Bible

Matthew 14 - DBY (Kannada)

1 At that time Herod the tetrarch heard of the fame of Jesus,ಆ ಕಾಲದಲ್ಲಿ ಚತುರಾಧಿಪತಿಯಾದ ಹೆರೋದನು ಯೇಸುವಿನ ಕೀರ್ತಿಯನ್ನು ಕೇಳಿ ತನ್ನ ಸೇವಕರಿಗೆ --

2 and said to his servants, This is John the baptist: *he* is risen from the dead, and because of this these works of power display their force in him.ಇವನು ಬಾಪ್ತಿಸ್ಮ ಮಾಡಿಸುವ ಯೋಹಾನನೇ; ಈಗ ಇವನು ಸತ್ತವರೊಳಗಿಂದ ಎದ್ದಿದ್ದಾನೆ; ಆದದರಿಂದಲೇ ಮಹತ್ಕಾರ್ಯಗಳು ಇವನಲ್ಲಿ ತೋರಿಬರುತ್ತವೆ ಎಂದು ಹೇಳಿದನು.

3 For Herod had seized John, and had bound him and put him in prison on account of Herodias the wife of Philip his brother.ಯಾಕಂದರೆ ಹೆರೋದನು ತನ್ನ ಸಹೋದರನಾದ ಫಿಲಿಪ್ಪನ ಹೆಂಡತಿಯಾಗಿದ್ದ ಹೆರೋದ್ಯಳ ನಿಮಿತ್ತವಾಗಿ ಯೋಹಾನನನ್ನು ಹಿಡಿದು ಕಟ್ಟಿ ಸೆರೆಯಲ್ಲಿ ಹಾಕಿದ್ದನು.

4 For John said to him, It is not lawful for thee to have her.ಯಾಕಂದರೆ ಯೋಹಾನನು--ನೀನು ಅವಳನ್ನು ಇಟ್ಟುಕೊಂಡಿರುವದು ನಿನಗೆ ನ್ಯಾಯವಲ್ಲ ಎಂದು ಅವನಿಗೆ ಹೇಳಿದ್ದನು.

5 And [while] desiring to kill him, he feared the crowd, because they held him for a prophet.ಆದದರಿಂದ ಅವನು ಯೋಹಾನನನ್ನು ಕೊಲ್ಲಬೇಕೆಂದಿದ್ದಾಗ ಜನ ಸಮೂಹಕ್ಕೆ ಭಯಪಟ್ಟನು; ಯಾಕಂದರೆ ಅವರು ಅವನನ್ನು ಪ್ರವಾದಿಯೆಂದು ಎಣಿಸಿದ್ದರು.

6 But when Herod's birthday was celebrated, the daughter of Herodias danced before them, and pleased Herod;ಆದರೆ ಹೆರೋದನ ಹುಟ್ಟಿದ ದಿನವು ಆಚರಿಸಲ್ಪಟ್ಟಾಗ ಹೆರೋದ್ಯಳ ಮಗಳು ಅವರ ಮುಂದೆ ನಾಟ್ಯವಾಡಿ ಹೆರೋದನನ್ನು ಮೆಚ್ಚಿಸಿದಳು.

7 whereupon he promised with oath to give her whatsoever she should ask.ಆದದರಿಂದ ಅವಳು ಏನು ಕೇಳಿಕೊಂಡರೂ ಅವಳಿಗೆ ಕೊಡುವೆನೆಂದು ಅವನು ಆಣೆಯಿಟ್ಟು ವಾಗ್ದಾನಮಾಡಿದನು.

8 But she, being set on by her mother, says, Give me here upon a dish the head of John the baptist.ಅವಳು ತನ್ನ ತಾಯಿಯಿಂದ ಮೊದಲೇ ಕಲಿಸಲ್ಪಟ್ಟವಳಾಗಿ-- ಬಾಪ್ತಿಸ್ಮ ಮಾಡಿಸುವ ಯೋಹಾನನ ತಲೆಯನ್ನು ಪರಾ ತಿನಲ್ಲಿ ಇಲ್ಲಿಯೇ ನನಗೆ ಕೊಡು ಎಂದು ಹೇಳಿದಳು.

9 And the king was grieved; but on account of the oaths, and those lying at table with [him], he commanded [it] to be given.ಆಗ ಅರಸನು ದುಃಖಪಟ್ಟಾಗ್ಯೂ ತನ್ನ ಆಣೆಯ ನಿಮಿತ್ತದಿಂದಲೂ ತನ್ನೊಂದಿಗೆ ಊಟಕ್ಕೆ ಕೂತಿದ್ದವರ ನಿಮಿತ್ತದಿಂದಲೂ ಅದನ್ನು ಅವಳಿಗೆ ಕೊಡುವಂತೆ ಅಪ್ಪಣೆಕೊಟ್ಟನು.

10 And he sent and beheaded John in the prison;ಮತ್ತು ಅವನು (ಆಳುಗಳನ್ನು) ಕಳುಹಿಸಿ ಸೆರೆಯಲ್ಲಿ ಯೋಹಾನನ ತಲೆಯನ್ನು ಹೊಯಿಸಿದನು.

11 and his head was brought upon a dish, and was given to the damsel, and she carried [it] to her mother.ಇದಲ್ಲದೆ ಅವನ ತಲೆಯನ್ನು ಪರಾತಿನಲ್ಲಿ ತಂದು ಆ ಹುಡುಗಿಗೆ ಕೊಟ್ಟರು. ಅವಳು ಅದನ್ನು ತನ್ನ ತಾಯಿಯ ಬಳಿಗೆ ತಂದಳು.

12 And his disciples came and took the body and buried it, and came and brought word to Jesus.ಆಗ ಅವನ ಶಿಷ್ಯರು ಬಂದು ದೇಹವನ್ನೆತ್ತಿಕೊಂಡು ಹೂಣಿಟ್ಟು ಹೋಗಿ ಯೇಸುವಿಗೆ ತಿಳಿಸಿದರು.

13 And Jesus, having heard it, went away thence by ship to a desert place apart. And the crowds having heard [of it] followed him on foot from the cities.ಯೇಸು ಆ ವಿಷಯವನ್ನು ಕೇಳಿದಾಗ ದೋಣಿ ಯನ್ನು ಹತ್ತಿ ಅಲ್ಲಿಂದ ವಿಂಗಡವಾಗಿ ಅರಣ್ಯ ಸ್ಥಳಕ್ಕೆ ಹೊರಟುಹೋದನು. ಇದನ್ನು ಕೇಳಿ ಜನರು ಪಟ್ಟಣ ಗಳಿಂದ ಕಾಲು ನಡಿಗೆಯಾಗಿ ಆತನನ್ನು ಹಿಂಬಾಲಿ ಸಿದರು.

14 And going out he saw a great crowd, and was moved with compassion about them, and healed their infirm.ಆಗ ಯೇಸು ಹೊರಟುಹೋಗಿ ಜನರ ಮಹಾಸಮೂಹವನ್ನು ಕಂಡು ಅವರ ಮೇಲೆ ಕನಿಕರ ಪಟ್ಟು ಅವರಲ್ಲಿದ್ದ ರೋಗಿಗಳನ್ನು ಸ್ವಸ್ಥಮಾಡಿದನು.

15 But when even was come, his disciples came to him saying, The place is desert, and [much of] the [day] time already gone by; dismiss the crowds, that they may go into the villages and buy food for themselves.ಸಾಯಂಕಾಲವಾದಾಗ ಆತನ ಶಿಷ್ಯರು ಆತನ ಬಳಿಗೆ ಬಂದು--ಇದು ಅಡವಿಯ ಸ್ಥಳ, ಸಮಯವು ದಾಟಿತು; ಜನರು ಹಳ್ಳಿಗಳಿಗೆ ಹೋಗಿ ತಮಗಾಗಿ ಆಹಾರವನ್ನು ಕೊಂಡುಕೊಳ್ಳುವಂತೆ ಅವರನ್ನು ಕಳುಹಿಸಿಬಿಡು ಅಂದರು.

16 But Jesus said to them, They have no need to go: give *ye* them to eat.ಆದರೆ ಯೇಸು ಅವ ರಿಗೆ--ಅವರು ಹೋಗುವದು ಅವಶ್ಯವಿಲ್ಲ; ಅವರು ಊಟಮಾಡುವದಕ್ಕೆ ನೀವೇ ಕೊಡಿರಿ ಎಂದು ಹೇಳಿದನು.

17 But they say to him, We have not here save five loaves and two fishes.ಅವರು ಆತನಿಗೆ--ನಮ್ಮ ಹತ್ತಿರ ಐದು ರೊಟ್ಟಿ ಎರಡು ಮಾನುಗಳು ಮಾತ್ರ ಇವೆ ಎಂದು ಹೇಳಿದರು.

18 And he said, Bring them here to me.ಆತನು--ಅವುಗಳನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿರಿ ಅಂದನು.

19 And having commanded the crowds to recline upon the grass, having taken the five loaves and the two fishes, he looked up to heaven, and blessed: and having broken the loaves, he gave [them] to the disciples, and the disciples [gave them] to the crowds.ಜನ ಸಮೂಹವು ಹುಲ್ಲಿನಮೇಲೆ ಕೂತುಕೊಳ್ಳಬೇಕೆಂದು ಆತನು ಅಪ್ಪಣೆಕೊಟ್ಟು ಆ ಐದು ರೊಟ್ಟಿ ಎರಡು ಮಾನುಗಳನ್ನು ತಕ್ಕೊಂಡು ಪರಲೋಕದ ಕಡೆಗೆ ನೋಡಿ ಆಶೀರ್ವದಿಸಿ ಮುರಿದು ಆ ರೊಟ್ಟಿಗಳನ್ನು ತನ್ನ ಶಿಷ್ಯರಿಗೆ ಕೊಟ್ಟನು ಮತ್ತು ಶಿಷ್ಯರು ಜನಸಮೂಹಕ್ಕೆ ಕೊಟ್ಟರು.

20 And all ate and were filled, and they took up what was over and above of fragments twelve hand-baskets full.ಅವರೆಲ್ಲರೂ ತಿಂದು ತೃಪ್ತರಾದರು; ಮತ್ತು ಅವರು ಉಳಿದ ತುಂಡುಗಳನ್ನು ಕೂಡಿಸಿ ಹನ್ನೆ ರಡು ಪುಟ್ಟಿಗಳಲ್ಲಿ ತುಂಬಿಸಿದರು.

21 But those that had eaten were about five thousand men, besides women and children.ಊಟ ಮಾಡಿ ದವರು ಸ್ತ್ರೀಯರೂ ಮಕ್ಕಳೂ ಅಲ್ಲದೆ ಗಂಡಸರೇ ಹೆಚ್ಚು ಕಡಿಮೆ ಐದು ಸಾವಿರ ಇದ್ದರು.

22 And immediately he compelled the disciples to go on board ship, and to go on before him to the other side, until he should have dismissed the crowds.ಕೂಡಲೆ ಯೇಸು ತಾನು ಜನಸಮೂಹಗಳನ್ನು ಕಳುಹಿಸಿ ಬಿಡುವಷ್ಟರೊಳಗಾಗಿ ತನ್ನ ಶಿಷ್ಯರು ದೋಣಿ ಯನ್ನು ಹತ್ತಿ ತನಗಿಂತ ಮುಂಚೆ ಆಚೇ ದಡಕ್ಕೆ ಹೋಗ ಬೇಕೆಂದು ಅವರನ್ನು ಒತ್ತಾಯ ಮಾಡಿದನು.

23 And having dismissed the crowds, he went up into the mountain apart to pray. And when even was come, he was alone there,ಆತನು ಜನಸಮೂಹಗಳನ್ನು ಕಳುಹಿಸಿದ ಮೇಲೆ ಪ್ರಾರ್ಥನೆ ಮಾಡಲು ಏಕಾಂತವಾಗಿ ಗುಡ್ಡದ ಮೇಲೆ ಹೋದನು; ಸಾಯಂಕಾಲವಾದಾಗ ಆತನೊಬ್ಬನೇ ಅಲ್ಲಿ ಇದ್ದನು.

24 but the ship was already in the middle of the sea tossed by the waves, for the wind was contrary.ಆಗ ದೋಣಿಯು ಸಮುದ್ರದ ಮಧ್ಯದಲ್ಲಿದ್ದು ತೆರೆಗಳಿಂದ ಬಡಿಯಲ್ಪಡುತ್ತಿತ್ತು; ಯಾಕಂದರೆ ಗಾಳಿಯು ಎದುರಾಗಿತ್ತು.

25 But in the fourth watch of the night he went off to them, walking on the sea.ಮತ್ತು ನಾಲ್ಕನೆಯ ಜಾವದಲ್ಲಿ ಯೇಸು ಸಮುದ್ರದ ಮೇಲೆ ನಡೆಯುತ್ತಾ ಅವರ ಬಳಿಗೆ ಹೋದನು.

26 And the disciples, seeing him walking on the sea, were troubled, saying, It is an apparition. And they cried out through fear.ಆತನು ಸಮುದ್ರದ ಮೇಲೆ ನಡೆಯುವದನ್ನು ಶಿಷ್ಯರು ನೋಡಿ ಕಳವಳಪಟ್ಟು--ಇದು ಭೂತ ಎಂದು ಭೀತಿಯಿಂದ ಕೂಗಿ ಕೊಂಡರು.

27 But Jesus immediately spoke to them, saying, Take courage; it is *I*: be not afraid.ಆದರೆ ಯೇಸು ತಕ್ಷಣವೇ ಮಾತನಾಡಿ ಅವರಿಗೆ--ಧೈರ್ಯವಾಗಿರ್ರಿ; ನಾನೇ, ಭಯಪಡಬೇಡಿರಿಅಂದನು.

28 And Peter answering him said, Lord, if it be *thou*, command me to come to thee upon the waters.ಆಗ ಪೇತ್ರನು ಪ್ರತ್ಯುತ್ತರವಾಗಿ ಆತನಿಗೆ--ಕರ್ತನೇ, ನೀನೇ ಆಗಿದ್ದರೆ ನೀರಿನ ಮೇಲೆ ನಡೆದು ನಿನ್ನ ಬಳಿಗೆ ಬರಲು ನನಗೆ ಅಪ್ಪಣೆಕೊಡು ಅಂದನು.

29 And he said, Come. And Peter, having descended from the ship, walked upon the waters to go to Jesus.ಅದಕ್ಕಾತನು--ಬಾ ಅಂದನು. ಆಗ ಪೇತ್ರನು ದೋಣಿಯಿಂದ ಇಳಿದು ಯೇಸುವಿನ ಬಳಿಗೆ ಹೋಗು ವದಕ್ಕಾಗಿ ನೀರಿನ ಮೇಲೆ ನಡೆದನು.

30 But seeing the wind strong he was afraid; and beginning to sink he cried out, saying, Lord, save me.ಆದರೆ ಬಲ ವಾದ ಗಾಳಿಯನ್ನು ನೋಡಿದಾಗ ಅವನು ಭಯಪಟ್ಟು ಮುಣುಗುತ್ತಾ--ಕರ್ತನೇ, ನನ್ನನ್ನು ರಕ್ಷಿಸು ಎಂದು ಕೂಗಿ ಹೇಳಿದನು.

31 And immediately Jesus stretched out his hand and caught hold of him, and says to him, O thou of little faith, why didst thou doubt?ತಕ್ಷಣವೇ ಯೇಸು ತನ್ನ ಕೈಯನ್ನು ಚಾಚಿ ಅವನನ್ನು ಹಿಡಿದು--ಓ ಅಲ್ಪ ವಿಶ್ವಾಸಿಯೇ, ನೀನು ಯಾಕೆ ಸಂದೇಹಪಟ್ಟೆ ಎಂದು ಅವನಿಗೆ ಹೇಳಿದನು.

32 And when they had gone up into the ship, the wind fell.ಅವರು ದೋಣಿಯೊಳಗೆ ಬಂದಾಗ ಗಾಳಿನಿಂತು ಹೋಯಿತು.

33 But those in the ship came and did homage to him, saying, Truly thou art God's Son.ದೋಣಿಯಲ್ಲಿದ್ದವರು ಆತನ ಬಳಿಗೆ ಬಂದು ಆತನನ್ನು ಆರಾಧಿಸಿ--ನಿಜವಾಗಿಯೂ ನೀನು ದೇವಕುಮಾರನೇ ಎಂದು ಹೇಳಿದರು.

34 And having crossed over they came to the land of Gennesaret.ಅವರು ದಾಟಿ ಗೆನೆಜರೇತ್‌ ಸೀಮೆಗೆ ಬಂದರು.

35 And when the men of that place recognised him, they sent to that whole country around, and they brought to him all that were ill,ಆಗ ಅಲ್ಲಿದ್ದ ಜನರು ಆತನ ಗುರುತು ಹಿಡಿದು ಸುತ್ತ ಮುತ್ತಲಿನ ಸೀಮೆಗೆಲ್ಲಾ ಹೇಳಿಕಳುಹಿಸಿ ರೋಗಿಗಳ ನ್ನೆಲ್ಲಾ ಆತನ ಬಳಿಗೆ ತಂದರು.

36 and besought him that they might only touch the hem of his garment; and as many as touched were made thoroughly well.ಅವರು ಆತನ ಉಡು ಪಿನ ಅಂಚನ್ನಾದರೂ ಮುಟ್ಟುವಂತೆ ಆತನನ್ನು ಬೇಡಿ ಕೊಂಡರು; ಮತ್ತು ಯಾರಾರು ಮುಟ್ಟಿದರೋ ಅವರು ಸಂಪೂರ್ಣವಾಗಿ ಸ್ವಸ್ಥರಾದರು.

Kannada Bible