Bible

Mark 5 - ASV (Kannada)

1 And they came to the other side of the sea, into the country of the Gerasenes.ತರುವಾಯ ಅವರು ಸಮುದ್ರದ ಆಚೆಗೆ ಗದರೇನರ ಸೀಮೆಗೆ ಬಂದರು.

2 And when he was come out of the boat, straightway there met him out of the tombs a man with an unclean spirit,ಆತನು ದೋಣಿಯಿಂದ ಹೊರಗೆ ಬಂದಾಗ ಅಶುದ್ಧಾತ್ಮವಿದ್ದ ಒಬ್ಬ ಮನುಷ್ಯನು ಕೂಡಲೆ ಸಮಾಧಿಗಳೊಳಗಿಂದ ಬಂದು ಆತನನ್ನು ಸಂಧಿಸಿದನು.

3 who had his dwelling in the tombs: and no man could any more bind him, no, not with a chain;ಇವನು ಸಮಾಧಿ ಗಳಲ್ಲಿ ವಾಸಿಸುತ್ತಿದ್ದನು. ಇವನನ್ನು ಯಾವ ಮನುಷ್ಯನೂ ಸಂಕೋಲೆಗಳಿಂದಲಾದರೂ ಕಟ್ಟಲಾರದೆ ಹೋದನು.

4 because that he had been often bound with fetters and chains, and the chains had been rent asunder by him, and the fetters broken in pieces: and no man had strength to tame him.ಯಾಕಂದರೆ ಅನೇಕ ಸಾರಿ ಅವನನ್ನು ಬೇಡಿಗಳಿಂದ ಮತ್ತು ಸರಪಣಿಗಳಿಂದ ಕಟ್ಟಿದ್ದರೂ ಅವನು ಸರಪಣಿ ಗಳನ್ನು ಕಿತ್ತುಹಾಕಿ ಬೇಡಿಗಳನ್ನು ಮುರಿದು ತುಂಡು ಮಾಡುತ್ತಿದ್ದದ್ದರಿಂದ ಯಾವ ಮನುಷ್ಯನೂ ಅವನನ್ನು ಹತೋಟಿಗೆ ತರಲಾರದೆ ಇದ್ದನು.

5 And always, night and day, in the tombs and in the mountains, he was crying out, and cutting himself with stones.ಅವನು ರಾತ್ರಿ ಹಗಲು ಯಾವಾಗಲೂ ಬೆಟ್ಟಗಳಲ್ಲಿಯೂ ಸಮಾಧಿಗಳ ಲ್ಲಿಯೂ ಕೂಗುತ್ತಾ ಕಲ್ಲುಗಳಿಂದ ತನ್ನನ್ನು ತಾನೇ ಕೊಯ್ದುಕೊಳ್ಳುತ್ತಿದ್ದನು.

6 And when he saw Jesus from afar, he ran and worshipped him;ಆದರೆ ಅವನು ದೂರದಿಂದ ಯೇಸುವನ್ನು ನೋಡಿದಾಗ ಓಡಿಬಂದು ಆತನನ್ನು ಆರಾಧಿಸಿ --

7 and crying out with a loud voice, he saith, What have I to do with thee, Jesus, thou Son of the Most High God? I adjure thee by God, torment me not.ಮಹೋನ್ನತನಾದ ದೇವಕುಮಾರನಾಗಿ ರುವ ಯೇಸುವೇ, ನನ್ನ ಗೊಡವೆ ನಿನಗೆ ಯಾಕೆ? ನನ್ನನ್ನು ಯಾತನೆಪಡಿಸಬೇಡವೆಂದು ನಾನು ನಿನಗೆ ದೇವರಾಣೆ ಇಡುತ್ತೇನೆ ಎಂದು ಮಹಾ ಶಬ್ದದಿಂದ ಕೂಗಿ ಹೇಳಿದನು.

8 For he said unto him, Come forth, thou unclean spirit, out of the man.ಯಾಕಂದರೆ ಆತನು ಅವ ನಿಗೆ--ಅಶುದ್ಧಾತ್ಮವೇ, ಆ ಮನುಷ್ಯನೊಳಗಿನಿಂದ ಹೊರಗೆ ಬಾ ಎಂದು ಹೇಳಿದ್ದನು.

9 And he asked him, What is thy name? And he saith unto him, My name is Legion; for we are many.ಆತನು ಅವನಿಗೆ--ನಿನ್ನ ಹೇಸರೇನು ಎಂದು ಕೇಳಲು ಅವನು ಪ್ರತ್ಯುತ್ತರವಾಗಿ--ನನ್ನ ಹೆಸರು ಲೀಜೆನ್‌ (ದಂಡು); ಯಾಕಂದರೆ ನಾವು ಅನೇಕರಿದ್ದೇವೆ ಅಂದನು.

10 And he besought him much that he would not send them away out of the country.ತಮ್ಮನ್ನು ಆ ದೇಶದೊಳಗಿಂದ ಹೊರಗೆ ಕಳುಹಿಸದಂತೆ ಅವನು ಆತನನ್ನು ಬಹಳವಾಗಿ ಬೇಡಿ ಕೊಂಡನು.

11 Now there was there on the mountain side a great herd of swine feeding.ಆಗ ಅಲ್ಲಿ ಬೆಟ್ಟಗಳ ಸವಿಾಪದಲ್ಲಿ ಹಂದಿಗಳ ದೊಡ್ಡ ಗುಂಪು ಮೇಯುತ್ತಿತ್ತು.

12 And they besought him, saying, Send us into the swine, that we may enter into them.ಎಲ್ಲಾ ದೆವ್ವಗಳು ಆತನಿಗೆ--ನಾವು ಆ ಹಂದಿಗಳೊಳಗೆ ಸೇರಿಕೊಳ್ಳುವಂತೆ ನಮ್ಮನ್ನು ಕಳುಹಿಸು ಎಂದು ಬೇಡಿಕೊಂಡವು.

13 And he gave them leave. And the unclean spirits came out, and entered into the swine: and the herd rushed down the steep into the sea, `in number' about two thousand; and they were drowned in the sea.ಕೂಡಲೆ ಯೇಸು ಅವುಗಳಿಗೆ ಅಪ್ಪಣೆಕೊಟ್ಟನು. ಆಗ ಅಶುದ್ಧಾತ್ಮಗಳು ಹೊರಗೆ ಹೋಗಿ ಆ ಹಂದಿಗಳೊಳಗೆ ಸೇರಿಕೊಂಡವು; ಮತ್ತು ಆ ಗುಂಪು ಉಗ್ರತೆಯಿಂದ ಓಡಿ ಇಳಿಜಾರಿನಿಂದ ಸಮುದ್ರದೊಳಗೆ ಬಿದ್ದು ಉಸುರುಗಟ್ಟಿ ಸತ್ತವು. (ಅವು ಸುಮಾರು ಎರಡು ಸಾವಿರ ಇದ್ದವು.)

14 And they that fed them fled, and told it in the city, and in the country. And they came to see what it was that had come to pass.ಆಗ ಹಂದಿಗಳನ್ನು ಮೇಯಿಸುತ್ತಿದ್ದವರು ಓಡಿ ಹೋಗಿ ಪಟ್ಟಣದಲ್ಲಿಯೂ ಸೀಮೆಯಲ್ಲಿಯೂ ತಿಳಿಸಿ ದರು; ಅವರು ನಡೆದ ಸಂಗತಿ ಏನೆಂದು ನೋಡುವದಕ್ಕೆ ಹೊರಟರು.

15 And they come to Jesus, and behold him that was possessed with demons sitting, clothed and in his right mind, `even' him that had the legion: and they were afraid.ಅವರು ಯೇಸುವಿನ ಬಳಿಗೆ ಬಂದು ಆ ದೆವ್ವಗಳ ದಂಡು ಹಿಡಿದವನು ಬಟ್ಟೆಗಳನ್ನು ಧರಿಸಿಕೊಂಡು ಸ್ವಸ್ಥಚಿತ್ತದಿಂದ ಕೂತು ಕೊಂಡಿರುವದನ್ನು ನೋಡಿ ಭಯಪಟ್ಟರು.

16 And they that saw it declared unto them how it befell him that was possessed with demons, and concerning the swine.ಅದನ್ನು ನೋಡಿದವರು ದೆವ್ವ ಹಿಡಿದಿದ್ದವನಿಗೆ ಆದದ್ದನ್ನೂ ಹಂದಿಗಳ ವಿಷಯವಾಗಿಯೂ ಅವರಿಗೆ ಹೇಳಿದರು.

17 And they began to beseech him to depart from their borders.ಆಗ ಅವರು ತಮ್ಮ ಮೇರೆಗಳನ್ನು ಬಿಟ್ಟುಹೋಗ ಬೇಕೆಂದು ಆತನನ್ನು ಬೇಡಿಕೊಳ್ಳಲಾರಂಭಿಸಿದರು.

18 And as he was entering into the boat, he that had been possessed with demons besought him that he might be with him.ಆತನು ದೋಣಿಯೊಳಗೆ ಬಂದಾಗ ಆ ದೆವ್ವ ಹಿಡಿದಿದ್ದವನು ತಾನು ಆತನ ಜೊತೆಯಲ್ಲಿಯೇ ಇರುತ್ತೇನೆಂದು ಆತನನ್ನು ಬೇಡಿಕೊಂಡನು.

19 And he suffered him not, but saith unto him, Go to thy house unto thy friends, and tell them how great things the Lord hath done for thee, and `how' he had mercy on thee.ಆದಾಗ್ಯೂ ಯೇಸು ಅವನನ್ನು ಇರಗೊಡದೆ ಅವನಿಗೆ--ನಿನ್ನ ಮನೆಗೂ ಸ್ನೇಹಿತರ ಬಳಿಗೂ ಹೋಗಿ ಕರ್ತನು ನಿನ್ನ ಮೇಲೆ ಕರುಣೆಯಿಟ್ಟು ಎಂಥಾ ಮಹತ್ಕಾರ್ಯಗಳನ್ನು ಮಾಡಿ ದ್ದಾನೆಂದು ಅವರಿಗೆ ಹೇಳು ಅಂದನು.

20 And he went his way, and began to publish in Decapolis how great things Jesus had done for him: and all men marvelled.ಅವನು ಹೊರಟು ಹೋಗಿ ಯೇಸು ತನಗೆ ಎಂಥೆಂಥಾ ಮಹತ್ಕಾರ್ಯಗಳನ್ನು ಮಾಡಿದನೆಂಬದನ್ನು ದೆಕಪೊಲಿ ಯದಲ್ಲಿ ಪ್ರಕಟಿಸಲಾರಂಭಿಸಿದನು. ಆಗ ಎಲ್ಲರೂ ಆಶ್ಚರ್ಯಪಟ್ಟರು.

21 And when Jesus had crossed over again in the boat unto the other side, a great multitude was gathered unto him; and he was by the sea.ಯೇಸು ತಿರಿಗಿ ದೋಣಿಯಲ್ಲಿ ಆಚೇದಡಕ್ಕೆ ಹೋದಾಗ ಬಹಳ ಜನರು ಆತನ ಬಳಿಗೆ ಕೂಡಿಬಂದರು; ಆಗ ಆತನು ಸಮುದ್ರದ ಸವಿಾಪದ ಲ್ಲಿದ್ದನು.

22 And there cometh one of the rulers of the synagogue, Jairus by name; and seeing him, he falleth at his feet,ಆಗ ಇಗೋ, ಸಭಾಮಂದಿರದ ಅಧಿಕಾರಿ ಗಳಲ್ಲಿ ಯಾಯಿರನೆಂದು ಹೆಸರಿದ್ದ ಒಬ್ಬನು ಬಂದು ಆತನನ್ನು ಕಂಡು ಆತನ ಪಾದಗಳಿಗೆ ಬಿದ್ದು--

23 and beseecheth him much, saying, My little daughter is at the point of death: `I pray thee', that thou come and lay thy hands on her, that she may be made whole, and live.ನನ್ನ ಚಿಕ್ಕಮಗಳು ಸಾಯುವ ಸ್ಥಿತಿಯಲ್ಲಿ ಮಲಗಿದ್ದಾಳೆ, ಅವಳು ಸ್ವಸ್ಥಳಾಗುವಂತೆ ನೀನು ಬಂದು ನಿನ್ನ ಕೈಗಳನ್ನು ಅವಳ ಮೇಲೆ ಇಡು; ಆಗ ಅವಳು ಬದುಕುವಳು ಎಂದು ಆತನನ್ನು ಬಹಳವಾಗಿ ಬೇಡಿಕೊಂಡನು.

24 And he went with him; and a great multitude followed him, and they thronged him.ಆಗ ಯೇಸು ಅವನ ಸಂಗಡ ಹೋದನು; ಮತ್ತು ಬಹಳ ಜನರು ನೂಕಾಡುತ್ತಾ ಆತನ ಹಿಂದೆ ಹೋದರು.

25 And a woman, who had an issue of blood twelve years,ಆಗ ಹನ್ನೆರಡು ವರುಷಗಳಿಂದ ರಕ್ತಸ್ರಾವವಿದ್ದ ಒಬ್ಬ ಸ್ತ್ರೀಯು

26 and had suffered many things of many physicians, and had spent all that she had, and was nothing bettered, but rather grew worse,ಅನೇಕ ವೈದ್ಯರಿಂದ ಬಹು ಕಷ್ಟಗಳನ್ನು ಅನುಭವಿಸಿ ತನಗಿದ್ದದ್ದನ್ನೆಲ್ಲಾ ವೆಚ್ಚ ಮಾಡಿದ್ದಾಗ್ಯೂ ರೋಗವು ಹೆಚ್ಚಾಯಿತೇ ಹೊರತು ಗುಣವಾಗಲಿಲ್ಲ.

27 having heard the things concerning Jesus, came in the crowd behind, and touched his garment.ಆಗ ಆಕೆಯು ಯೇಸುವಿನ ವಿಷಯ ಕೇಳಿ ಜನರ ಗುಂಪಿನ ಹಿಂದೆ ಬಂದು ಆತನ ಉಡುಪನ್ನು ಮುಟ್ಟಿ ದಳು.

28 For she said, If I touch but his garments, I shall be made whole.ಯಾಕಂದರೆ ಆಕೆಯು--ನಾನು ಆತನ ಉಡುಪುಗಳನ್ನು ಮುಟ್ಟಿದರೆ ಸಾಕು, ಗುಣವಾಗುವೆನು ಎಂದು ಅಂದುಕೊಂಡಿದ್ದಳು.

29 And straightway the fountain of her blood was dried up; and she felt in her body that she was healed of her plague.ಕೂಡಲೆ ಆಕೆಗೆ ರಕ್ತ ಹರಿಯುವದು ನಿಂತುಹೋಯಿತು; ಆಗ ಆ ಜಾಡ್ಯ ದಿಂದ ತನಗೆ ಗುಣವಾಯಿತೆಂದು ಆಕೆಯ ಶರೀರದಲ್ಲಿ ಆಕೆಗೆ ಅನ್ನಿಸಿತು.

30 And straightway Jesus, perceiving in himself that the power `proceeding' from him had gone forth, turned him about in the crowd, and said, Who touched my garments?ತಕ್ಷಣವೇ ಯೇಸು ತನ್ನಿಂದ ಶಕ್ತಿಯು ಹೊರಟಿತೆಂದು ತನ್ನಲ್ಲಿ ತಿಳುಕೊಂಡು ಗುಂಪಿ ನಲ್ಲಿ ಹಿಂತಿರುಗಿ--ನನ್ನ ಉಡುಪುಗಳನ್ನು ಮುಟ್ಟಿದವರು ಯಾರು ಎಂದು ಕೇಳಲು

31 And his disciples said unto him, Thou seest the multitude thronging thee, and sayest thou, Who touched me?ಆತನ ಶಿಷ್ಯರು ಆತನಿಗೆ --ಜನಸಮೂಹವು ನಿನ್ನನ್ನು ನೂಕುವದನ್ನು ನೋಡಿ ಯೂ--ನನ್ನನ್ನು ಯಾರು ಮುಟ್ಟಿದರೆಂದು ನೀನು ಹೇಳುತ್ತೀಯಲ್ಲಾ ಅಂದರು.

32 And he looked round about to see her that had done this thing.ಆದರೆ ಆತನು ಇದನ್ನು ಮಾಡಿದವಳನ್ನು ಕಾಣಬೇಕೆಂದು ಸುತ್ತಲೂ ನೋಡಿದನು.

33 But the woman fearing and trembling, knowing what had been done to her, came and fell down before him, and told him all the truth.ಆದರೆ ಆ ಸ್ತ್ರೀಯು ತನ್ನಲ್ಲಿ ಆದದ್ದನ್ನು ತಿಳುಕೊಂಡು ಭಯದಿಂದ ನಡುಗುತ್ತಾ ಬಂದು ಆತನ ಮುಂದೆ ಅಡ್ಡಬಿದ್ದು ಸತ್ಯವನ್ನೆಲ್ಲಾ ಆತನಿಗೆ ತಿಳಿಸಿದಳು.

34 And he said unto her, Daughter, thy faith hath made thee whole; go in peace, and be whole of thy plague.ಆಗ ಆತನು ಆಕೆಗೆ--ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥ ಮಾಡಿತು; ಸಮಾಧಾನದಿಂದ ಹೋಗು; ನಿನ್ನ ಜಾಡ್ಯದಿಂದ ನೀನು ಸ್ವಸ್ಥಳಾಗು ಅಂದನು.

35 While he yet spake, they come from the ruler of the synagogue's `house' saying, Thy daughter is dead: why troublest thou the Teacher any further?ಆತನು ಇನ್ನೂ ಮಾತನಾಡುತ್ತಿರುವಾಗ ಸಭಾ ಮಂದಿರದ ಅಧಿಕಾರಿಯ ಮನೆಯಿಂದ ಕೆಲವರು ಅಲ್ಲಿಗೆ ಬಂದು--ನಿನ್ನ ಮಗಳು ಸತ್ತಿದ್ದಾಳೆ; ಬೋಧಕ ನಿಗೆ ಇನ್ನು ನೀನು ತೊಂದರೆಪಡಿಸುವದು ಯಾಕೆ? ಅಂದರು.

36 But Jesus, not heeding the word spoken, saith unto the ruler of the synagogue, Fear not, only believe.ಹಾಗೆ ಹೇಳಿದ್ದನ್ನು ಯೇಸು ಕೇಳಿದ ಕೂಡಲೆ ಆ ಸಭಾಮಂದಿರದ ಅಧಿಕಾರಿಗೆ--ಭಯ ಪಡಬೇಡ, ನಂಬಿಕೆ ಮಾತ್ರ ಇರಲಿ ಅಂದನು.

37 And he suffered no man to follow with him, save Peter, and James, and John the brother of James.ಆತನು ಪೇತ್ರ, ಯಾಕೋಬ, ಯಾಕೋಬನ ಸಹೋದರನಾದ ಯೋಹಾನ ಇವರನ್ನೇ ಹೊರತು ಬೇರೆ ಯಾರನ್ನೂ ತನ್ನ ಹಿಂದೆ ಬರಗೊಡಲಿಲ್ಲ.

38 And they come to the house of the ruler of the synagogue; and he beholdeth a tumult, and `many' weeping and wailing greatly.ಆತನು ಆ ಸಭಾಮಂದಿರದ ಅಧಿಕಾರಿಯ ಮನೆಗೆ ಬಂದು ಗೊಂದಲವನ್ನೂ ಬಹಳವಾಗಿ ಗೋಳಾಡುತ್ತಾ ಅಳುತ್ತಿರುವವರನ್ನೂ ಕಂಡನು.

39 And when he was entered in, he saith unto them, Why make ye a tumult, and weep? the child is not dead, but sleepeth.ಆತನು ಒಳಕ್ಕೆ ಬಂದಾಗ ಅವರಿಗೆ--ನೀವು ಈ ಗೊಂದಲ ಮಾಡು ವದೂ ಅಳುವದೂ ಯಾಕೆ? ಹುಡುಗಿಯು ಸತ್ತಿಲ್ಲ; ನಿದ್ರಿಸುತ್ತಿದ್ದಾಳೆ ಅಂದನು.

40 And they laughed him to scorn. But he, having put them all forth, taketh the father of the child and her mother and them that were with him, and goeth in where the child was.ಆಗ ಅವರು ಆತನಿಗೆ ಹಾಸ್ಯಮಾಡಿ ನಕ್ಕರು. ಆದರೆ ಆತನು ಅವರೆಲ್ಲರನ್ನು ಹೊರಗೆ ಹಾಕಿ ಹುಡುಗಿಯ ತಂದೆ ತಾಯಿಗಳನ್ನು ಮತ್ತು ತನ್ನ ಜೊತೆಯಲ್ಲಿದ್ದವರನ್ನು ಕರೆದುಕೊಂಡು ಒಳಕ್ಕೆ ಹುಡುಗಿಯು ಮಲಗಿದ್ದಲ್ಲಿಗೆ ಹೋದನು.

41 And taking the child by the hand, he saith unto her, Talitha cumi; which is, being interpreted, Damsel, I say unto thee, Arise.ಮತ್ತು ಆತನು ಆ ಹುಡುಗಿಯ ಕೈ ಹಿಡಿದು ಆಕೆಗೆ --ತಲಿಥಾ ಕೂಮ್‌ ಅಂದನು. ಹುಡುಗಿಯೇ, ಎದ್ದೇಳು ಎಂದು ನಾನು ನಿನಗೆ ಹೇಳುತ್ತೇನೆ ಎಂದರ್ಥ.

42 And straightway the damsel rose up, and walked; for she was twelve years old. And they were amazed straightway with a great amazement.ಕೂಡಲೆ ಆ ಹನ್ನೆರಡು ವರುಷದ ಹುಡುಗಿಯು ಎದ್ದು ನಡೆದಾಡಿದಳು; ಆಗ ಅವರು ಅತ್ಯಾಶ್ಚರ್ಯ ದಿಂದ ಬೆರಗಾದರು.

43 And he charged them much that no man should know this: and he commanded that `something' should be given her to eat.ಇದು ಯಾವ ಮನುಷ್ಯ ನಿಗೂ ತಿಳಿಯಬಾರದೆಂದು ಆತನು ಅವರಿಗೆ ಖಂಡಿತ ವಾಗಿ ಹೇಳಿ ಅವಳಿಗೆ ತಿನ್ನುವದಕ್ಕೆ ಏನಾದರೂ ಕೊಡಬೇಕೆಂದು ಅಪ್ಪಣೆಕೊಟ್ಟನು.

Kannada Bible