Mark 4 - DBY (Kannada)
1 And again he began to teach by the sea. And a great crowd was gathered together to him, so that going on board ship he sat in the sea, and all the crowd were close to the sea on the land.ಆತನು ತಿರಿಗಿ ಸಮುದ್ರದ ಬಳಿಯಲ್ಲಿ ಬೋಧಿಸಲಾರಂಭಿಸಿದನು; ಮತ್ತು ಜನರ ದೊಡ್ಡ ಸಮೂಹವು ಆತನ ಬಳಿಗೆ ಕೂಡಿಬಂದದ್ದ ರಿಂದ ಆತನು ಸಮುದ್ರದಲ್ಲಿದ್ದ ಒಂದು ದೋಣಿ ಯನ್ನು ಹತ್ತಿ ಕೂತುಕೊಂಡನು; ಆಗ ಜನ ಸಮೂಹವೆಲ್ಲಾ ಸಮುದ್ರದ ಬಳಿಯಲ್ಲಿ ನೆಲದ ಮೇಲೆ ಇದ್ದರು.
2 And he taught them many things in parables. And he said to them in his doctrine,ಆತನು ಸಾಮ್ಯಗಳಲ್ಲಿ ಅವರಿಗೆ ಅನೇಕ ವಿಷಯಗಳನ್ನು ಕಲಿಸಿ ತನ್ನ ಬೋಧನೆ ಯಲ್ಲಿ ಅವರಿಗೆ ಹೇಳಿದ್ದೇನಂದರೆ--
3 Hearken: Behold, the sower went forth to sow.ಕೇಳಿರಿ, ಇಗೋ, ಬಿತ್ತುವವನು ಬಿತ್ತುವದಕ್ಕೆ ಹೊರಟುಹೋದನು.
4 And it came to pass as he sowed, one fell by the wayside, and the birds came and devoured it.ಅವನು ಬಿತ್ತಿದಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು. ಆಗ ಆಕಾಶದ ಪಕ್ಷಿಗಳು ಬಂದು ಅವುಗಳನ್ನು ನುಂಗಿಬಿಟ್ಟವು.
5 And another fell on the rocky ground, where it had not much earth, and immediately it sprung up out [of the ground] because it had no depth of earth;ಇನ್ನು ಕೆಲವು ಹೆಚ್ಚು ಮಣ್ಣಿಲ್ಲದ ಬಂಡೆಯ ನೆಲದ ಮೇಲೆ ಬಿದ್ದವು; ಅದಕ್ಕೆ ಆಳವಾದ ಮಣ್ಣು ಇಲ್ಲದ್ದರಿಂದ ಅವು ಕೂಡಲೆ ಮೊಳೆತವು;
6 and when the sun arose it was burnt up, and because of its not having any root, it withered.ಆದರೆ ಸೂರ್ಯನು ಮೇಲಕ್ಕೆ ಬಂದಾಗ ಅವು ಬಾಡಿಹೋಗಿ ಬೇರಿಲ್ಲದ ಕಾರಣ ಒಣಗಿಹೋದವು;
7 And another fell among the thorns, and the thorns grew up and choked it, and it yielded no fruit.ಮತ್ತೆ ಕೆಲವು ಮುಳ್ಳು ಗಳಲ್ಲಿ ಬಿದ್ದವು; ಆ ಮುಳ್ಳುಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟದ್ದರಿಂದ ಅವು ಫಲಕೊಡಲಿಲ್ಲ.
8 And another fell into the good ground, and yielded fruit, growing up and increasing; and bore, one thirty, and one sixty, and one a hundred.ಕೆಲವು ಒಳ್ಳೇ ನೆಲದ ಮೇಲೆ ಬಿದ್ದು ಮೊಳೆತು ಬೆಳೆಯುತಾ ಕೆಲವು ಮೂವತ್ತರಷ್ಟು, ಅರವತ್ತರಷ್ಟು, ಕೆಲವು ನೂರರಷ್ಟು ಫಲವನ್ನು ಕೊಟ್ಟವು.
9 And he said, He that has ears to hear, let him hear.ಆತನು ಅವರಿಗೆ ಹೇಳಿದ್ದೇನಂದರೆ--ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ ಅಂದನು.
10 And when he was alone, those about him with the twelve asked him [as to] the parables.ಆತನು ಒಬ್ಬನೇ ಇದ್ದಾಗ ಆತನ ಸುತ್ತಲೂ ಇದ್ದವರು ಹನ್ನೆರಡು ಮಂದಿಯೊಂದಿಗೆ ಆ ಸಾಮ್ಯದ ವಿಷಯವಾಗಿ ಆತನನ್ನು ಕೇಳಿದರು.
11 And he said to them, To you is given [to know] the mystery of the kingdom of God; but to them who are without, all things are done in parables,ಅದಕ್ಕೆ ಆತನು ಅವರಿಗೆ--ದೇವರ ರಾಜ್ಯದ ಮರ್ಮವನ್ನು ತಿಳಿದುಕೊಳ್ಳಲು ನಿಮಗೆ ಕೊಡಲ್ಪಟ್ಟಿದೆ. ಆದರೆ ಹೊರಗಿನವರಿಗೆ ಇವೆಲ್ಲವುಗಳು ಸಾಮ್ಯಗಳಿಂದ ಹೇಳಲ್ಪಡುತ್ತವೆ.
12 that beholding they may behold and not see, and hearing they may hear and not understand, lest it may be, they should be converted and they should be forgiven.ಯಾಕಂದರೆ ಅವರು ದೃಷ್ಟಿಯಿ ದ್ದರೂ ನೋಡಿ ತಿಳುಕೊಳ್ಳದಂತೆ ಕೇಳಿದರೂ ಕೇಳಿ ಗ್ರಹಿಸದಂತೆ ಮತ್ತು ಅವರು ತಿರುಗಿಕೊಂಡು ತಮ್ಮ ಪಾಪಗಳಿಂದ ಕ್ಷಮಿಸಲ್ಪಡದಂತೆ ಆಗುವದು.
13 And he says to them, Do ye not know this parable? and how will ye be acquainted with all the parables?ಮತ್ತು ಆತನು ಅವರಿಗೆ--ಈ ಸಾಮ್ಯವು ನಿಮಗೆ ತಿಳಿಯ ಲಿಲ್ಲವೋ? ಹಾಗಾದರೆ ಎಲ್ಲಾ ಸಾಮ್ಯಗಳನ್ನು ನೀವು ಹೇಗೆ ತಿಳಿದುಕೊಳ್ಳುವಿರಿ?
14 The sower sows the word:ಬಿತ್ತುವವನು ವಾಕ್ಯವನ್ನು ಬಿತ್ತುತ್ತಾನೆ.
15 and these are they by the wayside where the word is sown, and when they hear, immediately Satan comes and takes away the word that was sown in them.ದಾರಿಯ ಮಗ್ಗುಲಲ್ಲಿ ವಾಕ್ಯವು ಬಿತ್ತಲ್ಪಟ್ಟವರು ಇವರೇ; ಆದರೆ ಇವರು ಕೇಳಿದಾಗ ಸೈತಾನನು ಕೂಡಲೆ ಬಂದು ಅವರ ಹೃದಯಗಳಲ್ಲಿ ಬಿತ್ತಲ್ಪಟ್ಟಿದ್ದ ವಾಕ್ಯವನ್ನು ತೆಗೆದು ಬಿಡುತ್ತಾನೆ.
16 And these are they in like manner who are sown upon the rocky places, who when they hear the word, immediately receive it with joy,ಅದೇ ಪ್ರಕಾರ ಬಂಡೆಯ ನೆಲದ ಮೇಲೆ ಬಿತ್ತಲ್ಪಟ್ಟವರು ವಾಕ್ಯವನ್ನು ಕೇಳಿದಾಗ ಕೂಡಲೆ ಅದನ್ನು ಸಂತೋಷದಿಂದ ಅಂಗೀಕರಿಸಿ
17 and they have no root in themselves, but are for a time: then, tribulation arising, or persecution on account of the word, immediately they are offended.ತಮ್ಮಲ್ಲಿ ಬೇರು ಇಲ್ಲದ ಕಾರಣ ಸ್ವಲ್ಪ ಕಾಲ ಮಾತ್ರ ಇರುವಂಥವರಾಗಿದ್ದಾರೆ; ತರುವಾಯ ವಾಕ್ಯದ ನಿಮಿತ್ತ ಉಪದ್ರವವಾಗಲೀ ಹಿಂಸೆಯಾಗಲೀ ಬಂದಾಗ ಕೂಡಲೆ ಅವರು ಅಭ್ಯಂತರಪಡುತ್ತಾರೆ.
18 And others are they who are sown among the thorns: these are they who have heard the word,ಮುಳ್ಳು ಗಿಡಗಳಲ್ಲಿ ಬಿತ್ತಲ್ಪಟ್ಟವರು ಇವರೇ; ಇಂಥವರು ವಾಕ್ಯವನ್ನು ಕೇಳಿದಾಗ
19 and the cares of life, and the deceitfulness of riches, and the lusts of other things, entering in, choke the word, and it becomes unfruitful.ಈ ಲೋಕದ ಚಿಂತೆಗಳೂ ಐಶ್ವರ್ಯದ ಮೋಸವೂ ಇತರ ವಿಷಯಗಳ ಆಶೆಗಳೂ ಒಳಗೆ ಸೇರಿ ವಾಕ್ಯವನ್ನು ಅಡಗಿಸುವದರಿಂದ ಅದು ನಿಷ್ಫಲವಾಗುವದು.
20 And these are they who have been sown on the good ground, such as hear the word and receive it, and bear fruit; one thirty, and one sixty, and one a hundred [fold].ಒಳ್ಳೆಯ ಭೂಮಿಯ ಮೇಲೆ ಬಿತ್ತಲ್ಪಟ್ಟವರು ಇವರೇ; ಇಂಥವರು ವಾಕ್ಯವನ್ನು ಕೇಳಿ ಅಂಗೀಕರಿಸಿದ ಮೇಲೆ ಕೆಲವರು ಮೂವತ್ತರಷ್ಟು, ಕೆಲವರು ಅರವತ್ತರಷ್ಟು, ಕೆಲವರು ನೂರರಷ್ಟು ಫಲಕೊಡುತ್ತಾರೆ ಅಂದನು.
21 And he said to them, Does the lamp come that it should be put under the bushel or under the couch? [Is it] not that it should be set upon the lamp-stand?ಆತನು ಅವರಿಗೆ--ದೀಪವನ್ನು ಕೊಳಗದೊಳ ಗಾಗಲೀ ಮಂಚದ ಕೇಳಗಾಗಲೀ ಇಡುವದಕ್ಕೆ ತರುವದುಂಟೋ? ದೀಪಸ್ತಂಭದ ಮೇಲೆ ಇಡುವದಕ್ಕೆ ಅಲ್ಲವೋ?
22 For there is nothing hidden which shall not be made manifest; nor does any secret thing take place, but that it should come to light.ಯಾಕಂದರೆ ಪ್ರಕಟವಾಗದಂತೆ ಅಡಗಿಸಲ್ಪಟ್ಟದ್ದು ಯಾವದೂ ಇಲ್ಲ; ಇಲ್ಲವೆ ರಹಸ್ಯವಾಗಿ ಇಡಲ್ಪಟ್ಟದ್ದು ಯಾವದೂ ಬಹಿರಂಗವಾಗಿ ಇರಲಾರದು.
23 If any one have ears to hear, let him hear.ಯಾವನಿಗಾದರೂ ಕೇಳುವದಕ್ಕೆ ಕಿವಿಗಳಿದ್ದರೆ ಅವನು ಕೇಳಲಿ ಅಂದನು.
24 And he said to them, Take heed what ye hear; with what measure ye mete, it shall be meted to you; and there shall be [more] added to you.ಆತನು ಅವರಿಗೆ--ನೀವು ಕೇಳುವದರಲ್ಲಿ ಎಚ್ಚರವಾಗಿರ್ರಿ; ನೀವು ಯಾವ ಅಳತೆಯಿಂದ ಅಳೆಯುತ್ತೀರೋ ಅದು ನಿಮಗೂ ಅಳೆಯಲ್ಪಡುವದು; ಮತ್ತು ಕೇಳುವವ ರಾದ ನಿಮಗೆ ಹೆಚ್ಚಾಗಿ ಕೊಡಲ್ಪಡುವದು.
25 For whosoever has, to him shall be given; and he who has not, even what he has shall be taken from him.ಯಾಕಂ ದರೆ ಯಾವನಿಗೆ ಇದೆಯೋ ಅವನಿಗೆ ಕೊಡಲ್ಪಡುವದು; ಯಾವನಿಗೆ ಇಲ್ಲವೋ ಅವನಿಗೆ ಇದ್ದದ್ದೂ ಅವನಿಂದ ತೆಗೆಯಲ್ಪಡುವದು ಎಂದು ಹೇಳಿದನು.
26 And he said, Thus is the kingdom of God, as if a man should cast the seed upon the earth,ಆತನು ಹೇಳಿದ್ದೇನಂದರೆ--ಒಬ್ಬ ಮನುಷ್ಯನು ಬೀಜವನ್ನು ಭೂಮಿಯಲ್ಲಿ ಹಾಕಿದಂತೆಯೇ ದೇವರ ರಾಜ್ಯವು ಇದೆ.
27 and should sleep and rise up night and day, and the seed should sprout and grow, he does not know how.ಅವನು ರಾತ್ರಿ ಮಲಗುತ್ತಾ ಹಗಲು ಏಳುತ್ತಾ ಇರುವಾಗ ಹೇಗೆ ಆ ಬೀಜವು ಮೊಳೆತು ಬೆಳೆಯುವದೆಂದು ಅವನಿಗೆ ಗೊತ್ತಾಗುವದಿಲ್ಲವೋ ಹಾಗೆಯೇ ಇರುವದು.
28 The earth bears fruit of itself, first [the] blade, then an ear, then full corn in the ear.ಯಾಕಂದರೆ ಭೂಮಿಯು ಮೊದಲು ಮೊಳಕೆಯನ್ನು ಆಮೇಲೆ ತೆನೆಯನ್ನು ಇದಾದ ಮೇಲೆ ತೆನೆಯಲ್ಲಿ ಪೂರ್ಣಕಾಳನ್ನು ತನ್ನಷ್ಟಕ್ಕೆ ತಾನೇ ಫಲಿಸುತ್ತದೆ.
29 But when the fruit is produced, immediately he sends the sickle, for the harvest is come.ಆದರೆ ಫಲವು ಫಲಿಸಿದಾಗ ಸುಗ್ಗಿಯು ಬಂದದರಿಂದ ಅವನು ಕೂಡಲೆ ಕುಡು ಗೋಲು ಹಾಕಿ ಕೊಯ್ಯುತ್ತಾನೆ.
30 And he said, How should we liken the kingdom of God, or with what comparison should we compare it?ಆತನು--ದೇವರ ರಾಜ್ಯವನ್ನು ನಾವು ಯಾವ ದಕ್ಕೆ ಹೋಲಿಸೋಣ? ಇಲ್ಲವೆ ಯಾವ ಹೋಲಿಕೆಗೆ ಅದನ್ನು ಹೋಲಿಸೋಣ?
31 As to a grain of mustard [seed], which, when it is sown upon the earth, is less than all seeds which are upon the earth,ಭೂಮಿಯಲ್ಲಿರುವ ಎಲ್ಲಾ ಬೀಜಗಳಿಗಿಂತ ಚಿಕ್ಕದಾಗಿರುವ ಸಾಸಿವೆ ಕಾಳು ಭೂಮಿಯಲ್ಲಿ ಬಿತ್ತಲ್ಪಟ್ಟದ್ದಕ್ಕೆ ಅದು ಹೋಲಿಕೆ ಯಾಗಿದೆ.
32 and when it has been sown, mounts up and becomes greater than all herbs, and produces great branches, so that the birds of heaven can roost under its shadow.ಆದರೆ ಅದು ಬಿತ್ತಲ್ಪಟ್ಟ ಮೇಲೆ ಬೆಳೆದು ಆಕಾಶದ ಪಕ್ಷಿಗಳು ಅದರ ನೆರಳಿನಲ್ಲಿ ವಾಸ ಮಾಡು ವಷ್ಟು ಎಲ್ಲಾ ಸಸ್ಯಗಳಿಗಿಂತ ದೊಡ್ಡದಾಗಿ ದೊಡ್ಡ ಕೊಂಬೆಗಳನ್ನು ಬಿಡುತ್ತದೆ ಎಂದು ಹೇಳಿದನು.
33 And with many such parables he spoke the word to them, as they were able to hear,ಅವರು ಕೇಳಿಸಿಕೊಳ್ಳಲು ಸಾಧ್ಯವಾಗುವಷ್ಟು ಇಂಥ ಅನೇಕ ಸಾಮ್ಯಗಳಿಂದ ಆತನು ಅವರಿಗೆ ವಾಕ್ಯವನ್ನು ಹೇಳಿದನು.
34 but without a parable spoke he not to them; and in private he explained all things to his disciples.ಸಾಮ್ಯವಿಲ್ಲದೆ ಅವರೊಂ ದಿಗೆ ಮಾತನಾಡಲಿಲ್ಲ; ಆದರೆ ಅವರು ಏಕಾಂತದ ಲ್ಲಿದ್ದಾಗ ಆತನು ಎಲ್ಲಾ ವಿಷಯಗಳನ್ನು ತನ್ನ ಶಿಷ್ಯರಿಗೆ ವಿವರಿಸಿದನು.
35 And on that day, when evening was come, he says to them, Let us go over to the other side:ಅದೇ ದಿವಸ ಸಾಯಂಕಾಲವಾದಾಗ ಆತನು ಅವರಿಗೆ--ನಾವು ಆಚೇದಡಕ್ಕೆ ಹೋಗೋಣ ಅಂದನು.
36 and having sent away the crowd, they take him with [them], as he was, in the ship. But other ships also were with him.ಅವರು ಆ ಜನಸಮೂಹವನ್ನು ಕಳುಹಿ ಸಿದ ಮೇಲೆ ಆತನು ದೋಣಿಯಲ್ಲಿ ಇದ್ದ ಹಾಗೆಯೇ ಅವರು ಆತನನ್ನು ಕರೆದುಕೊಂಡು ಹೋದರು; ಆತನೊಂದಿಗೆ ಬೇರೆ ಚಿಕ್ಕದೋಣಿಗಳೂ ಇದ್ದವು.
37 And there comes a violent gust of wind, and the waves beat into the ship, so that it already filled.ಆಗ ಅಲ್ಲಿ ದೊಡ್ಡ ಬಿರುಗಾಳಿಯಿಂದ ತುಫಾನು ಎದ್ದು ತೆರೆಗಳು ದೋಣಿಯೊಳಕ್ಕೆ ಬಡಿದದ್ದರಿಂದ ಅದು ತುಂಬಿಕೊಂಡಿತು.
38 And *he* was in the stern sleeping on the cushion. And they awake him up and say to him, Teacher, dost thou not care that we are perishing?ಆದರೆ ಆತನು ದೋಣಿಯ ಹಿಂಭಾಗದಲ್ಲಿ ತಲೆದಿಂಬಿನ ಮೇಲೆ ನಿದ್ರಿಸುತ್ತಿದ್ದನು. ಆಗ ಅವರು ಆತನನ್ನು ಎಬ್ಬಿಸಿ ಆತನಿಗೆ--ಒಡೆಯನೇ, ನಾವು ನಾಶವಾಗುತ್ತೇವೆಂದು ನಿನಗೆ ಚಿಂತೆಯಿಲ್ಲವೋ ಅಂದರು.
39 And awaking up he rebuked the wind, and said to the sea, Silence; be mute. And the wind fell, and there was a great calm.ಆಗ ಆತನು ಎದ್ದು ಗಾಳಿಯನ್ನು ಗದರಿಸಿ ಸಮುದ್ರಕ್ಕೆ--ಶಾಂತವಾಗಿ ಮೌನವಾಗಿರು ಎಂದು ಹೇಳಿದನು. ಆಗ ಗಾಳಿಯು ನಿಂತು ಅಲ್ಲಿ ದೊಡ್ಡ ಶಾಂತತೆ ಉಂಟಾಯಿತು.
40 And he said to them, Why are ye [thus] fearful? how [is it] ye have not faith?ಮತ್ತು ಆತನು ಅವರಿಗೆ--ಯಾಕೆ ನೀವು ಇಷ್ಟೊಂದು ಭಯಭರಿತರಾಗಿದ್ದೀರಿ? ನಿಮಗೆ ನಂಬಿಕೆ ಇಲ್ಲದಿರುವದು ಹೇಗೆ ಅಂದನು.
41 And they feared [with] great fear, and said one to another, Who then is this, that even the wind and the sea obey him?ಆಗ ಅವರು ಇನ್ನಷ್ಟು ಭಯಪಟ್ಟವರಾಗಿ--ಈತನು ಎಂಥ ಮನುಷ್ಯನಾಗಿರಬಹುದು? ಗಾಳಿಯೂ ಸಮುದ್ರವೂ ಈತನಿಗೆ ವಿಧೇಯವಾಗುತ್ತವಲ್ಲಾ ! ಎಂದು ಒಬ್ಬರಿ ಗೊಬ್ಬರು ಮಾತನಾಡಿಕೊಂಡರು.
Kannada Bible