Philippians 1 - ASV (Kannada)
1 Paul and Timothy, servants of Christ Jesus, to all the saints in Christ Jesus that are at Philippi, with the bishops and deacons:ಯೇಸು ಕ್ರಿಸ್ತನ ಸೇವಕರಾದ ಪೌಲ ತಿಮೊಥೆಯರು ಕ್ರಿಸ್ತ ಯೇಸುವಿನಲ್ಲಿ ಫಿಲಿಪ್ಪಿಯದ ಪರಿಶುದ್ಧರೆಲ್ಲರಿಗೂ ಅವರೊಂದಿಗಿರುವ ಸಭಾಧ್ಯಕ್ಷರಿಗೂ ಸಭಾಸೇವಕರಿಗೂ--
2 Grace to you and peace from God our Father and the Lord Jesus Christ.ನಮ್ಮ ತಂದೆ ಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತ ನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
3 I thank my God upon all my remembrance of you,ನಾನು ನಿಮ್ಮನ್ನು ನೆನಸಿಕೊಳ್ಳುವಾಗೆಲ್ಲಾ ನನ್ನ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇನೆ;
4 always in every supplication of mine on behalf of you all making my supplication with joy,ನಾನು ನಿಮ್ಮೆಲ್ಲರಿಗೋಸ್ಕರ ಯಾವಾಗಲೂ ಮಾಡುವ ನನ್ನ ಪ್ರತಿಯೊಂದು ಪ್ರಾರ್ಥನೆಯಲ್ಲಿ ಸಂತೋಷದಿಂದಲೇ ಬೇಡಿಕೊಳ್ಳುವವನಾಗಿದ್ದೇನೆ.
5 for your fellowship in furtherance of the gospel from the first day until now;ನೀವು ಮೊದಲಿನ ದಿನದಿಂದ ಇಂದಿನವರೆಗೂ ಸುವಾರ್ತಾ ಸೇವೆಗಾಗಿ ಸಹಕಾರಿಗಳಾಗಿದ್ದೀರೆಂದು ನನ್ನ ದೇವರಿಗೆ ಕೃತಜ್ಞತಾ ಸ್ತುತಿ ಮಾಡುತ್ತೇನೆ.
6 being confident of this very thing, that he who began a good work in you will perfect it until the day of Jesus Christ:ಒಳ್ಳೇ ಕೆಲಸವನ್ನು ನಿಮ್ಮಲ್ಲಿ ಪ್ರಾರಂಭಿಸಿದಾತನು ಅದನ್ನು ಯೇಸು ಕ್ರಿಸ್ತನ ದಿನದವರೆಗೆ ಸಿದ್ದಿಗೆ ತರುವನೆಂದು ನನಗೆ ಭರವಸ ವುಂಟು.
7 even as it is right for me to be thus minded on behalf of you all, because I have you in my heart, inasmuch as, both in my bonds and in the defence and confirmation of the gospel, ye all are partakers with me of grace.ನಿಮ್ಮೆಲ್ಲರ ವಿಷಯದಲ್ಲಿ ಹೀಗೆ ಯೋಚಿಸು ವದು ನನಗೆ ನ್ಯಾಯವಾಗಿದೆ; ಯಾಕಂದರೆ ನಾನು ಬೇಡಿಬಿದ್ದಿರುವಾಗಲೂ ಸುವಾರ್ತೆಯ ವಿಷಯದಲ್ಲಿ ಉತ್ತರ ಹೇಳಿ ಸ್ಥಾಪಿಸುವಾಗಲೂ ನೀವೆಲ್ಲರು ನಾನು ಹೊಂದಿದ ಕೃಪೆಯಲ್ಲಿ ಪಾಲುಗಾರರಾಗಿದ್ದೀರೆಂದು ನಿಮ್ಮನ್ನು ನನ್ನ ಹೃದಯದಲ್ಲಿಟ್ಟುಕೊಂಡಿದ್ದೇನೆ.
8 For God is my witness, how I long after you all in the tender mercies of Christ Jesus.ಯೇಸು ಕ್ರಿಸ್ತನಿಗಿರುವಂಥ ಕನಿಕರದಿಂದ ನಿಮ್ಮೆಲ್ಲರಿ ಗೋಸ್ಕರ ನಾನು ಎಷ್ಟೋ ಹಂಬಲಿಸುತ್ತೇನೆ; ಇದಕ್ಕೆ ದೇವರೇ ನನ್ನ ಸಾಕ್ಷಿ.
9 And this I pray, that your love may abound yet more and more in knowledge and all discernment;ನಿಮ್ಮ ಪ್ರೀತಿಯು ಹೆಚ್ಚುತ್ತಾ ಹೆಚ್ಚುತ್ತಾ ನೀವು ಜ್ಞಾನ ಮತ್ತು ಪೂರ್ಣ ವಿವೇಕಗಳಿಂದ ಕೂಡಿದವರಾಗಿರಬೇಕೆಂತಲೂ
10 so that ye may approve the things that are excellent; that ye may be sincere and void of offence unto the day of Christ;ಉತ್ತಮ ಕಾರ್ಯ ಗಳು ಯಾವವೆಂದು ನೀವು ವಿವೇಚಿಸುವವರಾಗ ಬೇಕೆಂತಲೂ ಕ್ರಿಸ್ತನ ದಿನದವರೆಗೆ ನೀವು ಸರಳ ರಾಗಿಯೂ ನಿರ್ಮಲರಾಗಿಯೂ ಇರಬೇಕೆಂತಲೂ
11 being filled with the fruits of righteousness, which are through Jesus Christ, unto the glory and praise of God.ಯೇಸು ಕ್ರಿಸ್ತನ ಮೂಲಕ ನೀತಿಯೆಂಬ ಫಲಗಳಿಂದ ತುಂಬಿದವರಾಗಿ ದೇವರಿಗೆ ಮಹಿಮೆಯನ್ನೂ ಸ್ತೋತ್ರ ವನ್ನೂ ತರುವವರಾಗಿರಬೇಕೆಂತಲೂ ಪ್ರಾರ್ಥಿಸುತ್ತೇನೆ.
12 Now I would have you know, brethren, that the things `which happened' unto me have fallen out rather unto the progress of the gospel;ಸಹೋದರರೇ, ನನಗೆ ಸಂಭವಿಸಿರುವದು ಸುವಾರ್ತೆಯ ಪ್ರಸಾರಣೆಗೇ ಸಹಾಯವಾಯಿತೆಂದು ನೀವು ತಿಳಿಯಬೇಕೆಂಬದಾಗಿ ನಾನು ಅಪೇಕ್ಷಿಸುತ್ತೇನೆ.
13 so that my bonds became manifest in Christ throughout the whole praetorian guard, and to all the rest;ಹೇಗಂದರೆ ನನ್ನ ಬೇಡಿಗಳು ಕ್ರಿಸ್ತನ ನಿಮಿತ್ತವೇ ಎಂದು ಎಲ್ಲಾ ಅರಮನೆಯಲ್ಲಿಯೂ ಮಿಕ್ಕಾದ ಎಲ್ಲಾ ಸ್ಥಳಗಳಲ್ಲಿಯೂ ಪ್ರಸಿದ್ಧವಾಯಿತು.
14 and that most of the brethren in the Lord, being confident through my bonds, are more abundantly bold to speak the word of God without fear.ಇದಲ್ಲದೆ ಕರ್ತನಲ್ಲಿ ಅನೇಕ ಸಹೋದರರು ನನ್ನ ಬೇಡಿಗ ಳಿಂದಲೇ ಭರವಸವುಳ್ಳವರಾಗಿ ವಾಕ್ಯವನ್ನು ನಿರ್ಭಯ ದಿಂದ ಹೇಳುವದಕ್ಕೆ ಇನ್ನೂ ವಿಶೇಷ ಧೈರ್ಯವನ್ನು ಹೊಂದಿದ್ದಾರೆ.
15 Some indeed preach Christ even of envy and strife; and some also of good will:ಕೆಲವರು ಹೊಟ್ಟೇಕಿಚ್ಚುಪಟ್ಟು ಭೇದ ಹುಟ್ಟಿಸಬೇಕೆಂಬ ಭಾವನೆಯಿಂದ ಬೇರೆ ಕೆಲವರು ಒಳ್ಳೇಭಾವದಿಂದ ಕ್ರಿಸ್ತನನ್ನು ಪ್ರಚುರಪಡಿಸುತ್ತಾರೆ.
16 the one `do it' of love, knowing that I am set for the defence of the gospel;ಆ ಬೇರೆ ತರದವರಾದರೋ ನನ್ನ ಬೇಡಿಗಳಿಗೆ ಸಂಕಟವನ್ನು ಕೂಡಿಸಬೇಕೆಂದು ಯೋಚಿಸಿ ಕ್ರಿಸ್ತನನ್ನು ಯಥಾರ್ಥವಾಗಿ ಪ್ರಸಿದ್ಧಪಡಿಸದೆ ಕಕ್ಷೀಭಾವದಿಂದ ಪ್ರಸಿದ್ದಿಪಡಿಸುತ್ತಾರೆ.
17 but the other proclaim Christ of faction, not sincerely, thinking to raise up affliction for me in my bonds.ಇವರಾದರೋ ನಾನು ಸುವಾರ್ತೆಯ ಪರವಾಗಿ ನೇಮಿಸಲ್ಪಟ್ಟಿದ್ದೇನೆಂದು ತಿಳಿದು ಪ್ರೀತಿಯಿಂದ ಸಾರುತ್ತಾರೆ.
18 What then? only that in every way, whether in pretence or in truth, Christ is proclaimed; and therein I rejoice, yea, and will rejoice.ಹೇಗಾದರೇನು? ಯಾವ ರೀತಿಯಿಂದಾದರೂ ಅಂದರೆ ಕಪಟದಿಂದಾ ಗಲಿ ಇಲ್ಲವೆ ಸತ್ಯದಿಂದಾಗಲಿ ಕ್ರಿಸ್ತನನ್ನು ಪ್ರಸಿದ್ಧಿಪಡಿ ಸುವದುಂಟು; ಇದಕ್ಕೆ ನಾನು ಸಂತೋಷಿಸುತ್ತೇನೆ ಹೌದು, ಮುಂದೆಯೂ ಸಂತೋಷಿಸುವೆನು.
19 For I know that this shall turn out to my salvation, through your supplication and the supply of the Spirit of Jesus Christ,ನಿಮ್ಮ ಪ್ರಾರ್ಥನೆಯಿಂದಲೂ ಯೇಸು ಕ್ರಿಸ್ತನ ಆತ್ಮನ ಸಹಾಯ ದಿಂದಲೂ ಇದು ನನ್ನ ರಕ್ಷಣೆಗೆ ಪರಿಣಮಿಸುವದೆಂದು ನಾನು ಬಲ್ಲೆನು.
20 according to my earnest expectation and hope, that in nothing shall I be put to shame, but `that' with all boldness, as always, `so' now also Christ shall be magnified in my body, whether by life, or by death.ಹೇಗೆಂದರೆ, ನಾನು ಯಾವ ವಿಷಯದಲ್ಲಾದರೂ ನಾಚಿಕೆಪಡದೆ ಎಂದಿನಂತೆ ಈಗಲೂ ಸಹ ತುಂಬಾ ಧೈರ್ಯದಿಂದಿರುವದರಿಂದ ಬದುಕಿದರೂ ಸರಿಯೇ ಸತ್ತರೂ ಸರಿಯೇ ನನ್ನ ದೇಹದ ಮೂಲಕ ಕ್ರಿಸ್ತನಿಗೆ ಮಹಿಮೆಯುಂಟಾಗಬೇಕೆಂದು ನನಗೆ ಬಹಳ ಅಭಿಲಾಷೆಯೂ ನಿರೀಕ್ಷೆಯೂ ಉಂಟು.
21 For to me to live is Christ, and to die is gain.ನನಗಂತೂ ಬದುಕುವದೆಂದರೆ ಕ್ರಿಸ್ತನೇ, ಸಾಯು ವದು ಲಾಭವೇ.
22 But if to live in the flesh, --`if' this shall bring fruit from my work, then what I shall choose I know not.ಶರೀರದಲ್ಲಿಯೇ ಬದುಕಬೇಕಾ ದಲ್ಲಿ ಕೆಲಸಮಾಡಿ ಫಲಹೊಂದಲು ನನಗೆ ಅನುಕೂಲ ವಾಗುವದು. ಹೀಗಿರಲಾಗಿ ನಾನು ಯಾವದನ್ನಾರಿಸಿಕೊಳ್ಳಬೇಕೋ ನನಗೆ ತೋರದು;
23 But I am in a strait betwixt the two, having the desire to depart and be with Christ; for it is very far better:ಈ ಎರಡರ ನಡುವೆ ಸಿಕ್ಕಿಕೊಂಡಿದ್ದೇನೆ; ಇಲ್ಲಿಂದ ಹೋಗಿಬಿಟ್ಟು ಕ್ರಿಸ್ತನ ಜೊತೆಯಲ್ಲಿರಬೇಕೆಂಬದೇ ನನ್ನ ಅಭಿಲಾಷೆ, ಅದು ಉತ್ತಮೋತ್ತಮ
24 yet to abide in the flesh is more needful for your sake.ಆದಾಗ್ಯೂ ನಾನಿನ್ನೂ ಶರೀರದಲ್ಲಿ ವಾಸಮಾಡಿಕೊಂಡಿರುವದು ನಿಮ ಗೋಸ್ಕರ ಬಹು ಅವಶ್ಯವಾದದ್ದು.
25 And having this confidence, I know that I shall abide, yea, and abide with you all, for your progress and joy in the faith;ಆದದರಿಂದ ನಿಮಗೆ ನಂಬಿಕೆಯಲ್ಲಿ ಅಭಿವೃದ್ಧಿಯೂ ಸಂತೋಷವೂ ಉಂಟಾಗುವದಕ್ಕೋಸ್ಕರ ನಾನು ಜೀವದಿಂದುಳಿದು ನಿಮ್ಮೆಲ್ಲರ ಬಳಿಯಲ್ಲಿರುವೆನೆಂದು ದೃಢವಾಗಿ ನಂಬಿ ದ್ದೇನೆ.
26 that your glorying may abound in Christ Jesus in me through my presence with you again.ಹೀಗೆ ನಾನು ತಿರಿಗಿ ನಿಮ್ಮ ಬಳಿಗೆ ಬರುವದರಿಂದ ನನ್ನ ವಿಷಯವಾದ ನಿಮ್ಮ ಸಂತೋಷವು ಯೇಸು ಕ್ರಿಸ್ತನಲ್ಲಿ ನಮಗೆ ಅತ್ಯಧಿಕವಾಗಿರುವದು.
27 Only let your manner of life be worthy of the gospel of Christ: that, whether I come and see you and be absent, I may hear of your state, that ye stand fast in one spirit, with one soul striving for the faith of the gospel;ಹೇಗೂ ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಿರಿ. ಆಗ ನಾನು ಬಂದು ನಿಮ್ಮನ್ನು ನೋಡಿ ದರೂ ಸರಿಯೇ, ದೂರದಲ್ಲಿದ್ದು ನಿಮ್ಮ ಸುದ್ದಿಯನ್ನು ಕೇಳಿದರೂ ಸರಿಯೇ, ನೀವು ಒಂದೇ ಆತ್ಮದಲ್ಲಿ ದೃಢ ವಾಗಿ ನಿಂತು ಸುವಾರ್ತೆಯಲ್ಲಿಟ್ಟ ನಂಬಿಕೆಗೊಸ್ಕರ ಐಕ್ಯಮತ್ಯದಿಂದಲೂ ಒಂದೇ ಮನಸ್ಸಿನಿಂದಲೂ ಹೆ
28 and in nothing affrighted by the adversaries: which is for them an evident token of perdition, but of your salvation, and that from God;ಯಾವ ವಿಷಯದಲ್ಲಿಯಾದರೂ ನಿಮ್ಮ ವಿರೋದಿಗಳಿಗೆ ಭಯಪಡಬೇಡಿರಿ; ನೀವು ಭಯಪಡ ದಿರುವದು ಅವರಿಗೆ ನಾಶನಕ್ಕಾಗಿಯೂ ನಿಮಗೆ ರಕ್ಷಣೆ ಗಾಗಿಯೂ ದೇವರಿಂದಾದ ಪ್ರಮಾಣವಾಗಿದೆ.
29 because to you it hath been granted in the behalf of Christ, not only to believe on him, but also to suffer in his behalf:ಹೇಗೆಂದರೆ ಕ್ರಿಸ್ತನ ಮೇಲೆ ನಂಬಿಕೆಯಿಡುವದೂ ಆತನಿಗೋಸ್ಕರ ಬಾಧೆಯನ್ನನುಭವಿಸುವದೂ ಆತನ ಪರವಾಗಿ ನಿಮಗೆ ಅನುಗ್ರಹವಾಗಿ ದೊರೆಯಿತು.
30 having the same conflict which ye saw in me, and now hear to be in me.ಹೀಗೆ ನೀವು ನನ್ನಲ್ಲಿ ಕಂಡಂಥ ಮತ್ತು ಈಗ ನನ್ನಲ್ಲಿರುವದೆಂದು ನೀವು ಕೇಳುವಂಥ ಹೋರಾಟವೇ ನಿಮಗುಂಟು.
Kannada Bible