Bible

Micah 1 - DBY (Kannada)

1 The word of Jehovah that came to Micah the Morasthite in the days of Jotham, Ahaz, [and] Hezekiah, kings of Judah, which he saw concerning Samaria and Jerusalem.ಯೆಹೂದದ ಅರಸನಾದ ಯೋಥಾಮ ಆಹಾಜ, ಹಿಜ್ಕೀಯ, ದಿವಸಗಳಲ್ಲಿ ಸಮಾರ್ಯದ ಯೆರೂಸಲೇಮಿನ ವಿಷಯವಾಗಿ ಮೋರೇಷೆತಿನವನಾದ ವಿಾಕನಿಗೆ ಉಂಟಾದ ಕರ್ತನ ವಾಕ್ಯವು.

2 Hear, ye peoples, all of you; hearken, O earth, and all that is therein: and let the Lord Jehovah be witness against you, the Lord from his holy temple!ಎಲ್ಲಾ ಜನಗಳೇ, ಕೇಳಿರಿ, ಭೂಮಿಯೇ, ಅದರ ಪರಿಪೂರ್ಣತೆಯೇ, ಕಿವಿಗೊಡಿರಿ; ಕರ್ತನಾದ ದೇವರು ತನ್ನ ಪರಿಶುದ್ಧ ಮಂದಿರದೊಳಗಿಂದ ಕರ್ತನು ನಿಮಗೆ ವಿರೋಧವಾಗಿ ಸಾಕ್ಷಿಯಾಗಿರಲಿ.

3 For behold, Jehovah cometh forth out of his place, and will come down, and tread upon the high places of the earth.ಇಗೋ, ಕರ್ತನು ತನ್ನ ಸ್ಥಾನದಿಂದ ಹೊರಡುತ್ತಾನೆ; ಆತನು ಇಳಿದು ಭೂಮಿಯ ಉನ್ನತವಾದ ಸ್ಥಳಗಳ ಮೇಲೆ ತುಳಿಯುವನು.

4 And the mountains shall be melted under him, and the valleys shall be cleft, as wax before the fire, as waters poured down a steep place.ಬೆಂಕಿಯ ಮುಂದೆ ಮೇಣದ ಹಾಗೆಯೂ ಇಳಿಜಾರಿನ ಸ್ಥಳದಲ್ಲಿ ಸುರಿಯುವ ನೀರಿನ ಹಾಗೆಯೂ ಬೆಟ್ಟಗಳು ಆತನ ಕೆಳಗೆ ಕರಗುವವು; ತಗ್ಗುಗಳು ಸೀಳುವವು.

5 For the transgression of Jacob is all this, and for the sins of the house of Israel. Whence is the transgression of Jacob? is it not [from] Samaria? And whence are the high places of Judah? are they not [from] Jerusalem?ಇದೆಲ್ಲಾ ಯಾಕೋಬಿನ ಅಪರಾಧದ ನಿಮಿತ್ತವೂ ಇಸ್ರಾಯೇಲಿನ ಮನೆತನದ ವರ ಪಾಪಗಳ ನಿಮಿತ್ತವೂ ಆಯಿತು; ಯಾಕೋಬಿನ ಅಪರಾಧವೇನು? ಸಮಾರ್ಯವಲ್ಲವೋ? ಯೆಹೂ ದದ ಉನ್ನತಸ್ಥಳಗಳೇನು? ಯೆರೂಸಲೇಮಲ್ಲವೋ?

6 Therefore will I make Samaria as a heap of the field, as plantings of a vineyard; and I will pour down the stones thereof into the valley, and I will lay bare the foundations thereof.ಹೀಗಿರುವದರಿಂದ ನಾನು ಸಮಾರ್ಯವನ್ನು ಹೊಲದ ದಿಬ್ಬೆಯಾಗಿಯೂ ದ್ರಾಕ್ಷೇ ಬಳ್ಳಿ ನೆಡುವ ಸ್ಥಳವಾಗಿಯೂ ಮಾಡುವೆನು; ಅದರ ಕಲ್ಲುಗಳನ್ನು ತಗ್ಗಿನಲ್ಲಿ ಸುರಿದುಬಿಟ್ಟು; ಅದರ ಅಸ್ತಿವಾರಗಳನ್ನು ಹೊರ ಗೆಡುವೆನು.

7 And all her graven images shall be beaten to pieces, and all her harlot-gifts shall be burned with fire, and all her idols will I make a desolation; for of the hire of a harlot hath she gathered [them], and to a harlot's hire shall they return.ಅದರ ಕೆತ್ತಿದ ವಿಗ್ರಹಗಳೆಲ್ಲಾ ತುಂಡು ಗಳಾಗುವಂತೆ ಒಡೆಯಲ್ಪಡುವವು. ಅದಕ್ಕೆ ಆದ ಸಂಪಾದನೆಗಳೆಲ್ಲಾ ಬೆಂಕಿಯಿಂದ ಸುಡಲ್ಪಡುವವು; ಅದರ ವಿಗ್ರಹಗಳನ್ನೆಲ್ಲಾ ಹಾಳುಮಾಡುವೆನು; ಸೂಳೆಯ ಕೂಲಿಯಿಂದ ಅವುಗಳನ್ನು ಕೂಡಿಸಿ ಕೊಂಡಿತು, ಸೂಳೆಯ ಕೂಲಿಗೆ ಅವು ತಿರುಗುವವು.

8 For this will I lament, and I will howl; I will go stripped and naked: I will make a wailing like the jackals, and mourning like the ostriches.ಆದದರಿಂದ ನಾನು ಗೋಳಾಡಿ ಅರಚುವೆನು; ಬರಿಗಾಲಾಗಿಯೂ ಬೆತ್ತಲೆಯಾಗಿಯೂ ಹೋಗುವೆನು; ನರಿಗಳ ಹಾಗೆ ಗೋಳಾಡುವೆನು; ಬಕಪಕ್ಷಿಯಂತೆ ದುಃಖಪಡುವೆನು.

9 For her wounds are incurable; for it is come even unto Judah, it reacheth unto the gate of my people, even to Jerusalem.ಅದರ ಗಾಯವು ಗುಣವಾಗ ದಂಥದ್ದು, ಯಾಕಂದರೆ ಅದು ಯೆಹೂದಕ್ಕೆ ಬಂತು; ನನ್ನ ಜನರ ಬಾಗಲಿಗೂ ಯೆರೂಸಲೇಮಿನ ಮಟ್ಟಿಗೂ ಮುಟ್ಟಿದ್ದಾನೆ.

10 Tell it not in Gath, weep not at all; at Beth-le-aphrah roll thyself in the dust.ಗತ್‌ ಊರಿನಲ್ಲಿ ಅದನ್ನು ತಿಳಿಸಬೇಡ; ಸ್ವಲ್ಪವಾದರೂ ಅಳಬೇಡ; ಎಫ್ರಾತದ ಮನೆಯ ಧೂಳಿನಲ್ಲಿ ಹೊರಳಾಡು.

11 Pass away, inhabitress of Shaphir, in nakedness [and] shame. The inhabitress of Zaanan is not come forth for the lamentation of Beth-ezel: he will take from you its shelter.ಶಾಫೀರಿನ ನಿವಾಸಿಯೇ, ನಾಚಿಕೆ ಮುಚ್ಚದೆ ಹಾದುಹೋಗು; ಬೇತೇಚೆಲಿನ ಗೋಳಾಟದಲ್ಲಿ ಚಾನಾನಿನ ನಿವಾಸಿ ಮುಂದೆ ಬರಲಿಲ್ಲ; ಅವನು ನಿಮ್ಮಿಂದ ತನ್ನ ಸ್ಥಾನವನ್ನು ತಕ್ಕೊಳ್ಳುವನು.

12 For the inhabitress of Maroth waited anxiously for good; but evil hath come down from Jehovah unto the gate of Jerusalem.ಮಾರೋತಿನ ನಿವಾಸಿ ಒಳ್ಳೇದಕ್ಕೆ ಜಾಗ್ರತೆಯಾಗಿ ಕಾದುಕೊಳ್ಳುತ್ತಾನೆ; ಆದರೆ ಕೇಡು ಕರ್ತನಿಂದ ಯೆರೂಸಲೇಮಿನ ಬಾಗಲಿಗೆ ಇಳಿದಿದೆ.

13 Bind the chariot to the swift steed, O inhabitress of Lachish: she was the beginning of sin to the daughter of Zion; for in thee were found the transgressions of Israel.ಲಾಕೀಷಿನ ನಿವಾಸಿಯೇ, ವೇಗವುಳ್ಳ ಕುದುರೆಗೆ ರಥವನ್ನು ಕಟ್ಟು, ಇದೇ ಚೀಯೋನಿನ ಮಗಳ ಪಾಪದ ಆರಂಭವು; ಇಸ್ರಾಯೇಲಿನ ಅಪರಾಧಗಳು ನಿನ್ನಲ್ಲಿ ಕಂಡುಬಂದವು.

14 Therefore shalt thou give parting-gifts to Moresheth-Gath: the houses of Achzib shall be a lie to the kings of Israel.ಹೀಗಿರುವದರಿಂದ ಮೋರೆಷತ್‌ ಗತ್‌ ಊರಿಗೆ ದಾನಗಳನ್ನು ಕೊಡುವಿ, ಅಕ್ಜೀಬಿನ ಮನೆತನಗಳು ಇಸ್ರಾಯೇಲಿನ ಅರಸರಿಗೆ ಸುಳ್ಳಾಗಿರುವವು.

15 I will yet bring unto thee an heir, O inhabitress of Mareshah; the glory of Israel shall come even unto Adullam.ಮಾರೇ ಷದ ನಿವಾಸಿಯೇ, ಇನ್ನೂ ಬಾಧ್ಯನನ್ನು ನಿನ್ನ ಬಳಿಗೆ ತರುವೆನು; ಅವನು ಇಸ್ರಾಯೇಲಿನ ಮಹಿಮೆಯಾದ ಅದುಲ್ಲಾಮಿನ ಮಟ್ಟಿಗೂ ಬರುವನು.

16 Make thee bald, and poll thee for the children of thy delights; enlarge thy baldness as the eagle, for they are gone into captivity from thee.ನಿನ್ನ ಮುದ್ದು ಮಕ್ಕಳಿಗೋಸ್ಕರ ತಲೆಬೋಳಿಸಿಕೊಂಡು ಕ್ಷೌರ ಮಾಡಿಸಿಕೊ; ಹದ್ದಿನಂತೆ ನಿನ್ನ ಬೋಳುತನವನ್ನು ಅಗಲ ಮಾಡಿಕೊ; ಅವರು ನಿನ್ನನ್ನು ಬಿಟ್ಟು ಸೆರೆಯಾಗಿ ಹೋಗಿದ್ದಾರೆ.

Kannada Bible