Matthew 7 - BBE (Kannada)
1 Be not judges of others, and you will not be judged.ನಿಮಗೆ ತೀರ್ಪು ಆಗದಂತೆ ನೀವೂ ತೀರ್ಪು ಮಾಡಬೇಡಿರಿ.
2 For as you have been judging, so you will be judged, and with your measure will it be measured to you.ನೀವು ಮಾಡುವ ತೀರ್ಪಿ ನಿಂದಲೇ ನಿಮಗೆ ತೀರ್ಪಾಗುವದು; ಮತ್ತು ನೀವು ಅಳೆಯುವ ಅಳತೆಯಿಂದಲೇ ನಿಮಗೆ ತಿರಿಗಿ ಅಳತೆ ಯಾಗುವದು.
3 And why do you take note of the grain of dust in your brother's eye, but take no note of the bit of wood which is in your eye?ಮತ್ತು ನಿನ್ನ ಸ್ವಂತ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ನೀನು ಯಾಕೆ ನೋಡುತ್ತೀ?
4 Or how will you say to your brother, Let me take out the grain of dust from your eye, when you yourself have a bit of wood in your eye?ಇಲ್ಲವೆ ನೀನು ನಿನ್ನ ಸಹೋದರನಿಗೆ--ನಿನ್ನ ಕಣ್ಣಿ ನೊಳಗಿಂದ ರವೆಯನ್ನು ತೆಗೆಯುತ್ತೇನೆ ಎಂದು ಹೇಗೆ ಹೇಳುತ್ತೀ? ಆದರೆ ಇಗೋ, ನಿನ್ನ ಸ್ವಂತ ಕಣ್ಣಿನಲ್ಲಿ ತೊಲೆ ಇದೆಯಲ್ಲಾ?
5 You false one, first take out the bit of wood from your eye, then will you see clearly to take out the grain of dust from your brother's eye.ಕಪಟಿ ನೀನು, ಮೊದಲು ನಿನ್ನ ಸ್ವಂತ ಕಣ್ಣಿನೊಳಗಿರುವ ತೊಲೆ ಯನ್ನು ತೆಗೆದು ಹಾಕು; ಆಗ ನಿನ್ನ ಸಹೋದರನ ಕಣ್ಣಿನೊಳಗಿರುವ ರವೆಯನ್ನು ತೆಗೆದು ಹಾಕುವದಕ್ಕೆ ನಿನಗೆ ಚೆನ್ನಾಗಿ ಕಾಣಿಸುವದು.
6 Do not give that which is holy to the dogs, or put your jewels before pigs, for fear that they will be crushed under foot by the pigs whose attack will then be made against you.ನಾಯಿಗಳಿಗೆ ಪವಿತ್ರವಾದದ್ದನ್ನು ಕೊಡಬೇಡಿರಿ ಇಲ್ಲವೆ ನಿಮ್ಮ ಮುತ್ತುಗಳನ್ನು ಹಂದಿಗಳ ಮುಂದೆ ಹಾಕಬೇಡಿರಿ. ಹಾಕಿದರೆ ಅವುಗಳನ್ನು ತುಳಿದು ಬಿಟ್ಟು ಮತ್ತೆ ತಿರುಗಿಕೊಂಡು ನಿಮ್ಮನ್ನು ಹರಿದು ಬಿಟ್ಟಾವು.
7 Make a request, and it will be answered; what you are searching for you will get; give the sign, and the door will be open to you:ಬೇಡಿಕೊಳ್ಳಿರಿ, ಅದು ನಿಮಗೆ ಕೊಡಲ್ಪಡುವದು; ಹುಡುಕಿರಿ, ನಿಮಗೆ ಸಿಕ್ಕುವದು; ತಟ್ಟಿರಿ, ಅದು ನಿಮಗೆ ತೆರೆಯಲ್ಪಡುವದು.
8 Because to everyone who makes a request, it will be given; and he who is searching will get his desire, and to him who gives the sign, the door will be open.ಯಾಕಂದರೆ ಬೇಡಿ ಕೊಳ್ಳುವ ಪ್ರತಿಯೊಬ್ಬನು ಹೊಂದಿಕೊಳ್ಳುವನು; ಮತ್ತು ಹುಡುಕುವವನಿಗೆ ಸಿಕ್ಕುವದು; ಇದಲ್ಲದೆ ತಟ್ಟುವವನಿಗೆ ತೆರೆಯಲ್ಪಡುವದು.
9 Or which of you, if his son makes a request for bread, will give him a stone?ಇಲ್ಲವೆ ತನ್ನ ಮಗನು ರೊಟ್ಟಿಯನ್ನು ಕೇಳಿದರೆ ನಿಮ್ಮಲ್ಲಿ ಯಾವ ನಾದರೂ ಅವನಿಗೆ ಕಲ್ಲನ್ನು ಕೊಡುವನೇ?
10 Or if he makes a request for a fish, will give him a snake?ಇಲ್ಲವೆ ಅವನು ಮಾನನ್ನು ಕೇಳಿದರೆ ತಂದೆಯು ಅವನಿಗೆ ಹಾವನ್ನು ಕೊಡುವನೇ?
11 If you, then, being evil, are able to give good things to your children, how much more will your Father in heaven give good things to those who make requests to him?ಕೆಟ್ಟವರಾದ ನೀವು ಒಳ್ಳೇ ದಾನಗಳನ್ನು ನಿಮ್ಮ ಮಕ್ಕಳಿಗೆ ಕೊಡುವದು ಹೇಗೆ ಎಂಬದನ್ನು ತಿಳಿದವರಾಗಿದ್ದರೆ ಪರಲೋಕ ದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳು ವವರಿಗೆ ಎಷ್ಟೋ ಹೆಚ್ಚಾಗಿ ಒಳ್ಳೆಯವುಗಳನ್ನು ಕೊಡುತ್ತಾನಲ್ಲವೇ?
12 All those things, then, which you would have men do to you, even so do you to them: because this is the law and the prophets.ಆದದರಿಂದ ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಇಚ್ಛೈಸುವಿರೋ ಅವುಗಳನ್ನು ನೀವು ಸಹ ಅವರಿಗೆ ಹಾಗೆಯೇ ಮಾಡಿರಿ; ಯಾಕಂದರೆ ಇದೇ ನ್ಯಾಯಪ್ರಮಾಣದ ಮತ್ತು ಪ್ರವಾದಿಗಳ ತಾತ್ಪರ್ಯ.
13 Go in by the narrow door; for wide is the door and open is the way which goes to destruction, and great numbers go in by it.ಇಕ್ಕಟ್ಟಾದ ದ್ವಾರದೊಳಗೆ ನೀವು ಪ್ರವೇಶಿಸಿರಿ; ಯಾಕಂದರೆ ನಾಶನಕ್ಕೆ ನಡಿಸುವ ದ್ವಾರವು ಅಗಲವೂ ಮಾರ್ಗವು ವಿಶಾಲವೂ ಆಗಿದೆ. ಅದರೊಳಗೆ ಪ್ರವೇಶಿಸುವವರು ಬಹು ಜನ.
14 For narrow is the door and hard the road to life, and only a small number make discovery of it.ಜೀವಕ್ಕೆ ನಡಿಸುವ ದ್ವಾರವು ಇಕ್ಕಟ್ಟಾದದ್ದೂ ದಾರಿಯು ಬಿಕ್ಕಟ್ಟಾದದ್ದೂ ಆಗಿದೆ; ಆದದರಿಂದ ಅದನ್ನು ಕಂಡುಕೊಳ್ಳುವವರು ಸ್ವಲ್ಪ ಜನ.
15 Be on the watch for false prophets, who come to you in sheep's clothing, but inside they are cruel wolves.ಕುರಿ ವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುವ ಸುಳ್ಳು ಪ್ರವಾದಿಗಳಿಗೆ ಎಚ್ಚರವಾಗಿರ್ರಿ; ಯಾಕಂದರೆ ಅವರು ಒಳಗೆ ದೋಚಿಕೊಳ್ಳುವ ತೋಳಗಳಾಗಿದ್ದಾರೆ.
16 By their fruits you will get knowledge of them. Do men get grapes from thorns or figs from thistles?ಅವರ ಫಲಗಳಿಂದ ನೀವು ಅವರನ್ನು ತಿಳಿದುಕೊಳ್ಳುವಿರಿ. ಜನರು ಮುಳ್ಳುಗಳಲ್ಲಿ ದ್ರಾಕ್ಷೆಯನ್ನೂ ಮದ್ದುಗುಣಿಕೇಗಿಡಗಳಲ್ಲಿ ಅಂಜೂರ ಗಳನ್ನೂ ಕೂಡಿಸುವರೋ?
17 Even so, every good tree gives good fruit; but the bad tree gives evil fruit.ಅದರಂತೆಯೇ ಪ್ರತಿ ಯೊಂದು ಒಳ್ಳೆ ಮರವು ಒಳ್ಳೇ ಫಲವನ್ನು ಕೊಡುತ್ತದೆ; ಮತ್ತು ಕೆಟ್ಟ ಮರವು ಕೆಟ್ಟ ಫಲವನ್ನು ಕೊಡುತ್ತದೆ;
18 It is not possible for a good tree to give bad fruit, and a bad tree will not give good fruit.ಒಳ್ಳೆ ಮರವು ಕೆಟ್ಟ ಫಲವನ್ನು ಕೊಡಲಾರದು; ಇಲ್ಲವೆ ಕೆಟ್ಟ ಮರವು ಒಳ್ಳೇ ಫಲವನ್ನು ಕೊಡಲಾರದು.
19 Every tree which does not give good fruit is cut down and put in the fire.ಒಳ್ಳೇ ಫಲವನ್ನು ಕೊಡದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿಯಲ್ಲಿ ಹಾಕಲ್ಪಡುತ್ತದೆ.
20 So by their fruits you will get knowledge of them.ಆದದರಿಂದ ಅವರ ಫಲಗಳಿಂದ ನೀವು ಅವರನ್ನು ತಿಳಿದುಕೊಳ್ಳುವಿರಿ.
21 Not everyone who says to me, Lord, Lord, will go into the kingdom of heaven; but he who does the pleasure of my Father in heaven.ಕರ್ತನೇ, ಕರ್ತನೇ ಎಂದು ನನಗೆ ಹೇಳುವ ಪ್ರತಿಯೊಬ್ಬನು ಪರಲೋಕರಾಜ್ಯದಲ್ಲಿ ಪ್ರವೇಶಿಸು ವದಿಲ್ಲ; ಆದರೆ ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ಮಾಡುವವನೇ ಅದರಲ್ಲಿ ಪ್ರವೇಶಿ ಸುವನು.
22 A great number will say to me on that day, Lord, Lord, were we not prophets in your name, and did we not by your name send out evil spirits, and by your name do works of power?ಆ ದಿನದಲ್ಲಿ--ಕರ್ತನೇ, ಕರ್ತನೇ ನಿನ್ನ ಹೆಸರಿನಲ್ಲಿ ನಾವು ಪ್ರವಾದಿಸಲಿಲ್ಲವೇ? ಮತ್ತು ನಿನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೇ? ಇದಲ್ಲದೆ ನಿನ್ನ ಹೆಸರಿನಲ್ಲಿ ಬಹಳ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ಬಹಳ ಜನರು ನನಗೆ ಹೇಳುವರು.
23 And then will I say to them, I never had knowledge of you: go from me, you workers of evil.ಆಗ ನಾನು ಅವರಿಗೆ--ನಾನು ನಿಮ್ಮನ್ನು ಎಂದಿಗೂ ಅರಿಯೆನು; ದುಷ್ಟತನ ಮಾಡುವ ನೀವು ನನ್ನಿಂದ ತೊಲಗಿ ಹೋಗಿರಿ ಎಂದು ಹೇಳಿಬಿಡುವೆನು.
24 Everyone, then, to whom my words come and who does them, will be like a wise man who made his house on a rock;ಆದದರಿಂದ ಯಾವನಾದರೂ ನಾನು ಹೇಳುವ ಈ ನನ್ನ ಮಾತುಗಳನ್ನು ಕೇಳಿ ಅವುಗಳಂತೆ ಮಾಡುವವನನ್ನು ಬಂಡೆಯ ಮೇಲೆ ತನ್ನ ಮನೆಯನ್ನು ಕಟ್ಟಿದ ಬುದ್ಧಿವಂತನಿಗೆ ಹೋಲಿಸುವೆನು.
25 And the rain came down and there was a rush of waters and the winds were driving against that house, but it was not moved; because it was based on the rock.ಮಳೆಯು ಸುರಿದು ಪ್ರವಾಹಗಳು ಬಂದು ಗಾಳಿಯು ಬೀಸಿ ಆ ಮನೆಗೆ ಬಡಿದವು; ಆದರೂ ಅದು ಬೀಳಲಿಲ್ಲ; ಯಾಕಂದರೆ ಅದರ ಅಸ್ತಿವಾರವು ಬಂಡೆಯ ಮೇಲೆ ಹಾಕಲ್ಪಟ್ಟಿತು.
26 And everyone to whom my words come and who does them not, will be like a foolish man who made his house on sand;ಈ ನನ್ನ ಮಾತುಗಳನ್ನು ಕೇಳುವ ಪ್ರತಿಯೊಬ್ಬನು ಅವುಗಳಂತೆ ನಡೆಯದೆ ಹೋದರೆ ಅವನು ಮರಳಿನ ಮೇಲೆ ತನ್ನ ಮನೆಯನ್ನು ಕಟ್ಟಿದ ಬುದ್ಧಿಹೀನನಿಗೆ ಹೋಲಿಕೆಯಾಗಿರುವನು.
27 And the rain came down and there was a rush of waters and the winds were driving against that house; and it came down and great was its fall.ಹೇಗಂದರೆ ಮಳೆಯು ಸುರಿದು ಪ್ರವಾಹಗಳು ಬಂದು ಗಾಳಿಯು ಬೀಸಿ ಆ ಮನೆಗೆ ಬಡಿದವು; ಆಗ ಅದು ಬಿತ್ತು; ಮತ್ತು ಅದರ ಬೀಳುವಿಕೆಯು ದೊಡ್ಡದಾಗಿತ್ತು.
28 And it came about, when Jesus had come to the end of these words, that the people were surprised at his teaching,ಯೇಸು ಈ ಮಾತುಗಳನ್ನು ಹೇಳಿ ಮುಗಿಸಿದ ತರುವಾಯ ಜನರು ಆತನ ಬೋಧನೆಗೆ ಆಶ್ಚರ್ಯ ಪಟ್ಟರು.
29 for he was teaching as one having authority, and not as their scribes.ಯಾಕಂದರೆ ಆತನು ಶಾಸ್ತ್ರಿಗಳಂತೆ ಬೋಧಿಸದೆ ಆಧಿಕಾರವಿದ್ದವನಂತೆ ಅವರಿಗೆ ಬೋಧಿಸಿದನು.
Kannada Bible