Bible

Proverbs 30 - DBY (Kannada)

1 The words of Agur the son of Jakeh; the prophecy uttered by the man unto Ithiel, [even] unto Ithiel and Ucal:ಯಾಕೆ ಎಂಬವನ ಮಗನಾದ ಆಗೂರನ ಪ್ರವಾದನೆಯ ಮಾತುಗಳು; ಇವನು ಇಥಿಯೇಲನಿಗೆ ಹೌದು, ಇಥಿಯೇಲನಿಗೂ ಉಕ್ಕಾಲ ನಿಗೂ ಹೀಗೆ ಹೇಳಿದನು.

2 Truly *I* am more stupid than any one; and I have not a man's intelligence.ಖಂಡಿತವಾಗಿಯೂ ಪ್ರತಿಯೊಬ್ಬ ಮನುಷ್ಯನಿಗಿಂತ ನಾನು ಪಶುಪ್ರಾಯನು; ಮನುಷ್ಯನ ವಿವೇಕವು ನನಗೆ ಇಲ್ಲ.

3 I have neither learned wisdom, nor have I the knowledge of the Holy.ನಾನು ಜ್ಞಾನವನ್ನು ಪಡೆದುಕೊಂಡಿಲ್ಲ; ಅಲ್ಲದೆ ಪರಿಶುದ್ಧನ ವಿಷಯವಾದ ತಿಳುವಳಿಕೆಯು ನನಗಿಲ್ಲ.

4 Who hath ascended up into the heavens, and descended? Who hath gathered the wind in his fists? Who hath bound the waters in a mantle? Who hath established all the ends of the earth? What is his name, and what is his son's name, if thou knowest?ಆಕಾಶಕ್ಕೆ ಏರಿದವನು ಇಲ್ಲವೆ ಇಳಿದವನು ಯಾರು? ತನ್ನ ಮುಷ್ಟಿಗಳಲ್ಲಿ ಗಾಳಿಯನ್ನು ಕೂಡಿಸಿದವನಾರು? ವಸ್ತ್ರದಲ್ಲಿ ನೀರನ್ನು ಕಟ್ಟಿದವ ನಾರು? ಭೂಮಿಯ ಕೊನೆಗಳನ್ನೆಲ್ಲಾ ಸ್ಥಾಪಿಸಿದವ ನಾರು? ನೀನು ಹೇಳುವದಾದರೆ ಆತನ ಹೆಸರೇನು? ಆತನ ಮಗನ ಹೆಸರೇನು?

5 Every word of +God is pure: he is a shield unto them that put their trust in him.ದೇವರ ಪ್ರತಿಯೊಂದು ಮಾತು ಶುದ್ಧವಾಗಿದೆ; ಆತನಲ್ಲಿ ಭರವಸವಿಡುವವನಿಗೆ ಆತನು ಗುರಾಣಿಯಾಗಿದ್ದಾನೆ.

6 Add thou not unto his words, lest he reprove thee, and thou be found a liar.ಆತನು ನಿನ್ನನ್ನು ಗದರಿಸುವಂತೆಯೂ ನೀನು ಸುಳ್ಳುಗಾರನೆಂದು ತೋರು ವಂತೆಯೂ ಆತನ ಮಾತುಗಳಿಗೆ ಯಾವದನ್ನು ಸೇರಿಸ ಬೇಡ.

7 Two things do I ask of thee; deny me [them] not before I die:ನಿನ್ನಿಂದ ಎರಡನ್ನು ಕೇಳಿಕೊಂಡಿದ್ದೇನೆ; ನಾನು ಸಾಯುವದಕ್ಕಿಂತ ಮುಂಚೆ ಅವುಗಳನ್ನು ಕೊಡುವದಕ್ಕೆ ಹಿಂತೆಗೆಯಬೇಡ;

8 Remove far from me vanity and lies; give me neither poverty nor riches; feed me with the bread of my daily need:ವ್ಯರ್ಥತ್ವವನ್ನೂ ಸುಳ್ಳುಗಳನ್ನೂ ನನ್ನಿಂದ ದೂರವಾಗಿ ತೆಗೆದುಹಾಕು. ಬಡತನವಾಗಲಿ ಐಶ್ವರ್ಯವಾಗಲಿ ನನಗೆ ಕೊಡಬೇಡ; ನನಗೆ ತಕ್ಕಷ್ಟು ಆಹಾರವನ್ನು ಭೋಜನ ಮಾಡಿಸು;

9 lest I be full and deny [thee], and say, Who is Jehovah? or lest I be poor and steal, and outrage the name of my God.ಇಲ್ಲವಾದರೆ ನಾನು ಸಂತೃಪ್ತನಾಗಿ ನಿನ್ನನ್ನು ನಿರಾಕರಿಸಿ--ಕರ್ತನು ಯಾರು ಎಂದು ಹೇಳಿಯೇನು? ಇಲ್ಲವೆ ನಾನು ಬಡವನಾಗಿ ಕದ್ದುಕೊಂಡು ದೇವರ ನಾಮವನ್ನು ಅಯೋಗ್ಯವಾಗಿ ಎತ್ತೇನು.

10 Speak not too much about a servant to his master, lest he curse thee, and thou be held guilty.ಅವನ ಯಜಮಾನನಿಗೆ ಸೇವಕನ ವಿಷಯವಾಗಿ ದೂರು ಹೇಳಬೇಡ; ಇದ ರಿಂದ ಅವನು ಶಪಿಸಾನು; ಆಗ ನೀನು ದೋಷಿ ಯಾಗುವಿ.

11 There is a generation that curseth their father, and doth not bless their mother;ತಮ್ಮ ತಂದೆಯನ್ನು ಶಪಿಸಿ ತಮ್ಮ ತಾಯಿಗೆ ಶುಭವನ್ನು ಕೋರದೆ ಇರುವ ವಂಶಾವಳಿ ಇದೆ.

12 there is a generation that are pure in their own eyes, yet are not washed from their filthiness;ತಮ್ಮ ಮಲಿನತ್ವದಿಂದ ಇನ್ನು ತೊಳೆಯಲ್ಪಡದೆ ತಮ್ಮ ದೃಷ್ಟಿಯಲ್ಲಿ ಶುದ್ಧವಾಗಿರುವ ಒಂದು ವಂಶಾವಳಿಯು ಇದೆ.

13 there is a generation, -- how lofty are their eyes, how their eyelids are lifted up!ಒಂದು ವಂಶಾ ವಳಿಯು ಇದೆ: ಅದರ ಕಣ್ಣುಗಳು ಎಷ್ಟೋ ಉನ್ನತ ವಾಗಿವೆ! ಅದರ ಕಣ್ಣು ರೆಪ್ಪೆಗಳು ಎತ್ತಲ್ಪಟ್ಟಿವೆ.

14 -- a generation whose teeth are swords, and their jaw-teeth knives, to devour the afflicted from off the earth, and the needy from [among] men.ಭೂಮಿಯೊಳಗಿಂದ ಬಡವರನ್ನೂ ಮನುಷ್ಯ ರೊಳಗಿಂದ ದಿಕ್ಕಿಲ್ಲದವರನ್ನೂ ನುಂಗುವಂತೆ ತಮ್ಮ ಹಲ್ಲುಗಳು ಖಡ್ಗಗಳಂತೆಯೂ ತಮ್ಮ ದವಡೆಯ ಹಲ್ಲು ಗಳು ಕತ್ತಿಗಳಂತೆಯೂ ಇರುವ ಒಂದು ವಂಶಾವಳಿಯು ಇದೆ.

15 The leech hath two daughters: Give, give. There are three [things] never satisfied; four which say not, It is enough:ಕೊಡು, ಕೊಡು ಎಂದು ಕೂಗುವ ಇಬ್ಬರು ಹೆಣ್ಣುಮಕ್ಕಳು ಜಿಗಣೆಗೆ ಇವೆ. ಎಂದಿಗೂ ತೃಪ್ತಿಪಡದ ಮೂರು ಸಂಗತಿಗಳು ಇವೆ; ಹೌದು, ಸಾಕು ಎಂದು ಹೇಳದಿರುವ ನಾಲ್ಕು ಸಂಗತಿಗಳಿವೆ.

16 -- Sheol, and the barren womb; the earth which is not filled with water, and the fire which saith not, It is enough.ಯಾವವಂದರೆ: ಸಮಾಧಿ, ಬಂಜೆಯಾದ ಗರ್ಭ, ನೀರಿನಿಂದ ತುಂಬ ದಿದ್ದ ಭೂಮಿ, ಸಾಕೆಂದು ಹೇಳದೆ ಇರುವ ಬೆಂಕಿ.

17 The eye that mocketh at a father, and despiseth to obey a mother, the ravens of the valley shall pick it out, and the young eagles shall eat it.ತನ್ನ ತಂದೆಯನ್ನು ಹಾಸ್ಯಮಾಡಿ ತನ್ನ ತಾಯಿಯನ್ನು ಧಿಕ್ಕರಿಸುವವನ ಕಣ್ಣನ್ನು ಕಣಿವೆಯ ಕಾಗೆಗಳು ಕಿತ್ತು ಹಾಕುವವು, ಪ್ರಾಯದ ಹದ್ದುಗಳು ಅದನ್ನು ತಿನ್ನು ವವು.

18 There are three [things] too wonderful for me, and four that I know not:ನನಗೆ ಆಶ್ಚರ್ಯವಾದ ಮೂರು ಸಂಗತಿಗ ಳಿವೆ. ಹೌದು, ನಾನು ಅರಿಯದಿರುವ ನಾಲ್ಕು ಸಂಗ ತಿಗಳಿವೆ--

19 The way of an eagle in the heavens, the way of a serpent upon a rock, the way of a ship in the midst of the sea, and the way of a man with a maid.ಆಕಾಶದಲ್ಲಿ ಹದ್ದಿನ ಹಾದಿ, ಬಂಡೆಯ ಮೇಲೆ ಸರ್ಪದ ಸರಣಿ; ಸಮುದ್ರದಲ್ಲಿ ಹಡಗಿನ ಮಾರ್ಗ, ಕನ್ಯೆಯೊಂದಿಗೆ ಮನುಷ್ಯನ ಮಾರ್ಗ.

20 Such is the way of an adulterous woman: she eateth, and wipeth her mouth, and saith, I have done no wickedness.ಜಾರಸ್ತ್ರೀಯ ನಡತೆಯು ಹಾಗೆಯೇ ಇದೆ; ಅವಳು ತಿಂದು ತನ್ನ ಬಾಯನ್ನು ಒರಸಿಕೊಂಡು--ನಾನು ಯಾವ ಕೆಟ್ಟದ್ದನ್ನೂ ಮಾಡಲಿಲ್ಲ ಎಂದು ಹೇಳುತ್ತಾಳೆ.

21 Under three [things] the earth is disquieted, and under four it cannot bear up:ಭೂಮಿಯು ಮೂರರಿಂದ ಕಳವಳಗೊಳ್ಳುತ್ತದೆ; ನಾಲ್ವರನ್ನು ಅದು ತಾಳಲಾರದು

22 Under a servant when he reigneth, and a churl when he is filled with meat;ಆಳುವ ದಾಸನು, ಹೊಟ್ಟೆತುಂಬಿದ ನೀಚನು,

23 under an odious [woman] when she is married, and a handmaid when she is heir to her mistress.ಮದುವೆಯಾದ ಚಂಡಿಯು, ತನ್ನ ಯಜಮಾನಳಿಗೆ ಬಾಧ್ಯಸ್ಥಳಾದ ದಾಸಿಯು.

24 There are four [things] little upon the earth, and they are exceeding wise:ಭೂಮಿಯ ಮೇಲೆ ಅಧಿಕ ಜ್ಞಾನವು ಳ್ಳವುಗಳಾದ ನಾಲ್ಕು ಸಣ್ಣ ಪ್ರಾಣಿಗಳು ಇವೆ.

25 The ants, a people not strong, yet they provide their food in the summer;ಇರುವೆಗಳು ದುರ್ಬಲ ಜಾತಿಯಾಗಿದ್ದರೂ ಬೇಸಿಗೆ ಯಲ್ಲಿ ತಮ್ಮ ಆಹಾರವನ್ನು ಸಿದ್ಧಮಾಡಿಕೊಳ್ಳುತ್ತವೆ.

26 the rock-badgers are but a feeble folk, yet they make their house in the cliff;ಮೊಲಗಳು ಬಲಹೀನವಾದ ಜಾತಿಯಾಗಿದ್ದರೂ ಅವು ಬಂಡೆಗಳಲ್ಲಿ ತಮ್ಮ ಮನೆಗಳನ್ನು ಮಾಡಿಕೊಳ್ಳು ತ್ತವೆ.

27 the locusts have no king, yet they go forth all of them by bands;ಮಿಡತೆಗಳಿಗೆ ಅರಸನಿಲ್ಲ; ಆದರೂ ಅವೆಲ್ಲಾ ದಂಡುದಂಡಾಗಿ ಹೋಗುತ್ತವೆ.

28 thou takest hold of the lizard with the hands, yet is she in kings' palaces.ಜೇಡರ ಹುಳು ತನ್ನ ಕೈಗಳಿಂದ ಹಿಡಿದುಕೊಳ್ಳುತ್ತದೆ; ಅದು ಅರಮನೆ ಗಳಲ್ಲಿ ಇರುತ್ತದೆ.

29 There are three [things] which have a stately step, and four are comely in going:ಗಂಭೀರ ಗಮನದ ಮೂರು ಪ್ರಾಣಿಗಳಿವೆ; ಹೌದು, ನಡತೆಯಲ್ಲಿ ಅಂದವಾಗಿರುವ ನಾಲ್ಕು ಪ್ರಾಣಿಗಳಿವೆ.

30 The lion, mighty among beasts, which turneth not away for any;ಮೃಗಗಳಲ್ಲಿ ಬಲಿಷ್ಠವಾಗಿ ರುವ ಸಿಂಹವು ಯಾವದಕ್ಕೂ ಹೆದರುವುದಿಲ್ಲ.

31 a [horse] girt in the loins; or the he-goat; and a king, against whom none can rise up.ಬೇಟೆಯ ನಾಯಿ; ಹೋತವು ಸಹ; ಸೈನ್ಯಸಮೇತ ನಾದ ಅರಸನು.

32 If thou hast done foolishly in lifting up thyself, or if thou hast thought evil, [lay] the hand upon thy mouth.ನೀನು ಉಬ್ಬಿಕೊಂಡು ಮೂರ್ಖ ನಾಗಿ ನಡೆದಿದ್ದರೆ ಇಲ್ಲವೆ ಕೆಟ್ಟದ್ದಾಗಿ ಆಲೋಚಿಸಿದ್ದರೆ ನಿನ್ನ ಬಾಯಿಯ ಮೇಲೆ ಕೈಯಿಟ್ಟುಕೋ.

33 For the pressing of milk bringeth forth butter, and the pressing of the nose bringeth forth blood; and the pressing of anger bringeth forth strife.ಹಾಲು ಕರೆಯುವದರಿಂದ ನಿಜವಾಗಿಯೂ ಬೆಣ್ಣೆ ಬರುತ್ತದೆ; ಮೂಗು ಹಿಂಡುವದರಿಂದ ರಕ್ತ ಬರುತ್ತದೆ; ಹಾಗೆಯೇ ಕೋಪವನ್ನೆಬ್ಬಿಸುವದರಿಂದ ಜಗಳ ಬರುತ್ತದೆ.

Kannada Bible