Bible

Proverbs 30 - ASV (Kannada)

1 The words of Agur the son of Jakeh; The oracle. The man saith unto Ithiel, unto Ithiel and Ucal:ಯಾಕೆ ಎಂಬವನ ಮಗನಾದ ಆಗೂರನ ಪ್ರವಾದನೆಯ ಮಾತುಗಳು; ಇವನು ಇಥಿಯೇಲನಿಗೆ ಹೌದು, ಇಥಿಯೇಲನಿಗೂ ಉಕ್ಕಾಲ ನಿಗೂ ಹೀಗೆ ಹೇಳಿದನು.

2 Surely I am more brutish than any man, And have not the understanding of a man;ಖಂಡಿತವಾಗಿಯೂ ಪ್ರತಿಯೊಬ್ಬ ಮನುಷ್ಯನಿಗಿಂತ ನಾನು ಪಶುಪ್ರಾಯನು; ಮನುಷ್ಯನ ವಿವೇಕವು ನನಗೆ ಇಲ್ಲ.

3 And I have not learned wisdom, Neither have I the knowledge of the Holy One.ನಾನು ಜ್ಞಾನವನ್ನು ಪಡೆದುಕೊಂಡಿಲ್ಲ; ಅಲ್ಲದೆ ಪರಿಶುದ್ಧನ ವಿಷಯವಾದ ತಿಳುವಳಿಕೆಯು ನನಗಿಲ್ಲ.

4 Who hath ascended up into heaven, and descended? Who hath gathered the wind in his fists? Who hath bound the waters in his garment? Who hath established all the ends of the earth? What is his name, and what is his son's name, if thou knowest?ಆಕಾಶಕ್ಕೆ ಏರಿದವನು ಇಲ್ಲವೆ ಇಳಿದವನು ಯಾರು? ತನ್ನ ಮುಷ್ಟಿಗಳಲ್ಲಿ ಗಾಳಿಯನ್ನು ಕೂಡಿಸಿದವನಾರು? ವಸ್ತ್ರದಲ್ಲಿ ನೀರನ್ನು ಕಟ್ಟಿದವ ನಾರು? ಭೂಮಿಯ ಕೊನೆಗಳನ್ನೆಲ್ಲಾ ಸ್ಥಾಪಿಸಿದವ ನಾರು? ನೀನು ಹೇಳುವದಾದರೆ ಆತನ ಹೆಸರೇನು? ಆತನ ಮಗನ ಹೆಸರೇನು?

5 Every word of God is tried: He is a shield unto them that take refuge in him.ದೇವರ ಪ್ರತಿಯೊಂದು ಮಾತು ಶುದ್ಧವಾಗಿದೆ; ಆತನಲ್ಲಿ ಭರವಸವಿಡುವವನಿಗೆ ಆತನು ಗುರಾಣಿಯಾಗಿದ್ದಾನೆ.

6 Add thou not unto his words, Lest he reprove thee, and thou be found a liar.ಆತನು ನಿನ್ನನ್ನು ಗದರಿಸುವಂತೆಯೂ ನೀನು ಸುಳ್ಳುಗಾರನೆಂದು ತೋರು ವಂತೆಯೂ ಆತನ ಮಾತುಗಳಿಗೆ ಯಾವದನ್ನು ಸೇರಿಸ ಬೇಡ.

7 Two things have I asked of thee; Deny me `them' not before I die:ನಿನ್ನಿಂದ ಎರಡನ್ನು ಕೇಳಿಕೊಂಡಿದ್ದೇನೆ; ನಾನು ಸಾಯುವದಕ್ಕಿಂತ ಮುಂಚೆ ಅವುಗಳನ್ನು ಕೊಡುವದಕ್ಕೆ ಹಿಂತೆಗೆಯಬೇಡ;

8 Remove far from me falsehood and lies; Give me neither poverty nor riches; Feed me with the food that is needful for me:ವ್ಯರ್ಥತ್ವವನ್ನೂ ಸುಳ್ಳುಗಳನ್ನೂ ನನ್ನಿಂದ ದೂರವಾಗಿ ತೆಗೆದುಹಾಕು. ಬಡತನವಾಗಲಿ ಐಶ್ವರ್ಯವಾಗಲಿ ನನಗೆ ಕೊಡಬೇಡ; ನನಗೆ ತಕ್ಕಷ್ಟು ಆಹಾರವನ್ನು ಭೋಜನ ಮಾಡಿಸು;

9 Lest I be full, and deny `thee', and say, Who is Jehovah? Or lest I be poor, and steal, And use profanely the name of my God.ಇಲ್ಲವಾದರೆ ನಾನು ಸಂತೃಪ್ತನಾಗಿ ನಿನ್ನನ್ನು ನಿರಾಕರಿಸಿ--ಕರ್ತನು ಯಾರು ಎಂದು ಹೇಳಿಯೇನು? ಇಲ್ಲವೆ ನಾನು ಬಡವನಾಗಿ ಕದ್ದುಕೊಂಡು ದೇವರ ನಾಮವನ್ನು ಅಯೋಗ್ಯವಾಗಿ ಎತ್ತೇನು.

10 Slander not a servant unto his master, Lest he curse thee, and thou be held guilty.ಅವನ ಯಜಮಾನನಿಗೆ ಸೇವಕನ ವಿಷಯವಾಗಿ ದೂರು ಹೇಳಬೇಡ; ಇದ ರಿಂದ ಅವನು ಶಪಿಸಾನು; ಆಗ ನೀನು ದೋಷಿ ಯಾಗುವಿ.

11 There is a generation that curse their father, And bless not their mother.ತಮ್ಮ ತಂದೆಯನ್ನು ಶಪಿಸಿ ತಮ್ಮ ತಾಯಿಗೆ ಶುಭವನ್ನು ಕೋರದೆ ಇರುವ ವಂಶಾವಳಿ ಇದೆ.

12 There is a generation that are pure in their own eyes, And `yet' are not washed from their filthiness.ತಮ್ಮ ಮಲಿನತ್ವದಿಂದ ಇನ್ನು ತೊಳೆಯಲ್ಪಡದೆ ತಮ್ಮ ದೃಷ್ಟಿಯಲ್ಲಿ ಶುದ್ಧವಾಗಿರುವ ಒಂದು ವಂಶಾವಳಿಯು ಇದೆ.

13 There is a generation, oh how lofty are their eyes! And their eyelids are lifted up.ಒಂದು ವಂಶಾ ವಳಿಯು ಇದೆ: ಅದರ ಕಣ್ಣುಗಳು ಎಷ್ಟೋ ಉನ್ನತ ವಾಗಿವೆ! ಅದರ ಕಣ್ಣು ರೆಪ್ಪೆಗಳು ಎತ್ತಲ್ಪಟ್ಟಿವೆ.

14 There is a generation whose teeth are `as' swords, and their jaw teeth `as' knives, To devour the poor from off the earth, and the needy from among men.ಭೂಮಿಯೊಳಗಿಂದ ಬಡವರನ್ನೂ ಮನುಷ್ಯ ರೊಳಗಿಂದ ದಿಕ್ಕಿಲ್ಲದವರನ್ನೂ ನುಂಗುವಂತೆ ತಮ್ಮ ಹಲ್ಲುಗಳು ಖಡ್ಗಗಳಂತೆಯೂ ತಮ್ಮ ದವಡೆಯ ಹಲ್ಲು ಗಳು ಕತ್ತಿಗಳಂತೆಯೂ ಇರುವ ಒಂದು ವಂಶಾವಳಿಯು ಇದೆ.

15 The horseleach hath two daughters, `crying', Give, give. There are three things that are never satisfied, `Yea', four that say not, Enough:ಕೊಡು, ಕೊಡು ಎಂದು ಕೂಗುವ ಇಬ್ಬರು ಹೆಣ್ಣುಮಕ್ಕಳು ಜಿಗಣೆಗೆ ಇವೆ. ಎಂದಿಗೂ ತೃಪ್ತಿಪಡದ ಮೂರು ಸಂಗತಿಗಳು ಇವೆ; ಹೌದು, ಸಾಕು ಎಂದು ಹೇಳದಿರುವ ನಾಲ್ಕು ಸಂಗತಿಗಳಿವೆ.

16 Sheol; and the barren womb; The earth that is not satisfied with water; And the fire that saith not, Enough.ಯಾವವಂದರೆ: ಸಮಾಧಿ, ಬಂಜೆಯಾದ ಗರ್ಭ, ನೀರಿನಿಂದ ತುಂಬ ದಿದ್ದ ಭೂಮಿ, ಸಾಕೆಂದು ಹೇಳದೆ ಇರುವ ಬೆಂಕಿ.

17 The eye that mocketh at his father, And despiseth to obey his mother, The ravens of the valley shall pick it out, And the young eagles shall eat it.ತನ್ನ ತಂದೆಯನ್ನು ಹಾಸ್ಯಮಾಡಿ ತನ್ನ ತಾಯಿಯನ್ನು ಧಿಕ್ಕರಿಸುವವನ ಕಣ್ಣನ್ನು ಕಣಿವೆಯ ಕಾಗೆಗಳು ಕಿತ್ತು ಹಾಕುವವು, ಪ್ರಾಯದ ಹದ್ದುಗಳು ಅದನ್ನು ತಿನ್ನು ವವು.

18 There are three things which are too wonderful for me, Yea, four which I know not:ನನಗೆ ಆಶ್ಚರ್ಯವಾದ ಮೂರು ಸಂಗತಿಗ ಳಿವೆ. ಹೌದು, ನಾನು ಅರಿಯದಿರುವ ನಾಲ್ಕು ಸಂಗ ತಿಗಳಿವೆ--

19 The way of an eagle in the air; The way of a serpent upon a rock; The way of a ship in the midst of the sea; And the way of a man with a maiden.ಆಕಾಶದಲ್ಲಿ ಹದ್ದಿನ ಹಾದಿ, ಬಂಡೆಯ ಮೇಲೆ ಸರ್ಪದ ಸರಣಿ; ಸಮುದ್ರದಲ್ಲಿ ಹಡಗಿನ ಮಾರ್ಗ, ಕನ್ಯೆಯೊಂದಿಗೆ ಮನುಷ್ಯನ ಮಾರ್ಗ.

20 So is the way of an adulterous woman; She eateth, and wipeth her mouth, And saith, I have done no wickedness.ಜಾರಸ್ತ್ರೀಯ ನಡತೆಯು ಹಾಗೆಯೇ ಇದೆ; ಅವಳು ತಿಂದು ತನ್ನ ಬಾಯನ್ನು ಒರಸಿಕೊಂಡು--ನಾನು ಯಾವ ಕೆಟ್ಟದ್ದನ್ನೂ ಮಾಡಲಿಲ್ಲ ಎಂದು ಹೇಳುತ್ತಾಳೆ.

21 For three things the earth doth tremble, And for four, `which' it cannot bear:ಭೂಮಿಯು ಮೂರರಿಂದ ಕಳವಳಗೊಳ್ಳುತ್ತದೆ; ನಾಲ್ವರನ್ನು ಅದು ತಾಳಲಾರದು

22 For a servant when he is king; And a fool when he is filled with food;ಆಳುವ ದಾಸನು, ಹೊಟ್ಟೆತುಂಬಿದ ನೀಚನು,

23 For an odious woman when she is married; And a handmaid that is heir to her mistress.ಮದುವೆಯಾದ ಚಂಡಿಯು, ತನ್ನ ಯಜಮಾನಳಿಗೆ ಬಾಧ್ಯಸ್ಥಳಾದ ದಾಸಿಯು.

24 There are four things which are little upon the earth, But they are exceeding wise:ಭೂಮಿಯ ಮೇಲೆ ಅಧಿಕ ಜ್ಞಾನವು ಳ್ಳವುಗಳಾದ ನಾಲ್ಕು ಸಣ್ಣ ಪ್ರಾಣಿಗಳು ಇವೆ.

25 The ants are a people not strong, Yet they provide their food in the summer;ಇರುವೆಗಳು ದುರ್ಬಲ ಜಾತಿಯಾಗಿದ್ದರೂ ಬೇಸಿಗೆ ಯಲ್ಲಿ ತಮ್ಮ ಆಹಾರವನ್ನು ಸಿದ್ಧಮಾಡಿಕೊಳ್ಳುತ್ತವೆ.

26 The conies are but a feeble folk, Yet make they their houses in the rocks;ಮೊಲಗಳು ಬಲಹೀನವಾದ ಜಾತಿಯಾಗಿದ್ದರೂ ಅವು ಬಂಡೆಗಳಲ್ಲಿ ತಮ್ಮ ಮನೆಗಳನ್ನು ಮಾಡಿಕೊಳ್ಳು ತ್ತವೆ.

27 The locusts have no king, Yet go they forth all of them by bands;ಮಿಡತೆಗಳಿಗೆ ಅರಸನಿಲ್ಲ; ಆದರೂ ಅವೆಲ್ಲಾ ದಂಡುದಂಡಾಗಿ ಹೋಗುತ್ತವೆ.

28 The lizard taketh hold with her hands, Yet is she in kings' palaces.ಜೇಡರ ಹುಳು ತನ್ನ ಕೈಗಳಿಂದ ಹಿಡಿದುಕೊಳ್ಳುತ್ತದೆ; ಅದು ಅರಮನೆ ಗಳಲ್ಲಿ ಇರುತ್ತದೆ.

29 There are three things which are stately in their march, Yea, four which are stately in going:ಗಂಭೀರ ಗಮನದ ಮೂರು ಪ್ರಾಣಿಗಳಿವೆ; ಹೌದು, ನಡತೆಯಲ್ಲಿ ಅಂದವಾಗಿರುವ ನಾಲ್ಕು ಪ್ರಾಣಿಗಳಿವೆ.

30 The lion, which is mightiest among beasts, And turneth not away for any;ಮೃಗಗಳಲ್ಲಿ ಬಲಿಷ್ಠವಾಗಿ ರುವ ಸಿಂಹವು ಯಾವದಕ್ಕೂ ಹೆದರುವುದಿಲ್ಲ.

31 The greyhound; the he-goat also; And the king against whom there is no rising up.ಬೇಟೆಯ ನಾಯಿ; ಹೋತವು ಸಹ; ಸೈನ್ಯಸಮೇತ ನಾದ ಅರಸನು.

32 If thou hast done foolishly in lifting up thyself, Or if thou hast thought evil, `Lay' thy hand upon thy mouth.ನೀನು ಉಬ್ಬಿಕೊಂಡು ಮೂರ್ಖ ನಾಗಿ ನಡೆದಿದ್ದರೆ ಇಲ್ಲವೆ ಕೆಟ್ಟದ್ದಾಗಿ ಆಲೋಚಿಸಿದ್ದರೆ ನಿನ್ನ ಬಾಯಿಯ ಮೇಲೆ ಕೈಯಿಟ್ಟುಕೋ.

33 For the churning of milk bringeth forth butter, And the wringing of the nose bringeth forth blood; So the forcing of wrath bringeth forth strife.ಹಾಲು ಕರೆಯುವದರಿಂದ ನಿಜವಾಗಿಯೂ ಬೆಣ್ಣೆ ಬರುತ್ತದೆ; ಮೂಗು ಹಿಂಡುವದರಿಂದ ರಕ್ತ ಬರುತ್ತದೆ; ಹಾಗೆಯೇ ಕೋಪವನ್ನೆಬ್ಬಿಸುವದರಿಂದ ಜಗಳ ಬರುತ್ತದೆ.

Kannada Bible