Mark 3 - WEB (Kannada)
1 He entered again into the synagogue, and there was a man there who had his hand withered.ಆತನು ತಿರಿಗಿ ಸಭಾಮಂದಿರದಲ್ಲಿ ಪ್ರವೇಶಿಸಿದಾಗ ಅಲ್ಲಿ ಕೈ ಬತ್ತಿದವನಾದ ಒಬ್ಬ ಮನುಷ್ಯನಿದ್ದನು.
2 They watched him, whether he would heal him on the Sabbath day, that they might accuse him.ಅವರು ಆತನ ಮೇಲೆ ತಪ್ಪು ಹೊರಿಸಬೇಕೆಂದು ಸಬ್ಬತ್ ದಿನದಲ್ಲಿ ಆತನು ಅವನನ್ನು ಸ್ವಸ್ಥ ಮಾಡುವನೇನೋ ಎಂದು ಕಾಯು ತ್ತಿದ್ದರು.
3 He said to the man who had his hand withered, "Stand up."ಆತನು ಕೈಬತ್ತಿದ ಮನುಷ್ಯನಿಗೆ--ಎದ್ದು ನಿಂತುಕೋ ಎಂದು ಹೇಳಿದನು.
4 He said to them, "Is it lawful on the Sabbath day to do good, or to do harm? To save a life, or to kill?" But they were silent.ಆತನು ಅವರಿಗೆ --ಸಬ್ಬತ್ ದಿವಸಗಳಲ್ಲಿ ಒಳ್ಳೇದನ್ನು ಮಾಡುವದು ನ್ಯಾಯವೋ ಇಲ್ಲವೆ ಕೆಟ್ಟದ್ದನ್ನು ಮಾಡುವದು ನ್ಯಾಯವೋ? ಪ್ರಾಣವನ್ನು ಉಳಿಸುವದೋ ಇಲ್ಲವೆ ಕೊಲ್ಲುವದೋ ಎಂದು ಕೇಳಿದನು; ಆದರೆ ಅವರು ಸುಮ್ಮನಿದ್ದರು.
5 When he had looked around at them with anger, being grieved at the hardening of their hearts, he said to the man, "Stretch out your hand." He stretched it out, and his hand was restored as healthy as the other.ಆಗ ಆತನು ಅವರ ಹೃದಯಗಳ ಕಾಠಿಣ್ಯತೆಗಾಗಿ ದುಃಖಪಟ್ಟು ಸುತ್ತಲೂ ಕೋಪದಿಂದ ಅವರನ್ನು ನೋಡಿ ಆ ಮನುಷ್ಯನಿಗೆ--ನಿನ್ನ ಕೈಚಾಚು ಎಂದು ಹೇಳಿದನು. ಅವನು ಚಾಚಿದಾಗ ಅವನ ಕೈಗುಣವಾಗಿ ಮತ್ತೊಂದರ ಹಾಗಾಯಿತು.
6 The Pharisees went out, and immediately conspired with the Herodians against him, how they might destroy him.ಫರಿಸಾ ಯರು ಹೊರಟುಹೋಗಿ ಕೂಡಲೆ ತಾವು ಆತನನ್ನು ಹೇಗೆ ಕೊಲ್ಲಬೇಕೆಂದು ಆತನಿಗೆ ವಿರೋಧ ವಾಗಿ ಹೆರೋದ್ಯರೊಂದಿಗೆ ಆಲೋಚನೆ ಮಾಡಿಕೊಂಡರು.
7 Jesus withdrew to the sea with his disciples, and a great multitude followed him from Galilee, from Judea,ಆದರೆ ಯೇಸು ತನ್ನ ಶಿಷ್ಯರೊಂದಿಗೆ ಸಮುದ್ರದ ಕಡೆಗೆ ಹಿಂದಿರುಗಿದನು; ಆಗ ಗಲಿಲಾಯದಿಂದಲೂ ಯೂದಾಯದಿಂದಲೂ
8 from Jerusalem, from Idumaea, beyond the Jordan, and those from around Tyre and Sidon. A great multitude, hearing what great things he did, came to him.ಯೆರೂಸಲೇಮಿನಿಂದಲೂ ಇದೂಮಾಯದಿಂದಲೂ ಯೊರ್ದನಿನ ಆಚೆಯಿಂ ದಲೂ ಜನರು ದೊಡ್ಡ ಸಮೂಹವಾಗಿ ಆತನನ್ನು ಹಿಂಬಾಲಿಸಿದರು. ಆತನು ಮಾಡಿದ ಮಹತ್ಕಾರ್ಯ ಗಳನ್ನು ಕೇಳಿ ತೂರ್ ಸೀದೋನ್ ಸುತ್ತಲಿನ ಜನರು ದೊಡ್ಡ ಸಮೂಹವಾಗಿ ಆತನ ಬಳಿಗೆ ಬಂದರು.
9 He spoke to his disciples that a little boat should stay near him because of the crowd, so that they wouldn't press on him.ಸಮೂಹವು ತನ್ನನ್ನು ನೂಕದಂತೆ ತನಗೋಸ್ಕರ ಒಂದು ಚಿಕ್ಕ ದೋಣಿಯು ಸಿದ್ಧವಿರ ಬೇಕೆಂದು ಆತನು ತನ್ನ ಶಿಷ್ಯರಿಗೆ ಹೇಳಿದನು.
10 For he had healed many, so that as many as had diseases pressed on him that they might touch him.ಯಾಕಂದರೆ ಆತನು ಅನೇಕರನ್ನು ಸ್ವಸ್ಥಮಾಡಿದ್ದರಿಂದ ರೋಗಪೀಡಿತರಾಗಿದ್ದವರೆಲ್ಲರು ಆತನನ್ನು ಮುಟ್ಟಬೇ ಕೆಂದು ಆತನ ಮೇಲೆ ಬೀಳುತ್ತಿದ್ದರು.
11 The unclean spirits, whenever they saw him, fell down before him, and cried, "You are the Son of God!"ಅಶುದ್ಧಾತ್ಮಗಳು ಆತನನ್ನು ಕಂಡಾಗ ಆತನ ಮುಂದೆ ಬಿದ್ದು--ನೀನು ದೇವಕುಮಾರನು ಎಂದು ಕೂಗಿ ಹೇಳಿದವು.
12 He sternly warned them that they should not make him known.ಆದರೆ ಆತನು ತನ್ನನ್ನು ಯಾರಿಗೂ ತಿಳಿಯಪಡಿಸಬಾರದೆಂದು ಅವರಿಗೆ ನೇರವಾಗಿ ಆಜ್ಞಾಪಿಸಿದನು.
13 He went up into the mountain, and called to himself those whom he wanted, and they went to him.ತರುವಾಯ ಆತನು ಬೆಟ್ಟದ ಮೇಲೆ ಹೋಗಿ ತನಗೆ ಬೇಕಾದವರನ್ನು ಕರೆಯಲು ಅವರು ಆತನ ಬಳಿಗೆ ಬಂದರು.
14 He appointed twelve, that they might be with him, and that he might send them out to preach,ಆತನು ಹನ್ನೆರಡು ಮಂದಿಯನ್ನು ತನ್ನೊಂದಿಗೆ ಇರುವದಕ್ಕೂ (ಸುವಾರ್ತೆ) ಸಾರುವದ ಕ್ಕಾಗಿ ತಾನು ಅವರನ್ನು ಕಳುಹಿಸುವದಕ್ಕೂ
15 and to have authority to heal sicknesses and to cast out demons:ವ್ಯಾಧಿ ಗಳನ್ನು ಸ್ವಸ್ಥಮಾಡುವದಕ್ಕೂ ದೆವ್ವಗಳನ್ನು ಬಿಡಿಸು ವದಕ್ಕೂ ನೇಮಿಸಿ ಅವರಿಗೆ ಅಧಿಕಾರ ಕೊಟ್ಟನು.
16 Simon, to whom he gave the name Peter;ಆತನು ಸೀಮೋನನಿಗೆ ಪೇತ್ರನೆಂದು ಹೆಸರಿಟ್ಟನು.
17 James the son of Zebedee; John, the brother of James, and he surnamed them Boanerges, which means, Sons of Thunder;ಮತ್ತು ಜೆಬೆದಾಯನ ಮಗನಾದ ಯಾಕೋಬ ನಿಗೂ ಯಾಕೋಬನ ಸಹೋದರನಾದ ಯೋಹಾನ ನಿಗೂ ಬೊವನೆರ್ಗೆಸ್ ಎಂದು ಹೆಸರಿಟ್ಟನು ಅಂದರೆ ಗುಡುಗಿನ ಪುತ್ರರು ಎಂದರ್ಥ.
18 Andrew; Philip; Bartholomew; Matthew; Thomas; James, the son of Alphaeus; Thaddaeus; Simon the Zealot;ಮತ್ತು ಅಂದ್ರೆಯ, ಫಿಲಿಪ್ಪ, ಬಾರ್ತೂಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗನಾದ ಯಾಕೋಬ, ತದ್ದಾಯ, ಕಾನಾನ್ಯನಾದ ಸೀಮೋನ,
19 and Judas Iscariot, who also betrayed him. He came into a house.ಆತನನ್ನು ಹಿಡು ಕೊಡಲಿಕ್ಕಿದ್ದ ಯೂದ ಇಸ್ಕರಿ ಯೋತ್ ಎಂಬವರೇ. ಮತ್ತು ಅವರು ಒಂದು ಮನೆಯೊಳಕ್ಕೆ ಹೋದರು.
20 The multitude came together again, so that they could not so much as eat bread.ಜನಸಮೂಹವು ಅಲ್ಲಿ ತಿರಿಗಿ ಕೂಡಿಬಂದದ್ದ ರಿಂದ ಅವರು ರೊಟ್ಟಿ ತಿನ್ನುವದಕ್ಕೂ ಆಗದೆ ಹೋಯಿತು.
21 When his friends heard it, they went out to seize him: for they said, "He is insane."ಆತನ ಸ್ನೇಹಿತರು ಇದನ್ನು ಕೇಳಿ ದಾಗ ಆತನನ್ನು ಹಿಡಿಯುವದಕ್ಕಾಗಿ ಹೊರಟರು. ಯಾಕಂದರೆ ಅವರು--ಈತನಿಗೆ ಹುಚ್ಚು ಹಿಡಿದದೆ ಎಂದು ಅಂದರು.
22 The scribes who came down from Jerusalem said, "He has Beelzebul," and, "By the prince of the demons he casts out the demons."ಇದಲ್ಲದೆ ಯೆರೂಸಲೇಮಿ ನಿಂದ ಬಂದ ಶಾಸ್ತ್ರಿಗಳು--ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆ ಮತ್ತು ಇವನು ದೆವ್ವಗಳ ಅಧಿಪತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ ಅಂದರು.
23 He summoned them, and said to them in parables, "How can Satan cast out Satan?ಆತನು ಅವರನ್ನು ತನ್ನ ಹತ್ತಿರಕ್ಕೆ ಕರೆದು ಸಾಮ್ಯಗಳಲ್ಲಿ ಅವರಿಗೆ--ಸೈತಾನನು ಸೈತಾನನನ್ನು ಹೊರಗೆ ಹಾಕು ವದು ಹೇಗೆ?
24 If a kingdom is divided against itself, that kingdom cannot stand.ಒಂದು ರಾಜ್ಯವು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಆ ರಾಜ್ಯವು ನಿಲ್ಲಲಾರದು.
25 If a house is divided against itself, that house cannot stand.ಇದ ಲ್ಲದೆ ಒಂದು ಮನೆಯು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಆ ಮನೆಯು ನಿಲ್ಲಲಾರದು.
26 If Satan has risen up against himself, and is divided, he can't stand, but has an end.ಸೈತಾನನು ತನಗೆ ತಾನೇ ವಿರೋಧವಾಗಿ ಎದ್ದು ವಿಭಾಗಿಸಲ್ಪಟ್ಟರೆ ಅವನು ನಿಲ್ಲಲಾರದೆ ಅಂತ್ಯಗೊಳ್ಳುವನು.
27 But no one can enter into the house of the strong man to plunder, unless he first binds the strong man; and then he will plunder his house.ಇದಲ್ಲದೆ ಒಬ್ಬ ಮನುಷ್ಯನು ಮೊದಲು ಬಲಿಷ್ಠನನ್ನು ಕಟ್ಟದ ಹೊರತು ಅವನ ಮನೆಯೊಳಕ್ಕೆ ಪ್ರವೇಶಿಸಿ ಅವನ ಸೊತ್ತನ್ನು ಸುಲುಕೊಳ್ಳಲಾರನು; ಕಟ್ಟಿದ ಮೇಲೆ ಅವನ ಮನೆಯನ್ನು ಸುಲುಕೊಳ್ಳುವನು ಅಂದನು.
28 Most assuredly I tell you, all of the children of men's sins will be forgiven them, including their blasphemies with which they may blaspheme;ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ಎಲ್ಲಾ ಪಾಪಗಳೂ ದೇವದೂಷಣೆಗಳೂ ಮನುಷ್ಯ ಪುತ್ರರಿಗೆ ಕ್ಷಮಿಸಲ್ಪ ಡುವವು;
29 but whoever may blaspheme against the Holy Spirit never has forgiveness, but is guilty of an eternal sin"ಆದರೆ ಯಾವನು ಪವಿತ್ರಾತ್ಮನಿಗೆ ವಿರೋಧವಾಗಿ ದೂಷಣೆ ಮಾಡುವನೋ ಅವನಿಗೆ ಎಂದಿಗೂ ಕ್ಷಮಾಪಣೆ ಇಲ್ಲ; ಆದರೆ ಅವನು ನಿತ್ಯವಾದ ದಂಡನೆಯ ಅಪಾಯಕ್ಕೆ ಒಳಗಾಗುವನು ಅಂದನು.
30 -- because they said, "He has an unclean spirit."ಯಾಕಂದರೆ ಅವರು--ಇವನಿಗೆ ಅಶುದ್ಧಾತ್ಮವಿದೆ ಎಂದು ಹೇಳಿದರು.
31 His mother and his brothers came, and standing outside, they sent to him, calling him.ತರುವಾಯ ಆತನ ಸಹೋದರರೂ ತಾಯಿಯೂ ಅಲ್ಲಿಗೆ ಬಂದು ಹೊರಗೆ ನಿಂತುಕೊಂಡು ಆತನನ್ನು ಕರೇಕಳುಹಿಸಿದರು.
32 A multitude was sitting around him, and they told him, "Behold, your mother, your brothers, and your sisters{TR omits "your sisters"} are outside looking for you."ಜನಸಮೂಹವು ಆತನ ಸುತ್ತಲೂ ಕೂತುಕೊಂಡು ಆತನಿಗೆ--ಇಗೋ, ಹೊರಗೆ ನಿನ್ನ ತಾಯಿಯೂ ನಿನ್ನ ಸಹೋದರರೂ ನಿನ್ನನ್ನು ಹುಡುಕುತ್ತಿದ್ದಾರೆ ಎಂದು ಹೇಳಿದರು.
33 He answered them, "Who are my mother and my brothers?"ಆತನು ಪ್ರತ್ಯುತ್ತರವಾಗಿ ಅವರಿಗೆ--ನನ್ನ ತಾಯಿ ಇಲ್ಲವೆ ನನ್ನ ಸಹೋದರರು ಯಾರು ಎಂದು ಹೇಳಿ
34 Looking around at those who sat around him, he said, "Behold, my mother and my brothers!ತನ್ನ ಸುತ್ತಲೂ ಕೂತಿದ್ದವರನ್ನು ನೋಡಿ--ಇಗೋ, ನನ್ನ ತಾಯಿ ಮತ್ತು ನನ್ನ ಸಹೋದರರು!
35 For whoever does the will of God, the same is my brother, and my sister, and mother."ಯಾಕಂದರೆ ಯಾವನು ದೇವರ ಚಿತ್ತದಂತೆ ಮಾಡುವನೋ ಅವನೇ ನನ್ನ ಸಹೋದರನೂ ನನ್ನ ಸಹೋದರಿಯೂ ನನ್ನ ತಾಯಿಯೂ ಆಗಿದ್ದಾರೆ ಅಂದನು.
Kannada Bible