blind. Yahweh raises up those who are bowed down. Yahweh loves the righteous.ಕರ್ತನು ಸೆರೆಯವರನ್ನು ಬಿಡಿಸುತ್ತಾನೆ. ಕರ್ತನು ಕುರುಡರ ಕಣ್ಣುಗಳನ್ನು ತೆರೆಯುತ್ತಾನೆ; ಕರ್ತನು ದೀನರನ್ನು ಎತ್ತು ತ್ತಾನೆ; ಕರ್ತನು ನೀತಿವಂತರನ್ನು ಪ್ರೀತಿಮಾಡುತ್ತಾನೆ;

9 Yahweh preserves the foreigners. He upholds the fatherless and widow, But the way of the wicked he turns upside down.ಕರ್ತನು ಪರದೇಶಸ್ಥರನ್ನು ಕಾಪಾಡುತ್ತಾನೆ; ದಿಕ್ಕಿಲ್ಲದ ವರನ್ನೂ ವಿಧವೆಯರನ್ನೂ ಪರಾಮರಿಸುತ್ತಾನೆ; ಆದರೆ ದುಷ್ಟರ ಮಾರ್ಗವನ್ನು ಡೊಂಕುಮಾಡುತ್ತಾನೆ.

10 Yahweh will reign forever; Your God, O Zion, to all generations. Praise Yah!ಓ ಚೀಯೋನೇ, ನಿನ್ನ ದೇವರಾದ ಕರ್ತನು ತಾನೇ ತಲತಲಾಂತರಕ್ಕೂ ಆಳುತ್ತಾನೆ. ಕರ್ತನನ್ನು ಸ್ತುತಿಸಿರಿ.

Kannada Bible