Matthew 11 - BBE (Kannada)
1 And it came about that when Jesus had come to the end of giving these orders to his twelve disciples, he went away from there, teaching and preaching in their towns.ಮತ್ತು ಆದದ್ದೇನಂದರೆ, ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ ಅಪ್ಪಣೆ ಕೊಡು ವದನ್ನು ಮುಗಿಸಿದ ಮೇಲೆ ಅವರ ಪಟ್ಟಣಗಳಲ್ಲಿ ಬೋಧಿಸುವದಕ್ಕೂ ಸಾರುವದಕ್ಕೂ ಅಲ್ಲಿಂದ ಹೊರಟು ಹೋದನು.
2 Now when John had news in prison of the works of the Christ, he sent his disciplesಆಗ ಯೋಹಾನನು ಸೆರೆಮನೆಯಲ್ಲಿ ಕ್ರಿಸ್ತನ ಕಾರ್ಯಗಳನ್ನು ಕೇಳಿದ್ದರಿಂದ ತನ್ನ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ ಆತನಿಗೆ--
3 To say to him, Are you he who is to come, or are we waiting for another?ಬರಬೇಕಾದಾತನು ನೀನೋ ಇಲ್ಲವೆ ನಾವು ಬೇರೊಬ್ಬನಿಗಾಗಿ ನೋಡಬೇಕೋ ಅಂದನು.
4 And Jesus, answering, said to them, Go and give news to John of the things which you are seeing and hearing:ಯೇಸು ಪ್ರತ್ಯುತ್ತರವಾಗಿ ಅವರಿಗೆ-- ನೀವು ಹೋಗಿ ಕೇಳುವವುಗಳನ್ನೂ ನೋಡುವವು ಗಳನ್ನೂ ಯೋಹಾನನಿಗೆ ತಿಳಿಸಿರಿ;
5 The blind see; those who were not able to, are walking; lepers are made clean; those who were without hearing, now have their ears open; the dead come to life again, and the poor have the good news given to them.ಕುರುಡರು ದೃಷ್ಟಿ ಹೊಂದುತ್ತಾರೆ, ಕುಂಟರು ನಡೆಯುತ್ತಾರೆ,ಕುಷ್ಟರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಎಬ್ಬಿಸಲ್ಪಡುತ್ತಾರೆ ಮತ್ತು ಬಡವರಿಗೆ ಸುವಾರ್ತೆ ಸಾರಲ್ಪಡುತ್ತದೆ.
6 And a blessing will be on him who has no doubts about me.ನನ್ನ ವಿಷಯವಾಗಿ ಸಂಶಯಪಡದವನೇ ಧನ್ಯನು ಅಂದನು.
7 And when they were going away, Jesus, talking of John, said to all the people, What went you out into the waste land to see? a tall stem moving in the wind?ಅವರು ಹೊರಟುಹೋಗುತ್ತಿದ್ದಾಗ ಯೇಸು ಯೋಹಾನನ ಕುರಿತಾಗಿ ಜನಸಮೂಹಗಳೊಂ ದಿಗೆ -- ಏನು ನೋಡುವದಕ್ಕಾಗಿ ನೀವು ಅಡವಿಗೆ ಹೋದಿರಿ? ಗಾಳಿಯಿಂದ ಅಲ್ಲಾಡುವದಂಟನ್ನೋ?
8 But what went you out to see? a man delicately clothed? Those who have fair robes are in kings' houses.ಆದರೆ ನೀವು ಏನು ನೊಡುವದಕ್ಕಾಗಿ ಹೋದಿರಿ? ನಯವಾದ ವಸ್ತ್ರಗಳನ್ನು ಧರಿಸಿಕೊಂಡ ಮನುಷ್ಯ ನನ್ನೋ? ಇಗೋ, ನಯವಾದ ಬಟ್ಟೆಗಳನ್ನು ಧರಿಸಿಕೊ ಳ್ಳುವವರು ಅರಮನೆಗಳಲ್ಲಿ ಇರುತ್ತಾರೆ.
9 But why did you go out? to see a prophet? Yes, I say to you, and more than a prophet.ಆದರೆ ನೀವು ಏನು ನೋಡುವದಕ್ಕಾಗಿ ಹೋದಿರಿ? ಪ್ರವಾದಿ ಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನು ಎಂದು ನಾನು ನಿಮಗೆ ಹೇಳುತ್ತೇನೆ.
10 This is he of whom it has been said, See, I send my servant before your face, who will make ready your way before you.ಯಾಕಂ ದರೆ--ಇಗೋ, ನಿನ್ನ ಮಾರ್ಗವನ್ನು ನಿನ್ನ ಮುಂದೆ ಸಿದ್ಧಪಡಿಸುವ ನನ್ನ ದೂತನನ್ನು ನಾನು ನಿನ್ನ ಮುಂದೆ ಕಳುಹಿಸುತ್ತೇನೆಂದು ಯಾವನ ವಿಷಯವಾಗಿ ಬರೆದಿ ದೆಯೋ ಅವನೇ ಇವನು.
11 Truly I say to you, Among the sons of women there has not been a greater than John the Baptist: but he who is least in the kingdom of heaven is greater than he.ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ಸ್ತ್ರೀಯರಲ್ಲಿ ಹುಟ್ಟಿದವರೊ ಳಗೆ ಬಾಪ್ತಿಸ್ಮ ಮಾಡಿಸುವ ಯೋಹಾನನಿಗಿಂತ ದೊಡ್ಡವನು ಏಳಲಿಲ್ಲ; ಆದಾಗ್ಯೂ ಪರಲೋಕ ರಾಜ್ಯದಲ್ಲಿ ಅತ್ಯಲ್ಪನಾದವನು ಅವನಿಗಿಂತಲೂ ದೊಡ್ಡ ವನಾಗಿದ್ದಾನೆ.
12 And from the days of John the Baptist till now, the kingdom of heaven is forcing its way in, and men of force take it.ಇದಲ್ಲದೆ ಬಾಪ್ತಿಸ್ಮ ಮಾಡಿಸುವ ಯೋಹಾನನ ದಿನಗಳಿಂದ ಇದುವರೆಗೆ ಪರಲೋಕ ರಾಜ್ಯವು ಬಲಾತ್ಕಾರಕ್ಕೆ ಗುರಿಯಾಗಿದೆ; ಮತ್ತು ಬಲಾತ್ಕಾರಿಗಳು ಅದನ್ನು ಒತ್ತಾಯದಿಂದ ತೆಗೆದು ಕೊಳ್ಳುತ್ತಾರೆ.
13 For all the prophets and the law were in force till John.ಯಾಕಂದರೆ ಎಲ್ಲಾ ಪ್ರವಾದಿಗಳೂ ನ್ಯಾಯಪ್ರಮಾಣವೂ ಯೋಹಾನನ ವರೆಗೆ ಪ್ರವಾದಿ ಸಿದ್ದುಂಟು.
14 And if you are able to see it, this is Elijah who was to come.ನೀವು ಇದನ್ನು ಅಂಗೀಕರಿಸುವದಕ್ಕೆ ಮನಸ್ಸಿದ್ದರೆ ಬರಬೇಕಾಗಿದ್ದ ಎಲೀಯನು ಇವನೇ.
15 He who has ears, let him give ear.ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ.
16 But what comparison may I make of this generation? It is like children seated in the market-places, crying out to one another,ಆದರೆ ಈ ಸಂತತಿಯನ್ನು ನಾನು ಯಾವದಕ್ಕೆ ಹೋಲಿಸಲಿ? ಮಕ್ಕಳು ಪೇಟೆಗಳಲ್ಲಿ ಕೂತುಕೊಂಡು ತಮ್ಮ ಸಂಗಡಿ ಗರನ್ನು ಕರೆಯುತ್ತಾ--
17 We made music for you and you did not take part in the dance; we gave cries of sorrow and you made no signs of grief.ನಾವು ನಿಮಗೋಸ್ಕರ ಕೊಳಲೂದಿದೆವು, ಆದರೆ ನೀವು ಕುಣಿಯಲಿಲ್ಲ; ನಾವು ನಿಮಗೋಸ್ಕರ ಶೋಕಿಸಿದೆವು, ಆದರೆ ನೀವು ಗೋಳಾಡಲಿಲ್ಲ ಎಂದು ಹೇಳುವವರಿಗೆ ಇದು ಹೋಲಿಕೆಯಾಗಿದೆ.
18 For John came, taking no food or drink, and they say, He has an evil spirit.ಯಾಕಂದರೆ ಯೋಹಾನನು ತಿನ್ನದೆಯೂ ಕುಡಿಯದೆಯೂ ಬಂದನು. ಅದಕ್ಕೆ ಅವರು--ಅವನಿಗೆ ದೆವ್ವ ಹಿಡಿದಿದೆ ಅನ್ನುತ್ತಾರೆ.
19 The Son of man has come feasting, and they say, See, a lover of food and wine, a friend of tax-farmers and sinners! And wisdom is judged to be right by her works.ಮನುಷ್ಯಕುಮಾರನು ತಿನ್ನುವವನಾಗಿಯೂ ಕುಡಿಯುವವನಾಗಿಯೂ ಬಂದನು. ಅದಕ್ಕೆ ಅವರು--ಇಗೋ, ಈ ಮನುಷ್ಯನು ಹೊಟ್ಟೆ ಬಾಕನೂ ಮದ್ಯಪಾನ ಮಾಡುವವನೂ ಸುಂಕದವರ ಪಾಪಿಗಳ ಸ್ನೇಹಿತನೂ ಎಂದು ಅನ್ನುತ್ತಾರೆ. ಆದರೆ ಜ್ಞಾನವು ನೀತಿಯುಳ್ಳದ್ದೆಂದು ತನ್ನ ಮಕ್ಕಳಿಂದ ನಿರ್ಣಯಿ ಸಲ
20 Then he went on to say hard things to the towns where most of his works of power were done, because they had not been turned from their sins.ತರುವಾಯ ತಾನು ಹೆಚ್ಚಾದ ಮಹತ್ಕಾರ್ಯ ಗಳನ್ನು ನಡಿಸಿದ ಪಟ್ಟಣಗಳು ಮಾನಸಾಂತರಪಡದೆ ಇದ್ದದರಿಂದ ಆತನು ಅವುಗಳನ್ನು ಗದರಿಸತೊ ಡಗಿ --
21 Unhappy are you, Chorazin! Unhappy are you, Beth-saida! For if the works of power which were done in you had been done in Tyre and Sidon, they would have been turned from their sins in days gone by, clothing themselves in haircloth and putting dust on their heads.ಖೊರಾಜಿನೇ, ನಿನಗೆ ಅಯ್ಯೋ! ಬೆತ್ಸಾಯಿದವೇ, ನಿನಗೆ ಅಯ್ಯೋ! ಯಾಕಂದರೆ ನಿನ್ನೊಳಗೆ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್‌ಗಳಲ್ಲಿ ನಡೆಯುತ್ತಿದ್ದರೆ ಅವುಗಳು ಆಗಲೇ ಗೋಣೀತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕೂತು ಮಾನಸಾಂತರಪಡುತ್ತಿದ್ದವು.
22 But I say to you, It will be better for Tyre and Sidon in the day of judging, than for you.ಆದರೆ ನಾನು ನಿಮಗೆ ಹೇಳುವದೇನಂದರೆ-- ನ್ಯಾಯತೀರ್ಪಿನ ದಿನದಲ್ಲಿ ನಿಮಗಿಂತಲೂ ತೂರ್ ಮತ್ತು ಸೀದೋನ್‌ಗಳ ಗತಿಯು ಹೆಚ್ಚು ತಾಳಬಹುದಾಗಿರುವದು.
23 And you, Capernaum, were you not to be lifted up to heaven? you will go down into hell: for if the works of power which were done in you had been done in Sodom, it would have been here to this day.ಆಕಾಶದವರೆಗೂ ಹೆಚ್ಚಿಸಲ್ಪಟ್ಟ ಕಪೆರ್ನೌಮೇ, ನೀನು ಕೆಳಗೆ ಪಾತಾಳಕ್ಕೆ ದೊಬ್ಬಲ್ಪಡುವಿ; ಯಾಕಂದರೆ ನಿನ್ನೊಳಗೆ ನಡೆದಿರುವ ಮಹತ್ಕಾರ್ಯಗಳು ಸೊದೋಮಿನಲ್ಲಿ ನಡೆದಿದ್ದರೆ ಅದು ಈ ದಿನದವರೆಗೂ ಇರುತ್ತಿತ್ತು.
24 But I say to you that it will be better for the land of Sodom in the day of judging, than for you.ಆದರೆ ನಾನು ನಿನಗೆ ಹೇಳುವದೇನಂದರೆ --ನ್ಯಾಯತೀರ್ಪಿನ ದಿನದಲ್ಲಿ ನಿನಗಿಂತಲೂ ಸೊದೋಮಿನ ಗತಿಯು ಹೆಚ್ಚು ತಾಳಬಹುದಾಗಿರುವದು.
25 At that time Jesus made answer and said, I give praise to you, O Father, Lord of heaven and earth, because you have kept these things secret from the wise and the men of learning, and have made them clear to little children.ಆ ಸಮಯದಲ್ಲಿ ಯೇಸು--ತಂದೆಯೇ, ಪರಲೋಕ ಮತ್ತು ಭೂಲೋಕಗಳ ಒಡೆಯನೇ, ನೀನು ಈ ಸಂಗತಿಗಳನ್ನು ಜ್ಞಾನಿಗಳಿಗೂ ಬುದ್ಧಿವಂತ ರಿಗೂ ಮರೆಮಾಡಿ ಶಿಶುಗಳಿಗೆ ಪ್ರಕಟಮಾಡಿ ರುವದಕ್ಕಾಗಿ ನಾನು ನಿನ್ನನ್ನು ಕೊಂಡಾಡುತ್ತೇನೆ.
26 Yes, Father, for so it was pleasing in your eyes.ಹೌದು, ತಂದೆಯೇ, ಇದು ನಿನ್ನ ದೃಷ್ಟಿಯಲ್ಲಿ ಒಳ್ಳೆಯದಾಗಿ ತೋಚಿತು.
27 All things have been given to me by my Father; and no one has knowledge of the Son, but the Father; and no one has knowledge of the Father, but the Son, and he to whom the Son will make it clear.ನನ್ನ ತಂದೆಯು ಎಲ್ಲವನ್ನೂ ನನಗೆ ಒಪ್ಪಿಸಿದ್ದಾನೆ. ತಂದೆಯೇ ಹೊರತು ಇನ್ನಾವನೂ ಮಗನನ್ನು ತಿಳಿದವನಲ್ಲ; ಇಲ್ಲವೆ ಮಗನೇ ಹೊರತು ಇನ್ನಾವನೂ ತಂದೆಯನ್ನು ತಿಳಿದವನಲ್ಲ; ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಿಸುವದಕ್ಕೆ ಮನಸ್ಸುಳ್ಳವನಾಗಿದ್ದಾನೋ ಅವನೂ ಆತನನ್ನು ತಿಳಿದ
28 Come to me, all you who are troubled and weighted down with care, and I will give you rest.ಕಷ್ಟಪಡುವವರೇ ಮತ್ತು ಭಾರಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು.
29 Take my yoke on you and become like me, for I am gentle and without pride, and you will have rest for your souls;ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತು ಕೊಳ್ಳಿರಿ; ಯಾಕಂದರೆ ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ.
30 For my yoke is good, and the weight I take up is not hard.ಯಾಕಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ ಎಂದು ಹೇಳಿದನು.
Kannada Bible