Philippians 1 - DBY (Kannada)
1 Paul and Timotheus, bondmen of Jesus Christ, to all the saints in Christ Jesus who are in Philippi, with [the] overseers and ministers;ಯೇಸು ಕ್ರಿಸ್ತನ ಸೇವಕರಾದ ಪೌಲ ತಿಮೊಥೆಯರು ಕ್ರಿಸ್ತ ಯೇಸುವಿನಲ್ಲಿ ಫಿಲಿಪ್ಪಿಯದ ಪರಿಶುದ್ಧರೆಲ್ಲರಿಗೂ ಅವರೊಂದಿಗಿರುವ ಸಭಾಧ್ಯಕ್ಷರಿಗೂ ಸಭಾಸೇವಕರಿಗೂ--
2 grace to you, and peace from God our Father and [the] Lord Jesus Christ.ನಮ್ಮ ತಂದೆ ಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತ ನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
3 I thank my God for my whole remembrance of you,ನಾನು ನಿಮ್ಮನ್ನು ನೆನಸಿಕೊಳ್ಳುವಾಗೆಲ್ಲಾ ನನ್ನ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇನೆ;
4 constantly in my every supplication, making the supplication for you all with joy,ನಾನು ನಿಮ್ಮೆಲ್ಲರಿಗೋಸ್ಕರ ಯಾವಾಗಲೂ ಮಾಡುವ ನನ್ನ ಪ್ರತಿಯೊಂದು ಪ್ರಾರ್ಥನೆಯಲ್ಲಿ ಸಂತೋಷದಿಂದಲೇ ಬೇಡಿಕೊಳ್ಳುವವನಾಗಿದ್ದೇನೆ.
5 because of your fellowship with the gospel, from the first day until now;ನೀವು ಮೊದಲಿನ ದಿನದಿಂದ ಇಂದಿನವರೆಗೂ ಸುವಾರ್ತಾ ಸೇವೆಗಾಗಿ ಸಹಕಾರಿಗಳಾಗಿದ್ದೀರೆಂದು ನನ್ನ ದೇವರಿಗೆ ಕೃತಜ್ಞತಾ ಸ್ತುತಿ ಮಾಡುತ್ತೇನೆ.
6 having confidence of this very thing, that he who has begun in you a good work will complete it unto Jesus Christ's day:ಒಳ್ಳೇ ಕೆಲಸವನ್ನು ನಿಮ್ಮಲ್ಲಿ ಪ್ರಾರಂಭಿಸಿದಾತನು ಅದನ್ನು ಯೇಸು ಕ್ರಿಸ್ತನ ದಿನದವರೆಗೆ ಸಿದ್ದಿಗೆ ತರುವನೆಂದು ನನಗೆ ಭರವಸ ವುಂಟು.
7 as it is righteous for me to think this as to you all, because ye have *me* in your hearts, and that both in my bonds and in the defence and confirmation of the glad tidings ye are all participators in my grace.ನಿಮ್ಮೆಲ್ಲರ ವಿಷಯದಲ್ಲಿ ಹೀಗೆ ಯೋಚಿಸು ವದು ನನಗೆ ನ್ಯಾಯವಾಗಿದೆ; ಯಾಕಂದರೆ ನಾನು ಬೇಡಿಬಿದ್ದಿರುವಾಗಲೂ ಸುವಾರ್ತೆಯ ವಿಷಯದಲ್ಲಿ ಉತ್ತರ ಹೇಳಿ ಸ್ಥಾಪಿಸುವಾಗಲೂ ನೀವೆಲ್ಲರು ನಾನು ಹೊಂದಿದ ಕೃಪೆಯಲ್ಲಿ ಪಾಲುಗಾರರಾಗಿದ್ದೀರೆಂದು ನಿಮ್ಮನ್ನು ನನ್ನ ಹೃದಯದಲ್ಲಿಟ್ಟುಕೊಂಡಿದ್ದೇನೆ.
8 For God is my witness how I long after you all in [the] bowels of Christ Jesus.ಯೇಸು ಕ್ರಿಸ್ತನಿಗಿರುವಂಥ ಕನಿಕರದಿಂದ ನಿಮ್ಮೆಲ್ಲರಿ ಗೋಸ್ಕರ ನಾನು ಎಷ್ಟೋ ಹಂಬಲಿಸುತ್ತೇನೆ; ಇದಕ್ಕೆ ದೇವರೇ ನನ್ನ ಸಾಕ್ಷಿ.
9 And this I pray, that your love may abound yet more and more in full knowledge and all intelligence,ನಿಮ್ಮ ಪ್ರೀತಿಯು ಹೆಚ್ಚುತ್ತಾ ಹೆಚ್ಚುತ್ತಾ ನೀವು ಜ್ಞಾನ ಮತ್ತು ಪೂರ್ಣ ವಿವೇಕಗಳಿಂದ ಕೂಡಿದವರಾಗಿರಬೇಕೆಂತಲೂ
10 that ye may judge of and approve the things that are more excellent, in order that ye may be pure and without offence for Christ's day,ಉತ್ತಮ ಕಾರ್ಯ ಗಳು ಯಾವವೆಂದು ನೀವು ವಿವೇಚಿಸುವವರಾಗ ಬೇಕೆಂತಲೂ ಕ್ರಿಸ್ತನ ದಿನದವರೆಗೆ ನೀವು ಸರಳ ರಾಗಿಯೂ ನಿರ್ಮಲರಾಗಿಯೂ ಇರಬೇಕೆಂತಲೂ
11 being complete as regards the fruit of righteousness, which [is] by Jesus Christ, to God's glory and praise.ಯೇಸು ಕ್ರಿಸ್ತನ ಮೂಲಕ ನೀತಿಯೆಂಬ ಫಲಗಳಿಂದ ತುಂಬಿದವರಾಗಿ ದೇವರಿಗೆ ಮಹಿಮೆಯನ್ನೂ ಸ್ತೋತ್ರ ವನ್ನೂ ತರುವವರಾಗಿರಬೇಕೆಂತಲೂ ಪ್ರಾರ್ಥಿಸುತ್ತೇನೆ.
12 But I would have you know, brethren, that the circumstances in which I am have turned out rather to the furtherance of the glad tidings,ಸಹೋದರರೇ, ನನಗೆ ಸಂಭವಿಸಿರುವದು ಸುವಾರ್ತೆಯ ಪ್ರಸಾರಣೆಗೇ ಸಹಾಯವಾಯಿತೆಂದು ನೀವು ತಿಳಿಯಬೇಕೆಂಬದಾಗಿ ನಾನು ಅಪೇಕ್ಷಿಸುತ್ತೇನೆ.
13 so that my bonds have become manifest [as being] in Christ in all the praetorium and to all others;ಹೇಗಂದರೆ ನನ್ನ ಬೇಡಿಗಳು ಕ್ರಿಸ್ತನ ನಿಮಿತ್ತವೇ ಎಂದು ಎಲ್ಲಾ ಅರಮನೆಯಲ್ಲಿಯೂ ಮಿಕ್ಕಾದ ಎಲ್ಲಾ ಸ್ಥಳಗಳಲ್ಲಿಯೂ ಪ್ರಸಿದ್ಧವಾಯಿತು.
14 and that the most of the brethren, trusting in [the] Lord through my bonds, dare more abundantly to speak the word of God fearlessly.ಇದಲ್ಲದೆ ಕರ್ತನಲ್ಲಿ ಅನೇಕ ಸಹೋದರರು ನನ್ನ ಬೇಡಿಗ ಳಿಂದಲೇ ಭರವಸವುಳ್ಳವರಾಗಿ ವಾಕ್ಯವನ್ನು ನಿರ್ಭಯ ದಿಂದ ಹೇಳುವದಕ್ಕೆ ಇನ್ನೂ ವಿಶೇಷ ಧೈರ್ಯವನ್ನು ಹೊಂದಿದ್ದಾರೆ.
15 Some indeed also for envy and strife, but some also for good will, preach the Christ.ಕೆಲವರು ಹೊಟ್ಟೇಕಿಚ್ಚುಪಟ್ಟು ಭೇದ ಹುಟ್ಟಿಸಬೇಕೆಂಬ ಭಾವನೆಯಿಂದ ಬೇರೆ ಕೆಲವರು ಒಳ್ಳೇಭಾವದಿಂದ ಕ್ರಿಸ್ತನನ್ನು ಪ್ರಚುರಪಡಿಸುತ್ತಾರೆ.
16 These indeed out of love, knowing that I am set for the defence of the glad tidings;ಆ ಬೇರೆ ತರದವರಾದರೋ ನನ್ನ ಬೇಡಿಗಳಿಗೆ ಸಂಕಟವನ್ನು ಕೂಡಿಸಬೇಕೆಂದು ಯೋಚಿಸಿ ಕ್ರಿಸ್ತನನ್ನು ಯಥಾರ್ಥವಾಗಿ ಪ್ರಸಿದ್ಧಪಡಿಸದೆ ಕಕ್ಷೀಭಾವದಿಂದ ಪ್ರಸಿದ್ದಿಪಡಿಸುತ್ತಾರೆ.
17 but those out of contention, announce the Christ, not purely, supposing to arouse tribulation for my bonds.ಇವರಾದರೋ ನಾನು ಸುವಾರ್ತೆಯ ಪರವಾಗಿ ನೇಮಿಸಲ್ಪಟ್ಟಿದ್ದೇನೆಂದು ತಿಳಿದು ಪ್ರೀತಿಯಿಂದ ಸಾರುತ್ತಾರೆ.
18 What is it then? at any rate, in every way, whether in pretext or in truth, Christ is announced; and in this I rejoice, yea, also I will rejoice;ಹೇಗಾದರೇನು? ಯಾವ ರೀತಿಯಿಂದಾದರೂ ಅಂದರೆ ಕಪಟದಿಂದಾ ಗಲಿ ಇಲ್ಲವೆ ಸತ್ಯದಿಂದಾಗಲಿ ಕ್ರಿಸ್ತನನ್ನು ಪ್ರಸಿದ್ಧಿಪಡಿ ಸುವದುಂಟು; ಇದಕ್ಕೆ ನಾನು ಸಂತೋಷಿಸುತ್ತೇನೆ ಹೌದು, ಮುಂದೆಯೂ ಸಂತೋಷಿಸುವೆನು.
19 for I know that this shall turn out for me to salvation, through your supplication and [the] supply of the Spirit of Jesus Christ;ನಿಮ್ಮ ಪ್ರಾರ್ಥನೆಯಿಂದಲೂ ಯೇಸು ಕ್ರಿಸ್ತನ ಆತ್ಮನ ಸಹಾಯ ದಿಂದಲೂ ಇದು ನನ್ನ ರಕ್ಷಣೆಗೆ ಪರಿಣಮಿಸುವದೆಂದು ನಾನು ಬಲ್ಲೆನು.
20 according to my earnest expectation and hope, that in nothing I shall be ashamed, but in all boldness, as always, now also Christ shall be magnified in my body whether by life or by death.ಹೇಗೆಂದರೆ, ನಾನು ಯಾವ ವಿಷಯದಲ್ಲಾದರೂ ನಾಚಿಕೆಪಡದೆ ಎಂದಿನಂತೆ ಈಗಲೂ ಸಹ ತುಂಬಾ ಧೈರ್ಯದಿಂದಿರುವದರಿಂದ ಬದುಕಿದರೂ ಸರಿಯೇ ಸತ್ತರೂ ಸರಿಯೇ ನನ್ನ ದೇಹದ ಮೂಲಕ ಕ್ರಿಸ್ತನಿಗೆ ಮಹಿಮೆಯುಂಟಾಗಬೇಕೆಂದು ನನಗೆ ಬಹಳ ಅಭಿಲಾಷೆಯೂ ನಿರೀಕ್ಷೆಯೂ ಉಂಟು.
21 For for me to live [is] Christ, and to die gain;ನನಗಂತೂ ಬದುಕುವದೆಂದರೆ ಕ್ರಿಸ್ತನೇ, ಸಾಯು ವದು ಲಾಭವೇ.
22 but if to live in flesh [is my lot], this is for me worth the while: and what I shall choose I cannot tell.ಶರೀರದಲ್ಲಿಯೇ ಬದುಕಬೇಕಾ ದಲ್ಲಿ ಕೆಲಸಮಾಡಿ ಫಲಹೊಂದಲು ನನಗೆ ಅನುಕೂಲ ವಾಗುವದು. ಹೀಗಿರಲಾಗಿ ನಾನು ಯಾವದನ್ನಾರಿಸಿಕೊಳ್ಳಬೇಕೋ ನನಗೆ ತೋರದು;
23 But I am pressed by both, having the desire for departure and being with Christ, [for] [it is] very much better,ಈ ಎರಡರ ನಡುವೆ ಸಿಕ್ಕಿಕೊಂಡಿದ್ದೇನೆ; ಇಲ್ಲಿಂದ ಹೋಗಿಬಿಟ್ಟು ಕ್ರಿಸ್ತನ ಜೊತೆಯಲ್ಲಿರಬೇಕೆಂಬದೇ ನನ್ನ ಅಭಿಲಾಷೆ, ಅದು ಉತ್ತಮೋತ್ತಮ
24 but remaining in the flesh [is] more necessary for your sakes;ಆದಾಗ್ಯೂ ನಾನಿನ್ನೂ ಶರೀರದಲ್ಲಿ ವಾಸಮಾಡಿಕೊಂಡಿರುವದು ನಿಮ ಗೋಸ್ಕರ ಬಹು ಅವಶ್ಯವಾದದ್ದು.
25 and having confidence of this, I know that I shall remain and abide along with you all, for your progress and joy in faith;ಆದದರಿಂದ ನಿಮಗೆ ನಂಬಿಕೆಯಲ್ಲಿ ಅಭಿವೃದ್ಧಿಯೂ ಸಂತೋಷವೂ ಉಂಟಾಗುವದಕ್ಕೋಸ್ಕರ ನಾನು ಜೀವದಿಂದುಳಿದು ನಿಮ್ಮೆಲ್ಲರ ಬಳಿಯಲ್ಲಿರುವೆನೆಂದು ದೃಢವಾಗಿ ನಂಬಿ ದ್ದೇನೆ.
26 that your boasting may abound in Christ Jesus through me by my presence again with you.ಹೀಗೆ ನಾನು ತಿರಿಗಿ ನಿಮ್ಮ ಬಳಿಗೆ ಬರುವದರಿಂದ ನನ್ನ ವಿಷಯವಾದ ನಿಮ್ಮ ಸಂತೋಷವು ಯೇಸು ಕ್ರಿಸ್ತನಲ್ಲಿ ನಮಗೆ ಅತ್ಯಧಿಕವಾಗಿರುವದು.
27 Only conduct yourselves worthily of the glad tidings of the Christ, in order that whether coming and seeing you, or absent, I may hear of what concerns you, that ye stand firm in one spirit, with one soul, labouring together in the same conflict with the faith of the glad tidings;ಹೇಗೂ ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಿರಿ. ಆಗ ನಾನು ಬಂದು ನಿಮ್ಮನ್ನು ನೋಡಿ ದರೂ ಸರಿಯೇ, ದೂರದಲ್ಲಿದ್ದು ನಿಮ್ಮ ಸುದ್ದಿಯನ್ನು ಕೇಳಿದರೂ ಸರಿಯೇ, ನೀವು ಒಂದೇ ಆತ್ಮದಲ್ಲಿ ದೃಢ ವಾಗಿ ನಿಂತು ಸುವಾರ್ತೆಯಲ್ಲಿಟ್ಟ ನಂಬಿಕೆಗೊಸ್ಕರ ಐಕ್ಯಮತ್ಯದಿಂದಲೂ ಒಂದೇ ಮನಸ್ಸಿನಿಂದಲೂ ಹೆ
28 and not frightened in anything by the opposers, which is to them a demonstration of destruction, but of your salvation, and that from God;ಯಾವ ವಿಷಯದಲ್ಲಿಯಾದರೂ ನಿಮ್ಮ ವಿರೋದಿಗಳಿಗೆ ಭಯಪಡಬೇಡಿರಿ; ನೀವು ಭಯಪಡ ದಿರುವದು ಅವರಿಗೆ ನಾಶನಕ್ಕಾಗಿಯೂ ನಿಮಗೆ ರಕ್ಷಣೆ ಗಾಗಿಯೂ ದೇವರಿಂದಾದ ಪ್ರಮಾಣವಾಗಿದೆ.
29 because to you has been given, as regards Christ, not only the believing on him but the suffering for him also,ಹೇಗೆಂದರೆ ಕ್ರಿಸ್ತನ ಮೇಲೆ ನಂಬಿಕೆಯಿಡುವದೂ ಆತನಿಗೋಸ್ಕರ ಬಾಧೆಯನ್ನನುಭವಿಸುವದೂ ಆತನ ಪರವಾಗಿ ನಿಮಗೆ ಅನುಗ್ರಹವಾಗಿ ದೊರೆಯಿತು.
30 having the same conflict which ye have seen in me, and now hear of in me.ಹೀಗೆ ನೀವು ನನ್ನಲ್ಲಿ ಕಂಡಂಥ ಮತ್ತು ಈಗ ನನ್ನಲ್ಲಿರುವದೆಂದು ನೀವು ಕೇಳುವಂಥ ಹೋರಾಟವೇ ನಿಮಗುಂಟು.
Kannada Bible