Numbers 28 - BBE (Kannada)
1 And the Lord said to Moses,ಕರ್ತನು ಮೋಶೆಯ ಸಂಗಡ ಮಾತ ನಾಡಿ--
2 Give orders to the children of Israel and say to them, Let it be your care to give me my offerings at their regular times, the food of the offerings made by fire to me for a sweet smell.ನೀನು ಇಸ್ರಾಯೇಲ್ ಮಕ್ಕಳಿಗೆ ಆಜ್ಞಾಪಿಸಿ ಅವರಿಗೆ--ನನ್ನ ಸುವಾಸನೆಗೋಸ್ಕರ ಬೆಂಕಿ ಯಿಂದ ಮಾಡಿದ ಬಲಿಗಳಿಗೋಸ್ಕರವಾಗಿರುವ ನನ್ನ ರೊಟ್ಟಿಯ ಅರ್ಪಣೆಯನ್ನು ಅದರ ನೇಮಕವಾದ ಸಮಯದಲ್ಲಿ ನನಗೆ ಅರ್ಪಿಸುವದಕ್ಕೆ ನೀವು ನೋಡಿ ಕೊಳ್ಳಿರಿ.
3 Say to them, This is the offering made by fire which you are to give to the Lord; he-lambs of the first year without any mark, two every day as a regular burned offering.ನೀನು ಅವರಿಗೆ ಹೇಳಬೇಕಾದದ್ದು--ನೀವು ಕರ್ತನಿಗೆ ಅರ್ಪಿಸಬೇಕಾದ ಅರ್ಪಣೆ ಏನಂದರೆನಿತ್ಯ ದಹನಬಲಿಗಾಗಿ ಪ್ರತಿದಿನ ಮಚ್ಚೆಯಿಲ್ಲದ ಒಂದು ವರುಷದ ಎರಡು ಕುರಿಮರಿಗಳು.
4 Let one be offered in the morning, and the other at evening;ಒಂದು ಕುರಿಮರಿಯನ್ನು ಉದಯದಲ್ಲಿಯೂ ಮತ್ತೊಂದನ್ನು ಸಾಯಂಕಾಲದಲ್ಲಿಯೂ ಅರ್ಪಿಸಬೇಕು.
5 And the tenth part of an ephah of the best meal for a meal offering mixed with the fourth part of a hin of clear oil.ಆಹಾರದ ಅರ್ಪಣೆಗಾಗಿ ಹಿನ್ನಿನ ನಾಲ್ಕನೇ ಪಾಲು, ಕುಟ್ಟಿದ ಎಣ್ಣೆ ಕಲಸಿದ ಹಿಟ್ಟಿನ ಏಫದ ಹತ್ತನೇ ಪಾಲು. ಇದು ಸೀನಾಯಿ ಪರ್ವತದಲ್ಲಿ ಕರ್ತನಿಗೆ ಸುವಾಸನೆಯ ದಹನಬಲಿಗಾಗಿ ನೇಮಿಸಿದ ನಿತ್ಯ ದಹನಬಲಿಯು.
6 It is a regular burned offering, as it was ordered in Mount Sinai, for a sweet smell, an offering made by fire to the Lord.ಒಂದು ಕುರಿಮರಿಗೆ ತಕ್ಕ ಪಾನದ ಅರ್ಪಣೆ ಹಿನ್ನಿನ ನಾಲ್ಕನೇ ಪಾಲು ಪರಿಶುದ್ಧ ಸ್ಥಳದಲ್ಲಿ ಅಮಲೇರುವ ದ್ರಾಕ್ಷಾರಸದ ಪಾನದ ಅರ್ಪಣೆಯನ್ನು ಕರ್ತನಿಗೆ ಹೊಯಿಸಬೇಕು.
7 And for its drink offering take the fourth part of a hin for one lamb: in the holy place let the wine be drained out for a drink offering for the Lord.ಎರಡನೇ ಕುರಿಮರಿಯನ್ನು ಸಾಯಂಕಾಲದಲ್ಲಿ ಅರ್ಪಿಸಬೇಕು;
8 Let the other lamb be offered at evening; like the meal offering of the morning and its drink offering, let it be offered as an offering made by fire for a sweet smell to the Lord.ಅದರ ಆಹಾ ರದ ಅರ್ಪಣೆಯನ್ನೂ ಪಾನದ ಅರ್ಪಣೆಯನ್ನೂ ಉದಯದಲ್ಲಿ ಮಾಡಿದ ಹಾಗೆ ಕರ್ತನಿಗೆ ಸುವಾಸನೆ ಯಾಗುವಂತೆ ಬೆಂಕಿಯಿಂದ ಮಾಡಿದ ಬಲಿಯನ್ನು ನೀನು ಅರ್ಪಿಸಬೇಕು.
9 And on the Sabbath day, two he-lambs of the first year, without any mark, and two tenth parts of the best meal for a meal offering mixed with oil, and its drink offering:ಆದರೆ ಸಬ್ಬತ್ ದಿವಸದಲ್ಲಿ ಆಹಾರದ ಅರ್ಪಣೆ ಗಾಗಿ ಮಚ್ಚೆಯಿಲ್ಲದ ಒಂದು ವರುಷದ ಎರಡು ಕುರಿ ಮರಿಗಳನ್ನೂ ಎರಡು ದಶಾಂಶಗಳಷ್ಟು ಎಣ್ಣೇ ಕಲಸಿದ ಹಿಟ್ಟನ್ನೂ ಅದಕ್ಕೆ ಪಾನದ ಅರ್ಪಣೆಯನ್ನೂ
10 This is the burned offering for every Sabbath day, in addition to the regular burned offering, and its drink offering.ನಿತ್ಯ ದಹನಬಲಿಯ ಹೊರತು ಪ್ರತಿ ಸಬ್ಬತ್ತಿಗೆ ತಕ್ಕ ದಹನ ಬಲಿಯೂ ಅದರ ಪಾನದ ಅರ್ಪಣೆಯೂ ಇದೇ.
11 And on the first day of every month you are to give a burned offering to the Lord; two oxen, one male sheep, and seven he-lambs of the first year, without any mark;ನಿಮ್ಮ ತಿಂಗಳುಗಳ ಆರಂಭದಲ್ಲಿ ನೀವು ಕರ್ತನಿಗೆ ದಹನಬಲಿಗಾಗಿ ಎರಡು ಎಳೇ ಹೋರಿಗಳನ್ನೂ ಒಂದು ಟಗರನ್ನೂ ಮಚ್ಚೆಯಿಲ್ಲದ ಒಂದು ವರುಷದ ಏಳು ಕುರಿಮರಿಗಳನ್ನೂ
12 And three tenth parts of the best meal for a meal offering mixed with oil, for every ox; and two tenth parts of the best meal for a meal offering mixed with oil, for the one sheep;ಒಂದೊಂದು ಹೋರಿಗೆ ಆಹಾರದ ಅರ್ಪಣೆಗಾಗಿ ಎಣ್ಣೇ ಕಲಸಿದ ಹಿಟ್ಟಿನ ಮೂರು ದಶಾಂಶಗಳು; ಒಂದೊಂದು ಟಗರಿಗೆ ಆಹಾರದ ಅರ್ಪಣೆಯಾಗಿ ಎಣ್ಣೇ ಕಲಸಿದ ಹಿಟ್ಟಿನ ಎರಡು ದಶಾಂಶಗಳು.
13 And a separate tenth part of the best meal mixed with oil for a meal offering for every lamb; for a burned offering of a sweet smell, an offering made by fire to the Lord.ಒಂದೊಂದು ಕುರಿಮರಿಗೆ ಆಹಾರದ ಅರ್ಪಣೆಯಾಗಿ ಎಣ್ಣೇ ಕಲಸಿದ ಹಿಟ್ಟಿನ ಒಂದು ದಶಾಂಶವು, ಕರ್ತನಿಗೆ ಸುವಾಸನೆಯ ದಹನ ಬಲಿಗಾಗಿ ಬೆಂಕಿಯಿಂದ ಮಾಡಿದ ಬಲಿಯು ಇದೇ.
14 And their drink offerings are to be half a hin of wine for an ox, and the third part of a hin for a male sheep, and the fourth part of a hin for a lamb: this is the burned offering for every month through all the months of the year.ಇವುಗಳಿಗೆ ತಕ್ಕ ಪಾನದ ಅರ್ಪಣೆಗಳು ಅಂದರೆ ಹೋರಿಗೆ ಅರ್ಧ ಹಿನ್ನಿನ ದ್ರಾಕ್ಷಾರಸವು; ಟಗರಿಗೆ ಹಿನ್ನಿನ ಮೂರನೇ ಪಾಲು ದ್ರಾಕ್ಷಾರಸವು; ಕುರಿಮರಿಗೆ ಕಾಲು ಹಿನ್ನಿನ ದ್ರಾಕ್ಷಾರಸವು ಇರಬೇಕು; ಇದು ವರುಷಕ್ಕಿರುವ ತಿಂಗಳುಗಳಲ್ಲಿ ಒಂದೊಂದಕ್ಕೆ ತಕ್ಕ ದಹನ ಬಲಿಯಾಗಿದೆ.
15 And one he-goat for a sin-offering to the Lord; it is to be offered in addition to the regular burned offering and its drink offering.ಇದಲ್ಲದೆ ನಿತ್ಯ ದಹನ ಬಲಿಯ ಹೊರತು ಕರ್ತನಿಗೆ ಪಾಪ ಬಲಿಗಾಗಿ ಒಂದು ಮೇಕೆಮರಿಯನ್ನೂ ಅದಕ್ಕೆ ತಕ್ಕ ಪಾನದ ಅರ್ಪಣೆ ಯನ್ನೂ ಅರ್ಪಿಸಬೇಕು.
16 And in the first month, on the fourteenth day of the month, is the Lord's Passover.ಆದರೆ ಮೊದಲನೇ ತಿಂಗಳಿನ ಹದಿನಾಲ್ಕನೇ ದಿವಸವು ಕರ್ತನ ಪಸ್ಕವಾಗಿರಬೇಕು.
17 On the fifteenth day of this month there is to be a feast; for seven days let your food be unleavened cakes.ಆ ತಿಂಗಳಿನ ಹದಿನೈದನೇ ದಿವಸವು ಹಬ್ಬವಾಗಿದೆ; ಏಳು ದಿವಸಗಳ ವರೆಗೂ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಬೇಕು.
18 On the first day there is to be a holy meeting: you may do no sort of field-work:ಮೊದಲನೇ ದಿವಸದಲ್ಲಿ ಪರಿಶುದ್ಧ ಸಭೆಯನ್ನು ಕೂಡಿಸಬೇಕು. ಯಾವ ತರವಾದ ಕಷ್ಟಕರವಾದ ಕೆಲಸ ವನ್ನು ನೀವು ಆ ದಿವಸದಲ್ಲಿ ಮಾಡಬಾರದು.
19 And you are to give an offering made by fire, a burned offering to the Lord; two oxen, one male sheep, and seven he-lambs of the first year, without any mark:ಆದರೆ ನೀವು ಕರ್ತನಿಗೆ ಬೆಂಕಿಯಿಂದ ಮಾಡಿದ ದಹನ ಬಲಿಯನ್ನು ಅರ್ಪಿಸಬೇಕು. ಯಾವದಂದರೆ--ಎರಡು ಎಳೇ ಹೋರಿಗಳು, ಒಂದು ಟಗರು, ವರುಷದ ಏಳು ಕುರಿಮರಿಗಳು; ನಿಮಗೆ ಇವು ದೋಷವಿಲ್ಲದ ಪೂರ್ಣಾಂಗಗಳಾಗಿರಬೇಕು.
20 And their meal offering, the best meal mixed with oil: let three tenth parts of an ephah be offered for an ox and two tenth parts for a male sheep;ಅವುಗಳ ಆಹಾರದ ಅರ್ಪಣೆಯನ್ನೂ ಎಣ್ಣೇ ಕಲಸಿದ ಹಿಟ್ಟನ್ನೂ ಹೋರಿಗೆ ಮೂರು ದಶಾಂಶಗಳನ್ನೂ ಟಗರಿಗೆ ಎರಡು ದಶಾಂಶ ಗಳನ್ನೂ ಅರ್ಪಿಸಬೇಕು.
21 And a separate tenth part for every one of the seven lambs;ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ಒಂದು ದಶಾಂಶವನ್ನು ಅರ್ಪಿಸಬೇಕು.
22 And one he-goat for a sin-offering to take away your sin.ನಿಮಗೋಸ್ಕರ ಪ್ರಾಯಶ್ಚಿತ್ತಕ್ಕೆ ಪಾಪ ಬಲಿಗಾಗಿ ಒಂದು ಹೋತವನ್ನು ಅರ್ಪಿಸಬೇಕು.
23 These are to be offered in addition to the morning burned offering, which is a regular burned offering at all times.ಇವುಗಳನ್ನು ನಿತ್ಯವಾದ ದಹನಬಲಿಯಾಗಿರುವ ಉದಯದ ದಹನಬಲಿಯ ಹೊರತಾಗಿ ನೀವು ಅರ್ಪಿಸಬೇಕು.
24 In this way, every day for seven days, give the food of the offering made by fire, a sweet smell to the Lord: it is to be offered in addition to the regular burned offering, and its drink offering.ಈ ಪ್ರಕಾರ ನೀವು ಏಳು ದಿವಸಗಳ ಮಟ್ಟಿಗೂ ದಿನ ದಿನಕ್ಕೆ ಕರ್ತನಿಗೆ ಸುವಾಸೆನೆಗಾಗಿ ದಹನಬಲಿಯ ಆಹಾರವನ್ನು ಅರ್ಪಿಸಬೇಕು; ಅದನ್ನೂ ಅದಕ್ಕೆ ತಕ್ಕ ಪಾನದ ಅರ್ಪಣೆಯನ್ನೂ ನಿತ್ಯವಾದ ದಹನಬಲಿಯ ಹೊರತಾಗಿ ಅರ್ಪಿಸಬೇಕು.
25 Then on the seventh day there will be a holy meeting; you may do no field-work.ಏಳನೇ ದಿವಸದಲ್ಲಿ ನಿಮಗೆ ಪರಿಶುದ್ಧವಾದ ಸಭೆಯು ಇರಬೇಕು; ಯಾವ ಕೆಲಸವನ್ನೂ ನೀವು ಮಾಡಬಾರದು.
26 And at the time of the first-fruits, when you give an offering of new meal to the Lord at your feast of weeks, there is to be a holy meeting: you may do no field-work:ಪ್ರಥಮ ಫಲಗಳ ದಿವಸದಲ್ಲಿಯೂ ನೀವು ಕರ್ತ ನಿಗೆ ನಿಮ್ಮ ವಾರಗಳಲ್ಲಿ ಹೊಸ ಆಹಾರದ ಅರ್ಪಣೆ ಯನ್ನು ಅರ್ಪಿಸುವಾಗ ನಿಮಗೆ ಪರಿಶುದ್ಧವಾದ ಸಭೆ ಇರಬೇಕು; ಯಾವ ಕೆಲಸವನ್ನಾದರೂ ಮಾಡಬಾರದು.
27 And give a burned offering for a sweet smell to the Lord; two oxen, one male sheep, and seven he-lambs of the first year;ನೀವು ಕರ್ತನಿಗೆ ಸುವಾಸನೆಯುಳ್ಳ ದಹನಬಲಿಗಾಗಿ ಎರಡು ಎಳೇ ಹೋರಿಗಳನ್ನೂ ಒಂದು ಟಗರನ್ನೂ ವರುಷದ ಏಳು ಕುರಿಮರಿಗಳನ್ನೂ
28 And their meal offering, the best meal mixed with oil, three tenth parts for an ox, two tenth parts for a male sheep,ಅವುಗಳ ಆಹಾರದ ಅರ್ಪಣೆಗಾಗಿ ಎಣ್ಣೇ ಕಲಸಿದ ಹಿಟ್ಟನ್ನೂ ಹೋರಿಗೆ ಮೂರು ದಶಾಂಶಗಳನ್ನೂ ಟಗರಿಗೆ ಎರಡು ದಶಾಂಶಗಳನ್ನೂ
29 And a separate tenth part for every one of the seven lambs;ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ದಶಾಂಶವನ್ನೂ
30 And one he-goat to take away your sin.ನಿಮಗೋಸ್ಕರ ಪ್ರಾಯಶ್ಚಿತ್ತಕ್ಕೆ ಮೇಕೆಮರಿಯನ್ನೂ ಅರ್ಪಿಸಬೇಕು.
31 These are in addition to the regular burned offering and its meal offering; take care that they are without any mark, and let them be offered with their drink offerings.ನಿತ್ಯವಾದ ದಹನಬಲಿಯನ್ನೂ ಅದರ ಆಹಾರದ ಅರ್ಪಣೆಯನ್ನೂ ಹೊರತಾಗಿ ನೀವು ದೋಷವಿಲ್ಲದ ಇವುಗಳನ್ನೂ ಅವುಗಳಿಗೆ ತಕ್ಕ ಪಾನದ ಅರ್ಪಣೆ ಗಳನ್ನೂ ಅರ್ಪಿಸಬೇಕು.
Kannada Bible