Bible

Numbers 22 - WEB (Kannada)

1 The children of Israel traveled, and encamped in the plains of Moab beyond the Jordan at Jericho.1 ಇಸ್ರಾಯೇಲ್‌ ಮಕ್ಕಳು ಹೊರಟು ಯೊರ್ದನಿಗೆ ಈಚೆಯಲ್ಲಿರುವ ಮೋವಾ ಬಿನ ಬೈಲುಗಳಲ್ಲಿ ಯೆರಿಕೋ ಪಟ್ಟಣಕ್ಕೆದುರಾಗಿ ಇಳುಕೊಂಡರು.

2 Balak the son of Zippor saw all that Israel had done to the Amorites.ಇಸ್ರಾಯೇಲ್ಯರು ಅಮೋರಿಯರಿಗೆ ಮಾಡಿದ್ದನ್ನೆಲ್ಲಾ ಚಿಪ್ಪೋರನ ಮಗನಾದ ಬಾಲಾಕನು ನೋಡಿದನು.

3 Moab was sore afraid of the people, because they were many: and Moab was distressed because of the children of Israel.ಆ ಜನರು ಬಹುಮಂದಿಯಾದದರಿಂದ ಮೋವಾಬಿನವರು ಅವರಿಗೆ ಬಹಳವಾಗಿ ಅಂಜಿದರು; ಮೋವಾಬಿ ನವರು ಇಸ್ರಾಯೇಲ್‌ ಮಕ್ಕಳನ್ನು ಕಂಡು ದಿಗಿಲು ಪಟ್ಟರು.

4 Moab said to the elders of Midian, Now will this multitude lick up all that is round about us, as the ox licks up the grass of the field. Balak the son of Zippor was king of Moab at that time.ಆದದರಿಂದ ಮೋವಾಬ್ಯರು ಮಿದ್ಯಾನ್ಯರ ಹಿರಿಯರಿಗೆ ಹೇಳಿದ್ದೇನಂದರೆ--ಈಗ ಈ ಸಮೂಹವು ನಮ್ಮ ಸುತ್ತಲಿರುವದನ್ನೆಲ್ಲಾ ಎತ್ತು ಅಡವಿಯ ಹುಲ್ಲನ್ನು ಮೇಯುವಂತೆ ಮೇಯುವದು. ಆ ಕಾಲದಲ್ಲಿ ಚಿಪ್ಪೋ ರನ ಮಗನಾದ ಬಾಲಾಕನು ಮೋವಾಬ್ಯರ ಅರಸ ನಾಗಿದ್ದನು.

5 He sent messengers to Balaam the son of Beor, to Pethor, which is by the River, to the land of the children of his people, to call him, saying, Behold, there is a people come out from Egypt: behold, they cover the surface of the earth, and they abide over against me.ಇವನು ತನ್ನ ಜನರ ಮಕ್ಕಳ ದೇಶದ ನದಿತೀರದಲ್ಲಿರುವ ಪೆತೋರಿಗೆ ದೂತರನ್ನು ಕಳುಹಿಸಿ ಬೆಯೋರನ ಮಗನಾದ ಬಿಳಾಮನನ್ನು ಕರೆಯಿಸಿ ಹೇಳಿದ್ದೇನಂದರೆ--ಇಗೋ, ಒಂದು ಜನಾಂಗವು ಐಗುಪ್ತದಿಂದ ಹೊರಟಿತು; ಇಗೋ, ಅದು ಭೂಮುಖವನ್ನು ಮುಚ್ಚಿ ನನಗೆದುರಾಗಿ ವಾಸಿಸುತ್ತದೆ.

6 Please come now therefore curse me this people; for they are too mighty for me: peradventure I shall prevail, that we may strike them, and that I may drive them out of the land; for I know that he whom you bless is blessed, and he whom you curse is cursed.ಈಗ ನೀನು ದಯಮಾಡಿ ಬಂದು ಈ ಜನವನ್ನು ನನಗಾಗಿ ಶಪಿಸು; ಅವರು ನನಗಿಂತ ಬಲಿಷ್ಠರಾಗಿದ್ದಾರೆ. ಒಂದು ವೇಳೆ ನಾನು ಗೆದ್ದೇನು, ನಾವು ಅವರನ್ನು ಹೊಡೆದೇವು; ನಾನು ಅವರನ್ನು ದೇಶದೊಳಗಿಂದ ಹೊರಡಿಸೇನು; ನೀನು ಯಾವನನ್ನು ಆಶೀರ್ವದಿಸು ತ್ತೀಯೋ ಅವನು ಆಶೀರ್ವದಿಸಲ್ಪಟ್ಟವನೇ; ನೀನು ಯಾವನನ್ನು ಶಪಿಸುತ್ತೀಯೋ ಅವನು ಶಪಿಸಲ್ಪಟ್ಟವನೇ ಎಂದು ನಾನು ಬಲ್ಲೆನು.

7 The elders of Moab and the elders of Midian departed with the rewards of divination in their hand; and they came to Balaam, and spoke to him the words of Balak.ಆಗ ಮೋವಾಬಿನ ಹಿರಿಯರೂ ಮಿದ್ಯಾನಿನ ಹಿರಿಯರೂ ಕಣಿ ಕೇಳುವದಕ್ಕಾಗಿ ತಮ್ಮ ಕೈಯಲ್ಲಿ ಕಾಣಿಕೆ ಗಳನ್ನು ತಕ್ಕೊಂಡು ಹೋದರು; ಅವರು ಬಿಳಾಮನ ಬಳಿಗೆ ಬಂದು ಅವನಿಗೆ ಬಾಲಾಕನ ಮಾತುಗಳನ್ನು ಹೇಳಿದರು.

8 He said to them, Lodge here this night, and I will bring you word again, as Yahweh shall speak to me: and the princes of Moab abode with Balaam.ಅವನು ಅವರಿಗೆ ಹೇಳಿದ್ದು--ಈ ರಾತ್ರಿ ಇಲ್ಲಿ ಇಳುಕೊಳ್ಳಿರಿ; ಆಗ ಕರ್ತನು ನನಗೆ ಹೇಳುವ ಪ್ರಕಾರ ನಿಮಗೆ ಉತ್ತರವನ್ನು ಕೊಡುವೆನು; ಆದ ಕಾರಣ ಮೋವಾಬಿನ ಪ್ರಭುಗಳು ಬಿಳಾಮನ ಸಂಗಡ ಇಳುಕೊಂಡರು.

9 God came to Balaam, and said, What men are these with you?ದೇವರು ಬಿಳಾಮನ ಬಳಿಗೆ ಬಂದು--ನಿನ್ನ ಸಂಗಡ ಇರುವ ಈ ಮನುಷ್ಯರು ಯಾರು ಅಂದನು.

10 Balaam said to God, Balak the son of Zippor, king of Moab, has sent to me, [saying],ಬಿಳಾ ಮನು ದೇವರಿಗೆ ಹೇಳಿದ್ದೇನಂದರೆ--ಚಿಪ್ಪೋರನ ಮಗನೂ ಮೋವಾಬಿನ ಅರಸನೂ ಬಾಲಾಕನು ನನ್ನ ಬಳಿಗೆ ಹೇಳಿಕಳುಹಿಸಿದ್ದೇನಂದರೆ--

11 Behold, the people that is come out of Egypt, it covers the surface of the earth: now, come curse me them; peradventure I shall be able to fight against them, and shall drive them out.ಇಗೋ, ಐಗುಪ್ತ ದೇಶದಿಂದ ಹೊರಟಿರುವ ಒಂದು ಜನಾಂಗವು ಭೂಮುಖವನ್ನು ಆವರಿಸಿಕೊಂಡಿದೆ; ಈಗ ನೀನು ಬಂದು ನನಗೋಸ್ಕರ ಅದನ್ನು ಶಪಿಸು; ಒಂದು ವೇಳೆ ಅದರ ಸಂಗಡ ಯುದ್ಧಮಾಡಿ ಅದನ್ನು ಹೊರಗೆ ಹಾಕುವದಕ್ಕೆ ನಾನು ಸಮರ್ಥನಾದೇನು ಎಂಬದು.

12 God said to Balaam, You shall not go with them; you shall not curse the people; for they are blessed.ಆಗ ದೇವರು ಬಿಳಾಮನಿಗೆ ಹೇಳಿದ್ದೇನಂದರೆನೀನು ಅವರ ಸಂಗಡ ಹೋಗಬೇಡ; ನೀನು ಆ ಜನವನ್ನು ಶಪಿಸಬೇಡ; ಅದು ಆಶೀರ್ವದಿಸಲ್ಪಟ್ಟಿದೆ.

13 Balaam rose up in the morning, and said to the princes of Balak, Get you into your land; for Yahweh refuses to give me leave to go with you.ಆಗ ಬಿಳಾಮನು ಉದಯದಲ್ಲಿ ಎದ್ದು ಬಾಲಾಕನ ಪ್ರಭುಗಳಿಗೆ--ಕರ್ತನು ನಿಮ್ಮ ಸಂಗಡ ಹೋಗುವದಕ್ಕೆ ನನಗೆ ಅಪ್ಪಣೆ ಕೊಡುವದಿಲ್ಲ. ನೀವು ನಿಮ್ಮ ದೇಶಕ್ಕೆ ಹೋಗಿರಿ ಎಂದು ಹೇಳಲಾಗಿ,

14 The princes of Moab rose up, and they went to Balak, and said, Balaam refuses to come with us.ಮೋವಾಬಿನ ಪ್ರಭುಗಳು ಎದ್ದು ಬಾಲಾಕನ ಬಳಿಗೆ ಬಂದು--ಬಿಳಾಮನು ನಮ್ಮ ಸಂಗಡ ಬರಲೊಲ್ಲನು ಅಂದರು.

15 Balak sent yet again princes, more, and more honorable than they.ಆದರೆ ಬಾಲಾಕನು ತಿರಿಗಿ ಇವರಿಗಿಂತ ಹೆಚ್ಚು ಘನವುಳ್ಳವರಾದ ಅನೇಕ ಪ್ರಭುಗಳನ್ನು ಕಳುಹಿಸಿದನು.

16 They came to Balaam, and said to him, Thus says Balak the son of Zippor, Please let nothing hinder you from coming to me:ಅವರು ಬಿಳಾಮನ ಬಳಿಗೆ ಬಂದು ಅವನಿಗೆ ಹೇಳಿ ದ್ದೇನಂದರೆ--ಚಿಪ್ಪೋರನ ಮಗನಾದ ಬಾಲಾಕನು ಹೀಗೆ ಹೇಳುತ್ತಾನೆ--ನೀನು ದಯಮಾಡಿ ನನ್ನ ಬಳಿಗೆ ಬರುವದಕ್ಕೆ ಯಾವದೂ ಅಡ್ಡಿಮಾಡಬಾರದು.

17 for I will promote you to very great honor, and whatever you say to me I will do. Please come therefore, and curse this people for me.ನಾನು ನಿನ್ನನ್ನು ಬಹಳವಾಗಿ ಘನಪಡಿಸುವೆನು; ನೀನು ನನಗೆ ಹೇಳುವದನ್ನೆಲ್ಲಾ ನಾನು ಮಾಡುವೆನು; ಆದಕಾರಣ ನೀನು ದಯಮಾಡಿ ಬಂದು ಈ ಜನರನ್ನು ನನಗಾಗಿ ಶಪಿಸು ಅಂದನು.

18 Balaam answered the servants of Balak, If Balak would give me his house full of silver and gold, I can't go beyond the word of Yahweh my God, to do less or more.ಬಿಳಾಮನು ಪ್ರತ್ಯುತ್ತರ ವಾಗಿ ಬಾಲಾಕನ ಸೇವಕರಿಗೆ ಹೇಳಿದ್ದೇನಂದರೆ--ಬಾಲಾಕನು ನನಗೆ ತನ್ನ ಮನೆ ತುಂಬ ಬೆಳ್ಳಿಯನ್ನು ಬಂಗಾರವನ್ನು ಕೊಟ್ಟರೂ ನಾನು ನನ್ನ ದೇವರಾಗಿರುವ ಕರ್ತನ ಮಾತನ್ನು ವಿಾರಿ ಹೆಚ್ಚು ಕಡಿಮೆ ಏನನ್ನೂ ಮಾಡಲಾರೆನು.

19 Now therefore, please wait also here this night, that I may know what Yahweh will speak to me more.ಆದರೆ ಈಗ ಕರ್ತನು ನನಗೆ ಮತ್ತೇನು ಹೇಳುವನೆಂದು ನಾನು ತಿಳುಕೊಳ್ಳುವ ಹಾಗೆ ನೀವು ಸಹ ದಯಮಾಡಿ ಈ ರಾತ್ರಿ ಇಲ್ಲಿ ಇಳುಕೊಳ್ಳಿರಿ ಅಂದನು.

20 God came to Balaam at night, and said to him, If the men are come to call you, rise up, go with them; but only the word which I speak to you, that shall you do.ಆಗ ದೇವರು ಬಿಳಾಮನ ಬಳಿಗೆ ರಾತ್ರಿಯಲ್ಲಿ ಬಂದು ಅವನಿಗೆ ಹೇಳಿದ್ದೇನಂದರೆ--ಈ ಮನುಷ್ಯರು ನಿನ್ನನ್ನು ಕರೆಯುವದಕ್ಕೆ ಬಂದಿದ್ದರೆ ನೀನು ಎದ್ದು ಅವರ ಸಂಗಡ ಹೋಗು; ಆದರೆ ನಾನು ನಿನಗೆ ಹೇಳುವ ಮಾತೇ ನೀನು ಆಡಬೇಕು ಅಂದನು.

21 Balaam rose up in the morning, and saddled his donkey, and went with the princes of Moab.ಬಿಳಾಮನು ಬೆಳಿಗ್ಗೆ ಎದ್ದು ತನ್ನ ಕತ್ತೆಯನ್ನು ಕಟ್ಟಿ ಮೋವಾಬಿನ ಪ್ರಭುಗಳ ಸಂಗಡ ಹೋದನು.

22 God's anger was kindled because he went; and the angel of Yahweh placed himself in the way for an adversary against him. Now he was riding on his donkey, and his two servants were with him.ಅವನು ಹೋದದರಿಂದ ದೇವರ ಕೋಪವು ಉರಿಯಿತು. ಕರ್ತನ ದೂತನು ಅವನಿಗೆ ಎದುರಾಳಿ ಯಾಗಿ ಮಾರ್ಗದಲ್ಲಿ ನಿಂತುಕೊಂಡನು; ಆದರೆ ಅವನು ತನ್ನ ಕತ್ತೆಯ ಮೇಲೆ ಹತ್ತಿಕೊಂಡಿದ್ದನು; ಅವನ ಇಬ್ಬರು ಆಳುಗಳು ಅವನ ಸಂಗಡ ಇದ್ದರು.

23 The donkey saw the angel of Yahweh standing in the way, with his sword drawn in his hand; and the donkey turned aside out of the way, and went into the field: and Balaam struck the donkey, to turn her into the way.ಕತ್ತೆಯು ಮಾರ್ಗದಲ್ಲಿ ನಿಂತಿದ್ದ ಕರ್ತನ ದೂತನನ್ನೂ ಅವನ ಕೈಯಲ್ಲಿರುವ ಬಿಚ್ಚು ಕತ್ತಿಯನ್ನೂ ನೋಡಿ ಮಾರ್ಗದಿಂದ ವಾರೆಯಾಗಿ ಹೊಲದೊಳಗೆ ಹೋಯಿತು; ಆಗ ಬಿಳಾಮನು ಕತ್ತೆಯನ್ನು ಮಾರ್ಗದೊಳಗೆ ತಿರುಗಿಸು ವದಕ್ಕೆ ಅದನ್ನು ಹೊಡೆದನು.

24 Then the angel of Yahweh stood in a narrow path between the vineyards, a wall being on this side, and a wall on that side.ಆದರೆ ಕರ್ತನ ದೂತನು ದ್ರಾಕ್ಷೇತೋಟಗಳ ಹಾದಿಯಲ್ಲಿ ಈಚೆ ಆಚೆ ಗೋಡೆ ಇದ್ದಲ್ಲಿ ನಿಂತನು.

25 The donkey saw the angel of Yahweh, and she thrust herself to the wall, and crushed Balaam's foot against the wall: and he struck her again.ಕತ್ತೆಯು ಕರ್ತನ ದೂತನನ್ನು ನೋಡಿ ಗೋಡೆಗೆ ಒತ್ತಿಕೊಂಡು ಬಿಳಾಮನ ಕಾಲನ್ನು ಗೋಡೆಗೆ ಒತ್ತಿ ಹಾಕಿತು; ಅವನು ಅದನ್ನು ಹೆಚ್ಚಾಗಿ ಹೊಡೆದನು.

26 The angel of Yahweh went further, and stood in a narrow place, where was no way to turn either to the right hand or to the left.ಆಗ ಕರ್ತನ ದೂತನು ಮುಂದೆ ಹೋಗಿ ಬಲಕ್ಕೂ ಎಡಕ್ಕೂ ತಿರುಗುವದಕ್ಕೆ ಮಾರ್ಗವಿಲ್ಲದ ಇಕ್ಕಟ್ಟಿನ ಸ್ಥಳದಲ್ಲಿ ನಿಂತನು.

27 The donkey saw the angel of Yahweh, and she lay down under Balaam: and Balaam's anger was kindled, and he struck the donkey with his staff.ಕತ್ತೆಯು ಕರ್ತನ ದೂತನನ್ನು ನೋಡಿ ಬಿಳಾಮನ ಕೆಳಗೆ ಬಿತ್ತು; ಆದಕಾರಣ ಬಿಳಾಮನು ಕೋಪಿಸಿಕೊಂಡು ಕತ್ತೆಯನ್ನು ಬೆತ್ತದಿಂದ ಹೊಡೆದನು.

28 Yahweh opened the mouth of the donkey, and she said to Balaam, What have I done to you, that you have struck me these three times?ಆಗ ಕರ್ತನು ಕತ್ತೆಯ ಬಾಯನ್ನು ತೆರೆದನು; ಅದು ಬಿಳಾಮನಿಗೆ--ಈಗ ನನ್ನನ್ನು ಮೂರುಸಾರಿ ಹೊಡೆಯುವ ಹಾಗೆ ನಾನು ನಿನಗೆ ಏನು ಮಾಡಿದೆನು ಎಂದು ಹೇಳಿತು.

29 Balaam said to the donkey, Because you have mocked me, I would there were a sword in my hand, for now I had killed you.ಬಿಳಾಮನು ಕತ್ತೆಗೆ--ನೀನು ನನಗೆ ಹಾಸ್ಯಮಾಡಿದಿಯಲ್ಲಾ? ನನ್ನ ಕೈಯಲ್ಲಿ ಕತ್ತಿ ಇದ್ದರೆ ನಾನು ಈಗಲೇ ನಿನ್ನನ್ನು ಕೊಂದುಹಾಕುತ್ತಿದ್ದೆ ಅಂದನು.

30 The donkey said to Balaam, Am I not your donkey, on which you have ridden all your life long to this day? was I ever wont to do so to you? and he said, No.ಕತ್ತೆಯು ಬಿಳಾಮನಿಗೆ ಹೇಳಿದ್ದು--ನಾನು ನಿನ್ನದಾ ದಂದಿನಿಂದ ಈ ದಿವಸದ ವರೆಗೂ ನೀನು ಹತ್ತಿಕೊಂಡ ನಿನ್ನ ಕತ್ತೆಯು ನಾನಲ್ಲವೋ? ನಾನು ಎಂದಾದರೂ ನಿನಗೆ ಈ ಪ್ರಕಾರ ಮಾಡಿದೆನೋ ಅಂದಿತು. ಅದಕ್ಕ ವನು--ಇಲ್ಲ ಅಂದನು.

31 Then Yahweh opened the eyes of Balaam, and he saw the angel of Yahweh standing in the way, with his sword drawn in his hand; and he bowed his head, and fell on his face.ಆಗ ಕರ್ತನು ಬಿಳಾಮನ ಕಣ್ಣುಗಳನ್ನು ತೆರೆದನು; ಅವನು ಮಾರ್ಗದಲ್ಲಿ ನಿಂತಿದ್ದ ಕರ್ತನ ದೂತನನ್ನೂ ಆತನ ಕೈಯಲ್ಲಿರುವ ಬಿಚ್ಚು ಕತ್ತಿಯನ್ನೂ ನೋಡಿ ಬೋರಲು ಬಿದ್ದನು.

32 The angel of Yahweh said to him, Why have you struck your donkey these three times? behold, I am come forth for an adversary, because your way is perverse before me:ಕರ್ತನ ದೂತನು ಅವನಿಗೆ ಹೇಳಿದ್ದು--ನಿನ್ನ ಕತ್ತೆಯನ್ನು ಈಗ ಮೂರು ಸಾರಿ ಹೊಡೆದದ್ದು ಯಾಕೆ? ಇಗೋ, ನಿನ್ನ ಮಾರ್ಗ ನನ್ನ ಮುಂದೆ ವಕ್ರವಾಗಿರುವದರಿಂದ ನಾನು ಎದುರಾಳಿ ಯಾಗಿ ಹೊರಟೆನು.

33 and the donkey saw me, and turned aside before me these three times: unless she had turned aside from me, surely now I had even slain you, and saved her alive.ಆ ಕತ್ತೆಯು ನನ್ನನ್ನು ನೋಡಿ ನನ್ನ ಮುಂದೆ ಈಗ ಮೂರು ಸಾರಿ ವಾರೆಯಾಗಿ ಹೋಯಿತು; ಅದು ನನ್ನ ಮುಂದೆ ವಾರೆಯಾಗಿ ಹೋಗದಿದ್ದರೆ ನಿಶ್ಚಯವಾಗಿ ಆಗಲೇ ನಿನ್ನನ್ನು ಕೊಂದು ಹಾಕಿ ಅದನ್ನು ಪ್ರಾಣದಿಂದ ಉಳಿಸುತ್ತಿದ್ದೆನು ಅಂದನು.

34 Balaam said to the angel of Yahweh, I have sinned; for I didn't know that you stood in the way against me: now therefore, if it displease you, I will get me back again.ಆಗ ಬಿಳಾಮನು ಕರ್ತನ ದೂತನಿಗೆ ಹೇಳಿದ್ದುನಾನು ಪಾಪಮಾಡಿದ್ದೇನೆ; ನೀನು ನನಗೆದುರಾಗಿ ಮಾರ್ಗದಲ್ಲಿ ನಿಂತಿದ್ದಿ ಎಂದು ನನಗೆ ತಿಳಿಯಲಿಲ್ಲ; ಹೀಗಿರಲಾಗಿ ಅದು ನಿನ್ನ ದೃಷ್ಟಿಯಲ್ಲಿ ಕೆಟ್ಟದ್ದಾದರೆ ನಾನು ತಿರುಗಿ ಹಿಂದಕ್ಕೆ ಹೋಗುತ್ತೇನೆ ಅಂದನು.

35 The angel of Yahweh said to Balaam, Go with the men; but only the word that I shall speak to you, that you shall speak. So Balaam went with the princes of Balak.ಆದರೆ ಕರ್ತನ ದೂತನು ಬಿಳಾಮನಿಗೆ--ಈ ಮನುಷ್ಯರ ಸಂಗಡ ಹೋಗು; ಹೋದರೂ ನಾನು ನಿನಗೆ ಹೇಳುವದನ್ನೇ ಹೇಳಬೇಕು ಅಂದನು. ಹಾಗೆಯೇ ಬಿಳಾಮನು ಬಾಲಾಕನ ಪ್ರಭುಗಳ ಸಂಗಡ ಹೋದನು.

36 When Balak heard that Balaam was come, he went out to meet him to the City of Moab, which is on the border of the Arnon, which is in the utmost part of the border.ಬಿಳಾಮನು ಬಂದನೆಂದು ಬಾಲಾಕನು ಕೇಳಿದಾಗ ಅವನು ಕಡೇ ಮೇರೆಯಲ್ಲಿರುವ ಅರ್ನೋನಿನ ಆಚೆ ಯಲ್ಲಿದ್ದ ಮೋವಾಬಿನ ಪಟ್ಟಣಕ್ಕೆ ಅವನಿಗೆದುರಾಗಿ ಹೊರಟನು.

37 Balak said to Balaam, Didn't I earnestly send to you to call you? why didn't you come to me? am I not able indeed to promote you to honor?ಬಾಲಾಕನು ಬಿಳಾಮನಿಗೆ ಹೇಳಿದ್ದೇ ನಂದರೆ--ನಾನು ನಿನ್ನನ್ನು ತೀವ್ರವಾಗಿ ಕರೇ ಕಳುಹಿಸ ಲಿಲ್ಲವೋ? ನೀನು ನನ್ನ ಬಳಿಗೆ ಯಾಕೆ ಬರಲಿಲ್ಲ? ನಾನು ನಿನ್ನನ್ನು ಘನಪಡಿಸಲು ನಿಶ್ಚಯವಾಗಿ ಸಾಮರ್ಥ್ಯ ವುಳ್ಳವನಲ್ಲವೋ?

38 Balaam said to Balak, Behold, I have come to you: have I now any power at all to speak anything? the word that God puts in my mouth, that shall I speak.ಬಿಳಾಮನು ಬಾಲಾಕನಿಗೆ ಹೇಳಿದ್ದು--ಇಗೋ, ನಾನು ನಿನ್ನ ಬಳಿಗೆ ಬಂದಿದ್ದೇನೆ; ಈಗ ಏನಾದರೂ ಹೇಳುವದಕ್ಕೆ ನನಗೆ ಯಾವ ಶಕ್ತಿಯಾದರೂ ಇದೆಯೋ? ನನ್ನಿಂದಾಗುವದೋ? ದೇವರು ನನ್ನಿಂದ ಆಡಿಸಿದ ಮಾತನ್ನೇ ಹೇಳುವೆನು.

39 Balaam went with Balak, and they came to Kiriath Huzoth.ಆಗ ಬಿಳಾಮನು ಬಾಲಾಕನ ಸಂಗಡ ಹೋದನು; ಇಬ್ಬರು ಕಿರ್ಯತ್‌ಹುಚೋತಿಗೆ ಬಂದರು.

40 Balak sacrificed oxen and sheep, and sent to Balaam, and to the princes who were with him.ಬಾಲಾ ಕನು ಎತ್ತುಗಳನ್ನೂ ಕುರಿಗಳನ್ನೂ ಅರ್ಪಿಸಿದನು. ಬಿಳಾಮನನ್ನೂ ಅವನ ಸಂಗಡ ಇದ್ದ ಪ್ರಭುಗಳನ್ನೂ ಕಳುಹಿಸಿದನು.

41 It happened in the morning, that Balak took Balaam, and brought him up into the high places of Baal; and he saw from there the utmost part of the people.ಮರುದಿವಸದಲ್ಲಿ ಬಾಲಾಕನು ಬಿಳಾಮನನ್ನು ತಕ್ಕೊಂಡು ಬಾಳನ ಎತ್ತರವಾದ ಸ್ಥಳಕ್ಕೆ ಹತ್ತಿಸಿದನು; ಅಲ್ಲಿಂದ ಅವನು ಜನರ ಕಡೇ ಭಾಗವನ್ನು ನೋಡಿದನು.

Kannada Bible