Mark 4 - WEB (Kannada)
1 Again he began to teach by the seaside. A great multitude was gathered to him, so that he entered into a boat in the sea, and sat down. All the multitude were on the land by the sea.ಆತನು ತಿರಿಗಿ ಸಮುದ್ರದ ಬಳಿಯಲ್ಲಿ ಬೋಧಿಸಲಾರಂಭಿಸಿದನು; ಮತ್ತು ಜನರ ದೊಡ್ಡ ಸಮೂಹವು ಆತನ ಬಳಿಗೆ ಕೂಡಿಬಂದದ್ದ ರಿಂದ ಆತನು ಸಮುದ್ರದಲ್ಲಿದ್ದ ಒಂದು ದೋಣಿ ಯನ್ನು ಹತ್ತಿ ಕೂತುಕೊಂಡನು; ಆಗ ಜನ ಸಮೂಹವೆಲ್ಲಾ ಸಮುದ್ರದ ಬಳಿಯಲ್ಲಿ ನೆಲದ ಮೇಲೆ ಇದ್ದರು.
2 He taught them many things in parables, and told them in his teaching,ಆತನು ಸಾಮ್ಯಗಳಲ್ಲಿ ಅವರಿಗೆ ಅನೇಕ ವಿಷಯಗಳನ್ನು ಕಲಿಸಿ ತನ್ನ ಬೋಧನೆ ಯಲ್ಲಿ ಅವರಿಗೆ ಹೇಳಿದ್ದೇನಂದರೆ--
3 "Listen! Behold, the farmer went out to sow,ಕೇಳಿರಿ, ಇಗೋ, ಬಿತ್ತುವವನು ಬಿತ್ತುವದಕ್ಕೆ ಹೊರಟುಹೋದನು.
4 and it happened, as he sowed, some seed fell by the road, and the birds{TR adds "of the air"} came and devoured it.ಅವನು ಬಿತ್ತಿದಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು. ಆಗ ಆಕಾಶದ ಪಕ್ಷಿಗಳು ಬಂದು ಅವುಗಳನ್ನು ನುಂಗಿಬಿಟ್ಟವು.
5 Others fell on the rocky ground, where it had little soil, and immediately it sprang up, because it had no depth of soil.ಇನ್ನು ಕೆಲವು ಹೆಚ್ಚು ಮಣ್ಣಿಲ್ಲದ ಬಂಡೆಯ ನೆಲದ ಮೇಲೆ ಬಿದ್ದವು; ಅದಕ್ಕೆ ಆಳವಾದ ಮಣ್ಣು ಇಲ್ಲದ್ದರಿಂದ ಅವು ಕೂಡಲೆ ಮೊಳೆತವು;
6 When the sun had risen, it was scorched; and because it had no root, it withered away.ಆದರೆ ಸೂರ್ಯನು ಮೇಲಕ್ಕೆ ಬಂದಾಗ ಅವು ಬಾಡಿಹೋಗಿ ಬೇರಿಲ್ಲದ ಕಾರಣ ಒಣಗಿಹೋದವು;
7 Others fell among the thorns, and the thorns grew up, and choked it, and it yielded no fruit.ಮತ್ತೆ ಕೆಲವು ಮುಳ್ಳು ಗಳಲ್ಲಿ ಬಿದ್ದವು; ಆ ಮುಳ್ಳುಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟದ್ದರಿಂದ ಅವು ಫಲಕೊಡಲಿಲ್ಲ.
8 Others fell into the good ground, and yielded fruit, growing up and increasing. Some brought forth thirty times, some sixty times, and some one hundred times as much."ಕೆಲವು ಒಳ್ಳೇ ನೆಲದ ಮೇಲೆ ಬಿದ್ದು ಮೊಳೆತು ಬೆಳೆಯುತಾ ಕೆಲವು ಮೂವತ್ತರಷ್ಟು, ಅರವತ್ತರಷ್ಟು, ಕೆಲವು ನೂರರಷ್ಟು ಫಲವನ್ನು ಕೊಟ್ಟವು.
9 He said, "Whoever has ears to hear, let him hear."ಆತನು ಅವರಿಗೆ ಹೇಳಿದ್ದೇನಂದರೆ--ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ ಅಂದನು.
10 When he was alone, those who were around him with the twelve asked him about the parables.ಆತನು ಒಬ್ಬನೇ ಇದ್ದಾಗ ಆತನ ಸುತ್ತಲೂ ಇದ್ದವರು ಹನ್ನೆರಡು ಮಂದಿಯೊಂದಿಗೆ ಆ ಸಾಮ್ಯದ ವಿಷಯವಾಗಿ ಆತನನ್ನು ಕೇಳಿದರು.
11 He said to them, "To you is given the mystery of the Kingdom of God, but to those who are outside, all things are done in parables,ಅದಕ್ಕೆ ಆತನು ಅವರಿಗೆ--ದೇವರ ರಾಜ್ಯದ ಮರ್ಮವನ್ನು ತಿಳಿದುಕೊಳ್ಳಲು ನಿಮಗೆ ಕೊಡಲ್ಪಟ್ಟಿದೆ. ಆದರೆ ಹೊರಗಿನವರಿಗೆ ಇವೆಲ್ಲವುಗಳು ಸಾಮ್ಯಗಳಿಂದ ಹೇಳಲ್ಪಡುತ್ತವೆ.
12 that 'seeing they may see, and not perceive; and hearing they may hear, and not understand; lest perhaps they should turn again, and their sins should be forgiven them.'"ಯಾಕಂದರೆ ಅವರು ದೃಷ್ಟಿಯಿ ದ್ದರೂ ನೋಡಿ ತಿಳುಕೊಳ್ಳದಂತೆ ಕೇಳಿದರೂ ಕೇಳಿ ಗ್ರಹಿಸದಂತೆ ಮತ್ತು ಅವರು ತಿರುಗಿಕೊಂಡು ತಮ್ಮ ಪಾಪಗಳಿಂದ ಕ್ಷಮಿಸಲ್ಪಡದಂತೆ ಆಗುವದು.
13 He said to them, "Don't you understand this parable? How will you understand all of the parables?ಮತ್ತು ಆತನು ಅವರಿಗೆ--ಈ ಸಾಮ್ಯವು ನಿಮಗೆ ತಿಳಿಯ ಲಿಲ್ಲವೋ? ಹಾಗಾದರೆ ಎಲ್ಲಾ ಸಾಮ್ಯಗಳನ್ನು ನೀವು ಹೇಗೆ ತಿಳಿದುಕೊಳ್ಳುವಿರಿ?
14 The farmer sows the word.ಬಿತ್ತುವವನು ವಾಕ್ಯವನ್ನು ಬಿತ್ತುತ್ತಾನೆ.
15 These are the ones by the road, where the word is sown; and when they have heard, immediately Satan comes, and takes away the word which has been sown in them.ದಾರಿಯ ಮಗ್ಗುಲಲ್ಲಿ ವಾಕ್ಯವು ಬಿತ್ತಲ್ಪಟ್ಟವರು ಇವರೇ; ಆದರೆ ಇವರು ಕೇಳಿದಾಗ ಸೈತಾನನು ಕೂಡಲೆ ಬಂದು ಅವರ ಹೃದಯಗಳಲ್ಲಿ ಬಿತ್ತಲ್ಪಟ್ಟಿದ್ದ ವಾಕ್ಯವನ್ನು ತೆಗೆದು ಬಿಡುತ್ತಾನೆ.
16 These in like manner are those who are sown on the rocky places, who, when they have heard the word, immediately receive it with joy.ಅದೇ ಪ್ರಕಾರ ಬಂಡೆಯ ನೆಲದ ಮೇಲೆ ಬಿತ್ತಲ್ಪಟ್ಟವರು ವಾಕ್ಯವನ್ನು ಕೇಳಿದಾಗ ಕೂಡಲೆ ಅದನ್ನು ಸಂತೋಷದಿಂದ ಅಂಗೀಕರಿಸಿ
17 They have no root in themselves, but are short-lived. When oppression or persecution arises because of the word, immediately they stumble.ತಮ್ಮಲ್ಲಿ ಬೇರು ಇಲ್ಲದ ಕಾರಣ ಸ್ವಲ್ಪ ಕಾಲ ಮಾತ್ರ ಇರುವಂಥವರಾಗಿದ್ದಾರೆ; ತರುವಾಯ ವಾಕ್ಯದ ನಿಮಿತ್ತ ಉಪದ್ರವವಾಗಲೀ ಹಿಂಸೆಯಾಗಲೀ ಬಂದಾಗ ಕೂಡಲೆ ಅವರು ಅಭ್ಯಂತರಪಡುತ್ತಾರೆ.
18 Others are those who are sown among the thorns. These are those who have heard the word,ಮುಳ್ಳು ಗಿಡಗಳಲ್ಲಿ ಬಿತ್ತಲ್ಪಟ್ಟವರು ಇವರೇ; ಇಂಥವರು ವಾಕ್ಯವನ್ನು ಕೇಳಿದಾಗ
19 and the cares of this age, and the deceitfulness of riches, and the lusts of other things entering in choke the word, and it becomes unfruitful.ಈ ಲೋಕದ ಚಿಂತೆಗಳೂ ಐಶ್ವರ್ಯದ ಮೋಸವೂ ಇತರ ವಿಷಯಗಳ ಆಶೆಗಳೂ ಒಳಗೆ ಸೇರಿ ವಾಕ್ಯವನ್ನು ಅಡಗಿಸುವದರಿಂದ ಅದು ನಿಷ್ಫಲವಾಗುವದು.
20 These are those which were sown on the good ground: such as hear the word, and accept it, and bear fruit, some thirty times, some sixty times, and some one hundred times."ಒಳ್ಳೆಯ ಭೂಮಿಯ ಮೇಲೆ ಬಿತ್ತಲ್ಪಟ್ಟವರು ಇವರೇ; ಇಂಥವರು ವಾಕ್ಯವನ್ನು ಕೇಳಿ ಅಂಗೀಕರಿಸಿದ ಮೇಲೆ ಕೆಲವರು ಮೂವತ್ತರಷ್ಟು, ಕೆಲವರು ಅರವತ್ತರಷ್ಟು, ಕೆಲವರು ನೂರರಷ್ಟು ಫಲಕೊಡುತ್ತಾರೆ ಅಂದನು.
21 He said to them, "Is the lamp brought to be put under a basket{Literally, a modion, a dry measuring basket containing about a peck (about 9 litres)} or under a bed? Isn't it put on a lampstand?ಆತನು ಅವರಿಗೆ--ದೀಪವನ್ನು ಕೊಳಗದೊಳ ಗಾಗಲೀ ಮಂಚದ ಕೇಳಗಾಗಲೀ ಇಡುವದಕ್ಕೆ ತರುವದುಂಟೋ? ದೀಪಸ್ತಂಭದ ಮೇಲೆ ಇಡುವದಕ್ಕೆ ಅಲ್ಲವೋ?
22 For there is nothing hidden, except that it should be made known; neither was anything made secret, but that it should come to light.ಯಾಕಂದರೆ ಪ್ರಕಟವಾಗದಂತೆ ಅಡಗಿಸಲ್ಪಟ್ಟದ್ದು ಯಾವದೂ ಇಲ್ಲ; ಇಲ್ಲವೆ ರಹಸ್ಯವಾಗಿ ಇಡಲ್ಪಟ್ಟದ್ದು ಯಾವದೂ ಬಹಿರಂಗವಾಗಿ ಇರಲಾರದು.
23 If any man has ears to hear, let him hear."ಯಾವನಿಗಾದರೂ ಕೇಳುವದಕ್ಕೆ ಕಿವಿಗಳಿದ್ದರೆ ಅವನು ಕೇಳಲಿ ಅಂದನು.
24 He said to them, "Take heed what you hear. With whatever measure you measure, it will be measured to you, and more will be given to you who hear.ಆತನು ಅವರಿಗೆ--ನೀವು ಕೇಳುವದರಲ್ಲಿ ಎಚ್ಚರವಾಗಿರ್ರಿ; ನೀವು ಯಾವ ಅಳತೆಯಿಂದ ಅಳೆಯುತ್ತೀರೋ ಅದು ನಿಮಗೂ ಅಳೆಯಲ್ಪಡುವದು; ಮತ್ತು ಕೇಳುವವ ರಾದ ನಿಮಗೆ ಹೆಚ್ಚಾಗಿ ಕೊಡಲ್ಪಡುವದು.
25 For whoever has, to him will more be given, and he who doesn't have, from him will be taken away even that which he has."ಯಾಕಂ ದರೆ ಯಾವನಿಗೆ ಇದೆಯೋ ಅವನಿಗೆ ಕೊಡಲ್ಪಡುವದು; ಯಾವನಿಗೆ ಇಲ್ಲವೋ ಅವನಿಗೆ ಇದ್ದದ್ದೂ ಅವನಿಂದ ತೆಗೆಯಲ್ಪಡುವದು ಎಂದು ಹೇಳಿದನು.
26 He said, "The Kingdom of God is as if a man should cast seed on the earth,ಆತನು ಹೇಳಿದ್ದೇನಂದರೆ--ಒಬ್ಬ ಮನುಷ್ಯನು ಬೀಜವನ್ನು ಭೂಮಿಯಲ್ಲಿ ಹಾಕಿದಂತೆಯೇ ದೇವರ ರಾಜ್ಯವು ಇದೆ.
27 and should sleep and rise night and day, and the seed should spring up and grow, he doesn't know how.ಅವನು ರಾತ್ರಿ ಮಲಗುತ್ತಾ ಹಗಲು ಏಳುತ್ತಾ ಇರುವಾಗ ಹೇಗೆ ಆ ಬೀಜವು ಮೊಳೆತು ಬೆಳೆಯುವದೆಂದು ಅವನಿಗೆ ಗೊತ್ತಾಗುವದಿಲ್ಲವೋ ಹಾಗೆಯೇ ಇರುವದು.
28 For the earth bears fruit: first the blade, then the ear, then the full grain in the ear.ಯಾಕಂದರೆ ಭೂಮಿಯು ಮೊದಲು ಮೊಳಕೆಯನ್ನು ಆಮೇಲೆ ತೆನೆಯನ್ನು ಇದಾದ ಮೇಲೆ ತೆನೆಯಲ್ಲಿ ಪೂರ್ಣಕಾಳನ್ನು ತನ್ನಷ್ಟಕ್ಕೆ ತಾನೇ ಫಲಿಸುತ್ತದೆ.
29 But when the fruit is ripe, immediately he puts forth the sickle, because the harvest has come."ಆದರೆ ಫಲವು ಫಲಿಸಿದಾಗ ಸುಗ್ಗಿಯು ಬಂದದರಿಂದ ಅವನು ಕೂಡಲೆ ಕುಡು ಗೋಲು ಹಾಕಿ ಕೊಯ್ಯುತ್ತಾನೆ.
30 He said, "How will we liken the Kingdom of God? Or with what parable will we illustrate it?ಆತನು--ದೇವರ ರಾಜ್ಯವನ್ನು ನಾವು ಯಾವ ದಕ್ಕೆ ಹೋಲಿಸೋಣ? ಇಲ್ಲವೆ ಯಾವ ಹೋಲಿಕೆಗೆ ಅದನ್ನು ಹೋಲಿಸೋಣ?
31 It's like a grain of mustard seed, which, when it is sown in the earth, though it is less than all the seeds that are on the earth,ಭೂಮಿಯಲ್ಲಿರುವ ಎಲ್ಲಾ ಬೀಜಗಳಿಗಿಂತ ಚಿಕ್ಕದಾಗಿರುವ ಸಾಸಿವೆ ಕಾಳು ಭೂಮಿಯಲ್ಲಿ ಬಿತ್ತಲ್ಪಟ್ಟದ್ದಕ್ಕೆ ಅದು ಹೋಲಿಕೆ ಯಾಗಿದೆ.
32 yet when it is sown, grows up, and becomes greater than all the herbs, and puts out great branches, so that the birds of the sky can lodge under its shadow."ಆದರೆ ಅದು ಬಿತ್ತಲ್ಪಟ್ಟ ಮೇಲೆ ಬೆಳೆದು ಆಕಾಶದ ಪಕ್ಷಿಗಳು ಅದರ ನೆರಳಿನಲ್ಲಿ ವಾಸ ಮಾಡು ವಷ್ಟು ಎಲ್ಲಾ ಸಸ್ಯಗಳಿಗಿಂತ ದೊಡ್ಡದಾಗಿ ದೊಡ್ಡ ಕೊಂಬೆಗಳನ್ನು ಬಿಡುತ್ತದೆ ಎಂದು ಹೇಳಿದನು.
33 With many such parables he spoke the word to them, as they were able to hear it.ಅವರು ಕೇಳಿಸಿಕೊಳ್ಳಲು ಸಾಧ್ಯವಾಗುವಷ್ಟು ಇಂಥ ಅನೇಕ ಸಾಮ್ಯಗಳಿಂದ ಆತನು ಅವರಿಗೆ ವಾಕ್ಯವನ್ನು ಹೇಳಿದನು.
34 Without a parable he didn't speak to them; but privately to his own disciples he explained all things.ಸಾಮ್ಯವಿಲ್ಲದೆ ಅವರೊಂ ದಿಗೆ ಮಾತನಾಡಲಿಲ್ಲ; ಆದರೆ ಅವರು ಏಕಾಂತದ ಲ್ಲಿದ್ದಾಗ ಆತನು ಎಲ್ಲಾ ವಿಷಯಗಳನ್ನು ತನ್ನ ಶಿಷ್ಯರಿಗೆ ವಿವರಿಸಿದನು.
35 On that day, when evening had come, he said to them, "Let's go over to the other side."ಅದೇ ದಿವಸ ಸಾಯಂಕಾಲವಾದಾಗ ಆತನು ಅವರಿಗೆ--ನಾವು ಆಚೇದಡಕ್ಕೆ ಹೋಗೋಣ ಅಂದನು.
36 Leaving the multitude, they took him with them, even as he was, in the boat. Other small boats were also with him.ಅವರು ಆ ಜನಸಮೂಹವನ್ನು ಕಳುಹಿ ಸಿದ ಮೇಲೆ ಆತನು ದೋಣಿಯಲ್ಲಿ ಇದ್ದ ಹಾಗೆಯೇ ಅವರು ಆತನನ್ನು ಕರೆದುಕೊಂಡು ಹೋದರು; ಆತನೊಂದಿಗೆ ಬೇರೆ ಚಿಕ್ಕದೋಣಿಗಳೂ ಇದ್ದವು.
37 There arose a great wind storm, and the waves beat into the boat, so much that the boat was already filled.ಆಗ ಅಲ್ಲಿ ದೊಡ್ಡ ಬಿರುಗಾಳಿಯಿಂದ ತುಫಾನು ಎದ್ದು ತೆರೆಗಳು ದೋಣಿಯೊಳಕ್ಕೆ ಬಡಿದದ್ದರಿಂದ ಅದು ತುಂಬಿಕೊಂಡಿತು.
38 He himself was in the stern, asleep on the cushion, and they woke him up, and told him, "Teacher, don't you care that we are dying?"ಆದರೆ ಆತನು ದೋಣಿಯ ಹಿಂಭಾಗದಲ್ಲಿ ತಲೆದಿಂಬಿನ ಮೇಲೆ ನಿದ್ರಿಸುತ್ತಿದ್ದನು. ಆಗ ಅವರು ಆತನನ್ನು ಎಬ್ಬಿಸಿ ಆತನಿಗೆ--ಒಡೆಯನೇ, ನಾವು ನಾಶವಾಗುತ್ತೇವೆಂದು ನಿನಗೆ ಚಿಂತೆಯಿಲ್ಲವೋ ಅಂದರು.
39 He awoke, and rebuked the wind, and said to the sea, "Peace! Be still!" The wind ceased, and there was a great calm.ಆಗ ಆತನು ಎದ್ದು ಗಾಳಿಯನ್ನು ಗದರಿಸಿ ಸಮುದ್ರಕ್ಕೆ--ಶಾಂತವಾಗಿ ಮೌನವಾಗಿರು ಎಂದು ಹೇಳಿದನು. ಆಗ ಗಾಳಿಯು ನಿಂತು ಅಲ್ಲಿ ದೊಡ್ಡ ಶಾಂತತೆ ಉಂಟಾಯಿತು.
40 He said to them, "Why are you so afraid? How is it that you have no faith?"ಮತ್ತು ಆತನು ಅವರಿಗೆ--ಯಾಕೆ ನೀವು ಇಷ್ಟೊಂದು ಭಯಭರಿತರಾಗಿದ್ದೀರಿ? ನಿಮಗೆ ನಂಬಿಕೆ ಇಲ್ಲದಿರುವದು ಹೇಗೆ ಅಂದನು.
41 They were greatly afraid, and said to one another, "Who then is this, that even the wind and the sea obey him?"ಆಗ ಅವರು ಇನ್ನಷ್ಟು ಭಯಪಟ್ಟವರಾಗಿ--ಈತನು ಎಂಥ ಮನುಷ್ಯನಾಗಿರಬಹುದು? ಗಾಳಿಯೂ ಸಮುದ್ರವೂ ಈತನಿಗೆ ವಿಧೇಯವಾಗುತ್ತವಲ್ಲಾ ! ಎಂದು ಒಬ್ಬರಿ ಗೊಬ್ಬರು ಮಾತನಾಡಿಕೊಂಡರು.
Kannada Bible