Bible

Proverbs 20 - DBY (Kannada)

1 Wine is a scorner, strong drink is raging; and whoso erreth thereby is not wise.ದ್ರಾಕ್ಷಾರಸವು ಪರಿಹಾಸ್ಯಕರವಾಗಿದೆ; ಮಾದಕ ಮದ್ಯವು ಉದ್ರೇಕಿಸುತ್ತದೆ. ಇದ ರಿಂದ ಮೋಸಹೋದವನು ಜ್ಞಾನಿಯಲ್ಲ.

2 The terror of a king is as the roaring of a lion: he that provoketh him to anger sinneth against his own soul.ಅರಸನ ಭಯವು ಸಿಂಹದ ಗರ್ಜನೆಯಂತಿದೆ; ಅವನಿಗೆ ಕೋಪ ವನ್ನೆಬ್ಬಿಸುವವನು ತನ್ನ ಪ್ರಾಣಕ್ಕೆ ವಿರೋಧವಾಗಿ ಪಾಪ ಮಾಡುತ್ತಾನೆ.

3 It is an honour for a man to cease from strife; but every fool rusheth into it.ಕಲಹವನ್ನು ತಡೆಯುವವನು ಮಾನಕ್ಕೆ ಯೋಗ್ಯನು; ಪ್ರತಿಯೊಬ್ಬ ಬುದ್ಧಿಹೀನನು ತಲೆಹಾಕು ತ್ತಾನೆ.

4 The sluggard will not plough by reason of the winter; he shall beg in harvest, and have nothing.ಮೈಗಳ್ಳನು ಚಳಿಯ ನಿಮಿತ್ತವಾಗಿ ಉಳುವದಿಲ್ಲ; ಆದಕಾರಣ ಸುಗ್ಗಿಯಲ್ಲಿ ಅವನು ಬೇಡಿಕೊಂಡರೂ ಏನೂ ಸಿಕ್ಕುವದಿಲ್ಲ.

5 Counsel in the heart of man is deep water, and a man of understanding draweth it out.ಮನುಷ್ಯನ ಹೃದಯದ ಆಲೋ ಚನೆಯು ಆಳವಾದ (ಬಾವಿಯ) ನೀರಿನಂತಿದೆ; ವಿವೇ ಕಿಯು ಅದನ್ನು ಸೇದುವನು.

6 Most men will proclaim every one his own kindness; but a faithful man who shall find?ಅನೇಕರಲ್ಲಿ ಪ್ರತಿಯೊ ಬ್ಬನು ತಮ್ಮ ಸ್ವಂತ ಸೌಜನ್ಯವನ್ನು ಸಾರುವನು; ನಂಬಿ ಗಸ್ತನಾದ ಮನುಷ್ಯನನ್ನು ಯಾರು ಕಂಡುಕೊಳ್ಳಬಲ್ಲರು?

7 The righteous walketh in his integrity: blessed are his children after him!ನೀತಿವಂತನು ತನ್ನ ಯಥಾರ್ಥತೆಯಲ್ಲಿ ನಡೆಯುತ್ತಾನೆ; ಅವನು ಗತಿಸಿದ ಮೇಲೆ ಅವನ ಮಕ್ಕಳು ಆಶೀರ್ವದಿ ಸಲ್ಪಡುವರು.

8 A king sitting on the throne of judgment scattereth away all evil with his eyes.ನ್ಯಾಯತೀರ್ಪಿನ ಸಿಂಹಾಸನದ ಮೇಲೆ ಕೂತಿರುವ ಅರಸನು ತನ್ನ ಕಣ್ಣು ದೃಷ್ಟಿಯಿಂದ ಸಕಲ ಕೆಟ್ಟತನವನ್ನು ಚದರಿಸುವನು.

9 Who can say, I have made my heart clean, I am pure from my sin?ನನ್ನ ಹೃದಯವನ್ನು ಶುದ್ಧಿಮಾಡಿಕೊಂಡಿದ್ದೇನೆ, ನನ್ನ ಪಾಪದಿಂದ ನಾನು ಶುದ್ಧನು ಎಂದು ಯಾರು ಹೇಳಬಲ್ಲರು?

10 Divers weights, divers measures, even both of them are abomination to Jehovah.ವಿಧ ವಿಧವಾದ ತೂಕಗಳೂ ತರತರವಾದ ಅಳತೆಗಳೂ ಇವೆರಡೂ ಸಮವಾಗಿಯೇ ಕರ್ತನಿಗೆ ಅಸಹ್ಯ.

11 Even a child is known by his doings, whether his work be pure, and whether it be right.ತನ್ನ ಕೆಲಸವು ಶುದ್ಧವೋ ಇಲ್ಲವೆ ನ್ಯಾಯವೋ ಎಂಬದು ತನ್ನ ಕ್ರಿಯೆಗಳಿಂದಲೇ ಹುಡುಗನು ತೋರ್ಪಡಿಸಿ ಕೊಳ್ಳುತ್ತಾನೆ.

12 The hearing ear, and the seeing eye, Jehovah hath made even both of them.ಕೇಳುವ ಕಿವಿ ನೋಡುವ ಕಣ್ಣು, ಇವೆರಡನ್ನು ಕರ್ತನು ಮಾಡಿದ್ದಾನೆ.

13 Love not sleep, lest thou come to poverty; open thine eyes, [and] thou shalt be satisfied with bread.ನೀನು ಬಡ ತನಕ್ಕೆ ಬಾರದಂತೆ ನಿದ್ರೆಯಲ್ಲಿ ಆಸಕ್ತಿಯುಳ್ಳವನಾಗಿರ ಬೇಡ; ನಿನ್ನ ಕಣ್ಣುಗಳನ್ನು ತೆರೆದರೆ ನೀನು ರೊಟ್ಟಿ ಯಿಂದ ತೃಪ್ತನಾಗುವಿ.

14 Bad! bad! saith the buyer; but when he is gone his way, then he boasteth.ಇದು ನಿಷ್ಪ್ರಯೋಜಕವಾದದ್ದು, ಇದು ನಿಷ್ಪ್ರಯೋಜಕವಾದದ್ದು ಎಂದು ಕೊಳ್ಳು ವವನು ಹೇಳುತ್ತಾನೆ. ಅವನು ಹೋದ ಮೇಲೆ ಹೊಗ ಳುತ್ತಾನೆ.

15 There is gold, and a multitude of rubies; but the lips of knowledge are a precious Jewel.ಬಂಗಾರವೂ ಮಾಣಿಕ್ಯಗಳ ರಾಶಿಯೂ ಇವೆ. ತಿಳುವಳಿಕೆಯ ತುಟಿಗಳು ಅಮೂಲ್ಯವಾದ ರತ್ನ ವಾಗಿವೆ.

16 Take his garment that is become surety [for] another, and hold him in pledge for strangers.ಪರರ ಹೊಣೆಯಾಗಿರುವ ಬಟ್ಟೆಯನ್ನು ತೆಗೆದುಕೋ; ಪರಸ್ತ್ರೀಗೋಸ್ಕರ ಅವನಿಂದ ಒತ್ತೆ ತೆಗೆ ದುಕೋ.

17 Bread of falsehood is sweet to a man, but afterwards his mouth shall be filled with gravel.ಮೋಸದಿಂದ ಸಿಕ್ಕಿದ ರೊಟ್ಟಿಯು ಮನು ಷ್ಯನಿಗೆ ರುಚಿ; ಆಮೇಲೆ ಅವನ ಬಾಯಿಯು ಮರಳಿ ನಿಂದ ತುಂಬುವದು.

18 Plans are established by counsel; and with good advice make war.ಪ್ರತಿಯೊಂದು ಉದ್ದೇಶವು ಆಲೋಚನೆಯಿಂದ ಸಫಲವಾಗುವದು; ಹಿತವಾದ ಸಲಹೆಯಿಂದ ಯುದ್ಧಮಾಡು.

19 He that goeth about talebearing revealeth secrets; therefore meddle not with him that openeth his lips.ತಿರುಗುವ ಚಾಡಿ ಕೋರನು ಗುಟ್ಟುಗಳನ್ನು ರಟ್ಟುಮಾಡುತ್ತಾನೆ. ಆದ ಕಾರಣ ತನ್ನ ತುಟಿಗಳಿಂದ ಮುಖಸ್ತುತಿ ಮಾಡುವವನ ಗೊಡವೆಗೆ ಹೋಗಬೇಡ.

20 Whoso curseth his father or his mother, his lamp shall be put out in the blackest darkness.ತನ್ನ ತಂದೆ ತಾಯಿಯನ್ನಾ ಗಲಿ ಶಪಿಸುವವನ ದೀಪವು ಮಂಕಾದ ಕತ್ತಲೆಯಲ್ಲಿ ಆರಿಹೋಗುವದು.

21 An inheritance obtained hastily at the beginning will not be blessed in the end.ಮೊದಲು ಸ್ವಾಸ್ತ್ಯವನ್ನೂ ತ್ವರೆ ಯಾಗಿ ಹೊಂದಬಹುದು; ಅದರ ಕೊನೆಯು ಆಶೀ ರ್ವದಿಸಲ್ಪಡುವದಿಲ್ಲ.

22 Say not, I will recompense evil: wait on Jehovah, and he shall save thee.ನೀನು--ಕೇಡಿಗೆ ಮುಯ್ಯಿ ತೀರಿಸುವೆನು ಅನ್ನಬೇಡ; ಕರ್ತನನ್ನು ನಿರೀಕ್ಷಿಸು; ಆಗ ಆತನು ನಿನ್ನನ್ನು ರಕ್ಷಿಸುವನು.

23 Divers weights are an abomination unto Jehovah; and a false balance is not good.ವಿಧವಿಧವಾದ ತೂಕ ಗಳು ಕರ್ತನಿಗೆ ಅಸಹ್ಯವಾಗಿವೆ; ಮೋಸದ ತಕ್ಕಡಿಯು ಒಳ್ಳೇದಲ್ಲ.

24 The steps of a man are from Jehovah; and how can a man understand his own way?ಮನುಷ್ಯನ ನಡೆಗಳು ಕರ್ತನಿಂದಲೇ; ಹಾಗಾದರೆ ಒಬ್ಬ ಮನುಷ್ಯನು ತನ್ನ ಮಾರ್ಗವನ್ನು ಹೇಗೆ ತಿಳುಕೊಳ್ಳಬಲ್ಲನು?

25 It is a snare to a man rashly to say, It is hallowed, and after vows to make inquiry.ಪರಿಶುದ್ಧವಾದದ್ದನ್ನು ನುಂಗಿದವನಾಗಿ ತರುವಾಯ ವಿಚಾರಿಸುವದಕ್ಕಾಗಿ ಆಣೆಯಿಟ್ಟು ಕೊಳ್ಳುವದು ಒಬ್ಬ ಮನುಷ್ಯನಿಗೆ ಉರ್ಲಾ ಗಿದೆ.

26 A wise king scattereth the wicked, and bringeth the wheel over them.ಜ್ಞಾನಿಯಾದ ಅರಸನು ದುಷ್ಟರನ್ನು ಚದರಿಸಿ ಅವರ ಮೇಲೆ ಚಕ್ರವನ್ನು ಎಳೆಯುತ್ತಾನೆ.

27 Man's spirit is the lamp of Jehovah, searching all the inner parts of the belly.ಮನುಷ್ಯನ ಆತ್ಮವು ಹೊಟ್ಟೆಯ ಒಳಭಾಗಗಳನ್ನು ಶೋಧಿಸುವಂಥ ಕರ್ತನ ದೀಪವಾಗಿವೆ.

28 Mercy and truth preserve the king; and he upholdeth his throne by mercy.ಕರುಣೆಯೂ ಸತ್ಯವೂ ಅರಸನನ್ನು ಕಾಯುತ್ತದೆ; ಕರುಣೆಯಿಂದಲೇ ಅವನ ಸಿಂಹಾಸನವು ಸ್ಥಿರಗೊಳ್ಳುತ್ತದೆ.

29 The glory of young men is their strength; and the beauty of old men is the grey head.ಯೌವನಸ್ಥರ ಘನತೆಯು ಅವರ ಬಲವೇ; ಮುದುಕರ ಅಲಂಕಾರವು ನರೆತ ತಲೆಯೇ.

30 Wounding stripes purge away evil, and strokes [purge] the inner parts of the belly.ನೀಲಿಯಾದ ಗಾಯವು ದುಷ್ಟ ತ್ವವನ್ನು ತೊಳೆಯುತ್ತದೆ; ಹಾಗೆಯೇ ಏಟುಗಳು ಹೊಟ್ಟೆಯ ಒಳಭಾಗಗಳನ್ನು ಶುದ್ಧಮಾಡುತ್ತವೆ.

Kannada Bible