Bible

Numbers 28 - YLT (Kannada)

1 And Jehovah speaketh unto Moses, saying,ಕರ್ತನು ಮೋಶೆಯ ಸಂಗಡ ಮಾತ ನಾಡಿ--

2 `Command the sons of Israel, and thou hast said unto them, My offering, My bread for My fire-offerings, My sweet fragrance, ye take heed to bring near to Me in its appointed season.ನೀನು ಇಸ್ರಾಯೇಲ್‌ ಮಕ್ಕಳಿಗೆ ಆಜ್ಞಾಪಿಸಿ ಅವರಿಗೆ--ನನ್ನ ಸುವಾಸನೆಗೋಸ್ಕರ ಬೆಂಕಿ ಯಿಂದ ಮಾಡಿದ ಬಲಿಗಳಿಗೋಸ್ಕರವಾಗಿರುವ ನನ್ನ ರೊಟ್ಟಿಯ ಅರ್ಪಣೆಯನ್ನು ಅದರ ನೇಮಕವಾದ ಸಮಯದಲ್ಲಿ ನನಗೆ ಅರ್ಪಿಸುವದಕ್ಕೆ ನೀವು ನೋಡಿ ಕೊಳ್ಳಿರಿ.

3 `And thou hast said to them, This `is' the fire-offering which ye bring near to Jehovah: two lambs, sons of a year, perfect ones, daily, a continual burnt-offering;ನೀನು ಅವರಿಗೆ ಹೇಳಬೇಕಾದದ್ದು--ನೀವು ಕರ್ತನಿಗೆ ಅರ್ಪಿಸಬೇಕಾದ ಅರ್ಪಣೆ ಏನಂದರೆನಿತ್ಯ ದಹನಬಲಿಗಾಗಿ ಪ್ರತಿದಿನ ಮಚ್ಚೆಯಿಲ್ಲದ ಒಂದು ವರುಷದ ಎರಡು ಕುರಿಮರಿಗಳು.

4 the one lamb thou preparest in the morning, and the second lamb thou preparest between the evenings;ಒಂದು ಕುರಿಮರಿಯನ್ನು ಉದಯದಲ್ಲಿಯೂ ಮತ್ತೊಂದನ್ನು ಸಾಯಂಕಾಲದಲ್ಲಿಯೂ ಅರ್ಪಿಸಬೇಕು.

5 and a tenth of the ephah of flour for a present, mixed with beaten oil, a fourth of the hin;ಆಹಾರದ ಅರ್ಪಣೆಗಾಗಿ ಹಿನ್ನಿನ ನಾಲ್ಕನೇ ಪಾಲು, ಕುಟ್ಟಿದ ಎಣ್ಣೆ ಕಲಸಿದ ಹಿಟ್ಟಿನ ಏಫದ ಹತ್ತನೇ ಪಾಲು. ಇದು ಸೀನಾಯಿ ಪರ್ವತದಲ್ಲಿ ಕರ್ತನಿಗೆ ಸುವಾಸನೆಯ ದಹನಬಲಿಗಾಗಿ ನೇಮಿಸಿದ ನಿತ್ಯ ದಹನಬಲಿಯು.

6 a continual burnt-offering, which was made in mount Sinai, for sweet fragrance, a fire-offering to Jehovah;ಒಂದು ಕುರಿಮರಿಗೆ ತಕ್ಕ ಪಾನದ ಅರ್ಪಣೆ ಹಿನ್ನಿನ ನಾಲ್ಕನೇ ಪಾಲು ಪರಿಶುದ್ಧ ಸ್ಥಳದಲ್ಲಿ ಅಮಲೇರುವ ದ್ರಾಕ್ಷಾರಸದ ಪಾನದ ಅರ್ಪಣೆಯನ್ನು ಕರ್ತನಿಗೆ ಹೊಯಿಸಬೇಕು.

7 and its libation, a fourth of the hin for the one lamb; in the sanctuary cause thou a libation of strong drink to be poured out to Jehovah.ಎರಡನೇ ಕುರಿಮರಿಯನ್ನು ಸಾಯಂಕಾಲದಲ್ಲಿ ಅರ್ಪಿಸಬೇಕು;

8 `And the second lamb thou dost prepare between the evenings; as the present of the morning, and as its libation thou preparest -- a fire-offering, a sweet fragrance to Jehovah.ಅದರ ಆಹಾ ರದ ಅರ್ಪಣೆಯನ್ನೂ ಪಾನದ ಅರ್ಪಣೆಯನ್ನೂ ಉದಯದಲ್ಲಿ ಮಾಡಿದ ಹಾಗೆ ಕರ್ತನಿಗೆ ಸುವಾಸನೆ ಯಾಗುವಂತೆ ಬೆಂಕಿಯಿಂದ ಮಾಡಿದ ಬಲಿಯನ್ನು ನೀನು ಅರ್ಪಿಸಬೇಕು.

9 `And on the sabbath-day, two lambs, sons of a year, perfect ones, and two-tenth deals of flour, a present, mixed with oil, and its libation;ಆದರೆ ಸಬ್ಬತ್‌ ದಿವಸದಲ್ಲಿ ಆಹಾರದ ಅರ್ಪಣೆ ಗಾಗಿ ಮಚ್ಚೆಯಿಲ್ಲದ ಒಂದು ವರುಷದ ಎರಡು ಕುರಿ ಮರಿಗಳನ್ನೂ ಎರಡು ದಶಾಂಶಗಳಷ್ಟು ಎಣ್ಣೇ ಕಲಸಿದ ಹಿಟ್ಟನ್ನೂ ಅದಕ್ಕೆ ಪಾನದ ಅರ್ಪಣೆಯನ್ನೂ

10 the burnt-offering of the sabbath in its sabbath, besides the continual burnt-offering and its libation.ನಿತ್ಯ ದಹನಬಲಿಯ ಹೊರತು ಪ್ರತಿ ಸಬ್ಬತ್ತಿಗೆ ತಕ್ಕ ದಹನ ಬಲಿಯೂ ಅದರ ಪಾನದ ಅರ್ಪಣೆಯೂ ಇದೇ.

11 `And in the beginnings of your months ye bring near a burnt-offering to Jehovah: two bullocks, sons of the herd, and one ram, seven lambs, sons of a year, perfect ones;ನಿಮ್ಮ ತಿಂಗಳುಗಳ ಆರಂಭದಲ್ಲಿ ನೀವು ಕರ್ತನಿಗೆ ದಹನಬಲಿಗಾಗಿ ಎರಡು ಎಳೇ ಹೋರಿಗಳನ್ನೂ ಒಂದು ಟಗರನ್ನೂ ಮಚ್ಚೆಯಿಲ್ಲದ ಒಂದು ವರುಷದ ಏಳು ಕುರಿಮರಿಗಳನ್ನೂ

12 and three-tenth deals of flour, a present, mixed with oil, for the one bullock, and two-tenth deals of flour, a present, mixed with oil, for the one ram;ಒಂದೊಂದು ಹೋರಿಗೆ ಆಹಾರದ ಅರ್ಪಣೆಗಾಗಿ ಎಣ್ಣೇ ಕಲಸಿದ ಹಿಟ್ಟಿನ ಮೂರು ದಶಾಂಶಗಳು; ಒಂದೊಂದು ಟಗರಿಗೆ ಆಹಾರದ ಅರ್ಪಣೆಯಾಗಿ ಎಣ್ಣೇ ಕಲಸಿದ ಹಿಟ್ಟಿನ ಎರಡು ದಶಾಂಶಗಳು.

13 and a several tenth deal of flour, a present, mixed with oil, for the one lamb; a burnt-offering, a sweet fragrance, a fire-offering to Jehovah;ಒಂದೊಂದು ಕುರಿಮರಿಗೆ ಆಹಾರದ ಅರ್ಪಣೆಯಾಗಿ ಎಣ್ಣೇ ಕಲಸಿದ ಹಿಟ್ಟಿನ ಒಂದು ದಶಾಂಶವು, ಕರ್ತನಿಗೆ ಸುವಾಸನೆಯ ದಹನ ಬಲಿಗಾಗಿ ಬೆಂಕಿಯಿಂದ ಮಾಡಿದ ಬಲಿಯು ಇದೇ.

14 and their libations are a half of the hin to a bullock, and a third of the hin to a ram, and a fourth of the hin to a lamb, of wine; this `is' the burnt-offering of every month for the months of the year;ಇವುಗಳಿಗೆ ತಕ್ಕ ಪಾನದ ಅರ್ಪಣೆಗಳು ಅಂದರೆ ಹೋರಿಗೆ ಅರ್ಧ ಹಿನ್ನಿನ ದ್ರಾಕ್ಷಾರಸವು; ಟಗರಿಗೆ ಹಿನ್ನಿನ ಮೂರನೇ ಪಾಲು ದ್ರಾಕ್ಷಾರಸವು; ಕುರಿಮರಿಗೆ ಕಾಲು ಹಿನ್ನಿನ ದ್ರಾಕ್ಷಾರಸವು ಇರಬೇಕು; ಇದು ವರುಷಕ್ಕಿರುವ ತಿಂಗಳುಗಳಲ್ಲಿ ಒಂದೊಂದಕ್ಕೆ ತಕ್ಕ ದಹನ ಬಲಿಯಾಗಿದೆ.

15 and one kid of the goats for a sin-offering to Jehovah; besides the continual burnt-offering it is prepared, and its libation.ಇದಲ್ಲದೆ ನಿತ್ಯ ದಹನ ಬಲಿಯ ಹೊರತು ಕರ್ತನಿಗೆ ಪಾಪ ಬಲಿಗಾಗಿ ಒಂದು ಮೇಕೆಮರಿಯನ್ನೂ ಅದಕ್ಕೆ ತಕ್ಕ ಪಾನದ ಅರ್ಪಣೆ ಯನ್ನೂ ಅರ್ಪಿಸಬೇಕು.

16 `And in the first month, in the fourteenth day of the month, `is' the passover to Jehovah;ಆದರೆ ಮೊದಲನೇ ತಿಂಗಳಿನ ಹದಿನಾಲ್ಕನೇ ದಿವಸವು ಕರ್ತನ ಪಸ್ಕವಾಗಿರಬೇಕು.

17 and in the fifteenth day of this month `is' a festival, seven days unleavened food is eaten;ಆ ತಿಂಗಳಿನ ಹದಿನೈದನೇ ದಿವಸವು ಹಬ್ಬವಾಗಿದೆ; ಏಳು ದಿವಸಗಳ ವರೆಗೂ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಬೇಕು.

18 in the first day `is' an holy convocation, ye do no servile work,ಮೊದಲನೇ ದಿವಸದಲ್ಲಿ ಪರಿಶುದ್ಧ ಸಭೆಯನ್ನು ಕೂಡಿಸಬೇಕು. ಯಾವ ತರವಾದ ಕಷ್ಟಕರವಾದ ಕೆಲಸ ವನ್ನು ನೀವು ಆ ದಿವಸದಲ್ಲಿ ಮಾಡಬಾರದು.

19 and ye have brought near a fire-offering, a burnt-offering to Jehovah: two bullocks, sons of the herd, and one ram, and seven lambs, sons of a year, perfect ones they are for you;ಆದರೆ ನೀವು ಕರ್ತನಿಗೆ ಬೆಂಕಿಯಿಂದ ಮಾಡಿದ ದಹನ ಬಲಿಯನ್ನು ಅರ್ಪಿಸಬೇಕು. ಯಾವದಂದರೆ--ಎರಡು ಎಳೇ ಹೋರಿಗಳು, ಒಂದು ಟಗರು, ವರುಷದ ಏಳು ಕುರಿಮರಿಗಳು; ನಿಮಗೆ ಇವು ದೋಷವಿಲ್ಲದ ಪೂರ್ಣಾಂಗಗಳಾಗಿರಬೇಕು.

20 and their present, flour mixed with oil, three-tenth deals for a bullock, and two-tenth deals for a ram ye do prepare;ಅವುಗಳ ಆಹಾರದ ಅರ್ಪಣೆಯನ್ನೂ ಎಣ್ಣೇ ಕಲಸಿದ ಹಿಟ್ಟನ್ನೂ ಹೋರಿಗೆ ಮೂರು ದಶಾಂಶಗಳನ್ನೂ ಟಗರಿಗೆ ಎರಡು ದಶಾಂಶ ಗಳನ್ನೂ ಅರ್ಪಿಸಬೇಕು.

21 a several tenth deal thou preparest for the one lamb, for the seven lambs,ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ಒಂದು ದಶಾಂಶವನ್ನು ಅರ್ಪಿಸಬೇಕು.

22 and one goat, a sin-offering, to make atonement for you.ನಿಮಗೋಸ್ಕರ ಪ್ರಾಯಶ್ಚಿತ್ತಕ್ಕೆ ಪಾಪ ಬಲಿಗಾಗಿ ಒಂದು ಹೋತವನ್ನು ಅರ್ಪಿಸಬೇಕು.

23 `Apart from the burnt-offering of the morning, which `is' for the continual burnt-offering, ye prepare these;ಇವುಗಳನ್ನು ನಿತ್ಯವಾದ ದಹನಬಲಿಯಾಗಿರುವ ಉದಯದ ದಹನಬಲಿಯ ಹೊರತಾಗಿ ನೀವು ಅರ್ಪಿಸಬೇಕು.

24 according to these ye prepare daily, seven days, bread of a fire-offering, a sweet fragrance, to Jehovah; besides the continual burnt-offering it is prepared, and its libation;ಈ ಪ್ರಕಾರ ನೀವು ಏಳು ದಿವಸಗಳ ಮಟ್ಟಿಗೂ ದಿನ ದಿನಕ್ಕೆ ಕರ್ತನಿಗೆ ಸುವಾಸೆನೆಗಾಗಿ ದಹನಬಲಿಯ ಆಹಾರವನ್ನು ಅರ್ಪಿಸಬೇಕು; ಅದನ್ನೂ ಅದಕ್ಕೆ ತಕ್ಕ ಪಾನದ ಅರ್ಪಣೆಯನ್ನೂ ನಿತ್ಯವಾದ ದಹನಬಲಿಯ ಹೊರತಾಗಿ ಅರ್ಪಿಸಬೇಕು.

25 and on the seventh day a holy convocation ye have, ye do no servile work.ಏಳನೇ ದಿವಸದಲ್ಲಿ ನಿಮಗೆ ಪರಿಶುದ್ಧವಾದ ಸಭೆಯು ಇರಬೇಕು; ಯಾವ ಕೆಲಸವನ್ನೂ ನೀವು ಮಾಡಬಾರದು.

26 `And in the day of the first-fruits, in your bringing near a new present to Jehovah, in your weeks, a holy convocation ye have; ye do no servile work;ಪ್ರಥಮ ಫಲಗಳ ದಿವಸದಲ್ಲಿಯೂ ನೀವು ಕರ್ತ ನಿಗೆ ನಿಮ್ಮ ವಾರಗಳಲ್ಲಿ ಹೊಸ ಆಹಾರದ ಅರ್ಪಣೆ ಯನ್ನು ಅರ್ಪಿಸುವಾಗ ನಿಮಗೆ ಪರಿಶುದ್ಧವಾದ ಸಭೆ ಇರಬೇಕು; ಯಾವ ಕೆಲಸವನ್ನಾದರೂ ಮಾಡಬಾರದು.

27 and ye have brought near a burnt-offering for sweet fragrance to Jehovah: two bullocks, sons of the herd, one ram, seven lambs, sons of a year,ನೀವು ಕರ್ತನಿಗೆ ಸುವಾಸನೆಯುಳ್ಳ ದಹನಬಲಿಗಾಗಿ ಎರಡು ಎಳೇ ಹೋರಿಗಳನ್ನೂ ಒಂದು ಟಗರನ್ನೂ ವರುಷದ ಏಳು ಕುರಿಮರಿಗಳನ್ನೂ

28 and their present, flour mixed with oil, three-tenth deals to the one bullock, two-tenth deals to the one ram,ಅವುಗಳ ಆಹಾರದ ಅರ್ಪಣೆಗಾಗಿ ಎಣ್ಣೇ ಕಲಸಿದ ಹಿಟ್ಟನ್ನೂ ಹೋರಿಗೆ ಮೂರು ದಶಾಂಶಗಳನ್ನೂ ಟಗರಿಗೆ ಎರಡು ದಶಾಂಶಗಳನ್ನೂ

29 a several tenth deal to the one lamb, for the seven lambs;ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ದಶಾಂಶವನ್ನೂ

30 one kid of the goats to make atonement for you;ನಿಮಗೋಸ್ಕರ ಪ್ರಾಯಶ್ಚಿತ್ತಕ್ಕೆ ಮೇಕೆಮರಿಯನ್ನೂ ಅರ್ಪಿಸಬೇಕು.

31 apart from the continual burnt-offering and its present ye prepare `them' (perfect ones they are for you) and their libations.ನಿತ್ಯವಾದ ದಹನಬಲಿಯನ್ನೂ ಅದರ ಆಹಾರದ ಅರ್ಪಣೆಯನ್ನೂ ಹೊರತಾಗಿ ನೀವು ದೋಷವಿಲ್ಲದ ಇವುಗಳನ್ನೂ ಅವುಗಳಿಗೆ ತಕ್ಕ ಪಾನದ ಅರ್ಪಣೆ ಗಳನ್ನೂ ಅರ್ಪಿಸಬೇಕು.

Kannada Bible