Matthew 21 - WEB (Kannada)
1 When they drew near to Jerusalem, and came to Bethsphage,{TR reads "Bethphage" instead of "Bethsphage"} to the Mount of Olives, then Jesus sent two disciples,ಅವರು ಯೆರೂಸಲೇಮಿಗೆ ಸಮಾಪಿಸಿ ಎಣ್ಣೇ ಮರಗಳ ಗುಡ್ಡದ ಬೇತ್ಫಗೆಗೆ ಬಂದಾಗ ಯೇಸು ಇಬ್ಬರು ಶಿಷ್ಯರನ್ನು ಕಳುಹಿಸಿ ಅವರಿಗೆ--
2 saying to them, "Go into the village that is opposite you, and immediately you will find a donkey tied, and a colt with her. Untie them, and bring them to me.ನಿಮ್ಮ ಎದುರಿಗಿರುವ ಹಳ್ಳಿಗೆ ಹೋಗಿರಿ; ಆಗ ಒಂದು ಕತ್ತೆಯು ತನ್ನ ಮರಿಯೊಂದಿಗೆ ಕಟ್ಟಲ್ಪಟ್ಟಿರುವದನ್ನು ನೀವು ತಕ್ಷಣವೇ ಕಾಣುವಿರಿ; ಅವುಗಳನ್ನು ಬಿಚ್ಚಿ ನನ್ನ ಬಳಿಗೆ ತಕ್ಕೊಂಡು ಬನ್ನಿರಿ.
3 If anyone says anything to you, you shall say, 'The Lord needs them,' and immediately he will send them."ಮತ್ತು ಯಾವನಾದರೂ ನಿಮಗೆ ಏನಾದರೂ ಹೇಳಿದರೆ ನೀವು ಅವನಿಗೆ--ಅವು ಕರ್ತನಿಗೆ ಬೇಕಾಗಿವೆ ಎಂದು ಹೇಳಿರಿ; ಆಗ ಅವನು ಅವುಗಳನ್ನು ಕೂಡಲೆ ಕಳುಹಿಸುವನು ಎಂದು ಹೇಳಿದನು.
4 All this was done, that it might be fulfilled which was spoken through the prophet, saying,ಇದೆಲ್ಲವೂ ಪ್ರವಾದಿಯಿಂದ ಹೇಳಲ್ಪಟ್ಟದ್ದು ನೆರವೇರು ವಂತೆ ಆಯಿತು; ಅದೇನಂದರೆ--
5 "Tell the daughter of Zion, Behold, your King comes to you, Humble, and riding on a donkey, On a colt, the foal of a donkey."ಇಗೋ, ನಿನ್ನ ಅರಸನು ಸಾತ್ವಿಕನು, ಆತನು ಕತ್ತೆಯನ್ನೂ ಕತ್ತೆಯ ಮರಿಯನ್ನೂ ಹತ್ತಿದವನಾಗಿ ನಿನ್ನ ಬಳಿಗೆ ಬರುತ್ತಾನೆ ಎಂದು ಚೀಯೋನ್ ಕುಮಾರ್ತೆಗೆ ಹೇಳಿರಿ ಎಂಬದೇ.
6 The disciples went, and did just as Jesus commanded them,ಆಗ ಶಿಷ್ಯರು ಹೊರಟುಹೋಗಿ ಯೇಸು ತಮಗೆ ಅಪ್ಪಣೆಕೊಟ್ಟಂತೆಯೇ ಮಾಡಿದರು.
7 and brought the donkey and the colt, and laid their clothes on them; and he sat on them.ಮತ್ತು ಅವರು ಕತ್ತೆಯನ್ನೂ ಅದರ ಮರಿಯನ್ನೂ ತಂದು ಅವುಗಳ ಮೇಲೆ ತಮ್ಮ ವಸ್ತ್ರಗಳನ್ನು ಹಾಕಿ ಆತನನ್ನು ಆದರ ಮೇಲೆ ಕೂಡ್ರಿಸಿದರು.
8 A very great multitude spread their clothes on the road. Others cut branches from the trees, and spread them on the road.ಆಗ ಅತಿ ದೊಡ್ಡ ಜನರ ಸಮೂಹವು ತಮ್ಮ ವಸ್ತ್ರಗಳನ್ನು ದಾರಿಯಲ್ಲಿ ಹಾಸಿದರು; ಬೇರೆಯವರು ಮರಗಳಿಂದ ಕೊಂಬೆಗಳನ್ನು ಕತ್ತರಿಸಿ ದಾರಿಯಲ್ಲಿ ಹರಡಿದರು.
9 The multitudes who went before him, and who followed kept shouting, "Hosanna to the son of David! Blessed is he who comes in the name of the Lord! Hosanna in the highest!"ಆತನ ಮುಂದೆಯೂ ಹಿಂದೆಯೂ ಹೋಗುತ್ತಿದ್ದ ಜನರ ಸಮೂಹಗಳು--ದಾವೀದನ ಕುಮಾರನಿಗೆ ಹೊಸನ್ನ; ಕರ್ತನ ಹೆಸರಿನಲ್ಲಿ ಬರುವಾತನು ಧನ್ಯನು; ಮಹೋನ್ನತದಲ್ಲಿ ಹೊಸನ್ನ ಎಂದು ಕೂಗುತ್ತಾ ಹೇಳಿದರು.
10 When he had come into Jerusalem, all the city was stirred up, saying, "Who is this?"ಆತನು ಯೆರೂಸಲೇಮಿಗೆ ಬಂದಾಗ ಪಟ್ಟಣ ವೆಲ್ಲಾ ಕದಲಿ--ಈತನು ಯಾರು ಎಂದು ಕೇಳಿದರು.
11 The multitudes said, "This is the prophet, Jesus, from Nazareth of Galilee."ಅದಕ್ಕೆ ಜನರ ಸಮೂಹವು --ಈತನು ಗಲಿಲಾಯ ದ ನಜರೇತಿನ ಪ್ರವಾದಿಯಾದ ಯೇಸುವು ಎಂದು ಹೇಳಿದರು.
12 Jesus entered into the temple of God, and drove out all of those who sold and bought in the temple, and overthrew the money-changers' tables and the seats of those who sold the doves.ಯೇಸು ದೇವಾಲಯದೊಳಗೆ ಹೋಗಿ ಅದರಲ್ಲಿ ಕ್ರಯ ವಿಕ್ರಯ ಮಾಡುವವರನ್ನೆಲ್ಲಾ ಹೊರಗೆ ಹಾಕಿ ಹಣ ಬದಲಾಯಿಸುವವರ ಮೇಜುಗಳನ್ನೂ ಪಾರಿ ವಾಳ ಮಾರುವವರ ಆಸನಗಳನ್ನೂ ಕೆಡವಿಹಾಕಿ ದನು.
13 He said to them, "It is written, 'My house shall be called a house of prayer,' but you have made it a den of robbers!"ಆತನು ಅವರಿಗೆ--ನನ್ನ ಮನೆಯು ಪ್ರಾರ್ಥನೆಯ ಮನೆ ಎಂದು ಕರೆಯಲ್ಪಡುವದಾಗಿ ಬರೆದದೆ; ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ ಎಂದು ಹೇಳಿದನು.
14 The blind and the lame came to him in the temple, and he healed them.ಆಗ ಕುರುಡರು ಮತ್ತು ಕುಂಟರು ದೇವಾಲಯ ದಲ್ಲಿ ಆತನ ಬಳಿಗೆ ಬಂದರು; ಆತನು ಅವರನ್ನು ಸ್ವಸ್ಥ ಮಾಡಿದನು.
15 But when the chief priests and the scribes saw the wonderful things that he did, and the children who were crying in the temple and saying, "Hosanna to the son of David!" they were indignant,ಆತನು ಮಾಡಿದ ಅದ್ಭುತ ಕಾರ್ಯಗಳನ್ನು ಮತ್ತು ಮಕ್ಕಳು ದೇವಾಲಯ ದಲ್ಲಿ--ದಾವೀದನ ಕುಮಾರನಿಗೆ ಹೊಸನ್ನ ಎಂದು ಕೂಗುವದನ್ನು ಪ್ರಧಾನ ಯಾಜಕರೂ ಶಾಸ್ತ್ರಿಗಳೂ ನೋಡಿ ಕೋಪಗೊಂಡು ಆತನಿಗೆ--
16 and said to him, "Do you hear what these are saying?" Jesus said to them, "Yes. Did you never read, 'Out of the mouth of babes and nursing babies you have perfected praise?'"ಇವರು ಹೇಳುವದೇನೆಂದು ನೀನು ಕೇಳುತ್ತೀಯೋ ಎಂದು ಕೇಳಿದ್ದಕ್ಕೆ ಯೇಸು ಅವರಿಗೆ -- ಹೌದು, ಸಣ್ಣ ಮಕ್ಕಳ ಮತ್ತು ಮೊಲೇಕೂಸುಗಳ ಬಾಯಿಂದ ನೀನು ಸ್ತೋತ್ರವನ್ನು ಸಿದ್ಧಿಗೆ ತಂದಿದ್ದೀ ಎಂಬದನ್ನು ನೀವು ಎಂದಾದರೂ ಓದಲಿಲ್ಲವೋ ಅಂದನು.
17 He left them, and went out of the city to Bethany, and lodged there.ಆತನು ಅವರನ್ನು ಬಿಟ್ಟು ಪಟ್ಟಣದಿಂದ ಹೊರಟು ಬೇಥಾನ್ಯಕ್ಕೆ ಹೋಗಿ ಅಲ್ಲಿ ಇಳುಕೊಂಡನು.
18 Now in the morning, as he returned to the city, he was hungry.ಬೆಳಿಗ್ಗೆ ಪಟ್ಟಣಕ್ಕೆ ಹಿಂದಿರುಗಿ ಬರುತ್ತಿದ್ದಾಗ ಆತನು ಹಸಿದಿದ್ದನು.
19 Seeing a fig tree by the road, he came to it, and found nothing on it but leaves. He said to it, "Let there be no fruit from you forever!" Immediately the fig tree withered away.ಆಗ ಆತನು ದಾರಿಯಲ್ಲಿ ಒಂದು ಅಂಜೂರದ ಮರವನ್ನು ಕಂಡು ಅದರ ಬಳಿಗೆ ಬಂದಾಗ ಎಲೆಗಳನ್ನೇ ಹೊರತು ಮತ್ತೇನೂ ಅದರಲ್ಲಿ ಕಾಣಲಿಲ್ಲ. ಆಗ ಆತನು ಅದಕ್ಕೆ--ಇನ್ನು ಮೇಲೆ ಎಂದೆಂದಿಗೂ ನಿನ್ನಲ್ಲಿ ಫಲವು ಬಾರದಿರಲಿ ಅಂದನು. ತಕ್ಷಣವೇ ಆ ಅಂಜೂರದ ಮರವು ಒಣಗಿ ಹೋಯಿತು.
20 When the disciples saw it, they marveled, saying, "How did the fig tree immediately wither away?"ಶಿಷ್ಯರು ಅದನ್ನು ನೋಡಿ ಆಶ್ಚರ್ಯ ದಿಂದ --ಎಷ್ಟು ಬೇಗನೆ ಈ ಅಂಜೂರದ ಮರವು ಒಣಗಿಹೋಯಿತಲ್ಲಾ ಎಂದು ಹೇಳಿದನು.
21 Jesus answered them, "Most assuredly I tell you, if you have faith, and don't doubt, you will not only do what is done to the fig tree, but even if you told this mountain, 'Be taken up and cast into the sea,' it would be done.ಯೇಸು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ನಿಮ್ಮಲ್ಲಿ ನಂಬಿಕೆಯಿದ್ದು ಮತ್ತು ಸಂದೇಹ ಪಡದೆಹೋದರೆ ಈ ಅಂಜೂರದ ಮರಕ್ಕೆ ಮಾಡಿದಂತೆ ಮಾಡುವದಲ್ಲದೆ ನೀವು ಈ ಗುಡ್ಡಕ್ಕೆ --ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು ಎಂದು ಹೇಳಿದರೂ ಅದು ಆಗುವ
22 All things, whatever you ask in prayer, believing, you will receive."ನೀವು ನಂಬುವವ ರಾಗಿ ಪ್ರಾರ್ಥನೆಯಲ್ಲಿ ಏನೇನೂ ಕೇಳುವಿರೋ ಅವುಗಳನ್ನೆಲ್ಲಾ ಹೊಂದುವಿರಿ ಅಂದನು.
23 When he had come into the temple, the chief priests and the elders of the people came to him as he was teaching, and said, "By what authority do you do these things? Who gave you this authority?"ಆತನು ದೇವಾಲಯಕ್ಕೆ ಬಂದು ಬೋಧಿಸು ತ್ತಿದ್ದಾಗ ಪ್ರಧಾನಯಾಜಕರೂ ಜನರ ಹಿರಿಯರೂ ಆತನ ಬಳಿಗೆ ಬಂದು--ಯಾವ ಅಧಿಕಾರದಿಂದ ನೀನು ಇವುಗಳನ್ನು ಮಾಡುತ್ತೀ? ಮತ್ತು ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು ಎಂದು ಕೇಳಿದರು.
24 Jesus answered them, "I also will ask you one question, which if you tell me, I likewise will tell you by what authority I do these things.ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ನಾನು ಸಹ ಒಂದು ವಿಷಯ ನಿಮ್ಮನ್ನು ಕೇಳುತ್ತೇನೆ; ಅದನ್ನು ನೀವು ನನಗೆ ಹೇಳಿದರೆ ನಾನು ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇ ನೆಂದು ನಿಮಗೆ ಹೇಳುವೆನು ಎಂದು ಹೇಳಿ--ಯೋಹಾನನ ಬಾಪ್ತಿಸ್ಮವು ಎಲ್ಲಿಂದ ಬಂತು?
25 The baptism of John, where was it from? From heaven or from men?" They reasoned with themselves, saying, "If we say, 'From heaven,' he will ask us, 'Why then did you not believe him?'ಪರ ಲೋಕದಿಂದಲೋ ಇಲ್ಲವೆ ಮನುಷ್ಯರಿಂದಲೋ ಎಂದು ಕೇಳಿದಾಗ ಅವರು ತಮ್ಮತಮ್ಮೊಳಗೆ ತರ್ಕಿ ಸುತ್ತಾ--ಪರಲೋಕದಿಂದ ಎಂದು ಹೇಳಿದರೆ ಆತನು ನಮಗೆ--ನೀವು ಅವನನ್ನು ಯಾಕೆ ನಂಬಲಿಲ್ಲ ಎಂದು ಹೇಳಾನು.
26 But if we say, 'From men,' we fear the multitude, for all hold John as a prophet."ಮನುಷ್ಯರಿಂದ ಎಂದು ನಾವು ಹೇಳಿ ದರೆ ಜನರಿಗೆ ಭಯಪಡುತ್ತೇವೆ; ಯಾಕಂದರೆ ಯೋಹಾನನು ಪ್ರವಾದಿಯೆಂದು ಎಲ್ಲರೂ ಎಣಿಸು ತ್ತಾರೆ ಎಂದು ಅಂದುಕೊಂಡರು.
27 They answered Jesus, and said, "We don't know." He also said to them, "Neither will I tell you by what authority I do these things.ತರುವಾಯ ಅವರು ಪ್ರತ್ಯುತ್ತರವಾಗಿ ಯೇಸುವಿಗೆ--ನಾವು ಹೇಳ ಲಾರೆವು ಅಂದರು. ಅದಕ್ಕೆ ಆತನು ಅವರಿಗೆ-- ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುವದಿಲ್ಲ.
28 But what do you think? A man had two sons, and he came to the first, and said, 'Son, go work today in my vineyard.'ನೀವು ನೆನಸುವದೇನು? ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು; ಅವನು ಮೊದಲನೆಯವನ ಬಳಿಗೆ ಬಂದು--ಮಗನೇ, ಹೋಗಿ ಈ ಹೊತ್ತು ನನ್ನ ದ್ರಾಕ್ಷೇತೋಟದಲ್ಲಿ ಕೆಲಸಮಾಡು ಎಂದು ಹೇಳಿದನು.
29 He answered, 'I will not,' but afterward he changed his mind, and went.ಅವನು ಪ್ರತ್ಯುತ್ತರವಾಗಿ--ನಾನು ಹೋಗುವದಿಲ್ಲ ಎಂದು ಹೇಳಿ ತರುವಾಯ ಪಶ್ಚಾ ತ್ತಾಪಪಟ್ಟು ಹೋದನು.
30 He came to the second, and said the same thing. He answered, 'I go, sir,' but he didn't go.ಆಮೇಲೆ ಅವನು ಎರಡ ನೆಯವನ ಬಳಿಗೆ ಬಂದು ಅದೇ ಪ್ರಕಾರ ಅವನಿಗೆ ಹೇಳಿದನು. ಅದಕ್ಕವನು ಪ್ರತ್ಯುತ್ತರವಾಗಿ--ಅಯ್ಯಾ, ನಾನು ಹೋಗುತ್ತೇನೆ ಎಂದು ಹೇಳಿ ಹೋಗಲಿಲ್ಲ.
31 Which of the two did the will of his father?" They said to him, "The first." Jesus said to them, "Most assuredly I tell you that the tax collectors and the prostitutes are entering into the Kingdom of God before you.ಈ ಇಬ್ಬರಲ್ಲಿ ಯಾವನು ತನ್ನ ತಂದೆಯ ಇಷ್ಟದಂತೆ ಮಾಡಿದನು ಎಂದು ಕೇಳಲು ಅವರು ಆತನಿಗೆ--ಮೊದಲನೆಯವನು ಅಂದರು. ಆಗ ಯೇಸು ಅವರಿಗೆ --ಸುಂಕದವರೂ ಸೂಳೆಯರೂ ನಿಮಗಿಂತ ಮೊದಲು ದೇವರರಾಜ್ಯದೊಳಗೆ ಸೇರುವರೆಂದು ನಿಮಗೆ ನಿಜವಾಗಿ ಹೇಳುತ್ತೇನೆ.
32 For John came to you in the way of righteousness, and you didn't believe him, but the tax collectors and the prostitutes believed him. When you saw it, you didn't even repent afterward, that you might believe him.ಯಾಕಂದರೆ ಯೋಹಾನನು ನೀತಿಯ ಮಾರ್ಗದಲ್ಲಿ ನಿಮ್ಮ ಬಳಿಗೆ ಬಂದನು. ಮತ್ತು ನೀವು ಅವನನ್ನು ನಂಬಲಿಲ್ಲ; ಆದರೆ ಸುಂಕದವರೂ ಸೂಳೆಯರೂ ಅವನನ್ನು ನಂಬಿದರು; ನೀವು ಅದನ್ನು ನೋಡಿದ ಮೇಲೆಯೂ ಅವನನ್ನು ನಂಬುವಂತೆ ಪಶ್ಚಾತ್ತಾಪ ಪಡಲಿಲ್ಲ.
33 "Hear another parable. There was a man who was a master of a household, who planted a vineyard, set a hedge about it, dug a winepress in it, built a tower, leased it out to farmers, and went into another country.ಮತ್ತೊಂದು ಸಾಮ್ಯವನ್ನು ಕೇಳಿರಿ: ಒಬ್ಬ ಮನೇ ಯಜಮಾನನು ದ್ರಾಕ್ಷೇತೋಟವನ್ನು ನೆಟ್ಟು ಅದರ ಸುತ್ತಲೂ ಬೇಲಿಹಾಕಿ ಅದರೊಳಗೆ ತೊಟ್ಟಿಯನ್ನು ಅಗೆದು ಗೋಪುರವನ್ನು ಕಟ್ಟಿ ಒಕ್ಕಲಿಗರಿಗೆ ವಾರಕ್ಕೆ ಕೊಟ್ಟು ದೂರದೇಶಕ್ಕೆ ಹೋದನು.
34 When the season for the fruit drew near, he sent his servants to the farmers, to receive his fruit.ಫಲದ ಕಾಲವು ಸಮಾಪಿಸಿದಾಗ ತನ್ನ ಫಲಗಳನ್ನು ಪಡಕೊಳ್ಳು ವದಕ್ಕೆ ತನ್ನ ಸೇವಕರನ್ನು ಒಕ್ಕಲಿಗರ ಬಳಿಗೆ ಕಳುಹಿಸಿಕೊಟ್ಟನು.
35 The farmers took his servants, beat one, killed another, and stoned another.ಆಗ ಒಕ್ಕಲಿಗರು ಅವನ ಸೇವಕರನ್ನು ಹಿಡಿದು ಒಬ್ಬನನ್ನು ಹೊಡೆದು ಇನ್ನೊಬ್ಬ ನನ್ನು ಕೊಂದು ಹಾಕಿದರು. ಮತ್ತೊಬ್ಬನ ಮೇಲೆ ಕಲ್ಲೆಸೆದರು.
36 Again, he sent other servants more than the first: and they treated them the same way.ಅವನು ತಿರಿಗಿ ಮೊದಲನೆಯವರಿಗಿಂತ ಹೆಚ್ಚು ಸೇವಕರನ್ನು ಕಳುಹಿಸಿಕೊಟ್ಟನು; ಅವರು ಅದೇ ರೀತಿಯಲ್ಲಿ ಅವರಿಗೂ ಮಾಡಿದರು.
37 But afterward he sent to them his son, saying, 'They will respect my son.'ಆದರೆ ಅವನು-- ನನ್ನ ಮಗನನ್ನಾದರೂ ಅವರು ಸನ್ಮಾನಿ ಸಾರು ಎಂದು ಅಂದುಕೊಂಡು ಕಟ್ಟಕಡೆಗೆ ಅವನನ್ನು ಅವರ ಬಳಿಗೆ ಕಳುಹಿಸಿದನು.
38 But the farmers, when they saw the son, said among themselves, 'This is the heir. Come, let's kill him, and seize his inheritance.'ಆದರೆ ಒಕ್ಕಲಿಗರು ಆ ಮಗನನ್ನು ನೋಡಿ ತಮ್ಮತಮ್ಮೊಳಗೆ--ಇವನೇ ಬಾಧ್ಯಸ್ಥನಾಗಿದ್ದಾನೆ, ಬನ್ನಿರಿ; ನಾವು ಇವನನ್ನು ಕೊಂದು ಇವನ ಸ್ವಾಸ್ತ್ಯವನ್ನು ಸ್ವಾಧೀನಮಾಡಿಕೊ ಳ್ಳೋಣ ಎಂದು ಅಂದು ಕೊಂಡರು.
39 So they took him, and threw him out of the vineyard, and killed him.ಅವರು ಅವನನ್ನು ಹಿಡಿದು ದ್ರಾಕ್ಷೇ ತೋಟದಿಂದ ಹೊರಗೆ ಹಾಕಿ ಅವನನ್ನು ಕೊಂದು ಹಾಕಿದರು.
40 When therefore the lord of the vineyard comes, what will he do to those farmers?"ಹೀಗಿರುವ ದರಿಂದ ದ್ರಾಕ್ಷೇ ತೋಟದ ಯಜಮಾನನು ಬಂದಾಗ ಆ ಒಕ್ಕಲಿಗರಿಗೆ ಏನು ಮಾಡಾನು ಅಂದನು.
41 They told him, "He will miserably destroy those miserable men, and will lease out the vineyard to other farmers, who will give him the fruit in its season."ಅವರು ಆತನಿಗೆ--ಅವನು ಆ ದುಷ್ಟ ಮನುಷ್ಯರನು ಕ್ರೂರವಾಗಿ ಸಂಹರಿಸುವನು; ಮತ್ತು ತಕ್ಕಕಾಲದಲ್ಲಿ ತನಗೆ ಫಲಗಳನ್ನು ಸಲ್ಲಿಸುವ ಬೇರೆ ಒಕ್ಕಲಿಗರಿಗೆ ತನ್ನ ದ್ರಾಕ್ಷೇತೋಟವನ್ನು ವಾರಕ್ಕೆ ಕೊಡುವನು ಎಂದು ಹೇಳಿದರು.
42 Jesus said to them, "Did you never read in the Scriptures, 'The stone which the builders rejected, The same was made the head of the corner. This was from the Lord. It is marvelous in our eyes?'ಯೇಸು ಅವರಿಗೆ--ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು; ಮತ್ತು ಇದು ಕರ್ತನಿಂದಲೇ ಆಯಿತು. ಅದು ನಮ್ಮ ದೃಷ್ಟಿಯಲ್ಲಿ ಆಶ್ಚರ್ಯವಾದದ್ದು ಎಂದು ಬರಹಗಳಲ್ಲಿ ಎಂದಾದರೂ ನೀವು ಓದಲಿಲ್ಲವೋ?
43 "Therefore I tell you, the Kingdom of God will be taken away from you, and will be given to a nation bringing forth its fruits.ಆದದರಿಂದ ನಾನು ನಿಮಗೆ ಹೇಳುವದೇನಂದರೆ--ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಾಂಗಕ್ಕೆ ಕೊಡಲ್ಪಡುವದು.
44 He who falls on this stone will be broken to pieces, but on whoever it will fall, it will scatter him as dust."ಈ ಕಲ್ಲಿನ ಮೇಲೆ ಬೀಳುವವನು ತುಂಡುತುಂಡಾಗುವನು; ಆದರೆ ಅದು ಯಾವನ ಮೇಲೆ ಬೀಳುವದೋ ಅವನನ್ನು ಅರೆದು ಪುಡಿಪುಡಿ ಮಾಡುವದು ಅಂದನು.
45 When the chief priests and the Pharisees heard his parables, they perceived that he spoke about them.ಪ್ರಧಾನ ಯಾಜಕರೂ ಫರಿಸಾಯರೂ ಆತನ ಸಾಮ್ಯಗಳನ್ನು ಕೇಳಿ ತಮ್ಮ ವಿಷಯದಲ್ಲಿಯೇ ಆತನು ಅದನ್ನು ಹೇಳಿದನೆಂದು ಅವರು ತಿಳುಕೊಂಡರು.
46 When they sought to seize him, they feared the multitudes, because they considered him to be a prophet.ಆದರೆ ಅವರು ಆತನನ್ನು ಹಿಡಿಯುವದಕ್ಕೆ ಪ್ರಯತ್ನಿಸಿದಾಗ ಜನಸಮೂಹಕ್ಕೆ ಭಯಪಟ್ಟರು; ಯಾಕಂದರೆ ಅವರು ಆತನನ್ನು ಪ್ರವಾದಿಯೆಂದು ಎಣಿಸಿದ್ದರು.
Kannada Bible