Bible

Mark 4 - BBE (Kannada)

1 And again he was teaching by the seaside. And a very great number of people had come to him, so that he got into a boat on the sea and took his seat; and all the people were on the land by the seaside.ಆತನು ತಿರಿಗಿ ಸಮುದ್ರದ ಬಳಿಯಲ್ಲಿ ಬೋಧಿಸಲಾರಂಭಿಸಿದನು; ಮತ್ತು ಜನರ ದೊಡ್ಡ ಸಮೂಹವು ಆತನ ಬಳಿಗೆ ಕೂಡಿಬಂದದ್ದ ರಿಂದ ಆತನು ಸಮುದ್ರದಲ್ಲಿದ್ದ ಒಂದು ದೋಣಿ ಯನ್ನು ಹತ್ತಿ ಕೂತುಕೊಂಡನು; ಆಗ ಜನ ಸಮೂಹವೆಲ್ಲಾ ಸಮುದ್ರದ ಬಳಿಯಲ್ಲಿ ನೆಲದ ಮೇಲೆ ಇದ್ದರು.

2 And he gave them teaching about a number of things in the form of stories, and said to them in his teaching, Give ear:ಆತನು ಸಾಮ್ಯಗಳಲ್ಲಿ ಅವರಿಗೆ ಅನೇಕ ವಿಷಯಗಳನ್ನು ಕಲಿಸಿ ತನ್ನ ಬೋಧನೆ ಯಲ್ಲಿ ಅವರಿಗೆ ಹೇಳಿದ್ದೇನಂದರೆ--

3 A man went out to put seed in the earth:ಕೇಳಿರಿ, ಇಗೋ, ಬಿತ್ತುವವನು ಬಿತ್ತುವದಕ್ಕೆ ಹೊರಟುಹೋದನು.

4 And while he was doing it, some was dropped by the wayside, and the birds came and took it for food.ಅವನು ಬಿತ್ತಿದಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು. ಆಗ ಆಕಾಶದ ಪಕ್ಷಿಗಳು ಬಂದು ಅವುಗಳನ್ನು ನುಂಗಿಬಿಟ್ಟವು.

5 And some went on the stones, where it had not much earth; and it came up straight away, because the earth was not deep:ಇನ್ನು ಕೆಲವು ಹೆಚ್ಚು ಮಣ್ಣಿಲ್ಲದ ಬಂಡೆಯ ನೆಲದ ಮೇಲೆ ಬಿದ್ದವು; ಅದಕ್ಕೆ ಆಳವಾದ ಮಣ್ಣು ಇಲ್ಲದ್ದರಿಂದ ಅವು ಕೂಡಲೆ ಮೊಳೆತವು;

6 And when the sun was high, it was burned; and because it had no root, it became dry and dead.ಆದರೆ ಸೂರ್ಯನು ಮೇಲಕ್ಕೆ ಬಂದಾಗ ಅವು ಬಾಡಿಹೋಗಿ ಬೇರಿಲ್ಲದ ಕಾರಣ ಒಣಗಿಹೋದವು;

7 And some went among the thorns, and the thorns came up, and it had no room for growth and gave no fruit.ಮತ್ತೆ ಕೆಲವು ಮುಳ್ಳು ಗಳಲ್ಲಿ ಬಿದ್ದವು; ಆ ಮುಳ್ಳುಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟದ್ದರಿಂದ ಅವು ಫಲಕೊಡಲಿಲ್ಲ.

8 And some, falling on good earth, gave fruit, coming up and increasing, and giving thirty, sixty, and a hundred times as much.ಕೆಲವು ಒಳ್ಳೇ ನೆಲದ ಮೇಲೆ ಬಿದ್ದು ಮೊಳೆತು ಬೆಳೆಯುತಾ ಕೆಲವು ಮೂವತ್ತರಷ್ಟು, ಅರವತ್ತರಷ್ಟು, ಕೆಲವು ನೂರರಷ್ಟು ಫಲವನ್ನು ಕೊಟ್ಟವು.

9 And he said to them, Whoever has ears, let him give ear.ಆತನು ಅವರಿಗೆ ಹೇಳಿದ್ದೇನಂದರೆ--ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ ಅಂದನು.

10 And when he was by himself, those who were round him with the twelve put questions to him about the purpose of the stories.ಆತನು ಒಬ್ಬನೇ ಇದ್ದಾಗ ಆತನ ಸುತ್ತಲೂ ಇದ್ದವರು ಹನ್ನೆರಡು ಮಂದಿಯೊಂದಿಗೆ ಆ ಸಾಮ್ಯದ ವಿಷಯವಾಗಿ ಆತನನ್ನು ಕೇಳಿದರು.

11 And he said to them, To you is given the secret of the kingdom of God, but to those who are outside, all things are given in the form of stories;ಅದಕ್ಕೆ ಆತನು ಅವರಿಗೆ--ದೇವರ ರಾಜ್ಯದ ಮರ್ಮವನ್ನು ತಿಳಿದುಕೊಳ್ಳಲು ನಿಮಗೆ ಕೊಡಲ್ಪಟ್ಟಿದೆ. ಆದರೆ ಹೊರಗಿನವರಿಗೆ ಇವೆಲ್ಲವುಗಳು ಸಾಮ್ಯಗಳಿಂದ ಹೇಳಲ್ಪಡುತ್ತವೆ.

12 So that seeing they may see, and it will not be clear to them; and hearing it, they will not get the sense; for fear that they may be turned again to me and have forgiveness.ಯಾಕಂದರೆ ಅವರು ದೃಷ್ಟಿಯಿ ದ್ದರೂ ನೋಡಿ ತಿಳುಕೊಳ್ಳದಂತೆ ಕೇಳಿದರೂ ಕೇಳಿ ಗ್ರಹಿಸದಂತೆ ಮತ್ತು ಅವರು ತಿರುಗಿಕೊಂಡು ತಮ್ಮ ಪಾಪಗಳಿಂದ ಕ್ಷಮಿಸಲ್ಪಡದಂತೆ ಆಗುವದು.

13 And he said to them, If you are not clear about this story, how will you be clear about the others?ಮತ್ತು ಆತನು ಅವರಿಗೆ--ಈ ಸಾಮ್ಯವು ನಿಮಗೆ ತಿಳಿಯ ಲಿಲ್ಲವೋ? ಹಾಗಾದರೆ ಎಲ್ಲಾ ಸಾಮ್ಯಗಳನ್ನು ನೀವು ಹೇಗೆ ತಿಳಿದುಕೊಳ್ಳುವಿರಿ?

14 The seed is the word.ಬಿತ್ತುವವನು ವಾಕ್ಯವನ್ನು ಬಿತ್ತುತ್ತಾನೆ.

15 And these are they by the wayside, where the word is planted; and when they have given ear, the Evil One comes straight away and takes away the word which has been planted in them.ದಾರಿಯ ಮಗ್ಗುಲಲ್ಲಿ ವಾಕ್ಯವು ಬಿತ್ತಲ್ಪಟ್ಟವರು ಇವರೇ; ಆದರೆ ಇವರು ಕೇಳಿದಾಗ ಸೈತಾನನು ಕೂಡಲೆ ಬಂದು ಅವರ ಹೃದಯಗಳಲ್ಲಿ ಬಿತ್ತಲ್ಪಟ್ಟಿದ್ದ ವಾಕ್ಯವನ್ನು ತೆಗೆದು ಬಿಡುತ್ತಾನೆ.

16 And in the same way, these are they who are planted on the stones, who, when the word has come to their ears, straight away take it with joy;ಅದೇ ಪ್ರಕಾರ ಬಂಡೆಯ ನೆಲದ ಮೇಲೆ ಬಿತ್ತಲ್ಪಟ್ಟವರು ವಾಕ್ಯವನ್ನು ಕೇಳಿದಾಗ ಕೂಡಲೆ ಅದನ್ನು ಸಂತೋಷದಿಂದ ಅಂಗೀಕರಿಸಿ

17 And they have no root in themselves, but go on for a time; then, when trouble comes or pain, because of the word, they quickly become full of doubts.ತಮ್ಮಲ್ಲಿ ಬೇರು ಇಲ್ಲದ ಕಾರಣ ಸ್ವಲ್ಪ ಕಾಲ ಮಾತ್ರ ಇರುವಂಥವರಾಗಿದ್ದಾರೆ; ತರುವಾಯ ವಾಕ್ಯದ ನಿಮಿತ್ತ ಉಪದ್ರವವಾಗಲೀ ಹಿಂಸೆಯಾಗಲೀ ಬಂದಾಗ ಕೂಡಲೆ ಅವರು ಅಭ್ಯಂತರಪಡುತ್ತಾರೆ.

18 And others are those planted among the thorns; these are they who have given ear to the word,ಮುಳ್ಳು ಗಿಡಗಳಲ್ಲಿ ಬಿತ್ತಲ್ಪಟ್ಟವರು ಇವರೇ; ಇಂಥವರು ವಾಕ್ಯವನ್ನು ಕೇಳಿದಾಗ

19 And the cares of this life, and the deceits of wealth, and the desire for other things coming in, put a stop to the growth of the word, and it gives no fruit.ಈ ಲೋಕದ ಚಿಂತೆಗಳೂ ಐಶ್ವರ್ಯದ ಮೋಸವೂ ಇತರ ವಿಷಯಗಳ ಆಶೆಗಳೂ ಒಳಗೆ ಸೇರಿ ವಾಕ್ಯವನ್ನು ಅಡಗಿಸುವದರಿಂದ ಅದು ನಿಷ್ಫಲವಾಗುವದು.

20 And these are they who were planted on the good earth; such as give ear to the word, and take it into their hearts, and give fruit, thirty and sixty and a hundred times as much.ಒಳ್ಳೆಯ ಭೂಮಿಯ ಮೇಲೆ ಬಿತ್ತಲ್ಪಟ್ಟವರು ಇವರೇ; ಇಂಥವರು ವಾಕ್ಯವನ್ನು ಕೇಳಿ ಅಂಗೀಕರಿಸಿದ ಮೇಲೆ ಕೆಲವರು ಮೂವತ್ತರಷ್ಟು, ಕೆಲವರು ಅರವತ್ತರಷ್ಟು, ಕೆಲವರು ನೂರರಷ್ಟು ಫಲಕೊಡುತ್ತಾರೆ ಅಂದನು.

21 And he said to them, When the light comes in, do people put it under a vessel, or under the bed, and not on its table?ಆತನು ಅವರಿಗೆ--ದೀಪವನ್ನು ಕೊಳಗದೊಳ ಗಾಗಲೀ ಮಂಚದ ಕೇಳಗಾಗಲೀ ಇಡುವದಕ್ಕೆ ತರುವದುಂಟೋ? ದೀಪಸ್ತಂಭದ ಮೇಲೆ ಇಡುವದಕ್ಕೆ ಅಲ್ಲವೋ?

22 There is nothing covered which will not be seen openly, and nothing has been made secret which will not come to light.ಯಾಕಂದರೆ ಪ್ರಕಟವಾಗದಂತೆ ಅಡಗಿಸಲ್ಪಟ್ಟದ್ದು ಯಾವದೂ ಇಲ್ಲ; ಇಲ್ಲವೆ ರಹಸ್ಯವಾಗಿ ಇಡಲ್ಪಟ್ಟದ್ದು ಯಾವದೂ ಬಹಿರಂಗವಾಗಿ ಇರಲಾರದು.

23 If any man has ears, let him give ear.ಯಾವನಿಗಾದರೂ ಕೇಳುವದಕ್ಕೆ ಕಿವಿಗಳಿದ್ದರೆ ಅವನು ಕೇಳಲಿ ಅಂದನು.

24 And he said to them, Take care what you give ear to: in the same measure as you give you will get, and more will be given to you.ಆತನು ಅವರಿಗೆ--ನೀವು ಕೇಳುವದರಲ್ಲಿ ಎಚ್ಚರವಾಗಿರ್ರಿ; ನೀವು ಯಾವ ಅಳತೆಯಿಂದ ಅಳೆಯುತ್ತೀರೋ ಅದು ನಿಮಗೂ ಅಳೆಯಲ್ಪಡುವದು; ಮತ್ತು ಕೇಳುವವ ರಾದ ನಿಮಗೆ ಹೆಚ್ಚಾಗಿ ಕೊಡಲ್ಪಡುವದು.

25 He who has, to him will be given: and he who has not, from him will be taken even that which he has.ಯಾಕಂ ದರೆ ಯಾವನಿಗೆ ಇದೆಯೋ ಅವನಿಗೆ ಕೊಡಲ್ಪಡುವದು; ಯಾವನಿಗೆ ಇಲ್ಲವೋ ಅವನಿಗೆ ಇದ್ದದ್ದೂ ಅವನಿಂದ ತೆಗೆಯಲ್ಪಡುವದು ಎಂದು ಹೇಳಿದನು.

26 And he said, Such is the kingdom of God, as if a man put seed in the earth,ಆತನು ಹೇಳಿದ್ದೇನಂದರೆ--ಒಬ್ಬ ಮನುಷ್ಯನು ಬೀಜವನ್ನು ಭೂಮಿಯಲ್ಲಿ ಹಾಕಿದಂತೆಯೇ ದೇವರ ರಾಜ್ಯವು ಇದೆ.

27 And went to sleep and got up, night and day, and the seed came to growth, though he had no idea how.ಅವನು ರಾತ್ರಿ ಮಲಗುತ್ತಾ ಹಗಲು ಏಳುತ್ತಾ ಇರುವಾಗ ಹೇಗೆ ಆ ಬೀಜವು ಮೊಳೆತು ಬೆಳೆಯುವದೆಂದು ಅವನಿಗೆ ಗೊತ್ತಾಗುವದಿಲ್ಲವೋ ಹಾಗೆಯೇ ಇರುವದು.

28 The earth gives fruit by herself; first the leaf, then the head, then the full grain.ಯಾಕಂದರೆ ಭೂಮಿಯು ಮೊದಲು ಮೊಳಕೆಯನ್ನು ಆಮೇಲೆ ತೆನೆಯನ್ನು ಇದಾದ ಮೇಲೆ ತೆನೆಯಲ್ಲಿ ಪೂರ್ಣಕಾಳನ್ನು ತನ್ನಷ್ಟಕ್ಕೆ ತಾನೇ ಫಲಿಸುತ್ತದೆ.

29 But when the grain is ready, he quickly sends men to get it cut, because the time for cutting has come.ಆದರೆ ಫಲವು ಫಲಿಸಿದಾಗ ಸುಗ್ಗಿಯು ಬಂದದರಿಂದ ಅವನು ಕೂಡಲೆ ಕುಡು ಗೋಲು ಹಾಕಿ ಕೊಯ್ಯುತ್ತಾನೆ.

30 And he said, What picture may we give of the kingdom of God, or with what story may we make it clear?ಆತನು--ದೇವರ ರಾಜ್ಯವನ್ನು ನಾವು ಯಾವ ದಕ್ಕೆ ಹೋಲಿಸೋಣ? ಇಲ್ಲವೆ ಯಾವ ಹೋಲಿಕೆಗೆ ಅದನ್ನು ಹೋಲಿಸೋಣ?

31 It is like a grain of mustard seed, which, when it is put in the earth, is smaller than all the seeds on the earth,ಭೂಮಿಯಲ್ಲಿರುವ ಎಲ್ಲಾ ಬೀಜಗಳಿಗಿಂತ ಚಿಕ್ಕದಾಗಿರುವ ಸಾಸಿವೆ ಕಾಳು ಭೂಮಿಯಲ್ಲಿ ಬಿತ್ತಲ್ಪಟ್ಟದ್ದಕ್ಕೆ ಅದು ಹೋಲಿಕೆ ಯಾಗಿದೆ.

32 But when it is planted, it comes up, and becomes taller than all the plants, and puts out great branches, so that the birds of heaven are able to take rest in its shade.ಆದರೆ ಅದು ಬಿತ್ತಲ್ಪಟ್ಟ ಮೇಲೆ ಬೆಳೆದು ಆಕಾಶದ ಪಕ್ಷಿಗಳು ಅದರ ನೆರಳಿನಲ್ಲಿ ವಾಸ ಮಾಡು ವಷ್ಟು ಎಲ್ಲಾ ಸಸ್ಯಗಳಿಗಿಂತ ದೊಡ್ಡದಾಗಿ ದೊಡ್ಡ ಕೊಂಬೆಗಳನ್ನು ಬಿಡುತ್ತದೆ ಎಂದು ಹೇಳಿದನು.

33 And with a number of such stories he gave them his teaching, as they were able to take it:ಅವರು ಕೇಳಿಸಿಕೊಳ್ಳಲು ಸಾಧ್ಯವಾಗುವಷ್ಟು ಇಂಥ ಅನೇಕ ಸಾಮ್ಯಗಳಿಂದ ಆತನು ಅವರಿಗೆ ವಾಕ್ಯವನ್ನು ಹೇಳಿದನು.

34 And without a story he said nothing to them: but privately to his disciples he made all things clear.ಸಾಮ್ಯವಿಲ್ಲದೆ ಅವರೊಂ ದಿಗೆ ಮಾತನಾಡಲಿಲ್ಲ; ಆದರೆ ಅವರು ಏಕಾಂತದ ಲ್ಲಿದ್ದಾಗ ಆತನು ಎಲ್ಲಾ ವಿಷಯಗಳನ್ನು ತನ್ನ ಶಿಷ್ಯರಿಗೆ ವಿವರಿಸಿದನು.

35 And on that day, when the evening had come, he said to them, Let us go over to the other side.ಅದೇ ದಿವಸ ಸಾಯಂಕಾಲವಾದಾಗ ಆತನು ಅವರಿಗೆ--ನಾವು ಆಚೇದಡಕ್ಕೆ ಹೋಗೋಣ ಅಂದನು.

36 And going away from the people, they took him with them, as he was, in the boat. And other boats were with him.ಅವರು ಆ ಜನಸಮೂಹವನ್ನು ಕಳುಹಿ ಸಿದ ಮೇಲೆ ಆತನು ದೋಣಿಯಲ್ಲಿ ಇದ್ದ ಹಾಗೆಯೇ ಅವರು ಆತನನ್ನು ಕರೆದುಕೊಂಡು ಹೋದರು; ಆತನೊಂದಿಗೆ ಬೇರೆ ಚಿಕ್ಕದೋಣಿಗಳೂ ಇದ್ದವು.

37 And a great storm of wind came up, and the waves came into the boat, so that the boat was now becoming full.ಆಗ ಅಲ್ಲಿ ದೊಡ್ಡ ಬಿರುಗಾಳಿಯಿಂದ ತುಫಾನು ಎದ್ದು ತೆರೆಗಳು ದೋಣಿಯೊಳಕ್ಕೆ ಬಡಿದದ್ದರಿಂದ ಅದು ತುಂಬಿಕೊಂಡಿತು.

38 And he himself was in the back of the boat, sleeping on the cushion: and they, awaking him, said, Master, is it nothing to you that we are in danger of destruction?ಆದರೆ ಆತನು ದೋಣಿಯ ಹಿಂಭಾಗದಲ್ಲಿ ತಲೆದಿಂಬಿನ ಮೇಲೆ ನಿದ್ರಿಸುತ್ತಿದ್ದನು. ಆಗ ಅವರು ಆತನನ್ನು ಎಬ್ಬಿಸಿ ಆತನಿಗೆ--ಒಡೆಯನೇ, ನಾವು ನಾಶವಾಗುತ್ತೇವೆಂದು ನಿನಗೆ ಚಿಂತೆಯಿಲ್ಲವೋ ಅಂದರು.

39 And he came out of his sleep, and gave strong orders to the wind, and said to the sea, Peace, be at rest. And the wind went down, and there was a great calm.ಆಗ ಆತನು ಎದ್ದು ಗಾಳಿಯನ್ನು ಗದರಿಸಿ ಸಮುದ್ರಕ್ಕೆ--ಶಾಂತವಾಗಿ ಮೌನವಾಗಿರು ಎಂದು ಹೇಳಿದನು. ಆಗ ಗಾಳಿಯು ನಿಂತು ಅಲ್ಲಿ ದೊಡ್ಡ ಶಾಂತತೆ ಉಂಟಾಯಿತು.

40 And he said to them, Why are you full of fear? have you still no faith?ಮತ್ತು ಆತನು ಅವರಿಗೆ--ಯಾಕೆ ನೀವು ಇಷ್ಟೊಂದು ಭಯಭರಿತರಾಗಿದ್ದೀರಿ? ನಿಮಗೆ ನಂಬಿಕೆ ಇಲ್ಲದಿರುವದು ಹೇಗೆ ಅಂದನು.

41 And their fear was great, and they said one to another, Who then is this, that even the wind and the sea do his orders?ಆಗ ಅವರು ಇನ್ನಷ್ಟು ಭಯಪಟ್ಟವರಾಗಿ--ಈತನು ಎಂಥ ಮನುಷ್ಯನಾಗಿರಬಹುದು? ಗಾಳಿಯೂ ಸಮುದ್ರವೂ ಈತನಿಗೆ ವಿಧೇಯವಾಗುತ್ತವಲ್ಲಾ ! ಎಂದು ಒಬ್ಬರಿ ಗೊಬ್ಬರು ಮಾತನಾಡಿಕೊಂಡರು.

Kannada Bible