Mark 10:38
ಆದರೆ ಯೇಸು ಅವರಿಗೆ -- ನೀವು ಏನು ಬೇಡಿಕೊಳ್ಳುತ್ತೀರೋ ನಿಮಗೆ ತಿಳಿಯದು; ನಾನು ಕುಡಿಯುವ ಪಾತ್ರೆಯಲ್ಲಿ ನೀವು ಕುಡಿಯುವಿರೋ? ಮತ್ತು ನಾನು ಹೊಂದುವ ಬಾಪ್ತಿಸ್ಮವನ್ನು ನೀವು ಹೊಂದುವಿರೋ ಅಂದನು.
ὁ | ho | oh | |
But | δὲ | de | thay |
Jesus | Ἰησοῦς | iēsous | ee-ay-SOOS |
said | εἶπεν | eipen | EE-pane |
unto them, | αὐτοῖς | autois | af-TOOS |
Ye know | Οὐκ | ouk | ook |
not | οἴδατε | oidate | OO-tha-tay |
what | τί | ti | tee |
ye ask: | αἰτεῖσθε | aiteisthe | ay-TEE-sthay |
can ye | δύνασθε | dynasthe | THYOO-na-sthay |
drink of | πιεῖν | piein | pee-EEN |
the | τὸ | to | toh |
cup | ποτήριον | potērion | poh-TAY-ree-one |
that | ὃ | ho | oh |
I | ἐγὼ | egō | ay-GOH |
drink of? | πίνω | pinō | PEE-noh |
and | καί | kai | kay |
with baptized be | τὸ | to | toh |
the | βάπτισμα | baptisma | VA-ptee-sma |
baptism | ὃ | ho | oh |
that | ἐγὼ | egō | ay-GOH |
I | βαπτίζομαι | baptizomai | va-PTEE-zoh-may |
am baptized with? | βαπτισθῆναι | baptisthēnai | va-ptee-STHAY-nay |
Cross Reference
Luke 12:50
ಆದರೆ ನಾನು ಬಾಪ್ತಿಸ್ಮ ಮಾಡಿಸಿಕೊಳ್ಳುವ ಒಂದು ಬಾಪ್ತಿಸ್ಮ ಉಂಟು; ಅದು ನೆರವೇರುವ ತನಕ ನಾನು ಎಷ್ಟೋ ಇಕ್ಕಟ್ಟಿನಲ್ಲಿದ್ದೇನೆ!
John 18:11
ಆಗ ಯೇಸು ಪೇತ್ರನಿಗೆ--ನಿನ್ನ ಕತ್ತಿಯನ್ನು ಒರೆಗೆಹಾಕು. ನನ್ನ ತಂದೆಯೂ ನನಗೆ ಕೊಟ್ಟ ಪಾತ್ರೆಯನ್ನು ನಾನು ಕುಡಿಯಬಾರದೋ ಎಂದು ಹೇಳಿದನು.
Luke 22:42
ತಂದೆಯೇ, ನಿನ್ನ ಚಿತ್ತವಿದ್ದರೆ ಈ ಪಾತ್ರೆ ಯನ್ನು ನನ್ನಿಂದ ತೊಲಗಿಸು; ಹೇಗೂ ನನ್ನ ಚಿತ್ತವಲ್ಲ, ಆದರೆ ನಿನ್ನ ಚಿತ್ತದಂತೆಯೇ ಆಗಲಿ ಎಂದು ಪ್ರಾರ್ಥಿಸಿ ದನು.
Mark 14:36
ಆತನು --ಅಪ್ಪಾ, ತಂದೆಯೇ, ಎಲ್ಲವುಗಳು ನಿನಗೆ ಸಾಧ್ಯವಾಗಿವೆ; ಈ ಪಾತ್ರೆಯನ್ನು ನನ್ನಿಂದ ತೆಗೆದುಬಿಡು; ಆದರೂ ನನ್ನ ಚಿತ್ತದಂತಲ್ಲ, ನಿನ್ನ ಚಿತ್ತದಂತೆಯೇ ಆಗಲಿ ಎಂದು ಹೇಳಿದನು.
Isaiah 51:22
ತನ್ನ ಜನರಿಗೋಸ್ಕರ ವಾದಿಸುವ ನಿನ್ನ ದೇವರೂ ನಿನ್ನ ಕರ್ತನಾಗಿರುವ ಕರ್ತನೂ ಹೀಗನ್ನು ತ್ತಾನೆ--ಇಗೋ, ನಾನು ನಿನ್ನ ಕೈಯೊಳಗಿಂದ ತತ್ತರಿಸು ವಂಥ ಪಾತ್ರೆಯನ್ನೂ ನನ್ನ ಉಗ್ರವಾದ ಪಾತ್ರೆಯ ಮಡ್ಡಿಯನ್ನೂ ತೆಗೆದುಹಾಕಿದ್ದೇನೆ; ಇನ್ನು ಮೇಲೆ ನೀನು ಅದನ್ನು ತಿರಿಗಿ ಕುಡಿಯುವದೇ ಇಲ್ಲ.
James 4:3
ನೀವು ಬೇಡಿದರೂ ಬೇಡಿದ್ದನ್ನು ನಿಮ್ಮ ಭೋಗಗಳಿಗಾಗಿ ಉಪಯೋಗಿಸ ಬೇಕೆಂದು ತಪ್ಪಾಗಿ ಬೇಡಿಕೊಳ್ಳುವದರಿಂದ ನಿಮಗೆ ದೊರೆಯುವದಿಲ್ಲ.
Romans 8:26
ಹಾಗೆಯೇ ಆತ್ಮನು ಸಹ ನಮ್ಮ ಬಲಹೀನತೆ ಗಳಿಗೆ ಸಹಾಯಮಾಡುತ್ತಾನೆ; ಹೇಗಂದರೆ ನಾವು ತಕ್ಕ ಪ್ರಕಾರ ಏನು ಬೇಡಿಕೊಳ್ಳಬೇಕೋ ನಮಗೆ ಗೊತ್ತಿಲ್ಲವಾದ್ದರಿಂದ ಆತ್ಮನು ತಾನೇ ಉಚ್ಚರಿಸಲಾಗ ದಂಥ ನರಳಾಟದಿಂದ ನಮಗೋಸ್ಕರ ವಿಜ್ಞಾಪನೆ ಮಾಡುತ್ತಾನೆ.
Matthew 26:39
ಆಮೇಲೆ ಆತನು ಸ್ವಲ್ಪದೂರ ಹೋಗಿ ಅಡ್ಡಬಿದ್ದು ಪ್ರಾರ್ಥಿ ಸುತ್ತಾ--ಓ ನನ್ನ ತಂದೆಯೇ, ಸಾಧ್ಯವಾದರೆ ಈ ಪಾತ್ರೆಯು ನನ್ನನ್ನು ಬಿಟ್ಟು ಹೋಗಲಿ; ಆದಾಗ್ಯೂ ನನ್ನ ಚಿತ್ತದಂತಲ್ಲ; ನಿನ್ನ ಚಿತ್ತದಂತೆಯೇ ಆಗಲಿ ಅಂದನು.
Matthew 20:21
ಆತನು ಆಕೆಗೆ--ನೀನು ಏನು ಅಪೇಕ್ಷಿಸುತ್ತೀ ಎಂದು ಕೇಳಲು ಆಕೆಯು ಆತನಿಗೆ -- ನಿನ್ನ ರಾಜ್ಯದಲ್ಲಿ ಈ ನನ್ನ ಇಬ್ಬರು ಕುಮಾರರು ಒಬ್ಬನು ನಿನ್ನ ಬಲಗಡೆಯಲ್ಲೂ ಇನ್ನೊಬ್ಬನು ನಿನ್ನ ಎಡಗಡೆಯಲ್ಲೂ ಕೂತುಕೊಳ್ಳುವಂತೆ ಅನುಗ್ರಹಿಸ ಬೇಕು ಎಂದು ಬೇಡಿಕೊಂಡಳು.
Jeremiah 45:5
ಹಾಗಾದರೆ ನೀನು ನಿನಗೋಸ್ಕರ ಮಹತ್ತಾದವು ಗಳನ್ನು ಹುಡುಕುತ್ತೀಯೋ? ಹುಡುಕಬೇಡ; ಇಗೋ, ನಾನು ಎಲ್ಲಾ ಶರೀರದ ಮೇಲೆ ಕೇಡನ್ನು ತರುತ್ತೇನೆಂದು ಕರ್ತನು ಅನ್ನುತ್ತಾನೆ; ಆದರೂ ನೀನು ಹೋಗುವ ಎಲ್ಲಾ ಸ್ಥಳಗಳಲ್ಲಿ ನಿನ್ನ ಪ್ರಾಣವನ್ನು ನಿನಗೆ ಕೊಳ್ಳೆಯಾಗಿ ಕೊಡುತ್ತೇನೆ.
Jeremiah 25:15
ಇಸ್ರಾಯೇಲಿನ ದೇವರಾದ ಕರ್ತನು ನನಗೆ ಹೀಗೆ ಹೇಳುತ್ತಾನೆ--ಈ ರೌದ್ರದ ದ್ರಾಕ್ಷಾರಸ ಪಾತ್ರೆ ಯನ್ನು, ನಾನು ನಿನ್ನನ್ನು ಕಳುಹಿಸುವ ಎಲ್ಲಾ ಜನಾಂಗಗಳು ಅದನ್ನು ಕುಡಿಯುವಂತೆ ನನ್ನ ಕೈಯಿಂದ ತಕ್ಕೋ.
Psalm 75:8
ಕರ್ತನ ಕೈಯಲ್ಲಿ ಪಾತ್ರೆಯು ಉಂಟು; ದ್ರಾಕ್ಷಾರಸವು ಕೆಂಪಾಗಿದೆ. ಕಲಬೆರಿಕೆಯಿಂದ ತುಂಬಿ ಅದೆ; ಅದರಿಂದ ಆತನು ಹೊಯ್ಯುತ್ತಾನೆ; ಅದರ ಮಡ್ಡಿಯನ್ನು ಭೂಮಿಯ ದುಷ್ಟರೆಲ್ಲರೂ ಹೀರಿಕೊಂಡು ಕುಡಿಯುವರು.
1 Kings 2:22
ಅರಸನಾದ ಸೊಲೊಮೋನನು ತನ್ನ ತಾಯಿಗೆ ಪ್ರತ್ಯುತ್ತರವಾಗಿಅದೋನೀಯನಿಗೋಸ್ಕರ ಶೂನೇಮ್ಯಳಾದ ಅಬೀಷ ಗೈಳನ್ನು ನೀನು ಕೇಳುವದೇನು? ಅವನಿಗೋಸ್ಕರ ರಾಜ್ಯ ವನ್ನು ಕೇಳು, ಅವನು ನನ್ನ ಅಣ್ಣ. ಅವನಿಗೋಸ್ಕರವೂ ಯಾಜಕನಾದ ಎಬ್ಯಾತಾರನಿಗೋಸ್ಕರವೂ ಚೆರೂ ಯಳ ಮಗನಾದ ಯೋವಾಬನಿಗೋಸ್ಕರವೂ ಕೇಳು ಅಂದನು.