Bible

Matthew 27 - ASV (Kannada)

1 Now when morning was come, all the chief priests and the elders of the people took counsel against Jesus to put him to death:ಬೆಳಗಾದಾಗ ಎಲ್ಲಾ ಪ್ರಧಾನ ಯಾಜಕರೂ ಜನರ ಹಿರಿಯರೂ ಯೇಸುವನ್ನು ಕೊಲ್ಲಿಸುವದಕ್ಕೆ ಆತನಿಗೆ ವಿರೋಧವಾಗಿ ಆಲೋಚನೆ ಮಾಡಿಕೊಂಡರು.

2 and they bound him, and led him away, and delivered him up to Pilate the governor.ಮತ್ತು ಅವರು ಆತನನ್ನು ಕಟ್ಟಿ ತೆಗೆದುಕೊಂಡು ಹೋಗಿ ಅಧಿಪತಿಯಾದ ಪೊಂತ್ಯ ಪಿಲಾತನಿಗೆ ಒಪ್ಪಿಸಿದರು.

3 Then Judas, who betrayed him, when he saw that he was condemned, repented himself, and brought back the thirty pieces of silver to the chief priests and elders,ಆಗ ಆತನನ್ನು ಹಿಡುಕೊಟ್ಟ ಯೂದನು ಆತನಿಗೆ ಮರಣದಂಡನೆಯ ತೀರ್ಪಾದದ್ದನ್ನು ನೋಡಿ ಪಶ್ಚಾ ತ್ತಾಪಪಟ್ಟು ಆ ಮೂವತ್ತು ಬೆಳ್ಳಿಯ ನಾಣ್ಯಗಳನು ತಿರಿಗಿ ಪ್ರಧಾನ ಯಾಜಕರ ಮತ್ತು ಹಿರಿಯರ ಬಳಿಗೆ ತಂದು

4 saying, I have sinned in that I betrayed innocent blood. But they said, What is that to us? see thou `to it'.ಅವನು--ನಾನು ನಿರಪರಾಧದ ರಕ್ತವನ್ನು ಹಿಡುಕೊಟ್ಟು ಪಾಪಮಾಡಿದ್ದೇನೆ ಅಂದನು. ಅದಕ್ಕೆ ಅವರು--ಅದು ನಮಗೇನು? ನೀನೇ ಅದನ್ನು ನೋಡಿಕೋ ಅಂದರು.

5 And he cast down the pieces of silver into the sanctuary, and departed; and he went away and hanged himself.ಮತ್ತು ಅವನು ಆ ಬೆಳ್ಳಿಯ ನಾಣ್ಯಗಳನ್ನು ದೇವಾಲಯದಲ್ಲಿ ಬಿಸಾಡಿಬಿಟ್ಟು ಹೊರಟುಹೋಗಿ ಉರ್ಲು ಹಾಕಿಕೊಂಡನು.

6 And the chief priests took the pieces of silver, and said, It is not lawful to put them into the treasury, since it is the price of blood.ಆಗ ಪ್ರಧಾನ ಯಾಜಕರು ಆ ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಂಡು--ಇವುಗಳನ್ನು ಬೊಕ್ಕಸದಲ್ಲಿ ಹಾಕು ವದು ನ್ಯಾಯವಲ್ಲ; ಯಾಕಂದರೆ ಅದು ರಕ್ತದಕ್ರಯ ವಾಗಿದೆ ಅಂದರು.

7 And they took counsel, and bought with them the potter's field, to bury strangers in.ಅವರು ಆಲೋಚನೆ ಮಾಡಿ ಪರದೇಶಿಗಳನ್ನು ಹೂಣಿಡುವದಕ್ಕೆ ಆ ಹಣದಿಂದ ಕುಂಬಾರನ ಹೊಲವನ್ನು ಕೊಂಡುಕೊಂಡರು.

8 Wherefore that field was called, the field of blood, unto this day.ಈ ಕಾರಣದಿಂದ ಆ ಹೊಲವು ರಕ್ತದ ಹೊಲವೆಂದು ಈ ದಿನದ ವರೆಗೆ ಕರೆಯಲ್ಪಟ್ಟಿದೆ.

9 Then was fulfilled that which was spoken through Jeremiah the prophet, saying, And they took the thirty pieces of silver, the price of him that was priced, whom `certain' of the children of Israel did price;ಆಗ ಪ್ರವಾದಿಯಾದ ಯೆರೆವಿಾಯನು ಹೇಳಿದ ಮಾತು ನೆರವೇರಿತು; ಅದೇನಂದರೆ--ಇಸ್ರಾಯೇಲಿನ ಮಕ್ಕಳಲ್ಲಿ ಅವರು ಬೆಲೆ ಕಟ್ಟಿದವನ ಬೆಲೆಯಾದ ಮೂವತ್ತು ಬೆಳ್ಳಿಯ ನಾಣ್ಯಗಳನ್ನು ತಕ್ಕೊಂಡು

10 and they gave them for the potter's field, as the Lord appointed me.ಕರ್ತನು ನನಗಾಗಿ ನೇಮಿಸಿದ ಹಾಗೆ ಅವುಗಳನ್ನು ಕುಂಬಾರನ ಹೊಲಕ್ಕಾಗಿ ಕೊಟ್ಟರು ಎಂಬದು.

11 Now Jesus stood before the governor: and the governor asked him, saying, Art thou the King of the Jews? And Jesus said unto him, Thou sayest.ಯೇಸು ಅಧಿಪತಿಯ ಮುಂದೆ ನಿಂತಿದ್ದನು; ಆಗ ಆ ಅಧಿಪತಿಯು ಆತನಿಗೆ--ನೀನು ಯೆಹೂದ್ಯರ ಅರಸನೋ ಎಂದು ಕೇಳಿದನು. ಅದಕ್ಕೆ ಯೇಸು ಅವನಿಗೆ--ನೀನೇ ಹೇಳುತ್ತೀ ಅಂದನು.

12 And when he was accused by the chief priests and elders, he answered nothing.ಆಗ ಪ್ರಧಾನ ಯಾಜಕರೂ ಹಿರಿಯರೂ ಆತನ ಮೇಲೆ ದೂರು ಹೇಳುತ್ತಿರುವಾಗ ಆತನು ಏನು ಉತ್ತರ ಕೊಡಲಿಲ್ಲ.

13 Then saith Pilate unto him, Hearest thou not how many things they witness against thee?ಆಗ ಪಿಲಾತನು ಆತನಿಗೆ--ನಿನಗೆ ವಿರೋಧವಾಗಿ ಇವರು ಇಷ್ಟು ದೂರು ಹೇಳುವದನ್ನು ನೀನು ಕೇಳುವದಿಲ್ಲವೋ ಅಂದನು.

14 And he gave him no answer, not even to one word: insomuch that the governor marvelled greatly.ಆತನು ಒಂದು ಮಾತಿಗಾದರೂ ಅವನಿಗೆ ಉತ್ತರಕೊಡದೆ ಇದ್ದದರಿಂದ ಅಧಿಪತಿಯು ಅತ್ಯಾಶ್ಚರ್ಯಪಟ್ಟನು.

15 Now at the feast the governor was wont to release unto the multitude one prisoner, whom they would.ಆ ಹಬ್ಬದಲ್ಲಿ ಜನರು ಇಷ್ಟಪಡುವ ಒಬ್ಬ ಸೆರೆಯವನನ್ನು ಅಧಿಪತಿಯು ಬಿಟ್ಟುಬಿಡುವ ಪದ್ಧತಿ ಯಿತ್ತು.

16 And they had then a notable prisoner, called Barabbas.ಆ ಸಮಯದಲ್ಲಿ ಬರಬ್ಬನೆಂಬ ಪ್ರಸಿದ್ಧನಾದ ಸೆರೆಯವನೊಬ್ಬನು ಅವರಲ್ಲಿ ಇದ್ದನು.

17 When therefore they were gathered together, Pilate said unto them, Whom will ye that I release unto you? Barabbas, or Jesus who is called Christ?ಆದದ ರಿಂದ ಅವರು ಕೂಡಿಬಂದಿದ್ದಾಗ ಪಿಲಾತನು ಅವರಿಗೆ--ನಿಮಗೆ ಯಾರನ್ನು ಬಿಟ್ಟುಕೊಡ ಬೇಕನ್ನುತ್ತೀರಿ? ಬರಬ್ಬನನ್ನೋ? ಇಲ್ಲವೆ ಕ್ರಿಸ್ತನನ್ನಿಸಿಕೊಳ್ಳುವ ಯೇಸು ವನ್ನೋ ಎಂದು ಕೇಳಿದನು.

18 For he knew that for envy they had delivered him up.ಯಾಕಂದರೆ ಆತನನ್ನು ಅವರು ಹೊಟ್ಟೇಕಿಚ್ಚಿನಿಂದ ಹಿಡುಕೊಟ್ಟಿದ್ದಾರೆಂದು ಅವನಿಗೆ ಗೊತ್ತಿತ್ತು.

19 And while he was sitting on the judgment-seat, his wife sent unto him, saying, Have thou nothing to do with that righteous man; for I have suffered many things this day in a dream because of him.ಅವನು ನ್ಯಾಯಾಸನದ ಮೇಲೆ ಕೂತಿದ್ದಾಗ ಅವನ ಹೆಂಡತಿಯು ಅವ ನಿಗೆ--ನೀನು ಆ ನೀತಿವಂತನ ಗೊಡವೆಗೆ ಹೋಗ ಬೇಡ; ಯಾಕಂದರೆ ಈ ದಿವಸ ನಾನು ಸ್ವಪ್ನದಲ್ಲಿ ಆತನ ವಿಷಯವಾಗಿ ಬಹಳ ಕಷ್ಟಪಟ್ಟಿದ್ದೇನೆ ಎಂದು ಹೇಳಿಕಳುಹಿಸಿದಳು.

20 Now the chief priests and the elders persuaded the multitudes that they should ask for Barabbas, and destroy Jesus.ಆದರೆ ಪ್ರಧಾನ ಯಾಜಕರು ಮತ್ತು ಹಿರಿಯರು ಬರಬ್ಬನನ್ನು ಬಿಟ್ಟುಕೊಟ್ಟು ಯೇಸು ವನ್ನು ಕೊಲ್ಲುವಂತೆ ಬೇಡಿಕೊಳ್ಳುವ ಹಾಗೆ ಸಮೂಹ ವನ್ನು ಒಡಂಬಡಿಸಿದರು.

21 But the governor answered and said unto them, Which of the two will ye that I release unto you? And they said, Barabbas.ಅಧಿಪತಿಯು ಪ್ರತ್ಯುತ್ತರ ವಾಗಿ ಅವರಿಗೆ--ಈ ಇಬ್ಬರಲ್ಲಿ ನಿಮಗೆ ಯಾರನ್ನು ಬಿಟ್ಟು ಕೊಡಬೇಕನ್ನುತ್ತೀರಿ ಅನ್ನಲು ಅವರು--ಬರಬ್ಬನನ್ನು ಅಂದರು.

22 Pilate saith unto them, What then shall I do unto Jesus who is called Christ? They all say, Let him be crucified.ಪಿಲಾತನು ಅವರಿಗೆ--ಹಾಗಾದರೆ ಕ್ರಿಸ್ತನನ್ನಿಸಿಕೊಳ್ಳುವ ಯೇಸುವನ್ನು ನಾನೇನು ಮಾಡಲಿ ಅನ್ನಲು ಅವರೆಲ್ಲರೂ--ಅವನನ್ನು ಶಿಲುಬೆಗೆ ಹಾಕಿಸು ಎಂದು ಅವನಿಗೆ ಹೇಳಿದರು.

23 And he said, Why, what evil hath he done? But they cried out exceedingly, saying, Let him be crucified.ಆಗ ಅಧಿಪತಿಯು--ಯಾಕೆ? ಆತನು ಕೆಟ್ಟದ್ದೇನು ಮಾಡಿ ದ್ದಾನೆ ಅಂದನು. ಆದರೆ ಅವರು--ಆತನನ್ನು ಶಿಲುಬೆಗೆ ಹಾಕಿಸು ಎಂದು ಹೆಚ್ಚಾಗಿ ಕೂಗಿಕೊಂಡರು.

24 So when Pilate saw that he prevailed nothing, but rather that a tumult was arising, he took water, and washed his hands before the multitude, saying, I am innocent of the blood of this righteous man; see ye `to it'.ಪಿಲಾ ತನು ತನ್ನ ಯತ್ನ ನಡೆಯಲಿಲ್ಲ, ಗದ್ದಲವೇ ಹೆಚ್ಚಾಗುತ್ತದೆ ಎಂದು ನೋಡಿ ನೀರನ್ನು ತೆಗೆದುಕೊಂಡು ಸಮೂಹದ ಮುಂದೆ ತನ್ನ ಕೈಗಳನ್ನು ತೊಳೆದು--ಈ ನೀತಿವಂತನ ರಕ್ತಕ್ಕೆ ನಾನು ನಿರಪರಾಧಿ, ಅದನ್ನು ನೀವೇ ನೋಡಿಕೊಳ್ಳಿರಿ ಅಂದನು.

25 And all the people answered and said, His blood `be' on us, and on our children.ಅದಕ್ಕೆ ಜನರೆ ಲ್ಲರೂ ಪ್ರತ್ಯುತ್ತರವಾಗಿ--ಆತನ ರಕ್ತವು ನಮ್ಮ ಮೇಲೆಯೂ ನಮ್ಮ ಮಕ್ಕಳ ಮೇಲೆಯೂ ಇರಲಿ ಅಂದರು.

26 Then released he unto them Barabbas; but Jesus he scourged and delivered to be crucified.ಆಗ ಅವನು ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡಿಸಿ ಶಿಲುಬೆಗೆ ಹಾಕುವಂತೆ ಒಪ್ಪಿಸಿದನು.

27 Then the soldiers of the governor took Jesus into the Praetorium, and gathered unto him the whole band.ತರುವಾಯ ಅಧಿಪತಿಯ ಸೈನಿಕರು ಯೇಸುವನ್ನು ಸಾಮಾನ್ಯವಾದ ಕೋಣೆಯೊಳಕ್ಕೆ ತೆಗೆದುಕೊಂಡು ಹೋಗಿ ಸೈನಿಕರ ಪೂರ್ಣ ತಂಡವನ್ನು ಆತನ ಮುಂದೆ ಕೂಡಿಸಿದರು.

28 And they stripped him, and put on him a scarlet robe.ಮತ್ತು ಅವರು ಆತನ ಬಟ್ಟೆಗಳನ್ನು ತೆಗೆದು ರಕ್ತವರ್ಣದ ನಿಲುವಂಗಿಯನ್ನು ಆತನಿಗೆ ತೊಡಿಸಿದರು.

29 And they platted a crown of thorns and put it upon his head, and a reed in his right hand; and they kneeled down before him, and mocked him, saying, Hail, King of the Jews!ತರುವಾಯ ಅವರು ಒಂದು ಮುಳ್ಳಿನ ಕಿರೀಟವನ್ನು ಹೆಣೆದು ಅದನ್ನು ಆತನ ತಲೆಯ ಮೇಲಿಟ್ಟು ಬಲಗೈಯಲ್ಲಿ ಒಂದು ಬೆತ್ತವನ್ನು ಕೊಟ್ಟು ಆತನ ಮುಂದೆ ಮೊಣಕಾಲೂರಿ--ಯೆಹೂದ್ಯರ ಅರಸನೇ, ವಂದನೆ ಎಂದು ಹೇಳಿ ಆತನನ್ನು ಹಾಸ್ಯಮಾಡಿದರು.

30 And they spat upon him, and took the reed and smote him on the head.ಅವರು ಆತನ ಮೇಲೆ ಉಗುಳಿ ಆ ಬೆತ್ತವನ್ನು ತಕ್ಕೊಂಡು ಆತನ ತಲೆಯ ಮೇಲೆ ಹೊಡೆದರು.

31 And when they had mocked him, they took off from him the robe, and put on him his garments, and led him away to crucify him.ಅವರು ಆತನಿಗೆ ಹಾಸ್ಯಮಾಡಿದ ಮೇಲೆ ಆ ನಿಲುವಂಗಿಯನ್ನು ಆತ ನಿಂದ ತೆಗೆದು ಆತನ ಸ್ವಂತವಸ್ತ್ರವನ್ನು ಹೊದಿಸಿ ಆತನನ್ನು ಶಿಲುಬೆಗೆ ಹಾಕುವದಕ್ಕಾಗಿ ತಕ್ಕೊಂಡು ಹೋದರು.

32 And as they came out, they found a man of Cyrene, Simon by name: him they compelled to go `with them', that he might bear his cross.ಅವರು ಹೊರಗೆ ಬರುತ್ತಿರುವಾಗ ಕುರೇನ್ಯನಾದ ಸೀಮೋನನೆಂಬ ಮನುಷ್ಯನನ್ನು ಕಂಡು ಆತನ ಶಿಲುಬೆಯನ್ನು ಹೊರುವಂತೆ ಅವನನ್ನು ಬಲವಂತ ಮಾಡಿದರು.

33 And they were come unto a place called Golgotha, that is to say, The place of a skull,ಆಮೇಲೆ ಅವರು ಗೊಲ್ಗೊಥಾ ಎಂದು ಕರೆಯಲ್ಪಟ್ಟ ಕಪಾಲವೆಂಬ ಸ್ಥಳಕ್ಕೆ ಬಂದರು.

34 they gave him wine to drink mingled with gall: and when he had tasted it, he would not drink.ಆಗ ಅವರು ಆತನಿಗೆ ಕಹಿಬೆರಸಿದ ಹುಳಿರಸವನ್ನು ಕುಡಿಯಕೊಟ್ಟರು; ಮತ್ತು ಆತನು ಅದನ್ನು ರುಚಿ ನೋಡಿ ಕುಡಿಯಲೊಲ್ಲದೆ ಇದ್ದನು.

35 And when they had crucified him, they parted his garments among them, casting lots;ತರುವಾಯ ಅವರು ಆತನನ್ನು ಶಿಲುಬೆಗೆ ಹಾಕಿದ ಮೇಲೆ ಆತನ ಬಟ್ಟೆಗಳಿಗಾಗಿ ಚೀಟು ಹಾಕಿ ಹಂಚಿಕೊಂಡರು; ಇದು ಪ್ರವಾದಿಯ ಮುಖಾಂತರ ಹೇಳಲ್ಪಟ್ಟದ್ದು ನೆರವೇರುವಂತೆ ಆಯಿತು. ಅದೇನಂದರೆ--ಅವರು ನನ್ನ ಬಟ್ಟೆಗಳನ್ನು ತಮ್ಮಲ್ಲಿ ಪಾಲುಮಾಡಿಕೊಂಡರು; ಮತ್ತು ನನ್ನ ಅಂಗಿಗೋಸ್ಕರ ಚೀಟು ಹಾಕಿ

36 and they sat and watched him there.ಮತ್ತು ಅವರು ಕೆಳಗೆ ಕೂತುಕೊಂಡು ಆತನನ್ನು ಕಾಯುತ್ತಿದ್ದರು.

37 And they set up over his head his accusation written, THIS IS JESUS THE KING OF THE JEWS.ಇದಲ್ಲದೆ ಆತನ ತಲೆಯ ಮೇಲ್ಭಾಗದಲ್ಲಿ--ಇವನು ಯೆಹೂದ್ಯರ ಅರಸನಾದ ಯೇಸು ಎಂದು ಆತನ ವಿಷಯವಾದ ಅಪರಾಧವನ್ನು ಬರೆಯಿಸಿದರು.

38 Then are there crucified with him two robbers, one on the right hand and one on the left.ಅಲ್ಲಿ ಒಬ್ಬನನ್ನು ಬಲಗಡೆಯಲ್ಲಿಯೂ ಮತ್ತೊಬ್ಬನನ್ನು ಎಡಗಡೆಯ ಲ್ಲಿಯೂ ಇಬ್ಬರು ಕಳ್ಳರನ್ನು ಆತನೊಂದಿಗೆ ಶಿಲುಬೆಗೆ ಹಾಕಿದರು.

39 And they that passed by railed on him, wagging their heads,ಅಲ್ಲಿ ಹೋಗುತ್ತಿದ್ದವರು ಆತನನ್ನು ದೂಷಿಸಿ ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾ--

40 and saying, Thou that destroyest the temple, and buildest it in three days, save thyself: if thou art the Son of God, come down from the cross.ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟುವವನೇ, ನಿನ್ನನ್ನು ನೀನೇ ರಕ್ಷಿಸಿಕೋ; ಮತ್ತು ನೀನು ದೇವಕುಮಾರನಾಗಿದ್ದರೆ ಶಿಲುಬೆಯಿಂದ ಕೆಳಗೆ ಇಳಿದು ಬಾ ಅಂದರು.

41 In like manner also the chief priests mocking `him', with the scribes and elders, said,ಅದೇ ಮೇರೆಗೆ ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಹಿರಿಯರೂ ಆತನಿಗೆ ಹಾಸ್ಯ ಮಾಡಿ--

42 He saved others; himself he cannot save. He is the King of Israel; let him now come down from the cross, and we will believe on him.ಇವನು ಬೇರೆಯವರನ್ನು ರಕ್ಷಿಸಿದನು, ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು.ಇವನು ಇಸ್ರಾಯೇಲಿನ ಅರಸನಾಗಿದ್ದರೆ ಈಗಲೇ ಶಿಲುಬೆಯಿಂದ ಕೆಳಗಿಳಿದು ಬರಲಿ; ಆಗ ನಾವು ಅವನನ್ನು ನಂಬುವೆವು;

43 He trusteth on God; let him deliver him now, if he desireth him: for he said, I am the Son of God.ಇವನು ದೇವರಲ್ಲಿ ವಿಶ್ವಾಸವಿಟ್ಟವನು; ದೇವರಿಗೆ ಇಷ್ಟವಿದ್ದರೆ ಆತನು ಇವನನ್ನು ಈಗ ಬಿಡಿಸಲಿ; ಯಾಕಂದರೆ ಆತನು--ನಾನು ದೇವಕುಮಾರನು ಎಂದು ಹೇಳಿದ್ದಾನೆ ಅಂದರು.

44 And the robbers also that were crucified with him cast upon him the same reproach.ಆತನ ಜೊತೆಗೆ ಶಿಲುಬೆಗೆ ಹಾಕಲ್ಪಟ್ಟಿದ್ದ ಕಳ್ಳರು ಸಹ ಅದೇ ರೀತಿಯಾಗಿ ಆತನನ್ನು ನಿಂದಿಸಿದರು.

45 Now from the sixth hour there was darkness over all the land until the ninth hour.ಆಗ ಆರನೇ ತಾಸಿನಿಂದ ಒಂಭತ್ತನೇ ತಾಸಿನವರೆಗೆ ದೇಶದ ಮೇಲೆಲ್ಲಾ ಕತ್ತಲೆ ಇತ್ತು.

46 And about the ninth hour Jesus cried with a loud voice, saying, Eli, Eli, lama sabachthani? that is, My God, my God, why hast thou forsaken me?ಹೆಚ್ಚು ಕಡಿಮೆ ಒಂಭತ್ತನೆಯ ತಾಸಿನಲ್ಲಿ ಯೇಸು--ಏಲೀ, ಏಲೀ, ಲಮಾ ಸಬಕ್ತಾನೀ? ಅಂದರೆ ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈ ಬಿಟ್ಟಿದ್ದೀ ಎಂದು ಮಹಾಶಬ್ದದಿಂದ ಕೂಗಿ ಹೇಳಿದನು.

47 And some of them stood there, when they heard it, said, This man calleth Elijah.ಅಲ್ಲಿ ನಿಂತಿ ದ್ದವರಲ್ಲಿ ಕೆಲವರು ಇದನ್ನು ಕೇಳಿದಾಗ--ಇವನು ಎಲೀಯನನ್ನು ಕರೆಯುತ್ತಾನೆ ಅಂದರು.

48 And straightway one of them ran, and took a sponge, and filled it with vinegar, and put it on a reed, and gave him to drink.ಕೂಡಲೆ ಅವರಲ್ಲಿ ಒಬ್ಬನು ಓಡಿಹೋಗಿ ಸ್ಪಂಜನ್ನು ತಕ್ಕೊಂಡು ಅದನ್ನು ಹುಳಿರಸದಿಂದ ತುಂಬಿಸಿ ಕೋಲಿಗೆ ಸಿಕ್ಕಿಸಿ ಆತನಿಗೆ ಕುಡಿಯುವದಕ್ಕೆ ಕೊಟ್ಟನು.

49 And the rest said, Let be; let us see whether Elijah cometh to save him.ಉಳಿದವ ರು--ಇರಲಿ ಬಿಡು, ಎಲೀಯನು ಬಂದು ಇವನನ್ನು ರಕ್ಷಿಸುವನೇನೋ ನಾವು ನೋಡೋಣ ಅಂದರು.

50 And Jesus cried again with a loud voice, and yielded up his spirit.ಯೇಸು ತಿರಿಗಿ ಮಹಾಶಬ್ದದಿಂದ ಕೂಗಿ ಆತ್ಮವನ್ನು ಒಪ್ಪಿಸಿಕೊಟ್ಟನು.

51 And behold, the veil of the temple was rent in two from the top to the bottom; and the earth did quake; and the rocks were rent;ಆಗ ಇಗೋ, ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೆ ಹರಿದು ಎರಡು ಭಾಗವಾಯಿತು; ಭೂಮಿಯು ಕಂಪಿಸಿತು; ಮತ್ತು ಬಂಡೆ ಗಳು ಸೀಳಿದವು;

52 and the tombs were opened; and many bodies of the saints that had fallen asleep were raised;ಇದಲ್ಲದೆ ಸಮಾಧಿಗಳು ತೆರೆಯಲ್ಪಟ್ಟವು; ಮತ್ತು ನಿದ್ರೆಹೋದ ಅನೇಕ ಭಕ್ತರ ದೇಹಗಳು ಎದ್ದವು.

53 and coming forth out of the tombs after his resurrection they entered into the holy city and appeared unto many.ಆತನು ಪುನರುತ್ಥಾ ನವಾದ ಮೇಲೆ ಅವರು ಸಮಾಧಿಗಳೊಳಗಿಂದ ಹೊರಗೆ ಬಂದು ಪರಿಶುದ್ಧ ಪಟ್ಟಣದೊಳಕ್ಕೆ ಹೋಗಿ ಅನೇಕರಿಗೆ ಕಾಣಿಸಿಕೊಂಡರು.

54 Now the centurion, and they that were with him watching Jesus, when they saw the earthquake, and the things that were done, feared exceedingly, saying, Truly this was the Son of God.ಆಗ ಶತಾಧಿಪತಿಯು ಮತ್ತು ಅವನ ಸಂಗಡ ಯೇಸುವನ್ನು ಕಾಯುತ್ತಿದ್ದವರು ಭೂಕಂಪವನ್ನೂ ಬೇರೆ ಸಂಭವಗಳು ನಡೆದದ್ದನ್ನೂ ನೋಡಿ ಬಹಳವಾಗಿ ಭಯಪಟ್ಟು-- ನಿಜವಾಗಿಯೂ ಈತನು ದೇವಕುಮಾರನಾಗಿದ್ದನು ಅಂದರು

55 And many women were there beholding from afar, who had followed Jesus from Galilee, ministering unto him:ಯೇಸುವನ್ನು ಗಲಿಲಾಯದಿಂದ ಹಿಂಬಾಲಿಸಿ ಆತನಿಗೆ ಸೇವೆ ಮಾಡಿದ ಅನೇಕ ಸ್ತ್ರೀಯರು ದೂರದಿಂದ ನೋಡುತ್ತಿದ್ದರು.

56 among whom was Mary Magdalene, and Mary the mother of James and Joses, and the mother of the sons of Zebedee.ಅವರಲ್ಲಿ ಮಗ್ದಲದ ಮರಿಯಳು ಯಾಕೋಬ ಮತ್ತು ಯೋಸೇಯ ಇವರ ತಾಯಿಯಾದ ಮರಿಯಳು ಮತ್ತು ಜೆಬೆದಾಯನ ಮಕ್ಕಳ ತಾಯಿಯು ಇದ್ದರು.

57 And when even was come, there came a rich man from Arimathaea, named Joseph, who also himself was Jesus' disciple:ಸಾಯಂಕಾಲವಾದಾಗ ಅರಿಮಥಾಯದ ವನಾದ ಯೋಸೇಫನೆಂಬ ಹೆಸರುಳ್ಳ ಐಶ್ವರ್ಯವಂತ ನಾದ ಒಬ್ಬ ಮನುಷ್ಯನು ಅಲ್ಲಿಗೆ ಬಂದನು. ಅವನು ಸಹ ಯೇಸುವಿನ ಶಿಷ್ಯನಾಗಿದ್ದನು.

58 this man went to Pilate, and asked for the body of Jesus. Then Pilate commanded it to be given up.ಅವನು ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹಕ್ಕಾಗಿ ಬೇಡಿಕೊಂಡನು. ಆಗ ಪಿಲಾತನು ಆ ದೇಹವನ್ನು (ಅವನಿಗೆ) ಒಪ್ಪಿಸುವದಕ್ಕೆ ಅಪ್ಪಣೆಕೊಟ್ಟನು.

59 And Joseph took the body, and wrapped it in a clean linen cloth,ಯೋಸೇಫನು ಆ ದೇಹವನ್ನು ತಕ್ಕೊಂಡ ಮೇಲೆ ಅದನ್ನು ಶುದ್ಧವಾದ ನಾರುಮಡಿ ಬಟ್ಟೆಯಲ್ಲಿ ಸುತಿ

60 and laid it in his own new tomb, which he had hewn out in the rock: and he rolled a great stone to the door of the tomb, and departed.ಬಂಡೆಯಲ್ಲಿ ತಾನು ತೋಡಿದ್ದ ತನ್ನ ಹೊಸ ಸಮಾಧಿಯಲ್ಲಿ ಅದನ್ನು ಇಟ್ಟು ಆ ಸಮಾಧಿಯ ಬಾಗಲಿಗೆ ದೊಡ್ಡದೊಂದು ಕಲ್ಲನ್ನು ಉರುಳಿಸಿ ಹೊರಟುಹೋದನು.

61 And Mary Magdalene was there, and the other Mary, sitting over against the sepulchre.ಅಲ್ಲಿ ಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಆ ಸಮಾಧಿಗೆ ಎದುರಾಗಿ ಕೂತುಕೊಂಡಿದ್ದರು.

62 Now on the morrow, which is `the day' after the Preparation, the chief priests and the Pharisees were gathered together unto Pilate,ಮರುದಿನ ಅಂದರೆ ಸೌರಣೆಯ ದಿನ ಕಳೆದ ಮೇಲೆ ಪ್ರಧಾನಯಾಜಕರು ಮತ್ತು ಫರಿಸಾಯರು ಒಟ್ಟಾಗಿ ಪಿಲಾತನ ಬಳಿಗೆ ಬಂದು--

63 saying, Sir, we remember that that deceiver said while he was yet alive, After three days I rise again.ಅಯ್ಯಾ, ಆ ಮೋಸಗಾರನು ಇನ್ನೂ ಜೀವದಿಂದಿದ್ದಾಗ-- ಮೂರು ದಿನಗಳಾದ ಮೇಲೆ ನಾನು ತಿರಿಗಿ ಏಳುತ್ತೇನೆ ಎಂದು ಹೇಳಿದ್ದು ನಮ್ಮ ನೆನಪಿಗೆ ಬರುತ್ತದೆ.

64 Command therefore that the sepulchre be made sure until the third day, lest haply his disciples come and steal him away, and say unto the people, He is risen from the dead: and the last error will be worse than the first.ಅವನ ಶಿಷ್ಯರು ರಾತ್ರಿಯಲ್ಲಿ ಬಂದು ಅವನನ್ನು ಕದ್ದುಕೊಂಡು ಹೋಗಿ--ಅವನು ಸತ್ತವರೊ ಳಗಿಂದ ಎದ್ದಿದ್ದಾನೆ ಎಂದು ಜನರಿಗೆ ಹೇಳಿದರೆ ಕೊನೆಯ ತಪ್ಪು ಮೊದಲನೆಯದಕ್ಕಿಂತಲೂ ಕೆಟ್ಟದ್ದಾಗು ವದು. ಆದಕಾರಣ ಮೂರನೆಯ ದಿನದ ವರೆಗೆ ಸಮಾಧಿಯನ್ನು ಭದ್ರಪಡಿಸುವಂತೆ ಅಪ್ಪಣೆ ಕೊಡ ಬೇಕು ಅಂ

65 Pilate said unto them, Ye have a guard: go, make it `as' sure as ye can.ಪಿಲಾತನು ಅವರಿಗೆ--ಕಾವಲು ಗಾರರು ನಿಮಗೆ ಇದ್ದಾರಲ್ಲಾ, ನೀವು ಹೋಗಿ ನಿಮಗೆ ಸಾಧ್ಯವಾದ ಮಟ್ಟಿಗೆ ಅದನ್ನು ಭದ್ರಪಡಿಸಿರಿ ಅಂದನು.

66 So they went, and made the sepulchre sure, sealing the stone, the guard being with them.ಅವರು ಹೋಗಿ ಸಮಾಧಿಯನ್ನು ಭದ್ರಪಡಿಸಿ ಕಲ್ಲಿಗೆ ಮುದ್ರೆಹಾಕಿ ಕಾವಲನ್ನು ಇಟ್ಟರು.

Kannada Bible