Matthew 13 - YLT (Kannada)
1 And in that day Jesus, having gone forth from the house, was sitting by the sea,ಅದೇ ದಿನದಲ್ಲಿ ಯೇಸು ಆ ಮನೆಯಿಂ ಹೊರಟುಹೋಗಿ ಸಮುದ್ರದ ಬಳಿಯಲಿ ಕೂತುಕೊಂಡನು.
2 and gathered together unto him were many multitudes, so that he having gone into the boat did sit down, and all the multitude on the beach did stand,ಆಗ ಜನರ ದೊಡ್ಡ ಸಮೂಹಗಳು ಆತನ ಬಳಿಗೆ ಕೂಡಿ ಬಂದದ್ದರಿಂದ ಆತನು ದೋಣಿ ಯನ್ನು ಹತ್ತಿ ಕೂತುಕೊಂಡನು. ಮತ್ತು ಆ ಸಮೂಹ ದವರೆಲ್ಲಾ ದಡದ ಮೇಲೆ ನಿಂತಿದ್ದರು.
3 and he spake to them many things in similes, saying: `Lo, the sower went forth to sow,ಆಗ ಆತನು ಅನೇಕ ವಿಷಯಗಳನ್ನು ಅವರಿಗೆ ಸಾಮ್ಯಗಳಲ್ಲಿ ಹೇಳಿದ್ದೇನಂದರೆ--ಇಗೋ, ಬಿತ್ತುವವನು ಬಿತ್ತುವದಕ್ಕೆ ಹೊರಟನು.
4 and in his sowing, some indeed fell by the way, and the fowls did come and devour them,ಅವನು ಬಿತ್ತಿದಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು; ಆಗ ಪಕ್ಷಿಗಳು ಬಂದು ಅವು ಗಳನ್ನು ನುಂಗಿಬಿಟ್ಟವು.
5 and others fell upon the rocky places, where they had not much earth, and immediately they sprang forth, through not having depth of earth,ಕೆಲವು ಬಹಳ ಮಣ್ಣಿಲ್ಲದ ಬಂಡೆಯ ಸ್ಥಳಗಳಲ್ಲಿ ಬಿದ್ದವು; ಅಲ್ಲಿ ಆಳವಾದ ಮಣ್ಣು ಇಲ್ಲದ್ದರಿಂದ ತಕ್ಷಣವೇ ಅವು ಮೊಳೆತವು;
6 and the sun having risen they were scorched, and through not having root, they withered,ಆದರೆ ಸೂರ್ಯನು ಮೇಲಕ್ಕೆ ಬಂದಾಗ ಅವು ಬಾಡಿಹೋಗಿ ಅವುಗಳಿಗೆ ಬೇರು ಇಲ್ಲದ್ದರಿಂದ ಒಣಗಿಹೋದವು.
7 and others fell upon the thorns, and the thorns did come up and choke them,ಮತ್ತು ಕೆಲವು ಮುಳ್ಳುಗಳಲ್ಲಿ ಬಿದ್ದವು; ಆಗ ಆ ಮುಳ್ಳುಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು.
8 and others fell upon the good ground, and were giving fruit, some indeed a hundredfold, and some sixty, and some thirty.ಆದರೆ ಬೇರೆಯವುಗಳು ಒಳ್ಳೆಯ ಭೂಮಿಯಲ್ಲಿ ಬಿದ್ದು ಕೆಲವು ನೂರರಷ್ಟು ಕೆಲವು ಅರವತ್ತರಷ್ಟು ಕೆಲವು ಮೂವತ್ತರಷ್ಟು ಫಲಕೊಟ್ಟವು.
9 He who is having ears to hear -- let him hear.'ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ ಅಂದನು.
10 And the disciples having come near, said to him, `Wherefore in similes dost thou speak to them?'ತರುವಾಯ ಶಿಷ್ಯರು ಬಂದು ಆತನಿಗೆ--ನೀನು ಸಾಮ್ಯಗಳಲ್ಲಿ ಅವರೊಂದಿಗೆ ಯಾಕೆ ಮಾತನಾಡುತ್ತೀ ಎಂದು ಕೇಳಲು
11 And he answering said to them that -- `To you it hath been given to know the secrets of the reign of the heavens, and to these it hath not been given,ಆತನು ಪ್ರತ್ಯುತ್ತರವಾಗಿ ಅವ ರಿಗೆ--ಪರಲೋಕರಾಜ್ಯದ ಮರ್ಮಗಳನ್ನು ತಿಳುಕೊಳ್ಳು ವದಕ್ಕೆ ನಿಮಗೆ ಕೊಡಲ್ಪಟ್ಟಿದೆ; ಆದರೆ ಅವರಿಗೆ ಕೊಡ ಲ್ಪಟ್ಟಿಲ್ಲ.
12 for whoever hath, it shall be given to him, and he shall have overabundance, and whoever hath not, even that which he hath shall be taken from him.ಯಾಕಂದರೆ ಇದ್ದವನಿಗೆ ಕೊಡಲ್ಪಡುವದು; ಮತ್ತು ಅವನಿಗೆ ಹೆಚ್ಚು ಸಮೃದ್ಧಿಯಾಗುವದು; ಆದರೆ ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವದು.
13 `Because of this, in similes do I speak to them, because seeing they do not see, and hearing they do not hear, nor understand,ಆದದರಿಂದ ನಾನು ಅವರಿಗೆ ಸಾಮ್ಯಗಳಲ್ಲಿ ಮಾತ ನಾಡುತ್ತೇನೆ; ಯಾಕಂದರೆ ಅವರು ನೋಡಿದರೂ ಕಾಣುವದಿಲ್ಲ ಮತ್ತು ಕೇಳಿದರೂ ತಿಳುಕೊಳ್ಳುವದಿಲ್ಲ; ಇಲ್ಲವೆ ಅವರು ಗ್ರಹಿಸುವದು ಇಲ್ಲ
14 and fulfilled on them is the prophecy of Isaiah, that saith, With hearing ye shall hear, and ye shall not understand, and seeing ye shall see, and ye shall not perceive,ಹೀಗೆ ಯೆಶಾಯನ ಪ್ರವಾದನೆಯು ಅವರಲ್ಲಿ ನೆರವೇರಿತು. ಅದೇನಂದರೆ -- ನೀವು ಕೇಳುತ್ತೀರಿ, ಕೇಳಿದರೂ ತಿಳು ಕೊಳ್ಳುವದೇ ಇಲ್ಲ; ಮತ್ತು ನೋಡುತ್ತೀರಿ, ನೋಡಿ ದರೂ ಗ್ರಹಿಸುವದೇ ಇಲ್ಲ.
15 for made gross was the heart of this people, and with the ears they heard heavily, and their eyes they did close, lest they might see with the eyes, and with the ears might hear, and with the heart understand, and turn back, and I might heal them.ಯಾಕಂದರೆ ಇವರು ತಮ್ಮ ಕಣ್ಣುಗಳಿಂದ ನೋಡಿ ತಮ್ಮ ಕಿವಿಗಳಿಂದ ಕೇಳಿ ಹೃದಯದಿಂದ ಗ್ರಹಿಸಿ ಮಾರ್ಪಾಟು ಹೊಂದದ ಹಾಗೆಯೂ ನಾನು ಇವರನ್ನು ಸ್ವಸ್ಥಮಾಡದಂತೆಯೂ ಈ ಜನರ ಹೃದಯವು ಕೊಬ್ಬೇರಿತು; ಮತ್ತು ಇವರ ಕಿವಿಗಳು ಕೇಳದ ಹಾಗೆ ಮಂದವಾದವು; ಇದಲ್ಲದೆ ಇವರು ತಮ್ಮ ಕಣ್ಣುಗ
16 `And happy are your eyes because they see, and your ears because they hear,ಆದರೆ ನಿಮ್ಮ ಕಣ್ಣುಗಳು ನೋಡುವದ ರಿಂದಲೂ ನಿಮ್ಮ ಕಿವಿಗಳು ಕೇಳುವದರಿಂದಲೂ ಅವು ಧನ್ಯವಾದವುಗಳೇ.
17 for verily I say to you, that many prophets and righteous men did desire to see that which ye look on, and they did not see, and to hear that which ye hear, and they did not hear.ನಾನು ನಿಮಗೆ ನಿಜವಾಗಿ ಹೇಳುವದೇನಂದರೆ--ನೀವು ನೋಡುವಂಥವುಗಳನ್ನು ಮತ್ತು ಕೇಳುವಂಥವುಗಳನ್ನು ಅನೇಕ ಪ್ರವಾದಿಗಳು ಮತ್ತು ನೀತಿವಂತರು ನೋಡುವದಕ್ಕೂ ಕೇಳುವದಕ್ಕೂ ಅಪೇಕ್ಷಿಸಿದರು; ಆದರೆ ಅವರು ನೋಡಲಿಲ್ಲ ಮತ್ತು ಕೇಳಲಿಲ್ಲ.
18 `Ye, therefore, hear ye the simile of the sower:ಆದದರಿಂದ ಬಿತ್ತುವವನ ಸಾಮ್ಯದ ವಿಷಯವಾಗಿ ನೀವು ಕೇಳಿರಿ:
19 Every one hearing the word of the reign, and not understanding -- the evil one doth come, and doth catch that which hath been sown in his heart; this is that sown by the way.ಯಾವನಾದರೂ ರಾಜ್ಯದ ವಾಕ್ಯವನ್ನು ಕೇಳಿ ಗ್ರಹಿಸದೆ ಇರುವಾಗ ಕೆಡುಕನು ಬಂದು ಅವನ ಹೃದಯದಲ್ಲಿ ಬಿತ್ತಿದ್ದನ್ನು ತೆಗೆದು ಬಿಡು ವನು; ದಾರಿಯ ಮಗ್ಗುಲಲ್ಲಿ ಬೀಜವನ್ನು ಅಂಗೀಕರಿ ಸಿದವನು ಇವನೇ.
20 `And that sown on the rocky places, this is he who is hearing the word, and immediately with joy is receiving it,ಮತ್ತು ಬಂಡೆಯ ಸ್ಥಳಗಳಲ್ಲಿ ಬೀಜವನ್ನು ಅಂಗೀಕರಿಸಿದವನು ಇವನೇ; ಇವನು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಅಂಗೀಕರಿಸುತ್ತಾನೆ;
21 and he hath not root in himself, but is temporary, and persecution or tribulation having happened because of the word, immediately he is stumbled.ಆದರೂ ಅವನಲ್ಲಿ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರ ಇರುವನು; ಯಾಕಂದರೆ ವಾಕ್ಯಕ್ಕಾಗಿ ಸಂಕಟ ಇಲ್ಲವೆ ಹಿಂಸೆ ಬಂದಾಗ ತಕ್ಷಣವೇ ಅವನು ಅಭ್ಯಂತರ ಪಡುವನು.
22 `And that sown toward the thorns, this is he who is hearing the word, and the anxiety of this age, and the deceitfulness of the riches, do choke the word, and it becometh unfruitful.ಮುಳ್ಳುಗಳಲ್ಲಿ ಬೀಜವನ್ನು ಅಂಗೀಕರಿಸಿದವನು ಸಹ ಇವನೇ; ಇವನು ವಾಕ್ಯವನ್ನು ಕೇಳುತ್ತಾನೆ; ಆದರೆ ಈ ಪ್ರಪಂಚದ ಚಿಂತೆಯೂ ಐಶ್ವರ್ಯದ ಮೋಸವೂ ವಾಕ್ಯವನ್ನು ಅಡಗಿಸುವ ದರಿಂದ ಅವನು ಫಲ ಕೊಡಲಾರನು.
23 `And that sown on the good ground: this is he who is hearing the word, and is understanding, who indeed doth bear fruit, and doth make, some indeed a hundredfold, and some sixty, and some thirty.'ಆದರೆ ಒಳ್ಳೇ ಭೂಮಿಯಲ್ಲಿ ಬೀಜ ವನ್ನು ಅಂಗೀಕರಿಸಿದವನು ಇವನೇ; ಇವನು ವಾಕ್ಯ ವನ್ನು ಕೇಳಿ ಅದನು ಗ್ರಹಿಸುತ್ತಾನೆ; ಇವನೇ ಫಲಫಲಿ ಸುವವನಾಗಿ ನೂರರಷ್ಟು ಅರವತ್ತರಷ್ಟು ಮತ್ತು ಮೂವತ್ತರಷ್ಟು ಫಲವನ್ನು ಕೊಡುತ್ತಾನೆ.
24 Another simile he set before them, saying: `The reign of the heavens was likened to a man sowing good seed in his field,ಆತನು ಮತ್ತೊಂದು ಸಾಮ್ಯವನ್ನು ಹೇಳಿದ್ದೇ ನಂದರೆ--ಪರಲೋಕ ರಾಜ್ಯವು ಒಳ್ಳೇ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ್ದ ಒಬ್ಬ ಮನುಷ್ಯನಿಗೆ ಹೋಲಿಕೆ ಯಾಗಿದೆ.
25 and, while men are sleeping, his enemy came and sowed darnel in the midst of the wheat, and went away,ಹೇಗಂದರೆ ಜನರು ನಿದ್ರೆ ಮಾಡುತ್ತಿದ್ದಾಗ ಅವನ ವೈರಿಯು ಬಂದು ಗೋದಿಯ ನಡುವೆ ಹಣಜಿ ಯನ್ನು ಬಿತ್ತಿ ಹೊರಟು ಹೋದನು.
26 and when the herb sprang up, and yielded fruit, then appeared also the darnel.ಅದು ಮೊಳೆತು ಫಲಕೊಟ್ಟಾಗ ಹಣಜಿ ಸಹ ಕಾಣಿಸಿ ಕೊಂಡಿತು.
27 `And the servants of the householder, having come near, said to him, Sir, good seed didst thou not sow in thy field? whence then hath it the darnel?ಆದದರಿಂದ ಮನೇಯಜಮಾನನ ಸೇವಕರು ಅವನ ಬಳಿಗೆ ಬಂದು ಅವನಿಗೆ--ಅಯ್ಯಾ, ನೀನು ನಿನ್ನ ಹೊಲದಲ್ಲಿ ಒಳ್ಳೇ ಬೀಜವನ್ನು ಬಿತ್ತಿದಿ ಯಲ್ಲಾ? ಹಾಗಾದರೆ ಈ ಹಣಜಿಯು ಎಲ್ಲಿಂದ ಬಂತು ಎಂದು ಕೇಳಿದರು.
28 And he saith to them, A man, an enemy, did this; and the servants said to him, Wilt thou, then, `that' having gone away we may gather it up?ಅವನು ಅವರಿಗೆ--ಒಬ್ಬ ವೈರಿ ಯು ಇದನ್ನು ಮಾಡಿದ್ದಾನೆ ಅಂದನು. ಆದರೆ ಸೇವಕರು ಅವನಿಗೆ--ಹಾಗಾದರೆ ನಾವು ಹೋಗಿ ಅವುಗಳನ್ನು ಕೂಡಿಸುವಂತೆ ನೀನು ಇಷ್ಟಪಡುತ್ತೀಯೋ ಎಂದು ಕೇಳಿದರು.
29 `And he said, No, lest -- gathering up the darnel -- ye root up with it the wheat,ಆದರೆ ಅವನು--ಬೇಡ, ನೀವು ಹಣಜಿಯನ್ನು ಕೂಡಿಸುವಾಗ ಅವುಗಳೊಂದಿಗೆ ಗೋದಿಯನ್ನೂ ಕಿತ್ತೀರಿ.
30 suffer both to grow together till the harvest, and in the time of the harvest I will say to the reapers, Gather up first the darnel, and bind it in bundles, to burn it, and the wheat gather up into my storehouse.'ಸುಗ್ಗೀಕಾಲದ ವರೆಗೆ ಎರಡೂ ಜೊತೆಯಲ್ಲಿ ಬೆಳೆಯಲಿ; ಸುಗ್ಗೀಕಾಲದಲ್ಲಿ ನಾನು ಕೊಯ್ಯುವವರಿಗೆ--ಮೊದಲು ಹಣಜಿಯನ್ನು ಕೂಡಿಸಿ ಅದನ್ನು ಸುಡುವದಕ್ಕೆ ಹೊರೆ ಕಟ್ಟಿರಿ; ಆದರೆ ಗೋದಿಯನ್ನು ನನ್ನ ಕಣಜದಲ್ಲಿ ಕೂಡಿಸಿರಿ ಎಂದು ಹೇಳುವೆನು ಅಂದನು.
31 Another simile he set before them, saying: `The reign of the heavens is like to a grain of mustard, which a man having taken, did sow in his field,ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದ್ದೇನಂದರೆ--ಒಬ್ಬ ಮನುಷ್ಯನು ತಕ್ಕೊಂಡು ಹೋಗಿ ತನ್ನ ಹೊಲದಲ್ಲಿ ಬಿತ್ತಿದ್ದ ಸಾಸಿವೆ ಕಾಳಿಗೆ ಪರಲೋಕರಾಜ್ಯವು ಹೋಲಿಕೆಯಾಗಿದೆ.
32 which less, indeed, is than all the seeds, but when it may be grown, is greatest of the herbs, and becometh a tree, so that the birds of the heaven do come and rest in its branches.'ಅದು ಎಲ್ಲಾ ಬೀಜಗಳಿಗಿಂತಲೂ ಚಿಕ್ಕದಾದದ್ದೇ ನಿಜ; ಆದರೆ ಅದು ಬೆಳೆದಾಗ ಎಲ್ಲಾ ಸಸಿಗಳಿಗಿಂತಲೂ ದೊಡ್ಡದಾಗಿ ಮರವಾಯಿತು. ಹೀಗೆ ಆಕಾಶದ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ವಾಸಮಾಡುತ್ತವೆ.
33 Another simile spake he to them: `The reign of the heavens is like to leaven, which a woman having taken, hid in three measures of meal, till the whole was leavened.'ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದ್ದೇನಂದರೆ--ಒಬ್ಬ ಸ್ತ್ರೀಯು ಹುಳಿಯನ್ನು ತಕ್ಕೊಂಡು ಮೂರು ಸೇರು ಹಿಟ್ಟೆಲ್ಲಾ ಹುಳಿಯಾಗುವ ತನಕ ಅದರಲ್ಲಿ ಅಡಗಿಸಿಟ್ಟ ಹುಳಿಗೆ ಪರಲೋಕ ರಾಜ್ಯವು ಹೋಲಿಕೆಯಾಗಿದೆ.
34 All these things spake Jesus in similes to the multitudes, and without a simile he was not speaking to them,ಯೇಸು ಇವೆಲ್ಲವುಗಳನ್ನು ಜನಸಮೂಹ ದೊಂದಿಗೆ ಸಾಮ್ಯಗಳಲ್ಲಿ ಮಾತನಾಡಿದನು; ಸಾಮ್ಯ ವಿಲ್ಲದೆ ಆತನು ಅವರೊಂದಿಗೆ ಮಾತನಾಡಲಿಲ್ಲ.
35 that it might be fulfilled that was spoken through the prophet, saying, `I will open in similes my mouth, I will utter things having been hidden from the foundation of the world.'ಹೀಗೆ--ಸಾಮ್ಯಗಳನ್ನು ಹೇಳುವಂತೆ ನನ್ನ ಬಾಯಿ ತೆರೆಯುವೆನು; ಲೋಕದ ಅಸ್ತಿವಾರದಿಂದ ಮರೆಯಾಗಿ ಇಡಲ್ಪಟ್ಟವುಗಳನ್ನು ನಾನು ಹೊರಪಡಿಸುವೆನು ಎಂದು ಪ್ರವಾದಿಯಿಂದ ಹೇಳಲ್ಪಟ್ಟದ್ದು ನೆರವೇರಿತು.
36 Then having let away the multitudes, Jesus came to the house, and his disciples came near to him, saying, `Explain to us the simile of the darnel of the field.'ತರುವಾಯ ಯೇಸು ಜನಸಮೂಹವನ್ನು ಕಳು ಹಿಸಿಬಿಟ್ಟು ಮನೆಯೊಳಕ್ಕೆ ಹೋದನು; ಆಗ ಶಿಷ್ಯರು ಆತನ ಬಳಿಗೆ ಬಂದು ಆತನಿಗೆ--ಹೊಲದ ಹಣಜಿಯ ಸಾಮ್ಯವನ್ನು ನಮಗೆ ವಿವರಿಸು ಅಂದರು.
37 And he answering said to them, `He who is sowing the good seed is the Son of Man,ಆತನು ಪ್ರತ್ಯುತ್ತರವಾಗಿ ಅವರಿಗೆ-- ಒಳ್ಳೇ ಬೀಜ ಬಿತ್ತುವ ವನು ಮನುಷ್ಯಕುಮಾರನು;
38 and the field is the world, and the good seed, these are the sons of the reign, and the darnel are the sons of the evil one,ಹೊಲವು ಈ ಲೋಕ; ಒಳ್ಳೇ ಬೀಜವು ರಾಜ್ಯದ ಮಕ್ಕಳಾಗಿದ್ದಾರೆ; ಆದರೆ ಹಣಜಿಯು ಕೆಡುಕನ ಮಕ್ಕಳಾಗಿದ್ದಾರೆ.
39 and the enemy who sowed them is the devil, and the harvest is a full end of the age, and the reapers are messengers.ಅದನ್ನು ಬಿತ್ತಿದ ವೈರಿಯು ಸೈತಾನನೇ; ಸುಗ್ಗೀ ಕಾಲವು ಲೋಕದ ಅಂತ್ಯವಾಗಿದೆ; ಮತ್ತು ಕೊಯ್ಯುವವರು ದೂತರೇ.
40 `As, then, the darnel is gathered up, and is burned with fire, so shall it be in the full end of this age,ಹೇಗೆ ಹಣಜಿಯನ್ನು ಕೂಡಿಸಿ ಬೆಂಕಿಯಲ್ಲಿ ಸುಡು ವರೋ ಹಾಗೆಯೇ ಈ ಲೋಕಾಂತ್ಯದಲ್ಲಿ ಆಗುವದು.
41 the Son of Man shall send forth his messengers, and they shall gather up out of his kingdom all the stumbling-blocks, and those doing the unlawlessness,ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿ ಸುವನು; ಅವರು ಆತಂಕ ಮಾಡುವ ಎಲ್ಲವುಗಳನ್ನೂ ದುಷ್ಟತನ ಮಾಡುವವರನ್ನೂ ಆತನ ರಾಜ್ಯದೊಳಗಿಂದ ಕೂಡಿಸಿ ಅವರನ್ನು ಬೆಂಕಿಯ ಆವಿಗೆಯಲ್ಲಿ ಹಾಕುವರು;
42 and shall cast them to the furnace of the fire; there shall be the weeping and the gnashing of the teeth.ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.
43 `Then shall the righteous shine forth as the sun in the reign of their Father. He who is having ears to hear -- let him hear.ತರುವಾಯ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ.
44 `Again, the reign of the heavens is like to treasure hid in the field, which a man having found did hide, and from his joy goeth, and all, as much as he hath, he selleth, and buyeth that field.ಪರಲೋಕರಾಜ್ಯವು ಹೊಲದಲ್ಲಿ ಬಚ್ಚಿಟ್ಟಿದ ಸಂಪತ್ತಿಗೆ ಹೋಲಿಕೆಯಾಗಿದೆ; ಅದನ್ನು ಒಬ್ಬ ಮನು ಷ್ಯನು ಕಂಡುಕೊಂಡು ಬಚ್ಚಿಟ್ಟು ಅದರ ಸಂತೋಷದ ನಿಮಿತ್ತ ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಳ್ಳುತ್ತಾನೆ.
45 `Again, the reign of the heavens is like to a man, a merchant, seeking goodly pearls,ಪರಲೋಕರಾಜ್ಯವು ಒಳ್ಳೇ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ.
46 who having found one pearl of great price, having gone away, hath sold all, as much as he had, and bought it.ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡುಕೊಂಡು ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಅದನ್ನು ಕೊಂಡುಕೊಂಡನು.
47 `Again, the reign of the heavens is like to a net that was cast into the sea, and did gather together of every kind,ಪರಲೋಕರಾಜ್ಯವು ಸಮುದ್ರದಲ್ಲಿ ಬೀಸಲ್ಪಟ್ಟು ಎಲ್ಲಾ ತರವಾದದ್ದನ್ನು (ಮಾನುಗಳನ್ನು) ಕೂಡಿಸಿದ ಬಲೆಗೆ ಹೋಲಿಕೆಯಾಗಿದೆ.
48 which, when it was filled, having drawn up again upon the beach, and having sat down, they gathered the good into vessels, and the bad they did cast out,ಅದು ತುಂಬಿದಾಗ ಅವರು ಅದನ್ನು ದಡಕ್ಕೆ ಎಳೆದು ಕೂತುಕೊಂಡು ಒಳ್ಳೆಯವುಗಳನ್ನು ಪಾತ್ರೆಗಳಲ್ಲಿ ತುಂಬಿಸಿ ಕೆಟ್ಟವುಗಳನ್ನು ಹೊರಗೆ ಬಿಸಾಡಿದರು.
49 so shall it be in the full end of the age, the messengers shall come forth and separate the evil out of the midst of the righteous,ಹಾಗೆಯೇ ಲೋಕಾಂತ್ಯ ದಲ್ಲಿ ಇರುವದು; ದೂತರು ಹೊರಟುಬಂದು ನೀತಿವಂತರ ಮಧ್ಯದಿಂದ ಕೆಡುಕರನ್ನು ಪ್ರತ್ಯೇಕಿಸುವರು.
50 and shall cast them to the furnace of the fire, there shall be the weeping and the gnashing of the teeth.'ಮತ್ತು ಅವರನ್ನು ಬೆಂಕಿಯ ಆವಿಗೆಯಲ್ಲಿ ಹಾಕುವರು; ಅಲ್ಲಿ ಗೋಳಾಟವೂ ಹಲ್ಲುಕಡಿಯೋಣವೂ ಇರುವವು ಎಂದು ಹೇಳಿದನು.
51 Jesus saith to them, `Did ye understand all these?' They say to him, `Yes, sir.'ಇದಲ್ಲದೆ ಯೇಸು ಅವರಿಗೆ--ಇವುಗಳನ್ನೆಲ್ಲಾ ನೀವು ಗ್ರಹಿಸಿದ್ದೀರಾ ಎಂದು ಕೇಳಿದ್ದಕ್ಕೆ ಅವರು ಆತ ನಿಗೆ--ಕರ್ತನೇ, ಹೌದು ಎಂದು ಹೇಳಿದರು.
52 And he said to them, `Because of this every scribe having been discipled in regard to the reign of the heavens, is like to a man, a householder, who doth bring forth out of his treasure things new and old.'ಆತನು ಅವರಿಗೆ--ಆದಕಾರಣ ಪರಲೋಕ ರಾಜ್ಯದ ವಿಷಯವಾಗಿ ಶಿಕ್ಷಣಹೊಂದಿದ ಪ್ರತಿಯೊಬ್ಬ ಶಾಸ್ತ್ರಿಯು ತನ್ನ ಬೊಕ್ಕಸದೊಳಗಿಂದ ಹೊಸ ಮತ್ತು ಹಳೆಯ ವಸ್ತುಗಳನ್ನು ಹೊರಗೆ ತರುವ ಒಬ್ಬ ಮನೇ ಯಜಮಾನನಿಗೆ ಹೋಲಿಕೆಯಾಗಿದ್ದಾನೆ ಅಂದನು.
53 And it came to pass, when Jesus finished these similes, he removed thence,ಈ ಸಾಮ್ಯಗಳನ್ನು ಮುಗಿಸಿದ ತರುವಾಯ ಯೇಸು ಅಲ್ಲಿಂದ ಹೊರಟುಹೋದನು.
54 and having come to his own country, he was teaching them in their synagogue, so that they were astonished, and were saying, `Whence to this one this wisdom and the mighty works?ಆತನು ತನ್ನ ಸ್ವಂತ ದೇಶಕ್ಕೆ ಬಂದು ಅವರ ಸಭಾಮಂದಿರ ದಲ್ಲಿ ಅವರಿಗೆ ಬೋಧಿಸಿದ್ದರಿಂದ ಅವರು ವಿಸ್ಮಯ ಗೊಂಡು--ಈ ಜ್ಞಾನವೂ ಈ ಮಹತ್ಕಾರ್ಯಗಳೂ ಈತನಿಗೆ ಎಲ್ಲಿಂದ ಬಂದಿದ್ದಾವು?
55 is not this the carpenter's son? is not his mother called Mary, and his brethren James, and Joses, and Simon, and Judas?ಈತನು ಬಡಗಿ ಯ ಮಗನಲ್ಲವೇ? ಮರಿಯಳೆಂದು ಕರೆಯಲ್ಪಡು ವವಳು ಈತನ ತಾಯಿಯಲ್ಲವೇ? ಮತ್ತು ಯಾಕೋಬ, ಯೋಸೇಫ, ಸೀಮೋನ, ಯೂದ ಈತನ ಸಹೋದರ ರಲ್ಲವೇ?
56 and his sisters -- are they not all with us? whence, then, to this one all these?'ಈತನ ಸಹೋದರಿಯರೆಲ್ಲರೂ ನಮ್ಮೊಂ ದಿಗೆ ಇದ್ದಾರಲ್ಲವೇ? ಹಾಗಾದರೆ ಇವೆಲ್ಲವುಗಳು ಈ ಮನುಷ್ಯನಿಗೆ ಎಲ್ಲಿಂದ ಬಂದಿದ್ದಾವೆಂದು ಅಂದು ಕೊಂಡರು.
57 and they were stumbled at him. And Jesus said to them, `A prophet is not without honor except in his own country, and in his own house:'ಅವರು ಆತನ ವಿಷಯದಲ್ಲಿ ಅಭ್ಯಂತರ ಪಟ್ಟರು. ಆದರೆ ಯೇಸು ಅವರಿಗೆ--ಪ್ರವಾದಿಗೆ ಮತ್ತೆಲ್ಲಿಯಾದರೂ ಸನ್ಮಾನವಿದೆ, ಆದರೆ ತನ್ನ ಸ್ವಂತ ದೇಶದಲ್ಲಿ ತನ್ನ ಸ್ವಂತ ಮನೆಯಲ್ಲಿ ಮಾತ್ರ ಇಲ್ಲ ಅಂದನು.
58 and he did not there many mighty works, because of their unbelief.ಆತನು ಅವರ ಅಪನಂಬಿಕೆಯ ದೆಸೆ ಯಿಂದ ಅಲ್ಲಿ ಬಹಳ ಮಹತ್ಕಾರ್ಯಗಳನ್ನು ನಡಿಸಲಿಲ್ಲ.
Kannada Bible