Bible

Matthew 27 - BBE (Kannada)

1 Now when it was morning, all the chief priests and those in authority took thought together with the purpose of putting Jesus to death.ಬೆಳಗಾದಾಗ ಎಲ್ಲಾ ಪ್ರಧಾನ ಯಾಜಕರೂ ಜನರ ಹಿರಿಯರೂ ಯೇಸುವನ್ನು ಕೊಲ್ಲಿಸುವದಕ್ಕೆ ಆತನಿಗೆ ವಿರೋಧವಾಗಿ ಆಲೋಚನೆ ಮಾಡಿಕೊಂಡರು.

2 And they put cords on him and took him away, and gave him up to Pilate, the ruler.ಮತ್ತು ಅವರು ಆತನನ್ನು ಕಟ್ಟಿ ತೆಗೆದುಕೊಂಡು ಹೋಗಿ ಅಧಿಪತಿಯಾದ ಪೊಂತ್ಯ ಪಿಲಾತನಿಗೆ ಒಪ್ಪಿಸಿದರು.

3 Then Judas, who was false to him, seeing that he was to be put to death, in his regret took back the thirty bits of silver to the chief priests and those in authority,ಆಗ ಆತನನ್ನು ಹಿಡುಕೊಟ್ಟ ಯೂದನು ಆತನಿಗೆ ಮರಣದಂಡನೆಯ ತೀರ್ಪಾದದ್ದನ್ನು ನೋಡಿ ಪಶ್ಚಾ ತ್ತಾಪಪಟ್ಟು ಆ ಮೂವತ್ತು ಬೆಳ್ಳಿಯ ನಾಣ್ಯಗಳನು ತಿರಿಗಿ ಪ್ರಧಾನ ಯಾಜಕರ ಮತ್ತು ಹಿರಿಯರ ಬಳಿಗೆ ತಂದು

4 Saying, I have done wrong in giving into your hands an upright man. But they said, What is that to us? it is your business.ಅವನು--ನಾನು ನಿರಪರಾಧದ ರಕ್ತವನ್ನು ಹಿಡುಕೊಟ್ಟು ಪಾಪಮಾಡಿದ್ದೇನೆ ಅಂದನು. ಅದಕ್ಕೆ ಅವರು--ಅದು ನಮಗೇನು? ನೀನೇ ಅದನ್ನು ನೋಡಿಕೋ ಅಂದರು.

5 And he put down the silver in the Temple and went out, and put himself to death by hanging.ಮತ್ತು ಅವನು ಆ ಬೆಳ್ಳಿಯ ನಾಣ್ಯಗಳನ್ನು ದೇವಾಲಯದಲ್ಲಿ ಬಿಸಾಡಿಬಿಟ್ಟು ಹೊರಟುಹೋಗಿ ಉರ್ಲು ಹಾಕಿಕೊಂಡನು.

6 And the chief priests took the silver and said, It is not right to put it in the Temple store for it is the price of blood.ಆಗ ಪ್ರಧಾನ ಯಾಜಕರು ಆ ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಂಡು--ಇವುಗಳನ್ನು ಬೊಕ್ಕಸದಲ್ಲಿ ಹಾಕು ವದು ನ್ಯಾಯವಲ್ಲ; ಯಾಕಂದರೆ ಅದು ರಕ್ತದಕ್ರಯ ವಾಗಿದೆ ಅಂದರು.

7 And they made a decision to get with the silver the potter's field, as a place for the dead of other countries.ಅವರು ಆಲೋಚನೆ ಮಾಡಿ ಪರದೇಶಿಗಳನ್ನು ಹೂಣಿಡುವದಕ್ಕೆ ಆ ಹಣದಿಂದ ಕುಂಬಾರನ ಹೊಲವನ್ನು ಕೊಂಡುಕೊಂಡರು.

8 For this cause that field was named, The field of blood, to this day.ಈ ಕಾರಣದಿಂದ ಆ ಹೊಲವು ರಕ್ತದ ಹೊಲವೆಂದು ಈ ದಿನದ ವರೆಗೆ ಕರೆಯಲ್ಪಟ್ಟಿದೆ.

9 Then came true that which was said by Jeremiah the prophet, And they took the thirty bits of silver, the price of him who was valued by the children of Israel;ಆಗ ಪ್ರವಾದಿಯಾದ ಯೆರೆವಿಾಯನು ಹೇಳಿದ ಮಾತು ನೆರವೇರಿತು; ಅದೇನಂದರೆ--ಇಸ್ರಾಯೇಲಿನ ಮಕ್ಕಳಲ್ಲಿ ಅವರು ಬೆಲೆ ಕಟ್ಟಿದವನ ಬೆಲೆಯಾದ ಮೂವತ್ತು ಬೆಳ್ಳಿಯ ನಾಣ್ಯಗಳನ್ನು ತಕ್ಕೊಂಡು

10 And they gave them for the potter's field, as I had word from the Lord.ಕರ್ತನು ನನಗಾಗಿ ನೇಮಿಸಿದ ಹಾಗೆ ಅವುಗಳನ್ನು ಕುಂಬಾರನ ಹೊಲಕ್ಕಾಗಿ ಕೊಟ್ಟರು ಎಂಬದು.

11 And Jesus was before the ruler, who put a question to him, Are you the King of the Jews? And Jesus said to him, You say so.ಯೇಸು ಅಧಿಪತಿಯ ಮುಂದೆ ನಿಂತಿದ್ದನು; ಆಗ ಆ ಅಧಿಪತಿಯು ಆತನಿಗೆ--ನೀನು ಯೆಹೂದ್ಯರ ಅರಸನೋ ಎಂದು ಕೇಳಿದನು. ಅದಕ್ಕೆ ಯೇಸು ಅವನಿಗೆ--ನೀನೇ ಹೇಳುತ್ತೀ ಅಂದನು.

12 But when the chief priests and those in authority made statements against him, he gave no answer.ಆಗ ಪ್ರಧಾನ ಯಾಜಕರೂ ಹಿರಿಯರೂ ಆತನ ಮೇಲೆ ದೂರು ಹೇಳುತ್ತಿರುವಾಗ ಆತನು ಏನು ಉತ್ತರ ಕೊಡಲಿಲ್ಲ.

13 Then says Pilate to him, Do you give no attention to what their witnesses say against you?ಆಗ ಪಿಲಾತನು ಆತನಿಗೆ--ನಿನಗೆ ವಿರೋಧವಾಗಿ ಇವರು ಇಷ್ಟು ದೂರು ಹೇಳುವದನ್ನು ನೀನು ಕೇಳುವದಿಲ್ಲವೋ ಅಂದನು.

14 And he gave him no answer, not even a word: so that the ruler was greatly surprised.ಆತನು ಒಂದು ಮಾತಿಗಾದರೂ ಅವನಿಗೆ ಉತ್ತರಕೊಡದೆ ಇದ್ದದರಿಂದ ಅಧಿಪತಿಯು ಅತ್ಯಾಶ್ಚರ್ಯಪಟ್ಟನು.

15 Now at the feast it was the way for the ruler to let free to the people one prisoner, at their selection.ಆ ಹಬ್ಬದಲ್ಲಿ ಜನರು ಇಷ್ಟಪಡುವ ಒಬ್ಬ ಸೆರೆಯವನನ್ನು ಅಧಿಪತಿಯು ಬಿಟ್ಟುಬಿಡುವ ಪದ್ಧತಿ ಯಿತ್ತು.

16 And they had then an important prisoner, whose name was Barabbas.ಆ ಸಮಯದಲ್ಲಿ ಬರಬ್ಬನೆಂಬ ಪ್ರಸಿದ್ಧನಾದ ಸೆರೆಯವನೊಬ್ಬನು ಅವರಲ್ಲಿ ಇದ್ದನು.

17 So when they came together, Pilate said to them, Whom will you have? Barabbas, or Jesus, who is named Christ?ಆದದ ರಿಂದ ಅವರು ಕೂಡಿಬಂದಿದ್ದಾಗ ಪಿಲಾತನು ಅವರಿಗೆ--ನಿಮಗೆ ಯಾರನ್ನು ಬಿಟ್ಟುಕೊಡ ಬೇಕನ್ನುತ್ತೀರಿ? ಬರಬ್ಬನನ್ನೋ? ಇಲ್ಲವೆ ಕ್ರಿಸ್ತನನ್ನಿಸಿಕೊಳ್ಳುವ ಯೇಸು ವನ್ನೋ ಎಂದು ಕೇಳಿದನು.

18 For he saw that for envy they had given him up.ಯಾಕಂದರೆ ಆತನನ್ನು ಅವರು ಹೊಟ್ಟೇಕಿಚ್ಚಿನಿಂದ ಹಿಡುಕೊಟ್ಟಿದ್ದಾರೆಂದು ಅವನಿಗೆ ಗೊತ್ತಿತ್ತು.

19 And while he was on the judge's seat, his wife sent to him, saying, Have nothing to do with that upright man, for I have had much trouble this day in a dream because of him.ಅವನು ನ್ಯಾಯಾಸನದ ಮೇಲೆ ಕೂತಿದ್ದಾಗ ಅವನ ಹೆಂಡತಿಯು ಅವ ನಿಗೆ--ನೀನು ಆ ನೀತಿವಂತನ ಗೊಡವೆಗೆ ಹೋಗ ಬೇಡ; ಯಾಕಂದರೆ ಈ ದಿವಸ ನಾನು ಸ್ವಪ್ನದಲ್ಲಿ ಆತನ ವಿಷಯವಾಗಿ ಬಹಳ ಕಷ್ಟಪಟ್ಟಿದ್ದೇನೆ ಎಂದು ಹೇಳಿಕಳುಹಿಸಿದಳು.

20 Now the chief priests and those in authority got the people to make request for Barabbas, and for Jesus to be put to death.ಆದರೆ ಪ್ರಧಾನ ಯಾಜಕರು ಮತ್ತು ಹಿರಿಯರು ಬರಬ್ಬನನ್ನು ಬಿಟ್ಟುಕೊಟ್ಟು ಯೇಸು ವನ್ನು ಕೊಲ್ಲುವಂತೆ ಬೇಡಿಕೊಳ್ಳುವ ಹಾಗೆ ಸಮೂಹ ವನ್ನು ಒಡಂಬಡಿಸಿದರು.

21 But the ruler made answer and said to them, Which of the two is it your pleasure that I let go free? And they said, Barabbas.ಅಧಿಪತಿಯು ಪ್ರತ್ಯುತ್ತರ ವಾಗಿ ಅವರಿಗೆ--ಈ ಇಬ್ಬರಲ್ಲಿ ನಿಮಗೆ ಯಾರನ್ನು ಬಿಟ್ಟು ಕೊಡಬೇಕನ್ನುತ್ತೀರಿ ಅನ್ನಲು ಅವರು--ಬರಬ್ಬನನ್ನು ಅಂದರು.

22 Pilate says to them, What, then, am I to do with Jesus, who is named Christ? They all say, Let him be put to death on the cross.ಪಿಲಾತನು ಅವರಿಗೆ--ಹಾಗಾದರೆ ಕ್ರಿಸ್ತನನ್ನಿಸಿಕೊಳ್ಳುವ ಯೇಸುವನ್ನು ನಾನೇನು ಮಾಡಲಿ ಅನ್ನಲು ಅವರೆಲ್ಲರೂ--ಅವನನ್ನು ಶಿಲುಬೆಗೆ ಹಾಕಿಸು ಎಂದು ಅವನಿಗೆ ಹೇಳಿದರು.

23 And he said, Why, what evil has he done? But they gave loud cries, saying, To the cross with him!ಆಗ ಅಧಿಪತಿಯು--ಯಾಕೆ? ಆತನು ಕೆಟ್ಟದ್ದೇನು ಮಾಡಿ ದ್ದಾನೆ ಅಂದನು. ಆದರೆ ಅವರು--ಆತನನ್ನು ಶಿಲುಬೆಗೆ ಹಾಕಿಸು ಎಂದು ಹೆಚ್ಚಾಗಿ ಕೂಗಿಕೊಂಡರು.

24 So when Pilate saw that he was able to do nothing, but that trouble was working up, he took water and, washing his hands before the people, said, The blood of this upright man is not on my hands: you are responsible.ಪಿಲಾ ತನು ತನ್ನ ಯತ್ನ ನಡೆಯಲಿಲ್ಲ, ಗದ್ದಲವೇ ಹೆಚ್ಚಾಗುತ್ತದೆ ಎಂದು ನೋಡಿ ನೀರನ್ನು ತೆಗೆದುಕೊಂಡು ಸಮೂಹದ ಮುಂದೆ ತನ್ನ ಕೈಗಳನ್ನು ತೊಳೆದು--ಈ ನೀತಿವಂತನ ರಕ್ತಕ್ಕೆ ನಾನು ನಿರಪರಾಧಿ, ಅದನ್ನು ನೀವೇ ನೋಡಿಕೊಳ್ಳಿರಿ ಅಂದನು.

25 And all the people made answer and said, Let his blood be on us, and on our children.ಅದಕ್ಕೆ ಜನರೆ ಲ್ಲರೂ ಪ್ರತ್ಯುತ್ತರವಾಗಿ--ಆತನ ರಕ್ತವು ನಮ್ಮ ಮೇಲೆಯೂ ನಮ್ಮ ಮಕ್ಕಳ ಮೇಲೆಯೂ ಇರಲಿ ಅಂದರು.

26 Then he let Barabbas go free: but after having Jesus whipped, he gave him up to be put to death on the cross.ಆಗ ಅವನು ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡಿಸಿ ಶಿಲುಬೆಗೆ ಹಾಕುವಂತೆ ಒಪ್ಪಿಸಿದನು.

27 Then the ruler's armed men took Jesus into the open square, and got all their band together.ತರುವಾಯ ಅಧಿಪತಿಯ ಸೈನಿಕರು ಯೇಸುವನ್ನು ಸಾಮಾನ್ಯವಾದ ಕೋಣೆಯೊಳಕ್ಕೆ ತೆಗೆದುಕೊಂಡು ಹೋಗಿ ಸೈನಿಕರ ಪೂರ್ಣ ತಂಡವನ್ನು ಆತನ ಮುಂದೆ ಕೂಡಿಸಿದರು.

28 And they took off his clothing, and put on him a red robe.ಮತ್ತು ಅವರು ಆತನ ಬಟ್ಟೆಗಳನ್ನು ತೆಗೆದು ರಕ್ತವರ್ಣದ ನಿಲುವಂಗಿಯನ್ನು ಆತನಿಗೆ ತೊಡಿಸಿದರು.

29 And they made a crown of thorns and put it on his head, and put a rod in his right hand, and they went down on their knees before him, and made sport of him, saying, Long life to the King of the Jews.ತರುವಾಯ ಅವರು ಒಂದು ಮುಳ್ಳಿನ ಕಿರೀಟವನ್ನು ಹೆಣೆದು ಅದನ್ನು ಆತನ ತಲೆಯ ಮೇಲಿಟ್ಟು ಬಲಗೈಯಲ್ಲಿ ಒಂದು ಬೆತ್ತವನ್ನು ಕೊಟ್ಟು ಆತನ ಮುಂದೆ ಮೊಣಕಾಲೂರಿ--ಯೆಹೂದ್ಯರ ಅರಸನೇ, ವಂದನೆ ಎಂದು ಹೇಳಿ ಆತನನ್ನು ಹಾಸ್ಯಮಾಡಿದರು.

30 And they put shame on him, and gave him blows on the head with the rod.ಅವರು ಆತನ ಮೇಲೆ ಉಗುಳಿ ಆ ಬೆತ್ತವನ್ನು ತಕ್ಕೊಂಡು ಆತನ ತಲೆಯ ಮೇಲೆ ಹೊಡೆದರು.

31 And when they had made sport of him, they took the robe off him, and put his clothing on him, and took him away to put him on the cross.ಅವರು ಆತನಿಗೆ ಹಾಸ್ಯಮಾಡಿದ ಮೇಲೆ ಆ ನಿಲುವಂಗಿಯನ್ನು ಆತ ನಿಂದ ತೆಗೆದು ಆತನ ಸ್ವಂತವಸ್ತ್ರವನ್ನು ಹೊದಿಸಿ ಆತನನ್ನು ಶಿಲುಬೆಗೆ ಹಾಕುವದಕ್ಕಾಗಿ ತಕ್ಕೊಂಡು ಹೋದರು.

32 And while they were coming out, they saw a man of Cyrene, Simon by name, and they made him go with them, so that he might take up his cross.ಅವರು ಹೊರಗೆ ಬರುತ್ತಿರುವಾಗ ಕುರೇನ್ಯನಾದ ಸೀಮೋನನೆಂಬ ಮನುಷ್ಯನನ್ನು ಕಂಡು ಆತನ ಶಿಲುಬೆಯನ್ನು ಹೊರುವಂತೆ ಅವನನ್ನು ಬಲವಂತ ಮಾಡಿದರು.

33 And when they came to the place named Golgotha, that is to say, Dead Man's Head,ಆಮೇಲೆ ಅವರು ಗೊಲ್ಗೊಥಾ ಎಂದು ಕರೆಯಲ್ಪಟ್ಟ ಕಪಾಲವೆಂಬ ಸ್ಥಳಕ್ಕೆ ಬಂದರು.

34 They gave him wine mixed with bitter drink: and after tasting it, he took no more.ಆಗ ಅವರು ಆತನಿಗೆ ಕಹಿಬೆರಸಿದ ಹುಳಿರಸವನ್ನು ಕುಡಿಯಕೊಟ್ಟರು; ಮತ್ತು ಆತನು ಅದನ್ನು ರುಚಿ ನೋಡಿ ಕುಡಿಯಲೊಲ್ಲದೆ ಇದ್ದನು.

35 And when they had put him on the cross, they made division of his clothing among them by the decision of chance.ತರುವಾಯ ಅವರು ಆತನನ್ನು ಶಿಲುಬೆಗೆ ಹಾಕಿದ ಮೇಲೆ ಆತನ ಬಟ್ಟೆಗಳಿಗಾಗಿ ಚೀಟು ಹಾಕಿ ಹಂಚಿಕೊಂಡರು; ಇದು ಪ್ರವಾದಿಯ ಮುಖಾಂತರ ಹೇಳಲ್ಪಟ್ಟದ್ದು ನೆರವೇರುವಂತೆ ಆಯಿತು. ಅದೇನಂದರೆ--ಅವರು ನನ್ನ ಬಟ್ಟೆಗಳನ್ನು ತಮ್ಮಲ್ಲಿ ಪಾಲುಮಾಡಿಕೊಂಡರು; ಮತ್ತು ನನ್ನ ಅಂಗಿಗೋಸ್ಕರ ಚೀಟು ಹಾಕಿ

36 And they were seated there watching him.ಮತ್ತು ಅವರು ಕೆಳಗೆ ಕೂತುಕೊಂಡು ಆತನನ್ನು ಕಾಯುತ್ತಿದ್ದರು.

37 And they put up over his head the statement of his crime in writing, THIS IS JESUS THE KING OF THE JEWS.ಇದಲ್ಲದೆ ಆತನ ತಲೆಯ ಮೇಲ್ಭಾಗದಲ್ಲಿ--ಇವನು ಯೆಹೂದ್ಯರ ಅರಸನಾದ ಯೇಸು ಎಂದು ಆತನ ವಿಷಯವಾದ ಅಪರಾಧವನ್ನು ಬರೆಯಿಸಿದರು.

38 Then two thieves were put on crosses with him, one on the right and one on the left.ಅಲ್ಲಿ ಒಬ್ಬನನ್ನು ಬಲಗಡೆಯಲ್ಲಿಯೂ ಮತ್ತೊಬ್ಬನನ್ನು ಎಡಗಡೆಯ ಲ್ಲಿಯೂ ಇಬ್ಬರು ಕಳ್ಳರನ್ನು ಆತನೊಂದಿಗೆ ಶಿಲುಬೆಗೆ ಹಾಕಿದರು.

39 And those who went by said bitter words to him, shaking their heads and saying,ಅಲ್ಲಿ ಹೋಗುತ್ತಿದ್ದವರು ಆತನನ್ನು ದೂಷಿಸಿ ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾ--

40 You who would give the Temple to destruction and put it up again in three days, get yourself free: if you are the Son of God, come down from the cross.ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟುವವನೇ, ನಿನ್ನನ್ನು ನೀನೇ ರಕ್ಷಿಸಿಕೋ; ಮತ್ತು ನೀನು ದೇವಕುಮಾರನಾಗಿದ್ದರೆ ಶಿಲುಬೆಯಿಂದ ಕೆಳಗೆ ಇಳಿದು ಬಾ ಅಂದರು.

41 In the same way, the chief priests, making sport of him, with the scribes and those in authority, said,ಅದೇ ಮೇರೆಗೆ ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಹಿರಿಯರೂ ಆತನಿಗೆ ಹಾಸ್ಯ ಮಾಡಿ--

42 A saviour of others, he has no salvation for himself. If he is the King of Israel, let him now come down from the cross, and we will have faith in him.ಇವನು ಬೇರೆಯವರನ್ನು ರಕ್ಷಿಸಿದನು, ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು.ಇವನು ಇಸ್ರಾಯೇಲಿನ ಅರಸನಾಗಿದ್ದರೆ ಈಗಲೇ ಶಿಲುಬೆಯಿಂದ ಕೆಳಗಿಳಿದು ಬರಲಿ; ಆಗ ನಾವು ಅವನನ್ನು ನಂಬುವೆವು;

43 He put his faith in God; let God be his saviour now, if he will have him; for he said, I am the Son of God.ಇವನು ದೇವರಲ್ಲಿ ವಿಶ್ವಾಸವಿಟ್ಟವನು; ದೇವರಿಗೆ ಇಷ್ಟವಿದ್ದರೆ ಆತನು ಇವನನ್ನು ಈಗ ಬಿಡಿಸಲಿ; ಯಾಕಂದರೆ ಆತನು--ನಾನು ದೇವಕುಮಾರನು ಎಂದು ಹೇಳಿದ್ದಾನೆ ಅಂದರು.

44 And the thieves who were on the crosses said evil words to him.ಆತನ ಜೊತೆಗೆ ಶಿಲುಬೆಗೆ ಹಾಕಲ್ಪಟ್ಟಿದ್ದ ಕಳ್ಳರು ಸಹ ಅದೇ ರೀತಿಯಾಗಿ ಆತನನ್ನು ನಿಂದಿಸಿದರು.

45 Now from the sixth hour it was dark over all the land till the ninth hour.ಆಗ ಆರನೇ ತಾಸಿನಿಂದ ಒಂಭತ್ತನೇ ತಾಸಿನವರೆಗೆ ದೇಶದ ಮೇಲೆಲ್ಲಾ ಕತ್ತಲೆ ಇತ್ತು.

46 And about the ninth hour Jesus gave a loud cry, saying, Eli, Eli, lama sabachthani? that is, My God, my God, why are you turned away from me?ಹೆಚ್ಚು ಕಡಿಮೆ ಒಂಭತ್ತನೆಯ ತಾಸಿನಲ್ಲಿ ಯೇಸು--ಏಲೀ, ಏಲೀ, ಲಮಾ ಸಬಕ್ತಾನೀ? ಅಂದರೆ ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈ ಬಿಟ್ಟಿದ್ದೀ ಎಂದು ಮಹಾಶಬ್ದದಿಂದ ಕೂಗಿ ಹೇಳಿದನು.

47 And some of those who were near by, hearing it, said, This man is crying to Elijah.ಅಲ್ಲಿ ನಿಂತಿ ದ್ದವರಲ್ಲಿ ಕೆಲವರು ಇದನ್ನು ಕೇಳಿದಾಗ--ಇವನು ಎಲೀಯನನ್ನು ಕರೆಯುತ್ತಾನೆ ಅಂದರು.

48 And straight away one of them went quickly, and took a sponge, and made it full of bitter wine, and put it on a rod and gave him drink.ಕೂಡಲೆ ಅವರಲ್ಲಿ ಒಬ್ಬನು ಓಡಿಹೋಗಿ ಸ್ಪಂಜನ್ನು ತಕ್ಕೊಂಡು ಅದನ್ನು ಹುಳಿರಸದಿಂದ ತುಂಬಿಸಿ ಕೋಲಿಗೆ ಸಿಕ್ಕಿಸಿ ಆತನಿಗೆ ಕುಡಿಯುವದಕ್ಕೆ ಕೊಟ್ಟನು.

49 And the rest said, Let him be; let us see if Elijah will come to his help.ಉಳಿದವ ರು--ಇರಲಿ ಬಿಡು, ಎಲೀಯನು ಬಂದು ಇವನನ್ನು ರಕ್ಷಿಸುವನೇನೋ ನಾವು ನೋಡೋಣ ಅಂದರು.

50 And Jesus gave another loud cry, and gave up his spirit.ಯೇಸು ತಿರಿಗಿ ಮಹಾಶಬ್ದದಿಂದ ಕೂಗಿ ಆತ್ಮವನ್ನು ಒಪ್ಪಿಸಿಕೊಟ್ಟನು.

51 And the curtain of the Temple was parted in two from end to end; and there was an earth-shock; and the rocks were broken;ಆಗ ಇಗೋ, ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೆ ಹರಿದು ಎರಡು ಭಾಗವಾಯಿತು; ಭೂಮಿಯು ಕಂಪಿಸಿತು; ಮತ್ತು ಬಂಡೆ ಗಳು ಸೀಳಿದವು;

52 And the resting-places of the dead came open; and the bodies of a number of sleeping saints came to life;ಇದಲ್ಲದೆ ಸಮಾಧಿಗಳು ತೆರೆಯಲ್ಪಟ್ಟವು; ಮತ್ತು ನಿದ್ರೆಹೋದ ಅನೇಕ ಭಕ್ತರ ದೇಹಗಳು ಎದ್ದವು.

53 And coming out of their resting-places, after he had come again from the dead, they went into the holy town and were seen by a number of people.ಆತನು ಪುನರುತ್ಥಾ ನವಾದ ಮೇಲೆ ಅವರು ಸಮಾಧಿಗಳೊಳಗಿಂದ ಹೊರಗೆ ಬಂದು ಪರಿಶುದ್ಧ ಪಟ್ಟಣದೊಳಕ್ಕೆ ಹೋಗಿ ಅನೇಕರಿಗೆ ಕಾಣಿಸಿಕೊಂಡರು.

54 Now the captain and those who were with him watching Jesus, when they saw the earth-shock and the things which were done, were in great fear and said, Truly this was a son of God.ಆಗ ಶತಾಧಿಪತಿಯು ಮತ್ತು ಅವನ ಸಂಗಡ ಯೇಸುವನ್ನು ಕಾಯುತ್ತಿದ್ದವರು ಭೂಕಂಪವನ್ನೂ ಬೇರೆ ಸಂಭವಗಳು ನಡೆದದ್ದನ್ನೂ ನೋಡಿ ಬಹಳವಾಗಿ ಭಯಪಟ್ಟು-- ನಿಜವಾಗಿಯೂ ಈತನು ದೇವಕುಮಾರನಾಗಿದ್ದನು ಅಂದರು

55 And a number of women were there, watching from a distance, who had come with Jesus from Galilee, waiting on his needs.ಯೇಸುವನ್ನು ಗಲಿಲಾಯದಿಂದ ಹಿಂಬಾಲಿಸಿ ಆತನಿಗೆ ಸೇವೆ ಮಾಡಿದ ಅನೇಕ ಸ್ತ್ರೀಯರು ದೂರದಿಂದ ನೋಡುತ್ತಿದ್ದರು.

56 Among whom was Mary Magdalene, and Mary, the mother of James and Joses, and the mother of the sons of Zebedee.ಅವರಲ್ಲಿ ಮಗ್ದಲದ ಮರಿಯಳು ಯಾಕೋಬ ಮತ್ತು ಯೋಸೇಯ ಇವರ ತಾಯಿಯಾದ ಮರಿಯಳು ಮತ್ತು ಜೆಬೆದಾಯನ ಮಕ್ಕಳ ತಾಯಿಯು ಇದ್ದರು.

57 And in the evening, there came a man of wealth from Arimathaea, Joseph by name, who was a disciple of Jesus:ಸಾಯಂಕಾಲವಾದಾಗ ಅರಿಮಥಾಯದ ವನಾದ ಯೋಸೇಫನೆಂಬ ಹೆಸರುಳ್ಳ ಐಶ್ವರ್ಯವಂತ ನಾದ ಒಬ್ಬ ಮನುಷ್ಯನು ಅಲ್ಲಿಗೆ ಬಂದನು. ಅವನು ಸಹ ಯೇಸುವಿನ ಶಿಷ್ಯನಾಗಿದ್ದನು.

58 This man went in to Pilate, and made a request for the body of Jesus. Then Pilate gave orders for it to be given to him.ಅವನು ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹಕ್ಕಾಗಿ ಬೇಡಿಕೊಂಡನು. ಆಗ ಪಿಲಾತನು ಆ ದೇಹವನ್ನು (ಅವನಿಗೆ) ಒಪ್ಪಿಸುವದಕ್ಕೆ ಅಪ್ಪಣೆಕೊಟ್ಟನು.

59 And Joseph took the body, folding it in clean linen,ಯೋಸೇಫನು ಆ ದೇಹವನ್ನು ತಕ್ಕೊಂಡ ಮೇಲೆ ಅದನ್ನು ಶುದ್ಧವಾದ ನಾರುಮಡಿ ಬಟ್ಟೆಯಲ್ಲಿ ಸುತಿ

60 And put it in the resting-place which had been cut out of the rock for himself; and after rolling a great stone to the door of it he went away.ಬಂಡೆಯಲ್ಲಿ ತಾನು ತೋಡಿದ್ದ ತನ್ನ ಹೊಸ ಸಮಾಧಿಯಲ್ಲಿ ಅದನ್ನು ಇಟ್ಟು ಆ ಸಮಾಧಿಯ ಬಾಗಲಿಗೆ ದೊಡ್ಡದೊಂದು ಕಲ್ಲನ್ನು ಉರುಳಿಸಿ ಹೊರಟುಹೋದನು.

61 And Mary Magdalene was there, and the other Mary, seated by the place of the dead.ಅಲ್ಲಿ ಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಆ ಸಮಾಧಿಗೆ ಎದುರಾಗಿ ಕೂತುಕೊಂಡಿದ್ದರು.

62 Now on the day after the getting ready of the Passover, the chief priests and Pharisees came together to Pilate,ಮರುದಿನ ಅಂದರೆ ಸೌರಣೆಯ ದಿನ ಕಳೆದ ಮೇಲೆ ಪ್ರಧಾನಯಾಜಕರು ಮತ್ತು ಫರಿಸಾಯರು ಒಟ್ಟಾಗಿ ಪಿಲಾತನ ಬಳಿಗೆ ಬಂದು--

63 Saying, Sir, we have in mind how that false man said, while he was still living, After three days I will come again from the dead.ಅಯ್ಯಾ, ಆ ಮೋಸಗಾರನು ಇನ್ನೂ ಜೀವದಿಂದಿದ್ದಾಗ-- ಮೂರು ದಿನಗಳಾದ ಮೇಲೆ ನಾನು ತಿರಿಗಿ ಏಳುತ್ತೇನೆ ಎಂದು ಹೇಳಿದ್ದು ನಮ್ಮ ನೆನಪಿಗೆ ಬರುತ್ತದೆ.

64 Give orders, then, that the place where his body is may be made safe till the third day, for fear that his disciples come and take him away secretly and say to the people, He has come back from the dead: and the last error will be worse than the first.ಅವನ ಶಿಷ್ಯರು ರಾತ್ರಿಯಲ್ಲಿ ಬಂದು ಅವನನ್ನು ಕದ್ದುಕೊಂಡು ಹೋಗಿ--ಅವನು ಸತ್ತವರೊ ಳಗಿಂದ ಎದ್ದಿದ್ದಾನೆ ಎಂದು ಜನರಿಗೆ ಹೇಳಿದರೆ ಕೊನೆಯ ತಪ್ಪು ಮೊದಲನೆಯದಕ್ಕಿಂತಲೂ ಕೆಟ್ಟದ್ದಾಗು ವದು. ಆದಕಾರಣ ಮೂರನೆಯ ದಿನದ ವರೆಗೆ ಸಮಾಧಿಯನ್ನು ಭದ್ರಪಡಿಸುವಂತೆ ಅಪ್ಪಣೆ ಕೊಡ ಬೇಕು ಅಂ

65 Pilate said to them, You have watchmen; go and make it as safe as you are able.ಪಿಲಾತನು ಅವರಿಗೆ--ಕಾವಲು ಗಾರರು ನಿಮಗೆ ಇದ್ದಾರಲ್ಲಾ, ನೀವು ಹೋಗಿ ನಿಮಗೆ ಸಾಧ್ಯವಾದ ಮಟ್ಟಿಗೆ ಅದನ್ನು ಭದ್ರಪಡಿಸಿರಿ ಅಂದನು.

66 So they went, and made safe the place where his body was, putting a stamp on the stone, and the watchmen were with them.ಅವರು ಹೋಗಿ ಸಮಾಧಿಯನ್ನು ಭದ್ರಪಡಿಸಿ ಕಲ್ಲಿಗೆ ಮುದ್ರೆಹಾಕಿ ಕಾವಲನ್ನು ಇಟ್ಟರು.

Kannada Bible