Bible

Matthew 12 - ASV (Kannada)

1 At that season Jesus went on the sabbath day through the grainfields; and his disciples were hungry and began to pluck ears and to eat.ಆ ಸಮಯದಲ್ಲಿ ಯೇಸು ಸಬ್ಬತ್‌ ದಿನದಲ್ಲಿ ಪೈರಿನ ಹೊಲವನು ಹಾದುಹೋಗುತ್ತಿದ್ದಾಗ ಆತನ ಶಿಷ್ಯರು ಹಸಿದಿ ದ್ದರಿಂದ ತೆನೆಗಳನ್ನು ಕಿತ್ತು ತಿನ್ನಲಾರಂಭಿಸಿದರು.

2 But the Pharisees, when they saw it, said unto him, Behold, thy disciples do that which it is not lawful to do upon the sabbath.ಆದರೆ ಫರಿಸಾಯರು ಅದನ್ನು ನೋಡಿ ಆತನಿಗೆ--ಇಗೋ, ನಿನ್ನ ಶಿಷ್ಯರು ಸಬ್ಬತ್‌ದಿನದಲ್ಲಿ ಮಾಡ ಬಾರದ್ದನ್ನು ಮಾಡುತ್ತಾರೆ ಅಂದರು.

3 But he said unto them, Have ye not read what David did, when he was hungry, and they that were with him;ಅದಕ್ಕೆ ಆತನು ಅವರಿಗೆ--ದಾವೀದನು ತಾನೂ ತನ್ನ ಸಂಗಡ ಇದ್ದವರೂ ಹಸಿದಾಗ ಏನು ಮಾಡಿದನೆಂದು ನೀವು ಓದಲಿಲ್ಲವೋ?

4 how he entered into the house of God, and ate the showbread, which it was not lawful for him to eat, neither for them that were with him, but only for the priests?ಅವನು ದೇವರ ಮನೆ ಯೊಳಗೆ ಪ್ರವೇಶಿಸಿ ಯಾಜಕರೇ ಹೊರತು ತಾನಾಗಲೀ ತನ್ನ ಕೂಡ ಇದ್ದವರಾಗಲೀ ತಿನ್ನಬಾರದಾಗಿದ್ದ ಸಮ್ಮುಖ ರೊಟ್ಟಿಯನ್ನು ಹೇಗೆ ತಿಂದನು?

5 Or have ye not read in the law, that on the sabbath day the priests in the temple profane the sabbath, and are guiltless?ಇದಲ್ಲದೆ ಸಬ್ಬತ್‌ ದಿನಗಳಲ್ಲಿ ಯಾಜಕರು ದೇವಾಲಯದಲ್ಲಿ ಸಬ್ಬತ್ತನ್ನು ಅಪವಿತ್ರಪಡಿಸಿದರೂ ನಿರಪರಾಧಿಗಳಾಗಿದ್ದಾ ರೆಂದು ನೀವು ನ್ಯಾಯಪ್ರಮಾಣದಲ್ಲಿ ಓದಲಿಲ್ಲವೇ?

6 But I say unto you, that one greater than the temple is here.ಆದರೆ ನಾನು ನಿಮಗೆ ಹೇಳುವದೇನಂದರೆ-- ದೇವಾಲಯಕ್ಕಿಂತಲೂ ದೊಡ್ಡವನು ಈ ಸ್ಥಳದಲ್ಲಿ ಇದ್ದಾನೆ.

7 But if ye had known what this meaneth, I desire mercy, and not sacrifice, ye would not have condemned the guiltless.ಆದರೆ--ನನಗೆ ಯಜ್ಞವಲ್ಲ, ಕರುಣೆಯೇ ಬೇಕು ಎಂಬದರ ಅರ್ಥವನ್ನು ನೀವು ತಿಳಿದಿದ್ದರೆ ನಿರಪರಾಧಿಗಳನ್ನು ಅಪರಾಧಿಗಳೆಂದು ತೀರ್ಪುಮಾಡು ತ್ತಿದ್ದಿಲ್ಲ.

8 For the Son of man is lord of the sabbath.ಯಾಕಂದರೆ ಮನುಷ್ಯ ಕುಮಾರನು ಸಬ್ಬತ್‌ ದಿನಕ್ಕೂ ಒಡೆಯನಾಗಿದ್ದಾನೆ ಎಂದು ಹೇಳಿದನು.

9 And he departed thence, and went into their synagogue:ತರುವಾಯ ಆತನು ಅಲ್ಲಿಂದ ಹೊರಟು ಅವರ ಸಭಾಮಂದಿರದೊಳಕ್ಕೆ ಹೋದನು.

10 and behold, a man having a withered hand. And they asked him, saying, Is it lawful to heal on the sabbath day? that they might accuse him.ಇಗೋ, ಅಲ್ಲಿ ಕೈ ಬತ್ತಿದ್ದ ಒಬ್ಬ ಮನುಷ್ಯನಿದ್ದನು. ಆಗ ಅವರು ಆತನ ಮೇಲೆ ತಪ್ಪು ಹೊರಿಸಬೇಕೆಂದು ಆತನಿಗೆ-- ಸಬ್ಬತ್‌ ದಿನಗಳಲ್ಲಿ ಸ್ವಸ್ಥ ಮಾಡುವದು ನ್ಯಾಯವೋ ಎಂದು ಕೇಳಿದರು.

11 And he said unto them, What man shall there be of you, that shall have one sheep, and if this fall into a pit on the sabbath day, will he not lay hold on it, and lift it out?ಅದಕ್ಕಾತನು ಅವರಿಗೆ-- ನಿಮ್ಮಲ್ಲಿ ಯಾವನಿಗಾದರೂ ಒಂದು ಕುರಿಯಿರಲಾಗಿ ಅದು ಸಬ್ಬತ್‌ ದಿನದಲ್ಲಿ ಕುಣಿಯೊಳಗೆ ಬಿದ್ದರೆ ಅವನು ಅದನ್ನು ಹಿಡಿದು ಮೇಲಕ್ಕೆ ಎತ್ತದೆ ಇರುವನೇ?

12 How much then is a man of more value than a sheep! Wherefore it is lawful to do good on the sabbath day.ಹಾಗಾದರೆ ಕುರಿಗಿಂತಲೂ ಒಬ್ಬ ಮನುಷ್ಯನು ಎಷ್ಟೋ ಶ್ರೇಷ್ಠನಾಗಿದ್ದಾನಲ್ಲವೇ? ಆದದರಿಂದ ಸಬ್ಬತ್‌ ದಿನಗಳಲ್ಲಿ ಒಳ್ಳೆಯದನ್ನು ಮಾಡುವದು ನ್ಯಾಯವಾಗಿದೆ ಎಂದು ಹೇಳಿದನು.

13 Then saith he to the man, Stretch forth thy hand. And he stretched it forth; and it was restored whole, as the other.ಆಗ ಆತನು ಆ ಮನುಷ್ಯನಿಗೆ--ನಿನ್ನ ಕೈಯನ್ನು ಮುಂದೆ ಚಾಚು ಅಂದನು. ಅವನು ಚಾಚಿದಾಗ ಅದು ಗುಣವಾಗಿ ಮತ್ತೊಂದರ ಹಾಗಾಯಿತು.

14 But the Pharisees went out, and took counsel against him, how they might destroy him.ತರುವಾಯ ಫರಿಸಾ ಯರು ಆತನನ್ನು ಹೇಗೆ ಕೊಲ್ಲಬೇಕೆಂದು ಆತನಿಗೆ ವಿರೋಧವಾಗಿ ಆಲೋಚಿಸಲು ಹೊರಗೆ ಹೋದರು.

15 And Jesus perceiving `it' withdrew from thence: and many followed him; and he healed them all,ಆದರೆ ಯೇಸು ಅದನ್ನು ತಿಳಿದು ಅಲ್ಲಿಂದ ಹೊರಟು ಹೋದನು; ಮತ್ತು ದೊಡ್ಡ ಸಮೂಹಗಳು ಆತನನ್ನು ಹಿಂಬಾಲಿಸಿದರು. ಆಗ ಆತನು ಅವರೆಲ್ಲರನ್ನು ವಾಸಿ ಮಾಡಿದನು.

16 and charged them that they should not make him known:ಯೇಸು ತನ್ನನ್ನು ಯಾರಿಗೂ ಪ್ರಕಟಿಸ ಬಾರದೆಂದು ಅವರಿಗೆ ಆಜ್ಞಾಪಿಸಿದನು;

17 that it might be fulfilled which was spoken through Isaiah the prophet, saying,ಹೀಗೆ ಪ್ರವಾದಿಯಾದ ಯೆಶಾಯನಿಂದ ಹೇಳಲ್ಪಟ್ಟಿದ್ದು ನೆರವೇರಿತು; ಅದೇನಂದರೆ--

18 Behold, my servant whom I have chosen; My beloved in whom my soul is well pleased: I will put my Spirit upon him, And he shall declare judgment to the Gentiles.ಇಗೋ, ನಾನು ಆರಿಸಿಕೊಂಡ ನನ್ನ ಸೇವಕನು; ನನ್ನ ಪ್ರಾಣವು ಬಹಳವಾಗಿ ಮೆಚ್ಚಿಕೊಂಡಿರುವ ನನ್ನ ಪ್ರಿಯನು; ನಾನು ಆತನ ಮೇಲೆ ನನ್ನ ಆತ್ಮನನ್ನು ಇರಿಸುವೆನು ಮತ್ತು ಆತನು ಅನ್ಯಜನಗಳಿಗೆ ನ್ಯಾಯವನ್ನು ತೋರಿ ಸುವನು.

19 He shall not strive, nor cry aloud; Neither shall any one hear his voice in the streets.ಆತನು ಜಗಳವಾಡುವದಿಲ್ಲ, ಕೂಗಾಡು ವದೂ ಇಲ್ಲ; ಇಲ್ಲವೆ ಯಾವ ಮನುಷ್ಯನು ಬೀದಿಗಳಲ್ಲಿ ಆತನ ಸ್ವರವನ್ನು ಕೇಳಿಸಿಕೊಳ್ಳುವದೂ ಇಲ್ಲ.

20 A bruised reed shall he not break, And smoking flax shall he not quench, Till he send forth judgment unto victory.ಆತನು ನ್ಯಾಯವನ್ನು ವಿಜಯಕ್ಕಾಗಿ ಕಳುಹಿಸುವವರೆಗೆ ಜಜ್ಜಿದ ದಂಟನ್ನು ಮುರಿಯುವದಿಲ್ಲ ಮತ್ತು ಹೊಗೆಯಾಡುವ ಬತ್ತಿಯನ್ನು ನಂದಿಸುವದಿಲ್ಲ.

21 And in his name shall the Gentiles hope.ಮತ್ತು ಆತನ ಹೆಸರಿನಲ್ಲಿ ಅನ್ಯಜನರು ನಂಬಿಕೆಯಿಡುವರು ಎಂಬದೇ.

22 Then was brought unto him one possessed with a demon, blind and dumb: and he healed him, insomuch that the dumb man spake and saw.ಆಗ ಜನರು ದೆವ್ವ ಹಿಡಿದಿದ್ದವನೂ ಕುರುಡನೂ ಮೂಕನೂ ಆಗಿದ್ದವನನ್ನು ಆತನ ಬಳಿಗೆ ತಂದರು; ಮತ್ತು ಆತನು ಅವನನ್ನು ಸ್ವಸ್ಥಮಾಡಿದ್ದರಿಂದ ಕುರುಡನೂ ಮೂಕನೂ ಆಗಿದ್ದವನು ಮಾತನಾಡಿದನು ಮತ್ತು ನೋಡಿದನು.

23 And all the multitudes were amazed, and said, Can this be the son of David?ಆಗ ಜನರೆಲ್ಲರು ವಿಸ್ಮಯ ಗೊಂಡವರಾಗಿ--ಈತನು ದಾವೀದನ ಕುಮಾರ ನಲ್ಲವೇ ಅಂದರು.

24 But when the Pharisees heard it, they said, This man doth not cast out demons, but by Beelzebub the prince of the demons.ಆದರೆ ಫರಿಸಾಯರು ಇದನ್ನು ಕೇಳಿದಾಗ--ಇವನು ದೆವ್ವಗಳ ಅಧಿಪತಿಯಾಗಿರುವ ಬೆಲ್ಜೆಬೂಲನಿಂದಲೇ ಹೊರತು ದೆವ್ವಗಳನ್ನು ಬಿಡಿಸು ವದಿಲ್ಲ ಅಂದರು.

25 And knowing their thoughts he said unto them, Every kingdom divided against itself is brought to desolation; and every city or house divided against itself shall not stand:ಆಗ ಯೇಸು ಅವರ ಆಲೋಚನೆ ಗಳನ್ನು ತಿಳಿದು ಅವರಿಗೆ--ತನ್ನಲ್ಲಿ ವಿರೋಧವುಂಟಾಗಿ ವಿಭಾಗಿಸಲ್ಪಟ್ಟ ಪ್ರತಿಯೊಂದು ರಾಜ್ಯವು ಹಾಳಾಗುತ್ತದೆ; ಮತ್ತು ತನ್ನಲ್ಲಿ ವಿರೋಧವುಂಟಾಗಿ ವಿಭಾಗಿಸಲ್ಪಟ್ಟ ಪ್ರತಿಯೊಂದು ಪಟ್ಟಣವಾಗಲೀ ಮನೆಯಾಗಲೀ ನಿಲ್ಲುವದಿಲ್ಲ.

26 and if Satan casteth out Satan, he is divided against himself; how then shall his kingdom stand?ಇದಲ್ಲದೆ ಸೈತಾನನು ಸೈತಾನನನ್ನು ಹೊರಗೆ ಹಾಕಿದರೆ ಅವನು ತನಗೆ ವಿರೋಧವಾಗಿ ತಾನೇ ವಿಭಾಗಿಸಲ್ಪಟ್ಟಿದ್ದಾನೆ; ಹಾಗಾದರೆ ಅವನ ರಾಜ್ಯವು ಹೇಗೆ ನಿಂತೀತು?

27 And if I by Beelzebub cast out demons, by whom do your sons cast them out? therefore shall they be your judges.ಮತ್ತು ಬೆಲ್ಜೆಬೂಲನಿಂದ ನಾನು ದೆವ್ವಗಳನ್ನು ಬಿಡಿಸಿದರೆ ನಿಮ್ಮ ಮಕ್ಕಳು ಯಾರಿಂದ ಅವುಗಳನ್ನು ಬಿಡಿಸುತ್ತಾರೆ? ಆದದರಿಂದ ಅವರೇ ನಿಮಗೆ ನ್ಯಾಯತೀರಿಸುವರು.

28 But if I by the Spirit of God cast out demons, then is the kingdom of God come upon you.ಆದರೆ ನಾನು ದೇವರ ಆತ್ಮನಿಂದ ದೆವ್ವಗಳನ್ನು ಬಿಡಿಸಿದರೆ ದೇವರ ರಾಜ್ಯವು ನಿಮ್ಮ ಬಳಿಗೆ ಬಂದಿದೆಯಲ್ಲಾ.

29 Or how can one enter into the house of the strong `man,' and spoil his goods, except he first bind the strong `man'? and then he will spoil his house.ಇಲ್ಲವೆ ಯಾವನಾದರೂ ಮೊದಲು ಬಲವುಳ್ಳ ಮನುಷ್ಯನನ್ನು ಕಟ್ಟಿಹಾಕದ ಹೊರತು ಅವನ ಮನೆ ಯನ್ನು ಪ್ರವೇಶಿಸಿ ಅವನ ಸೊತ್ತನ್ನು ಸುಲುಕೊಳ್ಳು ವದಕ್ಕಾದೀತೇ? ಕಟ್ಟಿದ ಮೇಲೆ ಅವನ ಮನೆಯನ್ನು ಸುಲುಕೊಳ್ಳುವದಕ್ಕಾಗುವದು.

30 He that is not with me is against me, and he that gathereth not with me scattereth.ನನ್ನ ಸಂಗಡ ಇರದ ವನು ನನಗೆ ವಿರೋಧವಾಗಿದ್ದಾನೆ; ಮತ್ತು ನನ್ನ ಸಂಗಡ ಕೂಡಿಸದವನು ಚದರಿಸುವವನಾಗಿದ್ದಾನೆ ಎಂದು ಹೇಳಿದನು.

31 Therefore I say unto you, Every sin and blasphemy shall be forgiven unto men; but the blasphemy against the Spirit shall not be forgiven.ಆದಕಾರಣ ನಾನು ನಿಮಗೆ ಹೇಳುವದೇ ನಂದರೆ-- ಎಲ್ಲಾ ತರದ ಪಾಪವೂ ದೂಷಣೆಯೂ ಮನುಷ್ಯರಿಗೆ ಕ್ಷಮಿಸಲ್ಪಡುವದು; ಆದರೆ ಪರಿಶು ದ್ಧಾತ್ಮನಿಗೆ ವಿರೋಧವಾದ ದೂಷಣೆಯು ಮನುಷ್ಯರಿಗೆ ಕ್ಷಮಿಸಲ್ಪಡುವದಿಲ್ಲ.

32 And whosoever shall speak a word against the Son of man, it shall be forgiven him; but whosoever shall speak against the Holy Spirit, it shall not be forgiven him, neither in this world, nor in that which is to come.ಮನುಷ್ಯ ಕುಮಾರನಿಗೆ ವಿರೋಧವಾಗಿ ಯಾವನಾದರೂ ಮಾತನಾಡಿದರೆ ಅದು ಅವನಿಗೆ ಕ್ಷಮಿಸಲ್ಪಡುವದು; ಆದರೆ ಪರಿಶುದ್ಧಾ ತ್ಮನಿಗೆ ವಿರೋಧವಾಗಿ ಯಾವನಾದರೂ ಮಾತನಾ ಡಿದರೆ ಈ ಲೋಕದಲ್ಲಿಯಾಗಲೀ ಇಲ್ಲವೆ ಬರುವ ಲೋಕದಲ್ಲಿಯಾಗಲೀ ಅದು ಅವನಿಗೆ ಕ್ಷಮಿಸಲ್ಪಡು ವದಿಲ್ಲ.

33 Either make the tree good, and its fruit good; or make the tree corrupt, and its fruit corrupt: for the tree is known by its fruit.ಮರವು ಒಳ್ಳೆಯದಾಗಿದ್ದರೆ ಅದರ ಫಲವೂ ಒಳ್ಳೆಯದೆಂದು ಎಣಿಸಿರಿ; ಇಲ್ಲವೇ ಮರವು ಕೆಟ್ಟದ್ದಾಗಿದ್ದರೆ ಅದರ ಫಲವೂ ಕೆಟ್ಟದ್ದೆಂದೆಣಿಸಿರಿ; ಯಾಕಂದರೆ ಮರವು ತನ್ನ ಫಲದಿಂದಲೇ ತಿಳಿಯಲ್ಪ ಡುವದು.

34 Ye offspring of vipers, how can ye, being evil, speak good things? for out of the abundance of the heart the mouth speaketh.ಓ ಸರ್ಪಸಂತತಿಯವರೇ, ಕೆಟ್ಟವರಾಗಿ ರುವ ನೀವು ಒಳ್ಳೆಯವುಗಳನ್ನು ಹೇಗೆ ಮಾತನಾಡೀರಿ? ಯಾಕಂದರೆ ಹೃದಯದಲ್ಲಿ ಸಮೃದ್ಧಿಯಾಗಿರುವದನ್ನೇ ಬಾಯಿ ಮಾತನಾಡುತ್ತದೆ.

35 The good man out of his good treasure bringeth forth good things: and the evil man out of his evil treasure bringeth forth evil things.ಒಳ್ಳೇಮನುಷ್ಯನು ಹೃದಯದ ಒಳ್ಳೇಬೊಕ್ಕಸದಿಂದ ಒಳ್ಳೆಯವುಗಳನ್ನು ಹೊರಗೆ ತರುತ್ತಾನೆ; ಮತ್ತು ಕೆಟ್ಟಮನುಷ್ಯನು ಕೆಟ್ಟಬೊಕ್ಕಸದಿಂದ ಕೆಟ್ಟವುಗಳನ್ನು ಹೊರಗೆ ತರುತ್ತಾನೆ.

36 And I say unto you, that every idle word that men shall speak, they shall give account thereof in the day of judgment.ಆದರೆ ನಾನು ನಿಮಗೆ ಹೇಳುವದೇನಂದರೆ-- ಮನುಷ್ಯರು ಆಡುವ ಪ್ರತಿಯೊಂದು ವ್ಯರ್ಥವಾದ ಮಾತಿಗಾಗಿ ನ್ಯಾಯವಿಚಾರಣೆಯ ದಿನದಲ್ಲಿ ಅವರು ಲೆಕ್ಕಕೊಡಬೇಕು.

37 For by thy words thou shalt be justified, and by thy words thou shalt be condemned.ನೀನು ನಿನ್ನ ಮಾತುಗಳಿಂದಲೇ ನೀತಿವಂತನಾಗುವಿ ಮತ್ತು ನಿನ್ನ ಮಾತುಗಳಿಂದಲೇ ನೀನು ಅಪರಾಧಿಯಾಗುವಿ ಎಂದು ಹೇಳಿದನು.

38 Then certain of the scribes and Pharisees answered him, saying, Teacher, we would see a sign from thee.ಆಗ ಶಾಸ್ತ್ರಿಗಳಲ್ಲಿ ಮತ್ತು ಫರಿಸಾಯರಲ್ಲಿ ಕೆಲ ವರು--ಗುರುವೇ, ನಿನ್ನಿಂದ ಒಂದು ಸೂಚಕಕಾರ್ಯ ವನ್ನು ನೋಡಬೇಕೆಂದಿದ್ದೇವೆ ಎಂದು ಕೇಳಿದ್ದಕ್ಕೆ

39 But he answered and said unto them, An evil and adulterous generation seeketh after a sign; and there shall no sign be given it but the sign of Jonah the prophet:ಆತನು ಪ್ರತ್ಯುತ್ತರವಾಗಿ ಅವರಿಗೆ--ವ್ಯಭಿಚಾರಿಣಿ ಯಾದ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ಹುಡು ಕುತ್ತದೆ; ಪ್ರವಾದಿಯಾದ ಯೋನನಲ್ಲಿ ಆದ ಸೂಚಕ ಕಾರ್ಯವೇ ಹೊರತು ಅದಕ್ಕೆ ಇನ್ಯಾವ ಸೂಚಕಕಾರ್ಯ ವೂ ಕೊಡಲ್ಪಡುವದಿಲ್ಲ.

40 for as Jonah was three days and three nights in the belly of the whale; so shall the Son of man be three days and three nights in the heart of the earth.ಯಾಕಂದರೆ ಯೋನನು ಮೂರು ಹಗಲು ಮತ್ತು ಮೂರು ರಾತ್ರಿ ಮಾನಿನ ಹೊಟ್ಟೆಯಲ್ಲಿ ಇದ್ದ ಹಾಗೆಯೇ ಮನುಷ್ಯಕುಮಾರನು ಮೂರು ಹಗಲು ಮತ್ತು ಮೂರು ರಾತ್ರಿ ಭೂಗರ್ಭ ದಲ್ಲಿರುವನು.

41 The men of Nineveh shall stand up in the judgment with this generation, and shall condemn it: for they repented at the preaching of Jonah; and behold, a greater than Jonah is here.ನ್ಯಾಯವಿಚಾರಣೆಯಲ್ಲಿ ನಿನೆವೆಯ ಜನರು ಈ ಸಂತತಿಯೊಂದಿಗೆ ಎದ್ದು ಅವರನ್ನು ಖಂಡಿಸು ವರು; ಯಾಕಂದರೆ ಯೋನನು ಸಾರಿದಾಗ ಅವರು ಮಾನಸಾಂತರಪಟ್ಟರು; ಮತ್ತು ಇಗೋ, ಇಲ್ಲಿ ಯೋನ ನಿಗಿಂತಲೂ ದೊಡ್ಡವನಿದ್ದಾನೆ.

42 The queen of the south shall rise up in the judgment with this generation, and shall condemn it: for she came from the ends of the earth to hear the wisdom of Solomon; and behold, a greater than Solomon is here.ನ್ಯಾಯವಿಚಾರಣೆ ಯಲ್ಲಿ ದಕ್ಷಿಣದ ರಾಣಿಯು ಈ ಸಂತತಿಯವರೊಂದಿಗೆ ಎದ್ದು ಇವರನ್ನು ಖಂಡಿಸುವಳು; ಯಾಕಂದರೆ ಆಕೆಯು ಸೊಲೊಮೋನನ ಜ್ಞಾನವನ್ನು ಕೇಳುವದಕ್ಕಾಗಿ ಭೂಮಿ ಯ ಕಟ್ಟಕಡೆಯಿಂದ ಬಂದಳು; ಇಗೋ, ಇಲ್ಲಿ ಸೊಲೊ ಮೋನನಿಗಿಂತಲೂ ದೊಡ್ಡವನಿದ್ದಾನೆ.

43 But the unclean spirit, when he is gone out of the man, passeth through waterless places, seeking rest, and findeth it not.ಅಶುದ್ಧಾತ್ಮವು ಒಬ್ಬ ಮನುಷ್ಯನಿಂದ ಹೊರಗೆ ಹೋದ ಮೇಲೆ ನೀರಿಲ್ಲದ ಸ್ಥಳಗಳಲ್ಲಿ ವಿಶ್ರಾಂತಿಗಾಗಿ ತಿರುಗಾಡಿದರೂ ಅದನ್ನು ಕಂಡುಕೊಳ್ಳಲಿಲ್ಲ.

44 Then he saith, I will return into my house whence I came out; and when he is come, he findeth it empty, swept, and garnished.ಆಗ ಅದು--ನಾನು ಹೊರಟುಬಂದ ನನ್ನ ಮನೆಗೆ ಹಿಂತಿರುಗುವೆನು ಎಂದು ಅಂದುಕೊಂಡು ಬಂದು ಅದು ಬರಿದಾಗಿಯೂ ಗುಡಿಸಿ ಅಲಂಕರಿಸಲ್ಪಟ್ಟದ್ದಾ ಗಿಯೂ ಇರುವದನ್ನು ಕಂಡಿತು.

45 Then goeth he, and taketh with himself seven other spirits more evil than himself, and they enter in and dwell there: and the last state of that man becometh worse than the first. Even so shall it be also unto this evil generation.ತರುವಾಯ ಅದು ಹೋಗಿ ತನಗಿಂತ ಕೆಟ್ಟವುಗಳಾಗಿರುವ ಬೇರೆ ಏಳು ಆತ್ಮಗಳನ್ನು ಕರಕೊಂಡು ಅವು ಅದರೊಳಗೆ ಪ್ರವೇಶಿಸಿ ವಾಸಮಾಡುತ್ತವೆ; ಹೀಗೆ ಆ ಮನುಷ್ಯನ ಕಡೇ ಸ್ಥಿತಿಯು ಮೊದಲಿಗಿಂತಲೂ ಕೆಟ್ಟದ್ದಾಗಿರುವದು. ಅದರಂತೆಯೇ ಈ ಕೆಟ್ಟ ಸಂತತಿಗೂ ಆಗುವದು ಎಂದು ಹೇಳಿದನು.

46 While he was yet speaking to the multitudes, behold, his mother and his brethren stood without, seeking to speak to him.ಆತನು ಇನ್ನೂ ಜನರ ಸಂಗಡ ಮಾತನಾಡು ತ್ತಿದ್ದಾಗ ಇಗೋ, ಆತನ ತಾಯಿಯೂ ಆತನ ಸಹೋದರರೂ ಆತನೊಂದಿಗೆ ಮಾತನಾಡಬೇಕೆಂದು ಅಪೇಕ್ಷಿಸಿ ಹೊರಗೆ ನಿಂತಿದ್ದರು.

47 And one said unto him, Behold, thy mother and thy brethren stand without, seeking to speak to thee.ಆಗ ಒಬ್ಬನು ಆತನಿಗೆ--ಇಗೋ, ನಿನ್ನ ತಾಯಿಯೂ ನಿನ್ನ ಸಹೋ ದರರೂ ನಿನ್ನೊಂದಿಗೆ ಮಾತನಾಡಲು ಅಪೇಕ್ಷಿಸಿ ಹೊರಗೆ ನಿಂತಿದ್ದಾರೆ ಅಂದನು.

48 But he answered and said unto him that told him, Who is my mother? and who are my brethren?ಅದಕ್ಕೆ ಆತನು ತನಗೆ ಹೇಳಿದವನಿಗೆ ಪ್ರತ್ಯುತ್ತರವಾಗಿ--ನನ್ನ ತಾಯಿ ಯಾರು? ಮತ್ತು ನನ್ನ ಸಹೋದರರು ಯಾರು? ಎಂದು ಹೇಳಿ ಶಿಷ್ಯರ ಕಡೆಗೆ ತನ್ನ ಕೈಚಾಚಿ--

49 And he stretched forth his hand towards his disciples, and said, Behold, my mother and my brethren!ಇಗೋ, ನನ್ನ ತಾಯಿಯು ಮತ್ತು ನನ್ನ ಸಹೋದರರು!

50 For whosoever shall do the will of my Father who is in heaven, he is my brother, and sister, and mother.ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ಮಾಡುವವನೇ ನನ್ನ ಸಹೋದರನೂ ಸಹೋದರಿ ಯೂ ತಾಯಿಯೂ ಆಗಿದ್ದಾರೆ ಅಂದನು.

Kannada Bible