Mark 3 - BBE (Kannada)
1 And he went again into the Synagogue; and there was a man there whose hand was dead.ಆತನು ತಿರಿಗಿ ಸಭಾಮಂದಿರದಲ್ಲಿ ಪ್ರವೇಶಿಸಿದಾಗ ಅಲ್ಲಿ ಕೈ ಬತ್ತಿದವನಾದ ಒಬ್ಬ ಮನುಷ್ಯನಿದ್ದನು.
2 And they were watching him to see if he would make him well on the Sabbath day, so that they might have something against him.ಅವರು ಆತನ ಮೇಲೆ ತಪ್ಪು ಹೊರಿಸಬೇಕೆಂದು ಸಬ್ಬತ್ ದಿನದಲ್ಲಿ ಆತನು ಅವನನ್ನು ಸ್ವಸ್ಥ ಮಾಡುವನೇನೋ ಎಂದು ಕಾಯು ತ್ತಿದ್ದರು.
3 And he said to the man, Get up and come forward.ಆತನು ಕೈಬತ್ತಿದ ಮನುಷ್ಯನಿಗೆ--ಎದ್ದು ನಿಂತುಕೋ ಎಂದು ಹೇಳಿದನು.
4 And he said to them, Is it right to do good on the Sabbath or to do evil? to give life or to put to death? But they said nothing.ಆತನು ಅವರಿಗೆ --ಸಬ್ಬತ್ ದಿವಸಗಳಲ್ಲಿ ಒಳ್ಳೇದನ್ನು ಮಾಡುವದು ನ್ಯಾಯವೋ ಇಲ್ಲವೆ ಕೆಟ್ಟದ್ದನ್ನು ಮಾಡುವದು ನ್ಯಾಯವೋ? ಪ್ರಾಣವನ್ನು ಉಳಿಸುವದೋ ಇಲ್ಲವೆ ಕೊಲ್ಲುವದೋ ಎಂದು ಕೇಳಿದನು; ಆದರೆ ಅವರು ಸುಮ್ಮನಿದ್ದರು.
5 And looking round on them he was angry, being sad because of their hard hearts; and he said to the man, Put out your hand. And he put it out, and his hand was made well.ಆಗ ಆತನು ಅವರ ಹೃದಯಗಳ ಕಾಠಿಣ್ಯತೆಗಾಗಿ ದುಃಖಪಟ್ಟು ಸುತ್ತಲೂ ಕೋಪದಿಂದ ಅವರನ್ನು ನೋಡಿ ಆ ಮನುಷ್ಯನಿಗೆ--ನಿನ್ನ ಕೈಚಾಚು ಎಂದು ಹೇಳಿದನು. ಅವನು ಚಾಚಿದಾಗ ಅವನ ಕೈಗುಣವಾಗಿ ಮತ್ತೊಂದರ ಹಾಗಾಯಿತು.
6 And the Pharisees went out, and straight away made designs with the Herodians about how they might put him to death.ಫರಿಸಾ ಯರು ಹೊರಟುಹೋಗಿ ಕೂಡಲೆ ತಾವು ಆತನನ್ನು ಹೇಗೆ ಕೊಲ್ಲಬೇಕೆಂದು ಆತನಿಗೆ ವಿರೋಧ ವಾಗಿ ಹೆರೋದ್ಯರೊಂದಿಗೆ ಆಲೋಚನೆ ಮಾಡಿಕೊಂಡರು.
7 And Jesus went away with his disciples to the sea, and a great number from Galilee came after him: and from Judaea,ಆದರೆ ಯೇಸು ತನ್ನ ಶಿಷ್ಯರೊಂದಿಗೆ ಸಮುದ್ರದ ಕಡೆಗೆ ಹಿಂದಿರುಗಿದನು; ಆಗ ಗಲಿಲಾಯದಿಂದಲೂ ಯೂದಾಯದಿಂದಲೂ
8 And from Jerusalem, and from Idumaea, and the other side of Jordan, and the country about Tyre and Sidon, a great number, hearing what great things he did, came to him.ಯೆರೂಸಲೇಮಿನಿಂದಲೂ ಇದೂಮಾಯದಿಂದಲೂ ಯೊರ್ದನಿನ ಆಚೆಯಿಂ ದಲೂ ಜನರು ದೊಡ್ಡ ಸಮೂಹವಾಗಿ ಆತನನ್ನು ಹಿಂಬಾಲಿಸಿದರು. ಆತನು ಮಾಡಿದ ಮಹತ್ಕಾರ್ಯ ಗಳನ್ನು ಕೇಳಿ ತೂರ್ ಸೀದೋನ್ ಸುತ್ತಲಿನ ಜನರು ದೊಡ್ಡ ಸಮೂಹವಾಗಿ ಆತನ ಬಳಿಗೆ ಬಂದರು.
9 And he made a request to his disciples to have a little boat ready for him, so that he might not be crushed by the people;ಸಮೂಹವು ತನ್ನನ್ನು ನೂಕದಂತೆ ತನಗೋಸ್ಕರ ಒಂದು ಚಿಕ್ಕ ದೋಣಿಯು ಸಿದ್ಧವಿರ ಬೇಕೆಂದು ಆತನು ತನ್ನ ಶಿಷ್ಯರಿಗೆ ಹೇಳಿದನು.
10 For he had made such a great number well that all those who were diseased were falling down before him for the purpose of touching him.ಯಾಕಂದರೆ ಆತನು ಅನೇಕರನ್ನು ಸ್ವಸ್ಥಮಾಡಿದ್ದರಿಂದ ರೋಗಪೀಡಿತರಾಗಿದ್ದವರೆಲ್ಲರು ಆತನನ್ನು ಮುಟ್ಟಬೇ ಕೆಂದು ಆತನ ಮೇಲೆ ಬೀಳುತ್ತಿದ್ದರು.
11 And the unclean spirits, whenever they saw him, went down before him, crying out, and saying, You are the Son of God.ಅಶುದ್ಧಾತ್ಮಗಳು ಆತನನ್ನು ಕಂಡಾಗ ಆತನ ಮುಂದೆ ಬಿದ್ದು--ನೀನು ದೇವಕುಮಾರನು ಎಂದು ಕೂಗಿ ಹೇಳಿದವು.
12 And he gave them special orders not to say who he was.ಆದರೆ ಆತನು ತನ್ನನ್ನು ಯಾರಿಗೂ ತಿಳಿಯಪಡಿಸಬಾರದೆಂದು ಅವರಿಗೆ ನೇರವಾಗಿ ಆಜ್ಞಾಪಿಸಿದನು.
13 And he went up into the mountain, and sent for those whom it was his pleasure to have with him: and they went to him.ತರುವಾಯ ಆತನು ಬೆಟ್ಟದ ಮೇಲೆ ಹೋಗಿ ತನಗೆ ಬೇಕಾದವರನ್ನು ಕರೆಯಲು ಅವರು ಆತನ ಬಳಿಗೆ ಬಂದರು.
14 And he took twelve to be with him, so that he might send them out as preachers,ಆತನು ಹನ್ನೆರಡು ಮಂದಿಯನ್ನು ತನ್ನೊಂದಿಗೆ ಇರುವದಕ್ಕೂ (ಸುವಾರ್ತೆ) ಸಾರುವದ ಕ್ಕಾಗಿ ತಾನು ಅವರನ್ನು ಕಳುಹಿಸುವದಕ್ಕೂ
15 And give them the power of driving out evil spirits:ವ್ಯಾಧಿ ಗಳನ್ನು ಸ್ವಸ್ಥಮಾಡುವದಕ್ಕೂ ದೆವ್ವಗಳನ್ನು ಬಿಡಿಸು ವದಕ್ಕೂ ನೇಮಿಸಿ ಅವರಿಗೆ ಅಧಿಕಾರ ಕೊಟ್ಟನು.
16 To Simon he gave the second name of Peter;ಆತನು ಸೀಮೋನನಿಗೆ ಪೇತ್ರನೆಂದು ಹೆಸರಿಟ್ಟನು.
17 And to James, the son of Zebedee, and John, the brother of James, he gave the second name of Boanerges, which is, Sons of thunder:ಮತ್ತು ಜೆಬೆದಾಯನ ಮಗನಾದ ಯಾಕೋಬ ನಿಗೂ ಯಾಕೋಬನ ಸಹೋದರನಾದ ಯೋಹಾನ ನಿಗೂ ಬೊವನೆರ್ಗೆಸ್ ಎಂದು ಹೆಸರಿಟ್ಟನು ಅಂದರೆ ಗುಡುಗಿನ ಪುತ್ರರು ಎಂದರ್ಥ.
18 And Andrew, and Philip, and Bartholomew, and Matthew, and Thomas, and James, the son of Alphaeus, and Thaddaeus, and Simon the Zealot;ಮತ್ತು ಅಂದ್ರೆಯ, ಫಿಲಿಪ್ಪ, ಬಾರ್ತೂಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗನಾದ ಯಾಕೋಬ, ತದ್ದಾಯ, ಕಾನಾನ್ಯನಾದ ಸೀಮೋನ,
19 And Judas Iscariot, who was false to him.ಆತನನ್ನು ಹಿಡು ಕೊಡಲಿಕ್ಕಿದ್ದ ಯೂದ ಇಸ್ಕರಿ ಯೋತ್ ಎಂಬವರೇ. ಮತ್ತು ಅವರು ಒಂದು ಮನೆಯೊಳಕ್ಕೆ ಹೋದರು.
20 And he went into a house. And the people came together again, so that they were not even able to take bread.ಜನಸಮೂಹವು ಅಲ್ಲಿ ತಿರಿಗಿ ಕೂಡಿಬಂದದ್ದ ರಿಂದ ಅವರು ರೊಟ್ಟಿ ತಿನ್ನುವದಕ್ಕೂ ಆಗದೆ ಹೋಯಿತು.
21 And when his friends had news of it, they went out to get him, saying, He is off his head.ಆತನ ಸ್ನೇಹಿತರು ಇದನ್ನು ಕೇಳಿ ದಾಗ ಆತನನ್ನು ಹಿಡಿಯುವದಕ್ಕಾಗಿ ಹೊರಟರು. ಯಾಕಂದರೆ ಅವರು--ಈತನಿಗೆ ಹುಚ್ಚು ಹಿಡಿದದೆ ಎಂದು ಅಂದರು.
22 And the scribes who came down from Jerusalem, said, He has Beelzebub, and, By the ruler of evil spirits he sends evil spirits out of men.ಇದಲ್ಲದೆ ಯೆರೂಸಲೇಮಿ ನಿಂದ ಬಂದ ಶಾಸ್ತ್ರಿಗಳು--ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆ ಮತ್ತು ಇವನು ದೆವ್ವಗಳ ಅಧಿಪತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ ಅಂದರು.
23 And turning to them, he said to them in the form of a story, How is it possible for Satan to put out Satan?ಆತನು ಅವರನ್ನು ತನ್ನ ಹತ್ತಿರಕ್ಕೆ ಕರೆದು ಸಾಮ್ಯಗಳಲ್ಲಿ ಅವರಿಗೆ--ಸೈತಾನನು ಸೈತಾನನನ್ನು ಹೊರಗೆ ಹಾಕು ವದು ಹೇಗೆ?
24 If there is division in a kingdom, that kingdom will come to destruction;ಒಂದು ರಾಜ್ಯವು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಆ ರಾಜ್ಯವು ನಿಲ್ಲಲಾರದು.
25 And if there is division in a house, that house will come to destruction;ಇದ ಲ್ಲದೆ ಒಂದು ಮನೆಯು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಆ ಮನೆಯು ನಿಲ್ಲಲಾರದು.
26 And if Satan is at war with himself, and there is division in him, he will not keep his place but will come to an end.ಸೈತಾನನು ತನಗೆ ತಾನೇ ವಿರೋಧವಾಗಿ ಎದ್ದು ವಿಭಾಗಿಸಲ್ಪಟ್ಟರೆ ಅವನು ನಿಲ್ಲಲಾರದೆ ಅಂತ್ಯಗೊಳ್ಳುವನು.
27 But no one is able to go into the house of the strong man and take his goods, without first putting cords round the strong man, and then he will take his goods.ಇದಲ್ಲದೆ ಒಬ್ಬ ಮನುಷ್ಯನು ಮೊದಲು ಬಲಿಷ್ಠನನ್ನು ಕಟ್ಟದ ಹೊರತು ಅವನ ಮನೆಯೊಳಕ್ಕೆ ಪ್ರವೇಶಿಸಿ ಅವನ ಸೊತ್ತನ್ನು ಸುಲುಕೊಳ್ಳಲಾರನು; ಕಟ್ಟಿದ ಮೇಲೆ ಅವನ ಮನೆಯನ್ನು ಸುಲುಕೊಳ್ಳುವನು ಅಂದನು.
28 Truly, I say to you, The sons of men will have forgiveness for all their sins and for all the evil words they say:ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ಎಲ್ಲಾ ಪಾಪಗಳೂ ದೇವದೂಷಣೆಗಳೂ ಮನುಷ್ಯ ಪುತ್ರರಿಗೆ ಕ್ಷಮಿಸಲ್ಪ ಡುವವು;
29 But whoever says evil things against the Holy Spirit will never have forgiveness, but the evil he has done will be with him for ever:ಆದರೆ ಯಾವನು ಪವಿತ್ರಾತ್ಮನಿಗೆ ವಿರೋಧವಾಗಿ ದೂಷಣೆ ಮಾಡುವನೋ ಅವನಿಗೆ ಎಂದಿಗೂ ಕ್ಷಮಾಪಣೆ ಇಲ್ಲ; ಆದರೆ ಅವನು ನಿತ್ಯವಾದ ದಂಡನೆಯ ಅಪಾಯಕ್ಕೆ ಒಳಗಾಗುವನು ಅಂದನು.
30 Because they said, He has an unclean spirit.ಯಾಕಂದರೆ ಅವರು--ಇವನಿಗೆ ಅಶುದ್ಧಾತ್ಮವಿದೆ ಎಂದು ಹೇಳಿದರು.
31 And his mother and brothers came and were outside, and sent for him, requesting to see him.ತರುವಾಯ ಆತನ ಸಹೋದರರೂ ತಾಯಿಯೂ ಅಲ್ಲಿಗೆ ಬಂದು ಹೊರಗೆ ನಿಂತುಕೊಂಡು ಆತನನ್ನು ಕರೇಕಳುಹಿಸಿದರು.
32 And a great number were seated round him; and they said to him, See, your mother and your brothers are outside looking for you.ಜನಸಮೂಹವು ಆತನ ಸುತ್ತಲೂ ಕೂತುಕೊಂಡು ಆತನಿಗೆ--ಇಗೋ, ಹೊರಗೆ ನಿನ್ನ ತಾಯಿಯೂ ನಿನ್ನ ಸಹೋದರರೂ ನಿನ್ನನ್ನು ಹುಡುಕುತ್ತಿದ್ದಾರೆ ಎಂದು ಹೇಳಿದರು.
33 And he said in answer, Who are my mother and my brothers?ಆತನು ಪ್ರತ್ಯುತ್ತರವಾಗಿ ಅವರಿಗೆ--ನನ್ನ ತಾಯಿ ಇಲ್ಲವೆ ನನ್ನ ಸಹೋದರರು ಯಾರು ಎಂದು ಹೇಳಿ
34 And looking round at those who were seated about him, he said, See, my mother and my brothers!ತನ್ನ ಸುತ್ತಲೂ ಕೂತಿದ್ದವರನ್ನು ನೋಡಿ--ಇಗೋ, ನನ್ನ ತಾಯಿ ಮತ್ತು ನನ್ನ ಸಹೋದರರು!
35 Whoever does God's pleasure, the same is my brother, and sister, and mother.ಯಾಕಂದರೆ ಯಾವನು ದೇವರ ಚಿತ್ತದಂತೆ ಮಾಡುವನೋ ಅವನೇ ನನ್ನ ಸಹೋದರನೂ ನನ್ನ ಸಹೋದರಿಯೂ ನನ್ನ ತಾಯಿಯೂ ಆಗಿದ್ದಾರೆ ಅಂದನು.
Kannada Bible