Bible

Numbers 24 - DBY (Kannada)

1 And Balaam saw that it was good in the sight of Jehovah to bless Israel, and he went not, as at other times, to seek for enchantments, but he set his face toward the wilderness.1 ಆದರೆ ಇಸ್ರಾಯೇಲನ್ನು ಆಶೀರ್ವದಿಸು ವದಕ್ಕೆ ಕರ್ತನ ದೃಷ್ಟಿಗೆ ಒಳ್ಳೇದೆಂದು ಬಿಳಾಮನು ನೋಡಿದಾಗ ಅವನು ಮುಂಚಿನ ಹಾಗೆ ಶಕುನಗಳನ್ನು ಕಂಡುಕೊಳ್ಳುವದಕ್ಕೆ ಹೋಗದೆ ತನ್ನ ಮುಖವನ್ನು ಅರಣ್ಯದ ಕಡೆಗೆ ತಿರುಗಿಸಿಕೊಂಡನು.

2 And Balaam lifted up his eyes and saw Israel dwelling [in tents] according to his tribes; and the Spirit of God came upon him.ಬಿಳಾಮನು ತನ್ನ ಕಣ್ಣುಗಳನ್ನೆತ್ತಿ ಇಸ್ರಾಯೇಲು ತನ್ನ ಕುಟುಂಬಗಳ ಪ್ರಕಾರ ತನ್ನ ಡೇರೆಗಳಲ್ಲಿ ವಾಸವಾಗಿ ರುವದನ್ನು ನೋಡಿದಾಗ ದೇವರ ಆತ್ಮನು ಅವನ ಮೇಲೆ ಬಂದನು.

3 And he took up his parable, and said, Balaam the son of Beor saith, and the man of opened eye saith,ಆಗ ಅವನು ಸಾಮ್ಯರೂಪ ವಾಗಿ--ಬೆಯೋರನ ಮಗನಾದ ಬಿಳಾಮನು ಹೇಳಿದ್ದು, ತೆರೆದ ಕಣ್ಣುಳ್ಳ ಪುರುಷನು ಹೇಳಿದ್ದು.

4 He saith, who heareth the words of ùGod, who seeth the vision of the Almighty, who falleth down, and who hath his eyes open:ದೇವರ ಮಾತು ಗಳನ್ನು ಕೇಳಿದವನೂ ಸರ್ವಶಕ್ತನ ದರ್ಶನವನ್ನು ನೋಡಿದವನೂ ಪರವಶನಾಗಿ ತೆರೆದ ಕಣ್ಣುಳ್ಳವನೂ ಹೇಳಿದ್ದು--

5 How goodly are thy tents, Jacob, and thy tabernacles, Israel!ಓ ಯಾಕೋಬೇ, ನಿನ್ನ ಡೇರೆಗಳು, ಇಸ್ರಾಯೇಲೇ, ನಿನ್ನ ಗುಡಾರಗಳು, ಎಷ್ಟು ಉತ್ತಮ ವಾಗಿವೆ!

6 Like valleys are they spread forth, like gardens by the river side, Like aloe-trees which Jehovah hath planted, like cedars beside the waters.ಅವು ಕಣಿವೆಗಳ ಹಾಗೆ ವಿಸ್ತರಿಸಿ ಅವೆ; ನದಿ ತೀರದಲ್ಲಿರುವ ತೋಟಗಳ ಹಾಗೆಯೂ ಕರ್ತನು ನೆಟ್ಟ ಅಗರು ಮರಗಳ ಹಾಗೆಯೂ ನೀರಿನ ಬಳಿ ಯಲ್ಲಿರುವ ದೇವದಾರುಗಳ ಹಾಗೆಯೂ ಇರುತ್ತವೆ.

7 Water shall flow out of his buckets, and his seed shall be in great waters, And his king shall be higher than Agag, and his kingdom shall be exalted.ತನ್ನ ತೊಟ್ಟಿಗಳಿಂದ ನೀರು ಹರಿಯಮಾಡುವನು; ಅವನ ಸಂತತಿಯೂ ಅನೇಕ ಜಲಗಳಲ್ಲಿ ಇರುವದು; ಅವನ ಅರಸನು ಅಗಾಗನಿಗಿಂತ ಉನ್ನತವಾಗಿರುವನು; ಅವನ ರಾಜ್ಯವು ಘನತೆಗೇರಿರುವದು.

8 ùGod brought him out of Egypt; he hath as it were the strength of a buffalo. He shall consume the nations his enemies, and break their bones, and with his arrows shall smite [them] in pieces.ದೇವರು ಅವನನ್ನು ಐಗುಪ್ತದಿಂದ ಹೊರಗೆ ತಂದನು. ಒಂದು ಕೊಂಬುಳ್ಳ ಪ್ರಾಣಿಯಂತೆ ಬಲ ಅವನಿಗೆ ಉಂಟು. ಅವನು ತನ್ನ ವೈರಿಗಳಾಗಿರುವ ಜನಾಂಗಗಳನ್ನು ತಿಂದು ಅವರ ಎಲುಬುಗಳನ್ನು ಚೂರು ಮಾಡಿ ತನ್ನ ಬಾಣ ಗಳಿಂದ ಗಾಯಮಾಡುವನು.

9 He stooped, he lay down like a lion, and like a lioness: who will stir him up? Blessed is he that blesseth thee, and cursed is he that curseth thee.ಅವನು ಸಿಂಹದ ಹಾಗೆಯೂ ದೊಡ್ಡ ಸಿಂಹದ ಹಾಗೆಯೂ ಬಾಗಿ ಮಲಗುತ್ತಾನೆ; ಅವನನ್ನು ಎಬ್ಬಿಸುವವರು ಯಾರು? ನಿನ್ನನ್ನು ಆಶೀರ್ವದಿಸುವವರಿಗೆ ಆಶೀರ್ವಾದ, ನಿನ್ನನ್ನು ಶಪಿಸುವವರಿಗೆ ಶಾಪ ಉಂಟು.

10 Then Balak's anger was kindled against Balaam, and he smote his hands together; and Balak said to Balaam, I called thee to curse mine enemies, and behold, thou hast altogether blessed [them] these three times!ಆಗ ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು ಚಪ್ಪಾಳೆ ಹೊಡೆದು ಅವನಿಗೆ--ನನ್ನ ಶತ್ರುಗಳನ್ನು ಶಪಿಸುವದಕ್ಕೆ ನಿನ್ನನ್ನು ಕರೆದೆನು; ಆದರೆ ಇಗೋ, ನೀನು ಈ ಮೂರುಸಾರಿ ಆಶೀರ್ವದಿಸೇ ಆಶೀರ್ವದಿಸಿದಿ.

11 And now flee thou to thy place; I said I would very highly honour thee, and behold, Jehovah has kept thee back from honour.ಈಗ ನಿನ್ನ ಸ್ಥಳಕ್ಕೆ ಓಡಿಹೋಗು; ನಾನು ನಿನ್ನನ್ನು ಬಹು ಘನಪಡಿಸ ಬೇಕೆಂದು ಅಂದುಕೊಂಡೆನು; ಆದರೆ ಇಗೋ, ಕರ್ತನು ನಿನಗೆ ಘನಬಾರದಂತೆ ತಡೆದಿದ್ದಾನೆ ಅಂದನು.

12 And Balaam said to Balak, Did I not also speak to thy messengers whom thou sentest to me, saying,ಬಿಳಾಮನು ಬಾಲಾಕನಿಗೆ--ನೀನು ನನ್ನ ಬಳಿಗೆ ಕಳುಹಿಸಿದ ದೂತರಿಗೆ--

13 If Balak gave me his house full of silver and gold, I could not go beyond the commandment of Jehovah to do good or bad out of my heart: what Jehovah shall say, that will I speak?ಬಾಲಾಕನು ನನಗೆ ತನ್ನ ಮನೆ ತುಂಬ ಬೆಳ್ಳಿ ಬಂಗಾರಗಳನ್ನು ಕೊಟ್ಟರೂ ನನ್ನ ಹೃದಯದಿಂದ ಒಳ್ಳೇದನ್ನಾದರೂ ಕೆಟ್ಟದ್ದನ್ನಾದರೂ ಮಾಡುವದಕ್ಕೆ ಕರ್ತನ ಆಜ್ಞೆಯನ್ನು ವಿಾರಲಾರೆನು; ಕರ್ತನು ಏನು ಹೇಳುತ್ತಾನೋ ಅದನ್ನು ಹೇಳುವೆನೆಂದು ನಾನು ಹೇಳಲಿಲ್ಲವೋ? ಇಗೋ, ನನ್ನ ಜನರ ಬಳಿಗೆ ಹೋಗುತ್ತೇನೆ;

14 And now behold, I go to my people: come, I will admonish thee what this people will do to thy people at the end of days.ಬಾ, ಈ ಜನರು ನಿನ್ನ ಜನರಿಗೆ ಕಡೇ ದಿವಸಗಳಲ್ಲಿ ಏನು ಮಾಡುವರೋ ಅದನ್ನು ನಿನಗೆ ತಿಳಿಸುವೆನು ಅಂದನು.

15 And he took up his parable, and said, Balaam the son of Beor saith, and the man of opened eye saith,ಆಗ ಅವನು ಸಾಮ್ಯ ರೂಪವಾಗಿ--ಬೆಯೋರನ ಮಗನಾದ ಬಿಳಾಮನು ಹೇಳಿದ್ದು--ತೆರೆದ ಕಣ್ಣುಳ್ಳ ಮನುಷ್ಯನು ಹೇಳಿದ್ದು.

16 He saith, who heareth the words of ùGod, who knoweth the knowledge of the Most High, Who seeth the vision of the Almighty, who falleth down, and who hath his eyes open:ದೇವರ ಮಾತುಗಳನ್ನು ಕೇಳಿದವನೂ ಮಹೋನ್ನ ತನ ಜ್ಞಾನವನ್ನು ತಿಳಿದವನೂ ಸರ್ವಶಕ್ತನ ದರ್ಶನವನ್ನು ನೋಡಿದವನೂ ಪರವಶನಾಗಿದ್ದು ತೆರೆದ ಕಣ್ಣುಳ್ಳ ವನೂ ಹೇಳಿದ್ದು--

17 I shall see him, but not now; I shall behold him, but not nigh: There cometh a Star out of Jacob, and a Sceptre shall rise out of Israel, and he shall cut in pieces the corners of Moab, and destroy all the sons of tumult.ನಾನು ಅವನನ್ನು ನೋಡು ವೆನು, ಈಗಲ್ಲ; ಅವನನ್ನು ದೃಷ್ಟಿಸುವೆನು, ಸವಿಾಪದಲ್ಲಿ ಅಲ್ಲ; ಯಾಕೋಬನಿಂದ ನಕ್ಷತ್ರ ಉದಯಿಸುವದು; ಇಸ್ರಾಯೇಲ್‌ನಿಂದ ರಾಜದಂಡ ಏಳುವದು; ಅದು ಮೋವಾಬಿನ ಮೂಲೆಗಳನ್ನು ಹೊಡೆದು ಶೇತನ ಸಕಲ ಮಕ್ಕಳನ್ನು ಸಂಹರಿಸುವದು.

18 And Edom shall be a possession, and Seir a possession, -- they, his enemies; but Israel will do valiantly.ಎದೋಮು ಸ್ವಾಸ್ತ್ಯವಾಗುವದು; ಸೇಯಾರು ತನ್ನ ಶತ್ರುಗಳಿಗೆ ಸ್ವಾಸ್ತ್ಯವಾಗುವದು; ಮತ್ತು ಇಸ್ರಾಯೇಲು ಪರಾಕ್ರಮ ಕಾರ್ಯ ಮಾಡುವದು,

19 And one out of Jacob shall have dominion, and will destroy out of the city what remaineth.ಯಾಕೋಬನೊಳಗಿಂದ ಒಬ್ಬನು ಬಂದು ಆಳುವನು; ಅವನು ಪಟ್ಟಣದಲ್ಲಿ ಉಳಿದದ್ದನ್ನು ನಾಶಮಾಡುವನು ಎಂದು ಹೇಳಿದನು.

20 And he saw Amalek, and took up his parable, and said, Amalek is the first of the nations, but his latter end shall be for destruction.ತರುವಾಯ ಅವನು ಅಮಾಲೇಕ್ಯರನ್ನು ನೋಡಿ ಸಾಮ್ಯರೂಪವಾಗಿ--ಜನಾಂಗಗಳಲ್ಲಿ ಮೊದಲನೆ ಯವನೇ ಅಮಾಲೇಕ್ಯನು; ಆದರೆ ಅವನ ಅಂತ್ಯವು ಸದಾಕಾಲಕ್ಕೆ ನಾಶವಾಗುವದು ಅಂದನು.

21 And he saw the Kenites, and took up his parable, and said, Firm is thy dwelling-place, and thy nest fixed in the rock;ಬಳಿಕ ಕೇನ್ಯರನ್ನು ಅವನು ನೋಡಿ ಸಾಮ್ಯರೂಪವಾಗಿ--ನಿನ್ನ ನಿವಾಸವು ಬಲವಾಗಿದೆ. ನಿನ್ನ ಗೂಡನ್ನು ಬಂಡೆಯಲ್ಲಿ ಹಾಕಿದಿ.

22 But the Kenite shall be consumed, until Asshur shall carry thee away captive.ಆದಾಗ್ಯೂ ಅಶ್ಶೂರ್ಯರನು ನಿನ್ನನ್ನು ಸೆರೆಯಾಗಿ ಒಯ್ಯುವ ವರೆಗೆ ಕೇನ್ಯನು ಹಾಳಾಗುವನು ಅಂದನು.

23 And he took up his parable, and said, Alas! Who shall live when ùGod doeth this?ಇದಲ್ಲದೆ ಅವನು ಸಾಮ್ಯರೂಪವಾಗಿಅಯ್ಯೋ! ದೇವರು ಇದನ್ನು ಮಾಡುವಾಗ ಯಾರು ಬದುಕುವರು?

24 And ships shall come from the coast of Chittim, and afflict Asshur, and afflict Eber, and he also shall be for destruction.ಕಿತ್ತೀಮಿನ ತೀರದಿಂದ ಹಡಗುಗಳು ಬಂದು ಅಶ್ಶೂರ್ಯರನ್ನೂ ಏಬೆರರನ್ನೂ ಶ್ರಮೆ ಪಡಿಸುವವು. ಅವನು ಸಹ ಸದಾಕಾಲಕ್ಕೂ ನಾಶವಾಗು ವನು ಎಂದು ಹೇಳಿದನು.

25 And Balaam rose up, and went and returned to his place; and Balak also went his way.ಆಗ ಬಿಳಾಮನು ಎದ್ದು ತನ್ನ ಸ್ಥಳಕ್ಕೆ ತಿರಿಗಿ ಹೋದನು. ಬಾಲಾಕನು ಸಹ ತನ್ನ ಮಾರ್ಗವಾಗಿ ಹೋದನು.

Kannada Bible