Bible

Matthew 14 - BBE (Kannada)

1 At that time news of Jesus came to Herod the king;ಆ ಕಾಲದಲ್ಲಿ ಚತುರಾಧಿಪತಿಯಾದ ಹೆರೋದನು ಯೇಸುವಿನ ಕೀರ್ತಿಯನ್ನು ಕೇಳಿ ತನ್ನ ಸೇವಕರಿಗೆ --

2 And he said to his servants, This is John the Baptist; he has come back from the dead, and so these powers are working in him.ಇವನು ಬಾಪ್ತಿಸ್ಮ ಮಾಡಿಸುವ ಯೋಹಾನನೇ; ಈಗ ಇವನು ಸತ್ತವರೊಳಗಿಂದ ಎದ್ದಿದ್ದಾನೆ; ಆದದರಿಂದಲೇ ಮಹತ್ಕಾರ್ಯಗಳು ಇವನಲ್ಲಿ ತೋರಿಬರುತ್ತವೆ ಎಂದು ಹೇಳಿದನು.

3 For Herod had taken John and put him in prison because of Herodias, his brother Philip's wife.ಯಾಕಂದರೆ ಹೆರೋದನು ತನ್ನ ಸಹೋದರನಾದ ಫಿಲಿಪ್ಪನ ಹೆಂಡತಿಯಾಗಿದ್ದ ಹೆರೋದ್ಯಳ ನಿಮಿತ್ತವಾಗಿ ಯೋಹಾನನನ್ನು ಹಿಡಿದು ಕಟ್ಟಿ ಸೆರೆಯಲ್ಲಿ ಹಾಕಿದ್ದನು.

4 Because John had said to him, It is not right for you to have her.ಯಾಕಂದರೆ ಯೋಹಾನನು--ನೀನು ಅವಳನ್ನು ಇಟ್ಟುಕೊಂಡಿರುವದು ನಿನಗೆ ನ್ಯಾಯವಲ್ಲ ಎಂದು ಅವನಿಗೆ ಹೇಳಿದ್ದನು.

5 And he would have put him to death, but for his fear of the people, because in their eyes John was a prophet.ಆದದರಿಂದ ಅವನು ಯೋಹಾನನನ್ನು ಕೊಲ್ಲಬೇಕೆಂದಿದ್ದಾಗ ಜನ ಸಮೂಹಕ್ಕೆ ಭಯಪಟ್ಟನು; ಯಾಕಂದರೆ ಅವರು ಅವನನ್ನು ಪ್ರವಾದಿಯೆಂದು ಎಣಿಸಿದ್ದರು.

6 But when Herod's birthday came, the daughter of Herodias was dancing before them, and Herod was pleased with her.ಆದರೆ ಹೆರೋದನ ಹುಟ್ಟಿದ ದಿನವು ಆಚರಿಸಲ್ಪಟ್ಟಾಗ ಹೆರೋದ್ಯಳ ಮಗಳು ಅವರ ಮುಂದೆ ನಾಟ್ಯವಾಡಿ ಹೆರೋದನನ್ನು ಮೆಚ್ಚಿಸಿದಳು.

7 So he gave her his word with an oath to let her have whatever she might make request for.ಆದದರಿಂದ ಅವಳು ಏನು ಕೇಳಿಕೊಂಡರೂ ಅವಳಿಗೆ ಕೊಡುವೆನೆಂದು ಅವನು ಆಣೆಯಿಟ್ಟು ವಾಗ್ದಾನಮಾಡಿದನು.

8 And she, at her mother's suggestion, said, Give me here on a plate the head of John the Baptist.ಅವಳು ತನ್ನ ತಾಯಿಯಿಂದ ಮೊದಲೇ ಕಲಿಸಲ್ಪಟ್ಟವಳಾಗಿ-- ಬಾಪ್ತಿಸ್ಮ ಮಾಡಿಸುವ ಯೋಹಾನನ ತಲೆಯನ್ನು ಪರಾ ತಿನಲ್ಲಿ ಇಲ್ಲಿಯೇ ನನಗೆ ಕೊಡು ಎಂದು ಹೇಳಿದಳು.

9 And the king was sad; but because of his oaths and because of his guests, he gave the order for it to be given to her;ಆಗ ಅರಸನು ದುಃಖಪಟ್ಟಾಗ್ಯೂ ತನ್ನ ಆಣೆಯ ನಿಮಿತ್ತದಿಂದಲೂ ತನ್ನೊಂದಿಗೆ ಊಟಕ್ಕೆ ಕೂತಿದ್ದವರ ನಿಮಿತ್ತದಿಂದಲೂ ಅದನ್ನು ಅವಳಿಗೆ ಕೊಡುವಂತೆ ಅಪ್ಪಣೆಕೊಟ್ಟನು.

10 And he sent and had John's head cut off in the prison.ಮತ್ತು ಅವನು (ಆಳುಗಳನ್ನು) ಕಳುಹಿಸಿ ಸೆರೆಯಲ್ಲಿ ಯೋಹಾನನ ತಲೆಯನ್ನು ಹೊಯಿಸಿದನು.

11 And his head was put on a plate and given to the girl; and she took it to her mother.ಇದಲ್ಲದೆ ಅವನ ತಲೆಯನ್ನು ಪರಾತಿನಲ್ಲಿ ತಂದು ಆ ಹುಡುಗಿಗೆ ಕೊಟ್ಟರು. ಅವಳು ಅದನ್ನು ತನ್ನ ತಾಯಿಯ ಬಳಿಗೆ ತಂದಳು.

12 And his disciples came, and took up his body and put it in the earth; and they went and gave Jesus news of what had taken place.ಆಗ ಅವನ ಶಿಷ್ಯರು ಬಂದು ದೇಹವನ್ನೆತ್ತಿಕೊಂಡು ಹೂಣಿಟ್ಟು ಹೋಗಿ ಯೇಸುವಿಗೆ ತಿಳಿಸಿದರು.

13 Now when it came to the ears of Jesus, he went away from there in a boat, to a waste place by himself: and the people hearing of it, went after him on foot from the towns.ಯೇಸು ಆ ವಿಷಯವನ್ನು ಕೇಳಿದಾಗ ದೋಣಿ ಯನ್ನು ಹತ್ತಿ ಅಲ್ಲಿಂದ ವಿಂಗಡವಾಗಿ ಅರಣ್ಯ ಸ್ಥಳಕ್ಕೆ ಹೊರಟುಹೋದನು. ಇದನ್ನು ಕೇಳಿ ಜನರು ಪಟ್ಟಣ ಗಳಿಂದ ಕಾಲು ನಡಿಗೆಯಾಗಿ ಆತನನ್ನು ಹಿಂಬಾಲಿ ಸಿದರು.

14 And he came out and saw a great number of people and he had pity on them, and made well those of them who were ill.ಆಗ ಯೇಸು ಹೊರಟುಹೋಗಿ ಜನರ ಮಹಾಸಮೂಹವನ್ನು ಕಂಡು ಅವರ ಮೇಲೆ ಕನಿಕರ ಪಟ್ಟು ಅವರಲ್ಲಿದ್ದ ರೋಗಿಗಳನ್ನು ಸ್ವಸ್ಥಮಾಡಿದನು.

15 And when evening had come, the disciples came to him, saying, This place is waste land, and the time is now past; send the people away so that they may go into the towns and get themselves food.ಸಾಯಂಕಾಲವಾದಾಗ ಆತನ ಶಿಷ್ಯರು ಆತನ ಬಳಿಗೆ ಬಂದು--ಇದು ಅಡವಿಯ ಸ್ಥಳ, ಸಮಯವು ದಾಟಿತು; ಜನರು ಹಳ್ಳಿಗಳಿಗೆ ಹೋಗಿ ತಮಗಾಗಿ ಆಹಾರವನ್ನು ಕೊಂಡುಕೊಳ್ಳುವಂತೆ ಅವರನ್ನು ಕಳುಹಿಸಿಬಿಡು ಅಂದರು.

16 But Jesus said to them, There is no need for them to go away; give them food yourselves.ಆದರೆ ಯೇಸು ಅವ ರಿಗೆ--ಅವರು ಹೋಗುವದು ಅವಶ್ಯವಿಲ್ಲ; ಅವರು ಊಟಮಾಡುವದಕ್ಕೆ ನೀವೇ ಕೊಡಿರಿ ಎಂದು ಹೇಳಿದನು.

17 And they say to him, We have here but five cakes of bread and two fishes.ಅವರು ಆತನಿಗೆ--ನಮ್ಮ ಹತ್ತಿರ ಐದು ರೊಟ್ಟಿ ಎರಡು ಮಾನುಗಳು ಮಾತ್ರ ಇವೆ ಎಂದು ಹೇಳಿದರು.

18 And he said, Give them to me.ಆತನು--ಅವುಗಳನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿರಿ ಅಂದನು.

19 And he gave orders for the people to be seated on the grass; and he took the five cakes of bread and the two fishes and, looking up to heaven, he said words of blessing, and made division of the food, and gave it to the disciples, and the disciples gave it to the people.ಜನ ಸಮೂಹವು ಹುಲ್ಲಿನಮೇಲೆ ಕೂತುಕೊಳ್ಳಬೇಕೆಂದು ಆತನು ಅಪ್ಪಣೆಕೊಟ್ಟು ಆ ಐದು ರೊಟ್ಟಿ ಎರಡು ಮಾನುಗಳನ್ನು ತಕ್ಕೊಂಡು ಪರಲೋಕದ ಕಡೆಗೆ ನೋಡಿ ಆಶೀರ್ವದಿಸಿ ಮುರಿದು ಆ ರೊಟ್ಟಿಗಳನ್ನು ತನ್ನ ಶಿಷ್ಯರಿಗೆ ಕೊಟ್ಟನು ಮತ್ತು ಶಿಷ್ಯರು ಜನಸಮೂಹಕ್ಕೆ ಕೊಟ್ಟರು.

20 And they all took of the food and had enough: and they took up twelve baskets full of broken bits which were not used.ಅವರೆಲ್ಲರೂ ತಿಂದು ತೃಪ್ತರಾದರು; ಮತ್ತು ಅವರು ಉಳಿದ ತುಂಡುಗಳನ್ನು ಕೂಡಿಸಿ ಹನ್ನೆ ರಡು ಪುಟ್ಟಿಗಳಲ್ಲಿ ತುಂಬಿಸಿದರು.

21 And those who had food were about five thousand men, in addition to women and children.ಊಟ ಮಾಡಿ ದವರು ಸ್ತ್ರೀಯರೂ ಮಕ್ಕಳೂ ಅಲ್ಲದೆ ಗಂಡಸರೇ ಹೆಚ್ಚು ಕಡಿಮೆ ಐದು ಸಾವಿರ ಇದ್ದರು.

22 And straight away he made the disciples get into the boat and go before him to the other side, till he had sent the people away.ಕೂಡಲೆ ಯೇಸು ತಾನು ಜನಸಮೂಹಗಳನ್ನು ಕಳುಹಿಸಿ ಬಿಡುವಷ್ಟರೊಳಗಾಗಿ ತನ್ನ ಶಿಷ್ಯರು ದೋಣಿ ಯನ್ನು ಹತ್ತಿ ತನಗಿಂತ ಮುಂಚೆ ಆಚೇ ದಡಕ್ಕೆ ಹೋಗ ಬೇಕೆಂದು ಅವರನ್ನು ಒತ್ತಾಯ ಮಾಡಿದನು.

23 And after he had sent the people away, he went up into the mountain by himself for prayer: and when evening was come, he was there by himself.ಆತನು ಜನಸಮೂಹಗಳನ್ನು ಕಳುಹಿಸಿದ ಮೇಲೆ ಪ್ರಾರ್ಥನೆ ಮಾಡಲು ಏಕಾಂತವಾಗಿ ಗುಡ್ಡದ ಮೇಲೆ ಹೋದನು; ಸಾಯಂಕಾಲವಾದಾಗ ಆತನೊಬ್ಬನೇ ಅಲ್ಲಿ ಇದ್ದನು.

24 But the boat was now in the middle of the sea, and was troubled by the waves: for the wind was against them.ಆಗ ದೋಣಿಯು ಸಮುದ್ರದ ಮಧ್ಯದಲ್ಲಿದ್ದು ತೆರೆಗಳಿಂದ ಬಡಿಯಲ್ಪಡುತ್ತಿತ್ತು; ಯಾಕಂದರೆ ಗಾಳಿಯು ಎದುರಾಗಿತ್ತು.

25 And in the fourth watch of the night he came to them, walking on the sea.ಮತ್ತು ನಾಲ್ಕನೆಯ ಜಾವದಲ್ಲಿ ಯೇಸು ಸಮುದ್ರದ ಮೇಲೆ ನಡೆಯುತ್ತಾ ಅವರ ಬಳಿಗೆ ಹೋದನು.

26 And when they saw him walking on the sea, they were troubled, saying, It is a spirit; and they gave cries of fear.ಆತನು ಸಮುದ್ರದ ಮೇಲೆ ನಡೆಯುವದನ್ನು ಶಿಷ್ಯರು ನೋಡಿ ಕಳವಳಪಟ್ಟು--ಇದು ಭೂತ ಎಂದು ಭೀತಿಯಿಂದ ಕೂಗಿ ಕೊಂಡರು.

27 But straight away Jesus said to them, Take heart; it is I, have no fear.ಆದರೆ ಯೇಸು ತಕ್ಷಣವೇ ಮಾತನಾಡಿ ಅವರಿಗೆ--ಧೈರ್ಯವಾಗಿರ್ರಿ; ನಾನೇ, ಭಯಪಡಬೇಡಿರಿಅಂದನು.

28 And Peter, answering, said to him, Lord, if it is you, give me the order to come to you on the water.ಆಗ ಪೇತ್ರನು ಪ್ರತ್ಯುತ್ತರವಾಗಿ ಆತನಿಗೆ--ಕರ್ತನೇ, ನೀನೇ ಆಗಿದ್ದರೆ ನೀರಿನ ಮೇಲೆ ನಡೆದು ನಿನ್ನ ಬಳಿಗೆ ಬರಲು ನನಗೆ ಅಪ್ಪಣೆಕೊಡು ಅಂದನು.

29 And he said, Come. And Peter got out of the boat, and walking on the water, went to Jesus.ಅದಕ್ಕಾತನು--ಬಾ ಅಂದನು. ಆಗ ಪೇತ್ರನು ದೋಣಿಯಿಂದ ಇಳಿದು ಯೇಸುವಿನ ಬಳಿಗೆ ಹೋಗು ವದಕ್ಕಾಗಿ ನೀರಿನ ಮೇಲೆ ನಡೆದನು.

30 But when he saw the wind he was in fear and, starting to go down, he gave a cry, saying, Help, Lord.ಆದರೆ ಬಲ ವಾದ ಗಾಳಿಯನ್ನು ನೋಡಿದಾಗ ಅವನು ಭಯಪಟ್ಟು ಮುಣುಗುತ್ತಾ--ಕರ್ತನೇ, ನನ್ನನ್ನು ರಕ್ಷಿಸು ಎಂದು ಕೂಗಿ ಹೇಳಿದನು.

31 And straight away Jesus put out his hand and took a grip of him, and said to him, O man of little faith, why were you in doubt?ತಕ್ಷಣವೇ ಯೇಸು ತನ್ನ ಕೈಯನ್ನು ಚಾಚಿ ಅವನನ್ನು ಹಿಡಿದು--ಓ ಅಲ್ಪ ವಿಶ್ವಾಸಿಯೇ, ನೀನು ಯಾಕೆ ಸಂದೇಹಪಟ್ಟೆ ಎಂದು ಅವನಿಗೆ ಹೇಳಿದನು.

32 And when they had got into the boat, the wind went down.ಅವರು ದೋಣಿಯೊಳಗೆ ಬಂದಾಗ ಗಾಳಿನಿಂತು ಹೋಯಿತು.

33 And those who were in the boat gave him worship, saying, Truly you are the Son of God.ದೋಣಿಯಲ್ಲಿದ್ದವರು ಆತನ ಬಳಿಗೆ ಬಂದು ಆತನನ್ನು ಆರಾಧಿಸಿ--ನಿಜವಾಗಿಯೂ ನೀನು ದೇವಕುಮಾರನೇ ಎಂದು ಹೇಳಿದರು.

34 And when they had gone across, they came to land at Gennesaret.ಅವರು ದಾಟಿ ಗೆನೆಜರೇತ್‌ ಸೀಮೆಗೆ ಬಂದರು.

35 And when the men of that place had news of him, they sent into all the country round about, and took to him all who were ill,ಆಗ ಅಲ್ಲಿದ್ದ ಜನರು ಆತನ ಗುರುತು ಹಿಡಿದು ಸುತ್ತ ಮುತ್ತಲಿನ ಸೀಮೆಗೆಲ್ಲಾ ಹೇಳಿಕಳುಹಿಸಿ ರೋಗಿಗಳ ನ್ನೆಲ್ಲಾ ಆತನ ಬಳಿಗೆ ತಂದರು.

36 With the request that they might only put their hands on the edge of his robe: and all those who did so were made well.ಅವರು ಆತನ ಉಡು ಪಿನ ಅಂಚನ್ನಾದರೂ ಮುಟ್ಟುವಂತೆ ಆತನನ್ನು ಬೇಡಿ ಕೊಂಡರು; ಮತ್ತು ಯಾರಾರು ಮುಟ್ಟಿದರೋ ಅವರು ಸಂಪೂರ್ಣವಾಗಿ ಸ್ವಸ್ಥರಾದರು.

Kannada Bible