Bible

Psalm 140 - WEB (Kannada)

1 > Deliver me, Yahweh, from the evil man. Preserve me from the violent man;ಓ ಕರ್ತನೇ, ಕೆಡುಕರಿಂದ ನನ್ನನ್ನು ಬಿಡಿಸು; ಬಲಾತ್ಕಾರಿಗಳಿಂದ ತಪ್ಪಿಸಿ ನನ್ನನ್ನು ಕಾಪಾಡು.

2 Those who devise mischief in their hearts. They continually gather themselves together for war.ಅವರು ಹೃದಯದಲ್ಲಿ ಕೇಡು ಗಳನ್ನು ಕಲ್ಪಿಸುತ್ತಾರೆ; ಅವರು ತಪ್ಪದೆ ಯುದ್ಧಕ್ಕೆ ಕೂಡಿಕೊಳ್ಳುತ್ತಾರೆ.

3 They have sharpened their tongues like a serpent. Viper's poison is under their lips. Selah.ತಮ್ಮ ನಾಲಿಗೆಗಳನ್ನು ಹಾವಿನ ಹಾಗೆ ಅವರು ಹದಮಾಡುತ್ತಾರೆ; ಸರ್ಪಗಳ ವಿಷವು ಅವರ ತುಟಿಗಳ ಕೆಳಗಿದೆ ಸೆಲಾ.

4 Yahweh, keep me from the hands of the wicked. Preserve me from the violent men who have determined to trip my feet.ಓ ಕರ್ತನೇ, ದುಷ್ಟನ ಕೈಗಳಿಗೆ ನನ್ನನ್ನು ತಪ್ಪಿಸಿ ಕಾಪಾಡು; ಬಲಾತ್ಕಾರಿಯಿಂದ ನನ್ನನ್ನು ತಪ್ಪಿಸಿ ಕಾಯಿ; ನಾನು ಎಡವಿ ಬೀಳಬೇಕೆಂದು ಯೋಚಿಸುತ್ತಾರೆ.

5 The proud have hidden a snare for me, They have spread the cords of a net by the path. They have set traps for me. Selah.ಗರ್ವಿಷ್ಠರು ನನಗೆ ಉರ್ಲನ್ನೂ ಪಾಶಗಳನ್ನೂ ಅಡಗಿಸಿಟ್ಟಿದ್ದಾರೆ; ಬಲೆಯನ್ನು ದಾರಿಯ ಅಂಚಿನಲ್ಲಿ ಹಾಸಿದ್ದಾರೆ; ನೇಣುಗಳನ್ನು ನನಗೆ ಇಟ್ಟಿದ್ದಾರೆ ಸೆಲಾ.

6 I said to Yahweh, "You are my God." Listen to the cry of my petitions, Yahweh.ನಾನು ಕರ್ತನಿಗೆ--ನೀನು ನನ್ನ ದೇವರಾಗಿದ್ದೀ; ಕರ್ತನೇ, ನನ್ನ ವಿಜ್ಞಾಪನೆಗಳ ಸ್ವರಕ್ಕೆ ಕಿವಿಗೊಡು.

7 Yahweh, the Lord, the strength of my salvation, You have covered my head in the day of battle.ನನ್ನ ರಕ್ಷಣೆಯ ಬಲವಾಗಿರುವ ಕರ್ತನಾದ ಓ ದೇವರೇ, ನನ್ನ ತಲೆಯನ್ನು ಯುದ್ಧದ ದಿವಸದಲ್ಲಿ ಮುಚ್ಚಿದ್ದೀ.

8 Yahweh, don't grant the desires of the wicked. Don't let their evil plans succeed, or they will become proud. Selah.ಓ ಕರ್ತನೇ, ದುಷ್ಟರ ಆಶೆಯನ್ನು ನೆರವೇರಿಸಬೇಡ; ಅವರು ಉನ್ನತಕ್ಕೇರುವ ಹಾಗೆ ಅವರ ಯುಕ್ತಿಯನ್ನು ಪೂರೈಸಬೇಡ ಎಂದು ಹೇಳಿದೆನು ಸೆಲಾ.

9 As for the head of those who surround me, Let the mischief of their own lips cover them.ನನ್ನ ಸುತ್ತಲಿರುವವರ ವಿಷವೂ ಅವರ ತುಟಿಗಳ ಕಾಟವೂ ಅವರನ್ನು ಮುಚ್ಚಲಿ.

10 Let burning coals fall on them. Let them be thrown into the fire, Into miry pits, from where they never rise.ಉರಿ ಕೆಂಡಗಳು ಅವರ ಮೇಲೆ ಬೀಳಲಿ; ಬೆಂಕಿಯಲ್ಲಿಯೂ ಅವರು ಏಳಲಾರದ ಹಾಗೆ ಕುಣಿಯಲ್ಲಿಯೂ ಆತನು ಅವರನ್ನು ಕೆಡವಲಿ.

11 An evil speaker won't be established in the earth. Evil will hunt the violent man to overthrow him.ಕೆಟ್ಟದ್ದನ್ನು ಮಾತನಾಡುವವನು ಭೂಮಿ ಯಲ್ಲಿ ಸ್ಥಿರವಾಗದಿರಲಿ; ಬಲಾತ್ಕಾರಿಯನ್ನು ಕೆಡವು ವದಕ್ಕೆ ಕೇಡು ಅವನನ್ನು ಬೇಟೆಯಾಡುವದು.

12 I know that Yahweh will maintain the cause of the afflicted, And justice for the needy.ಕರ್ತನು ದೀನನಿಗೆ ವ್ಯಾಜ್ಯವನ್ನೂ ಬಡವರಿಗೆ ನ್ಯಾಯವನ್ನೂ ತೀರಿಸುವನೆಂದು ನಾನು ಬಲ್ಲೆನು.

13 Surely the righteous will give thanks to your name. The upright will dwell in your presence.ನಿಶ್ಚಯವಾಗಿ ನೀತಿವಂತರು ನಿನ್ನ ಹೆಸರಿಗೆ ಉಪಕಾರ ಸ್ತುತಿಯನ್ನು ಮಾಡುವರು; ಯಥಾರ್ಥರು ನಿನ್ನ ಸನ್ನಿಧಿಯಲ್ಲಿ ವಾಸಿಸುವರು.

Kannada Bible