Matthew 20 - DBY (Kannada)
1 For the kingdom of the heavens is like a householder who went out with the early morn to hire workmen for his vineyard.ತನ್ನ ದ್ರಾಕ್ಷೇ ತೋಟಕ್ಕೆ ಕೂಲಿಯಾಳು ಗಳನ್ನು ಕರೆಯುವದಕ್ಕಾಗಿ ಬೆಳಿಗ್ಗೆ ಹೊರಟ ಮನೇ ಯಜಮಾನನಿಗೆ ಪರಲೋಕರಾಜ್ಯವು ಹೋಲಿ ಕೆಯಾಗಿದೆ.
2 And having agreed with the workmen for a denarius the day, he sent them into his vineyard.ಅವನು ದಿನಕ್ಕೆ ಒಂದು ಪಾವಲಿಯಂತೆ (ಪೆನ್ನಿ) ಕೂಲಿಯಾಳುಗಳೊಂದಿಗೆ ಒಪ್ಪಂದ ಮಾಡಿ ಕೊಂಡು ತನ್ನ ದ್ರಾಕ್ಷೇತೋಟಕ್ಕೆ ಅವರನ್ನು ಕಳುಹಿಸಿ ಕೊಟ್ಟನು.
3 And having gone out about [the] third hour, he saw others standing in the market-place idle;ಮತ್ತು ಅವನು ಸುಮಾರು ಮೂರನೆಯ ತಾಸಿನಲ್ಲಿ ಹೊರಗೆಹೋಗಿ ಇನ್ನು ಕೆಲವರು ಸಂತೆಯ ಸ್ಥಳದಲ್ಲಿ ಕೆಲಸವಿಲ್ಲದೆ ನಿಂತಿರುವದನ್ನು ಕಂಡು
4 and to them he said, Go also ye into the vineyard, and whatsoever may be just I will give you. And they went their way.ಅವರಿಗೆ--ನೀವು ಸಹ ದ್ರಾಕ್ಷೇ ತೋಟಕ್ಕೆ ಹೋಗಿರಿ; ಸರಿಯಾದ ಕೂಲಿಯನ್ನು ನಾನು ನಿಮಗೆ ಕೊಡುವೆನು ಎಂದು ಹೇಳಿದನು. ಆಗ ಅವರು ಹೊರಟು ಹೋದರು.
5 Again, having gone out about the sixth and ninth hour, he did likewise.ಅವನು ಸುಮಾರು ಆರನೆಯ ಮತ್ತು ಒಂಭತ್ತನೆಯ ತಾಸಿನಲ್ಲಿ ತಿರಿಗಿ ಹೋಗಿ ಹಾಗೆಯೇ ಮಾಡಿದನು.
6 But about the eleventh [hour], having gone out, he found others standing, and says to them, Why stand ye here all the day idle?ತರುವಾಯ ಸುಮಾರು ಹನ್ನೊಂದ ನೆಯ ತಾಸಿನಲ್ಲಿ ಅವನು ಹೊರಗೆಹೋಗಿ ಬೇರೆ ಕೆಲವರು ಕೆಲಸವಿಲ್ಲದೆ ನಿಂತಿರುವದನ್ನು ಕಂಡು ಅವರಿಗೆ--ನೀವು ದಿನವೆಲ್ಲಾ ಇಲ್ಲಿ ಕೆಲಸವಿಲ್ಲದೆ ನಿಂತಿರುವದೇಕೆ ಎಂದು ಕೇಳಿದನು.
7 They say to him, Because no man has hired us. He says to them, Go also ye into the vineyard [and whatsoever may be just ye shall receive].ಅವರು ಅವನಿಗೆ--ಯಾಕಂದರೆ ಯಾರೂ ನಮ್ಮನ್ನು ಕೂಲಿಗೆ ಕರೆಯಲಿಲ್ಲ ಅಂದರು. ಆಗ ಅವನು ಅವರಿಗೆ--ನೀವು ಸಹ ದ್ರಾಕ್ಷೇತೋಟಕ್ಕೆ ಹೋಗಿರಿ ಮತ್ತು ಸರಿಯಾದದ್ದನ್ನು ನೀವು ಹೊಂದುವಿರಿ ಎಂದು ಹೇಳಿ ದನು.
8 But when the evening was come, the lord of the vineyard says to his steward, Call the workmen and pay [them] their wages, beginning from the last even to the first.ಹೀಗೆ ಸಾಯಂಕಾಲವಾದಾಗ ದ್ರಾಕ್ಷೇತೋಟ ದ ಯಜಮಾನನು ತನ್ನ ಮನೇವಾರ್ತೆಯವನಿಗೆ-- ಕೂಲಿಯಾಳುಗಳನ್ನು ಕರೆದು ಕೊನೆಯವನಿಂದ ಪ್ರಾರಂಭಿಸಿ ಮೊದಲನೆಯವನ ವರೆಗೆ ಕೂಲಿಯನ್ನು ಕೊಡು ಎಂದು ಹೇಳಿದನು.
9 And when they [who came to work] about the eleventh hour came, they received each a denarius.ಸುಮಾರು ಹನ್ನೊಂದನೆ ಯ ತಾಸಿನಲ್ಲಿ ಕರೆಯಲ್ಪಟ್ಟವರಾದ ಪ್ರತಿಯೊಬ್ಬನು ಒಂದೊಂದು ಪಾವಲಿಯನ್ನು ಹೊಂದಿದನು.
10 And when the first came, they supposed that they would receive more, and they received also themselves each a denarius.ಆದರೆ ಮೊದಲು ಬಂದವರು ತಮಗೆ ಹೆಚ್ಚು ದೊರೆಯುವ ದೆಂದು ನೆನಸಿದರು. ಆದರೂ ಅವರಲ್ಲಿ ಪ್ರತಿಯೊಬ್ಬನು ಅದೇ ರೀತಿಯಲ್ಲಿ ಒಂದೊಂದು ಪಾವಲಿಯನ್ನು ಹೊಂದಿದನು.
11 And on receiving it they murmured against the master of the house,ಅವರು ಅದನ್ನು ಹೊಂದಿದಾಗ ಮನೇ ಯಜಮಾನನಿಗೆ ವಿರೋಧವಾಗಿ ಗುಣು ಗುಟ್ಟುತ್ತಾ--
12 saying, These last have worked one hour, and thou hast made them equal to us, who have borne the burden of the day and the heat.ಕಡೆಯವರಾದ ಇವರು ಒಂದೇ ತಾಸು ಕೆಲಸ ಮಾಡಿದ್ದಾರೆ; ಆದರೆ ದಿನವೆಲ್ಲಾ ಬಿಸಿಲಿನಲ್ಲಿ ಭಾರ ಹೊತ್ತು ಕೆಲಸ ಮಾಡಿದ ನಮಗೆ ನೀನು ಅವರನ್ನು ಸಮಮಾಡಿದ್ದೀ ಅಂದರು.
13 But he answering said to one of them, [My] friend, I do not wrong thee. Didst thou not agree with me for a denarius?ಆದರೆ ಅವನು ಅವರಲ್ಲಿ ಒಬ್ಬನಿಗೆ ಪ್ರತ್ಯುತ್ತರವಾಗಿ--ಸ್ನೇಹಿ ತನೇ, ನಾನು ನಿನಗೆ ಅನ್ಯಾಯ ಮಾಡಲಿಲ್ಲ; ಒಂದು ಪಾವಲಿಗೆ ನೀನು ನನ್ನೊಂದಿಗೆ ಒಪ್ಪಂದ ಮಾಡಿಕೊಳ್ಳ ಲಿಲ್ಲವೇ?
14 Take what is thine and go. But it is my will to give to this last even as to thee:ನಿನ್ನದನ್ನು ತಕ್ಕೊಂಡು ಹೋಗು; ನಿನಗೆ ನಾನು ಕೊಟ್ಟಂತೆಯೇ ಈ ಕಡೆಯವನಿಗೂ ಕೊಡುವೆನು.
15 is it not lawful for me to do what I will in my own affairs? Is thine eye evil because *I* am good?ನನ್ನ ಸ್ವಂತದ್ದನ್ನು ನನ್ನ ಇಷ್ಟಬಂದಂತೆ ಮಾಡುವದು ನನಗೆ ನ್ಯಾಯವಲ್ಲವೋ? ನಾನು ಒಳ್ಳೆಯವನಾದ ದರಿಂದ ನಿನ್ನ ಕಣ್ಣು ಕೆಟ್ಟದ್ದಾಗಿದೆಯೋ ಅಂದನು.
16 Thus shall the last be first, and the first last; for many are called ones, but few chosen ones.ಹೀಗೆ ಕಡೆಯವರು ಮೊದಲನೆಯವರಾಗುವರು; ಮೊದಲನೆಯವರು ಕಡೆಯವರಾಗುವರು. ಯಾಕಂದರೆ ಕರೆಯಲ್ಪಟ್ಟವರು ಅನೇಕರು; ಆದರೆ ಆಯಲ್ಪಟ್ಟವರು ಸ್ವಲ್ಪ ಜನ ಎಂದು ಹೇಳಿದನು.
17 And Jesus, going up to Jerusalem, took the twelve disciples with [him] apart in the way, and said to them,ತರುವಾಯ ಯೇಸು ಯೆರೂಸಲೇಮಿಗೆ ಹೋಗುತ್ತಿರುವಾಗ ಹನ್ನೆರಡು ಮಂದಿ ಶಿಷ್ಯರನ್ನು ದಾರಿಯಲ್ಲಿ ವಿಂಗಡವಾಗಿ ಕರೆದು ಅವರಿಗೆ--
18 Behold we go up to Jerusalem, and the Son of man will be delivered up to the chief priests and scribes, and they will condemn him to death;ಇಗೋ, ನಾವು ಯೆರೂಸಲೇಮಿಗೆ ಹೋಗುತ್ತೇವೆ. ಅಲ್ಲಿ ಮನುಷ್ಯ ಕುಮಾರನು ಪ್ರಧಾನ ಯಾಜಕರಿಗೂ ಶಾಸ್ತ್ರಿಗಳಿಗೂ ಒಪ್ಪಿಸಲ್ಪಡುವನು; ಅವರು ಆತನಿಗೆ ಮರಣ ದಂಡನೆಯನ್ನು ವಿಧಿಸುವರು.
19 and they will deliver him up to the nations to mock and to scourge and to crucify, and the third day he shall rise again.ಇದಲ್ಲದೆ ಆತನನ್ನು ಹಾಸ್ಯ ಮಾಡು ವದಕ್ಕೂ ಕೊರಡೆಗಳಿಂದ ಹೊಡೆಯುವದಕ್ಕೂ ಶಿಲುಬೆಗೆ ಹಾಕುವದಕ್ಕೂ ಆತನನ್ನು ಅನ್ಯಜನರಿಗೆ ಒಪ್ಪಿಸಿಕೊಡುವರು; ಮತ್ತು ಮೂರನೆಯ ದಿನದಲ್ಲಿ ಆತನು ತಿರಿಗಿ ಎದ್ದು ಬರುವನು ಎಂದು ಹೇಳಿದನು.
20 Then came to him the mother of the sons of Zebedee, with her sons, doing homage, and asking something of him.ತರುವಾಯ ಜೆಬೆದಾಯನ ಮಕ್ಕಳ ತಾಯಿಯು ತನ್ನ ಕುಮಾರರೊಂದಿಗೆ ಆತನ ಬಳಿಗೆ ಬಂದು ಆತ ನನ್ನು ಆರಾಧಿಸುತ್ತಾ ಆತನನ್ನು ಏನೋ ಬೇಡಿಕೊಳ್ಳ ಬೇಕೆಂದು ಅಪೇಕ್ಷಿಸಿದಳು.
21 And he said to her, What wilt thou? She says to him, Speak [the word] that these my two sons may sit, one on thy right hand and one on thy left in thy kingdom.ಆತನು ಆಕೆಗೆ--ನೀನು ಏನು ಅಪೇಕ್ಷಿಸುತ್ತೀ ಎಂದು ಕೇಳಲು ಆಕೆಯು ಆತನಿಗೆ -- ನಿನ್ನ ರಾಜ್ಯದಲ್ಲಿ ಈ ನನ್ನ ಇಬ್ಬರು ಕುಮಾರರು ಒಬ್ಬನು ನಿನ್ನ ಬಲಗಡೆಯಲ್ಲೂ ಇನ್ನೊಬ್ಬನು ನಿನ್ನ ಎಡಗಡೆಯಲ್ಲೂ ಕೂತುಕೊಳ್ಳುವಂತೆ ಅನುಗ್ರಹಿಸ ಬೇಕು ಎಂದು ಬೇಡಿಕೊಂಡಳು.
22 And Jesus answering said, Ye know not what ye ask. Can ye drink the cup which *I* am about to drink? They say to him, We are able.ಆದರೆ ಯೇಸು ಪ್ರತ್ಯುತ್ತರವಾಗಿ -- ನೀವು ಬೇಡಿಕೊಳ್ಳುವದೇನೆಂದು ನಿಮಗೆ ತಿಳಿಯದು. ನಾನು ಕುಡಿಯುವದಕ್ಕಿರುವ ಪಾತ್ರೆಯಲ್ಲಿ ಕುಡಿಯಲು ನಿಮ್ಮಿಂದಾದೀತೇ? ಮತ್ತು ನಾನು ಹೊಂದುವ ಬಾಪ್ತಿಸ್ಮವನ್ನು ನೀವು ಹೊಂದು ವಿರೋ ಎಂದು ಕೇಳಿದಾಗ ಅವರು ಆತನಿಗೆ--ನಮ್ಮಿಂದ ಆಗುವದು ಎಂದು ಹೇಳಿದ
23 [And] he says to them, Ye shall drink indeed my cup, but to sit on my right hand and on [my] left, is not mine to give, but to those for whom it is prepared of my Father.ಮತ್ತು ಆತನು ಅವರಿಗೆ--ನನ್ನ ಪಾತ್ರೆಯಲ್ಲಿ ನೀವು ಕುಡಿಯು ವದು ಮತ್ತು ನಾನು ಹೊಂದುವ ಬಾಪ್ತಿಸ್ಮವನ್ನು ನೀವು ಹೊಂದುವದು ನಿಜ; ಆದರೆ ನನ್ನ ಬಲಗಡೆಯಲ್ಲಾ ಗಲೀ ಎಡಗಡೆಯಲ್ಲಾಗಲೀ ಕೂತುಕೊಳ್ಳುವಂತೆ ಅನುಗ್ರಹಿಸುವದು ನನ್ನದಲ್ಲ; ಆದರೆ ನನ್ನ ತಂದೆಯಿಂದ ಯಾರಿಗೋಸ್ಕರ ಅದು ಸಿ
24 And the ten, having heard [of it], were indignant about the two brothers.ಬೇರೆ ಹತ್ತು ಮಂದಿಯು ಅದನ್ನು ಕೇಳಿ ಆ ಇಬ್ಬರು ಸಹೋದ ರರಿಗೆ ವಿರೋಧವಾಗಿ ಕೋಪಗೊಂಡರು.
25 But Jesus having called them to [him], said, Ye know that the rulers of the nations exercise lordship over them, and the great exercise authority over them.ಆದರೆ ಯೇಸು ಅವರನ್ನು ತನ್ನ ಹತ್ತಿರಕ್ಕೆ ಕರೆದು--ಅನ್ಯ ಜನಾಂಗಗಳ ಅಧಿಪತಿಗಳು ಅವರ ಮೇಲೆ ದೊರೆತನ ಮಾಡುವರೆಂದೂ ದೊಡ್ಡವರು ಅವರ ಮೇಲೆ ಅಧಿಕಾರವನ್ನು ನಡಿಸುವರೆಂದೂ ನಿಮಗೆ ತಿಳಿದಿದೆ. ಆದರೆ ನಿಮ್ಮಲ್ಲಿ ಅದು ಹಾಗಿರಬಾರದು.
26 It shall not be thus amongst you, but whosoever will be great among you, shall be your servant;ನಿಮ್ಮಲ್ಲಿ ದೊಡ್ಡವನಾಗಿರಬೇಕೆಂದಿರುವವನು ನಿಮ್ಮ ಸೇವಕನಾಗಿ ರಲಿ
27 and whosoever will be first among you, let him be your bondman;ನಿಮ್ಮಲ್ಲಿ ಯಾವನಾದರೂ ಪ್ರಮುಖನಾಗಬೇಕೆ ಂದಿದ್ದರೆ ಅವನು ನಿಮ್ಮ ಆಳಾಗಿರಲಿ.
28 as indeed the Son of man did not come to be served, but to serve, and to give his life a ransom for many.ಮನುಷ್ಯ ಕುಮಾರನು ಸಹ ಸೇವೆ ಮಾಡಿಸಿಕೊಳ್ಳುವದಕ್ಕಾಗಿ ಅಲ್ಲ, ಸೇವೆ ಮಾಡುವದಕ್ಕಾಗಿಯೂ ಅನೇಕರಿಗಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕಾಗಿಯೂ ಬಂದನು ಎಂದು ಹೇಳಿದನು.
29 And as they went out from Jericho a great crowd followed him.ಅವರು ಯೆರಿಕೋವಿನಿಂದ ಹೊರಟು ಹೋಗುತ್ತಿರುವಾಗ ಜನರು ದೊಡ್ಡ ಸಮೂಹವಾಗಿ ಆತನನ್ನು ಹಿಂಬಾಲಿಸಿದರು.
30 And lo, two blind men, sitting by the wayside, having heard that Jesus was passing by, cried out saying, Have mercy on us, Lord, Son of David.ಆಗ ಇಗೋ, ಯೇಸು ಹಾದುಹೋಗುತ್ತಿದ್ದಾನೆಂದು ದಾರಿಯ ಮಗ್ಗುಲಲ್ಲಿ ಕೂತಿದ್ದ ಇಬ್ಬರು ಕುರುಡರು ಕೇಳಿ--ಓ ಕರ್ತನೇ, ದಾವೀದನಕುಮಾರನೇ, ನಮ್ಮ ಮೇಲೆ ಕರುಣೆಯಿಡು ಎಂದು ಕೂಗಿ ಹೇಳಿದರು.
31 But the crowd rebuked them, that they might be silent. But they cried out the more, saying, Have mercy on us, Lord, Son of David.ಆದರೆ ಅವರು ಸುಮ್ಮನಿ ರುವಂತೆ ಜನರ ಸಮೂಹವು ಅವರನ್ನು ಗದರಿಸಿದರು. ಆದಾಗ್ಯೂ ಅವರು--ಓ ಕರ್ತನೇ, ದಾವೀದನಕುಮಾ ರನೇ, ನಮ್ಮ ಮೇಲೆ ಕರುಣೆ ಯಿಡು ಎಂದು ಮತ್ತಷ್ಟು ಹೆಚ್ಚಾಗಿ ಕೂಗಿಕೊಂಡರು.
32 And Jesus, having stopped, called them and said, What will ye that I shall do to you?ಆಗ ಯೇಸು ನಿಂತು ಅವರನ್ನು ಕರೆದು--ನಾನು ನಿಮಗೆ ಏನು ಮಾಡ ಬೇಕೆಂದು ನೀವು ಅಪೇಕ್ಷಿಸುತ್ತೀರಿ ಎಂದು ಕೇಳಿದನು.
33 They say to him, Lord, that our eyes may be opened.ಅವರು ಆತನಿಗೆ--ಕರ್ತನೇ, ನಮ್ಮ ಕಣ್ಣುಗಳು ತೆರೆಯಲ್ಪಡಬೇಕು ಅಂದರು.
34 And Jesus, moved with compassion, touched their eyes; and immediately their eyes had sight restored to them, and they followed him.ಯೇಸು ಅವರ ಮೇಲೆ ಕನಿಕರಪಟ್ಟು ಅವರ ಕಣ್ಣುಗಳನ್ನು ಮುಟ್ಟಿದನು; ಕೂಡಲೆ ಅವರ ಕಣ್ಣುಗಳು ದೃಷ್ಟಿಹೊಂದಿದವು; ಮತ್ತು ಅವರು ಆತನನ್ನು ಹಿಂಬಾಲಿಸಿದರು.
Kannada Bible