Nahum 1 - BBE (Kannada)
1 The word about Nineveh. The book of the vision of Nahum the Elkoshite.ನಿನೆವೆಯ ಭಾರವು. ಎಲ್ಕೋಷಿನವನಾದ ನಹೂಮನ ದರ್ಶನದ ಪುಸ್ತಕವು.
2 The Lord is a God who takes care of his honour and gives punishment for wrong; the Lord gives punishment and is angry; the Lord sends punishment on those who are against him, being angry with his haters.ಕರ್ತನು ರೋಷವುಳ್ಳಂಥ, ಮುಯ್ಯಿಗೆಮುಯ್ಯಿ ಕೊಡುವಂಥ ದೇವರು; ಕರ್ತನು ಮುಯ್ಯಿಗೆ ಮುಯ್ಯಿ ಕೊಡುವಂಥ ಉಗ್ರವುಳ್ಳಾತನು, ಕರ್ತನು ತನ್ನ ವೈರಿ ಗಳಿಗೆ ಮುಯ್ಯಿಗೆಮುಯ್ಯಿ ತೀರಿಸಿ ತನ್ನ ಶತ್ರುಗಳ ಮೇಲೆ ಕೋಪವನ್ನು ಇಟ್ಟುಕೊಳ್ಳುತ್ತಾನೆ.
3 The Lord is slow to get angry and great in power, and will not let the sinner go without punishment: the way of the Lord is in the wind and the storm, and the clouds are the dust of his feet.ಕರ್ತನು ಕೋಪಿಸುವದರಲ್ಲಿ ನಿಧಾನ ಮಾಡುವವನಾದರೂ ಶಕ್ತಿಯಲ್ಲಿ ಮಹತ್ತಾದವನು; ದುರ್ಮಾರ್ಗದವರನ್ನು ಎಷ್ಟು ಮಾತ್ರಕ್ಕೂ ನಿರ್ಮಲರೆಂದು ತೀರ್ಮಾನಿಸ ದವನು; ಕರ್ತನ ಮಾರ್ಗವು ಸುಳಿಗಾಳಿಯಲ್ಲಿಯೂ ಬಿರುಗಾಳಿಯಲ್ಲಿಯೂ ಉಂಟು; ಮೇಘಗಳು ಆತನ ಕಾಲುಗಳ ಧೂಳೇ.
4 He says sharp words to the sea and makes it dry, drying up all the rivers: Bashan is feeble, and Carmel, and the flower of Lebanon is without strength.ಆತನು ಸಮುದ್ರವನ್ನು ಗದರಿಸಿ ಅದನ್ನು ಒಣಗುವಂತೆ ಮಾಡುತ್ತಾನೆ; ನದಿಗಳನ್ನೆಲ್ಲಾ ಬತ್ತಿಹೋಗುವಂತೆ ಮಾಡುತ್ತಾನೆ; ಬಾಷಾನೂ ಕರ್ಮೆಲೂ ಬಾಡಿಹೋಗುತ್ತವೆ, ಲೆಬನೋನಿನ ಹೂವು ಬಾಡಿಹೋಗುತ್ತದೆ.
5 The mountains are shaking because of him, and the hills flowing away; the earth is falling to bits before him, the world and all who are in it.ಬೆಟ್ಟಗಳು ಆತನ ಮುಂದೆ ಕಂಪಿಸುತ್ತವೆ; ಗುಡ್ಡಗಳು ಕರಗುತ್ತವೆ; ಭೂಮಿಯೂ ಹೌದು, ಲೋಕವೂ ಅದರಲ್ಲಿ ವಾಸಿಸು ವವರೆಲ್ಲರೂ ಆತನ ಮುಂದೆ ಸುಟ್ಟು ಹೋಗುವರು.
6 Who may keep his place before his wrath? and who may undergo the heat of his passion? his wrath is let loose like fire and the rocks are broken open by him.ಆತನ ರೌದ್ರದ ಎದುರಿಗೆ ಯಾರು ನಿಲ್ಲುವರು? ಆತನ ರೋಷಾಗ್ನಿಗೆ ಯಾರು ನಿಂತುಕೊಳ್ಳುವರು? ಆತನ ಉಗ್ರವು ಬೆಂಕಿಯ ಹಾಗೆ ಸುರಿಸಲ್ಪಟ್ಟಿದೆ; ಬಂಡೆಗಳು ಆತನಿಂದ ಕೆಡವಲ್ಪಟ್ಟಿವೆ.
7 The Lord is good, a strong place in the day of trouble; and he has knowledge of those who take him for their safe cover.ಕರ್ತನು ಒಳ್ಳೆಯವನು; ಇಕ್ಕಟ್ಟಿನ ದಿನದಲ್ಲಿ ಬಲವಾದ ಕೋಟೆಯಾಗಿದ್ದಾನೆ; ತನ್ನಲ್ಲಿ ನಂಬಿಕೆಯಿಡು ವವರನ್ನು ಬಲ್ಲನು.
8 But like water overflowing he will take them away; he will put an end to those who come up against him, driving his haters into the dark.ಆದರೆ ಮೇರೆ ವಿಾರುವ ಪ್ರಳಯ ದಿಂದ ಅದರ ಸ್ಥಳವನ್ನು ಮುಗಿಸಿಬಿಡುವನು; ಕತ್ತಲೆ ಆತನ ಶತ್ರುಗಳನ್ನು ಹಿಂದಟ್ಟುವದು.
9 What are you designing against the Lord? he will put an end to it: his haters will not come up again a second time.ಕರ್ತನಿಗೆ ವಿರೋಧವಾಗಿ ಏನು ಯೋಚಿಸುತ್ತೀರಿ? ಆತನು ಸಂಪೂರ್ಣವಾಗಿ ಮುಗಿಸಿಬಿಡುತ್ತಾನೆ; ಇಕ್ಕಟ್ಟು ಎರ ಡನೇ ಸಾರಿ ಏಳದು.
10 For though they are like twisted thorns, and are overcome as with drink, they will come to destruction like stems of grass fully dry.ಅವರು ಮುಳ್ಳುಗಳ ಹಾಗೆ ಹೊಂದಿಕೊಂಡಿದ್ದರೂ ತಮ್ಮ ದ್ರಾಕ್ಷಾರಸದಿಂದ ಮತ್ತ ರಾಗಿದ್ದರೂ ಪೂರ್ಣವಾಗಿ ಒಣಗಿದ ಕೊಳೆಯಂತೆ ನಾಶವಾಗುವರು.
11 One has gone out from you who is designing evil against the Lord, whose purposes are of no value.ಕರ್ತನಿಗೆ ವಿರೋಧವಾಗಿ ದುರಾ ಲೋಚನೆ ಮಾಡಿ ಕೇಡನ್ನು ಯೋಚಿಸುವವನು ನಿನ್ನೊಳ ಗಿಂದ ಹೊರಟಿದ್ದಾನೆ.
12 This is what the Lord has said: The days of my cause against you are ended; they are cut off and past. Though I have sent trouble on you, you will no longer be troubled.ಕರ್ತನು ಹೀಗೆ ಹೇಳು ತ್ತಾನೆ--ಅವರು ಸುಖವುಳ್ಳವರಾಗಿಯೂ ಬಹು ಮಂದಿ ಯಾಗಿಯೂ ಇದ್ದರೂ ಆತನು ಹಾದುಹೋಗುವಾಗ ಹೀಗೆ ಕಡಿಯಲ್ಪಡುವರು; ನಾನು ನಿನ್ನನ್ನು ಕಷ್ಟಪಡಿಸಿ ದಾಗ್ಯೂ ಇನ್ನು ಮೇಲೆ ಕಷ್ಟಪಡಿಸೆನು.
13 And now I will let his yoke be broken off you, and your chains be parted.ಆದರೆ ನಾನು ಈಗ ನಿನ್ನ ಮೇಲಿಂದ ಆತನ ನೊಗವನ್ನು ಮುರಿದು ನಿನ್ನ ಬಂಧನಗಳನ್ನು ಹರಿದುಬಿಡುವೆನು.
14 The Lord has given an order about you, that no more of your name are to be planted: from the house of your gods I will have the pictured and metal images cut off; I will make your last resting-place a place of shame; for you are completely evil.ನಿನ್ನ ವಿಷಯವಾಗಿ ಕರ್ತನು ಆಜ್ಞಾಪಿಸುವದೇ ನಂದರೆ--ನಿನ್ನ ಹೆಸರುಳ್ಳವರು ಇನ್ನು ಬಿತ್ತಲ್ಪಡರು; ನಿನ್ನ ದೇವರುಗಳ ಮನೆಯೊಳಗಿಂದ ಕೆತ್ತಿದ ವಿಗ್ರಹ ವನ್ನೂ ಎರಕ ಹೊಯಿದದ್ದನ್ನೂ ಕಡಿದುಬಿಡುವೆನು; ನೀನು ತುಚ್ಛನಾದದ್ದರಿಂದ ನಿನಗೆ ಸಮಾಧಿಯನ್ನು ಸಿದ್ಧಮಾಡುವೆನು.
Kannada Bible