Luke 19 - ASV (Kannada)
1 And he entered and was passing through Jericho.ಯೇಸು ಯೆರಿಕೋವನ್ನು ಪ್ರವೇಶಿಸಿ ಹಾದು ಹೋದನು.
2 And behold, a man called by name Zacchaeus; and he was a chief publican, and he was rich.ಆಗ ಇಗೋ, ಅಲ್ಲಿ ಜಕ್ಕಾಯನೆಂಬ ಹೆಸರುಳ್ಳ ಒಬ್ಬ ಮನುಷ್ಯ ನಿದ್ದನು. ಇವನು ಸುಂಕದವರಲ್ಲಿ ಮುಖ್ಯಸ್ಥನೂ ಐಶ್ವರ್ಯವಂತನೂ ಆಗಿದ್ದನು.
3 And he sought to see Jesus who he was; and could not for the crowd, because he was little of stature.ಯೇಸು ಯಾರೆಂದು ಅವನು ನೋಡುವದಕ್ಕೆ ಅಪೇಕ್ಷಿಸಿದರೂ ತಾನು ಗಿಡ್ಡನಾಗಿದ್ದದರಿಂದ ಜನದಟ್ಟನೆಯ ನಿಮಿತ್ತವಾಗಿ ಆತನನ್ನು ನೋಡಲಾರದೆ ಇದ್ದನು.
4 And he ran on before, and climbed up into a sycomore tree to see him: for he was to pass that way.ಆಗ ಆತನನ್ನು ನೋಡುವ ಹಾಗೆ ಅವನು ಮುಂದಾಗಿ ಓಡಿಹೋಗಿ ಒಂದು ಆಲದ ಮರವನ್ನು ಹತ್ತಿದನು; ಯಾಕಂದರೆ ಆತನು ಆ ಮಾರ್ಗವಾಗಿಯೇ ಹೋಗುವವನಾಗಿ ದ್ದನು.
5 And when Jesus came to the place, he looked up, and said unto him, Zacchaeus, make haste, and come down; for to-day I must abide at thy house.ಯೇಸು ಆ ಸ್ಥಳಕ್ಕೆ ಬಂದು ಮೇಲಕ್ಕೆ ನೋಡಿ ಅವನನ್ನು ಕಂಡು ಅವನಿಗೆ--ಜಕ್ಕಾಯನೇ, ತ್ವರೆಯಾಗಿ ಇಳಿದು ಬಾ; ಯಾಕಂದರೆ ಈ ದಿನ ನಾನು ನಿನ್ನ ಮನೆಯಲ್ಲಿ ಇರತಕ್ಕದ್ದಾಗಿದೆ ಅಂದನು.
6 And he made haste, and came down, and received him joyfully.ಆಗ ಅವನು ತ್ವರೆಯಾಗಿ ಇಳಿದು ಬಂದು ಅತನನ್ನು ಸಂತೋಷದಿಂದ ಸೇರಿಸಿಕೊಂಡನು.
7 And when they saw it, they all murmured, saying, He is gone in to lodge with a man that is a sinner.ಇದನ್ನು ಅವರು ನೋಡಿ ದಾಗ--ಇವನು ಪಾಪಿಯಾದವನೊಂದಿಗೆ ಅತಿಥಿ ಯಾಗಿರಲು ಹೋಗಿದ್ದಾನೆ ಎಂದು ಹೇಳಿ ಅವರೆಲ್ಲರೂ ಗುಣುಗುಟ್ಟಿದರು.
8 And Zacchaeus stood, and said unto the Lord, Behold, Lord, the half of my goods I give to the poor; and if I have wrongfully exacted aught of any man, I restore fourfold.ಆಗ ಜಕ್ಕಾಯನು ನಿಂತುಕೊಂಡು ಕರ್ತನಿಗೆ--ಕರ್ತನೇ, ಇಗೋ, ನನ್ನ ಸೊತ್ತಿನಲ್ಲಿ ಅರ್ಧವನ್ನು ಬಡವರಿಗೆ ಕೊಡುತ್ತೇನೆ; ನಾನು ಯಾರಿಂದಲಾದರೂ ಸುಳ್ಳಾಗಿ ದೂರು ಹೇಳಿ ಏನಾದರೂ ತಕ್ಕೊಂಡಿದ್ದರೆ ಅವನಿಗೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ ಅಂದನು.
9 And Jesus said unto him, To-day is salvation come to this house, forasmuch as he also is a son of Abraham.ಆಗ ಯೇಸು ಅವನಿಗೆ--ಈ ದಿನ ಈ ಮನೆಗೆ ರಕ್ಷಣೆ ಆಯಿತು. ಯಾಕಂದರೆ ಇವನು ಸಹ ಅಬ್ರಹಾಮನ ಮಗ ನಲ್ಲವೇ.
10 For the Son of man came to seek and to save that which was lost.ಯಾಕಂದರೆ ಮನುಷ್ಯಕುಮಾರನು ತಪ್ಪಿ ಹೋದದ್ದನ್ನು ಹುಡುಕಿ ರಕ್ಷಿಸುವದಕ್ಕೆ ಬಂದನು ಎಂದು ಹೇಳಿದನು.
11 And as they heard these things, he added and spake a parable, because he was nigh to Jerusalem, and `because' they supposed that the kingdom of God was immediately to appear.ಅವರು ಈ ಮಾತುಗಳನ್ನು ಕೇಳುತ್ತಿರಲಾಗಿ ಯೇಸು ತಾನು ಯೆರೂಸಲೇಮಿಗೆ ಸವಿಾಪವಾಗಿದ್ದದ ರಿಂದಲೂ ದೇವರ ರಾಜ್ಯವು ಕೂಡಲೆ ಪ್ರತ್ಯಕ್ಷವಾಗು ವದೆಂದು ಅವರು ಭಾವಿಸಿದ್ದದರಿಂದಲೂ ಆತನು ಇನ್ನೂ ಒಂದು ಸಾಮ್ಯವನ್ನು ಹೇಳಿದನು.
12 He said therefore, A certain nobleman went into a far country, to receive for himself a kingdom, and to return.ಅದೇ ನಂದರೆ--ಕೀರ್ತಿವಂತನಾದ ಒಬ್ಬಾನೊಬ್ಬ ಮನುಷ್ಯನು ತನಗೋಸ್ಕರ ರಾಜ್ಯವನ್ನು ಪಡೆದುಕೊಂಡು ತಿರಿಗಿ ಬರುವದಕ್ಕಾಗಿ ದೂರ ದೇಶಕ್ಕೆ ಹೊರಟುಹೋದನು.
13 And he called ten servants of his, and gave them ten pounds, and said unto them, Trade ye `herewith' till I come.ಅವನು ತನ್ನ ಹತ್ತು ಆಳುಗಳನ್ನು ಕರೆದು ಅವರಿಗೆ ಹತ್ತು ಮೊಹರಿಗಳನ್ನು ಒಪ್ಪಿಸಿ--ನಾನು ಬರುವವರೆಗೆ ವ್ಯಾಪಾರ ಮಾಡಿಕೊಂಡಿರ್ರಿ ಎಂದು ಹೇಳಿದನು.
14 But his citizens hated him, and sent an ambassage after him, saying, We will not that this man reign over us.ಆದರೆ ಅವರ ಪಟ್ಟಣದವರು ಅವನನ್ನು ದ್ವೇಷಿಸಿ--ಇವನು ನಮ್ಮ ಮೇಲೆ ಆಡಳಿತ ಮಾಡುವದು ನಮಗೆ ಮನಸ್ಸಿಲ್ಲ ಎಂದು ಹೇಳಿ ಅವನ ಹಿಂದೆ ಸಂದೇಶವನ್ನು ಕಳುಹಿಸಿದರು.
15 And it came to pass, when he was come back again, having received the kingdom, that he commanded these servants, unto whom he had given the money, to be called to him, that he might know what they had gained by trading.ಇದಾದ ಮೇಲೆ ಅವನು ರಾಜ್ಯವನ್ನು ಪಡೆದು ಹಿಂದಿರುಗಿದಾಗ ವ್ಯಾಪಾ ರದಿಂದ ಪ್ರತಿಯೊಬ್ಬ ಮನುಷ್ಯನು ಎಷ್ಟು ಲಾಭವನ್ನು ಪಡೆದನೆಂದು ತಿಳುಕೊಳ್ಳುವಂತೆ ತಾನು ಹಣಕೊಟ್ಟ ಆ ಆಳುಗಳನ್ನು ತನ್ನ ಬಳಿಗೆ ಕರೆಯಬೇಕೆಂದು ಆಜ್ಞಾಪಿ ಸಿದನು.
16 And the first came before him, saying, Lord, thy pound hath made ten pounds more.ಆಗ ಮೊದಲನೆಯವನು ಬಂದು--ಒಡೆಯನೇ, ನಿನ್ನ ಮೊಹರಿನಿಂದ ಹತ್ತು ಮೊಹರಿಗಳನ್ನು ಸಂಪಾದಿಸಿದ್ದೇನೆ ಅಂದನು.
17 And he said unto him, Well done, thou good servant: because thou wast found faithful in a very little, have thou authority over ten cities.ಅದಕ್ಕೆ ಅವನು ಅವ ನಿಗೆ--ಒಳ್ಳೇದು. ನೀನು ಉತ್ತಮ ಆಳು; ಯಾಕಂದರೆ ನೀನು ಅತಿ ಸ್ವಲ್ಪದರಲ್ಲಿ ನಂಬಿಗಸ್ತನಾಗಿದ್ದೀ ಹತ್ತು ಪಟ್ಟಣಗಳ ಮೇಲೆ ನೀನು ಅಧಿಕಾರಿಯಾಗಿರು ಅಂದನು.
18 And the second came, saying, Thy pound, Lord, hath made five pounds.ಎರಡನೆಯವನು ಬಂದು--ಒಡೆಯನೇ, ನಿನ್ನ ಮೊಹರಿಯಿಂದ ಐದು ಮೊಹರಿಗಳನ್ನು ಸಂಪಾ ದಿಸಿದ್ದೇನೆ ಅಂದನು.
19 And he said unto him also, Be thou also over five cities.ಅದಕ್ಕೆ ಅವನು ಅದೇ ಪ್ರಕಾರ--ನೀನು ಸಹ ಐದು ಪಟ್ಟಣಗಳ ಮೇಲಿರು ಎಂದು ಅವನಿಗೆ ಹೇಳಿದನು.
20 And another came, saying, Lord, behold, `here is' thy pound, which I kept laid up in a napkin:ಆಗ ಮತ್ತೊಬ್ಬನು ಬಂದು--ಒಡೆಯನೇ, ಇಗೋ, ನಾನು ಕರವಸ್ತ್ರದಲ್ಲಿ ಕಟ್ಟಿ ಇಟ್ಟಿದ್ದ ನಿನ್ನ ಮೊಹರಿ ಇದೇ.
21 for I feared thee, because thou art an austere man: thou takest up that which thou layedst not down, and reapest that which thou didst not sow.ಯಾಕಂದರೆ ನೀನು ಕಠಿಣವಾದ ಮನುಷ್ಯನು ಎಂದು ನಾನು ನಿನಗೆ ಭಯಪಟ್ಟೆನು; ನೀನು ಇಡದೆ ಇರುವದನ್ನು ತಕ್ಕೊಳ್ಳು ವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆಗಿದ್ದೀ ಅಂದನು.
22 He saith unto him, Out of thine own mouth will I judge thee, thou wicked servant. Thou knewest that I am an austere man, taking up that which I laid not down, and reaping that which I did not sow;ಆಗ ಅವನು--ನೀನು ಕೆಟ್ಟ ಆಳು, ನಿನ್ನ ಮಾತಿನ ಮೇಲೆಯೇ ನಿನಗೆ ನ್ಯಾಯತೀರಿ ಸುವೆನು. ನಾನು ಇಡದೆ ಇರುವಲ್ಲಿ ತಕ್ಕೊಳ್ಳುವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆದ ಕಠಿಣ ಮನುಷ್ಯನೆಂದು ನಿನಗೆ ತಿಳಿದಿತ್ತಲ್ಲಾ.
23 then wherefore gavest thou not my money into the bank, and I at my coming should have required it with interest?ಹಾಗಿದ್ದರೆ ನನ್ನ ಹಣವನ್ನು ಧನ ವ್ಯವಹಾರದ ಸಂಸ್ಥೆಯಲ್ಲಿ ಯಾಕೆ ಹಾಕಲಿಲ್ಲ? ನಾನು ಬಂದಾಗ ಅದನ್ನು ಬಡ್ಡಿಯ ಸಹಿತ ತೆಗೆದುಕೊಳ್ಳುತ್ತಿದ್ದೆನು ಎಂದು ಅವನಿಗೆ ಹೇಳಿದನು.
24 And he said unto them that stood by, Take away from him the pound, and give it unto him that hath the ten pounds.ಅವನು ಹತ್ತಿರ ನಿಂತಿದ್ದವರಿಗೆ--ಇವನ ಕಡೆಯಿಂದ ಆ ಮೊಹರಿಯನ್ನು ತಕ್ಕೊಂಡು ಹತ್ತು ಮೊಹರಿಗಳಿ ದ್ದವನಿಗೆ ಕೊಡಿರಿ ಅಂದನು.
25 And they said unto him, Lord, he hath ten pounds.(ಆಗ ಅವರು ಅವ ನಿಗೆ--ಒಡೆಯನೇ, ಅವನಿಗೆ ಹತ್ತು ಮೊಹರಿಗಳಿವೆ ಯಲ್ಲಾ ಅಂದರು.)
26 I say unto you, that unto every one that hath shall be given; but from him that hath not, even that which he hath shall be taken away from him.ಆದರೆ ನಾನು ನಿಮಗೆ ಹೇಳು ವದೇನಂದರೆ--ಇದ್ದ ಪ್ರತಿಯೊಬ್ಬನಿಗೆ ಕೊಡಲ್ಪಡು ವದು ಮತ್ತು ಇಲ್ಲದವನ ಕಡೆಯಿಂದ ಅವನಿಗೆ ಇದ್ದದ್ದೂ ಅವನಿಂದ ತೆಗೆಯಲ್ಪಡುವದು.
27 But these mine enemies, that would not that I should reign over them, bring hither, and slay them before me.ಆದರೆ ತಮ್ಮ ಮೇಲೆ ನಾನು ಆಡಳಿತ ಮಾಡುವದಕ್ಕೆ ಮನಸ್ಸಿಲ್ಲದ ಆ ನನ್ನ ವಿರೋಧಿಗಳನ್ನು ಇಲ್ಲಿಗೆ ತಂದು ನನ್ನ ಮುಂದೆ ಸಂಹಾರ ಮಾಡಿರಿ ಅಂದನು.
28 And when he had thus spoken, he went on before, going up to Jerusalem.ಆತನು ಹೀಗೆ ಹೇಳಿದ ತರುವಾಯ ಮುಂದಾಗಿ ಯೆರೂಸಲೇಮಿಗೆ ಏರಿಹೋದನು.
29 And it came to pass, when he drew nigh unto Bethphage and Bethany, at the mount that is called Olivet, he sent two of the disciples,ಇದಾದ ಮೇಲೆ ಆತನು ಎಣ್ಣೇಮರಗಳ ಗುಡ್ಡವೆಂದು ಕರೆಯಲ್ಪಟ್ಟ ಗುಡ್ಡದ ಕಡೆಗೆ ಇರುವ ಬೇತ್ಫಗೆಗೂ ಬೇಥಾನ್ಯಕ್ಕೂ ಸವಿಾಪಿಸಿದಾಗ ತನ್ನ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ--
30 saying, Go your way into the village over against `you'; in which as ye enter ye shall find a colt tied, whereon no man ever yet sat: loose him, and bring him.ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ; ನೀವು ಅದ ರೊಳಗೆ ಪ್ರವೇಶಿಸುತ್ತಿರುವಾಗ ಅಲ್ಲಿ ಕಟ್ಟಿರುವ ಮತ್ತು ಯಾವ ಮನುಷ್ಯನೂ ಅದರ ಮೇಲೆ ಹತ್ತದಿರುವ ಒಂದು ಕತ್ತೇ ಮರಿಯನ್ನು ಕಾಣುವಿರಿ; ಅದನ್ನು ಬಿಚ್ಚಿ ಇಲ್ಲಿಗೆ ತಕ್ಕೊಂಡು ಬನ್ನಿರಿ;
31 And if any one ask you, Why do ye loose him? thus shall ye say, The Lord hath need of him.ಯಾವನಾದರೂ ನಿಮಗೆ--ಯಾಕೆ ಅದನ್ನು ಬಿಚ್ಚುತ್ತೀರಿ ಎಂದು ಕೇಳಿದರೆ ನೀವು ಅವನಿಗೆ--ಇದು ಕರ್ತನಿಗೆ ಬೇಕಾಗಿದೆ ಎಂದು ಹೇಳಿರಿ ಅಂದನು.
32 And they that were sent went away, and found even as he had said unto them.ಕಳುಹಿಸಲ್ಪಟ್ಟವರು ತಮ್ಮ ಮಾರ್ಗವಾಗಿ ಹೊರಟು ಹೋಗಿ ಆತನು ತಮಗೆ ಹೇಳಿದಂತೆಯೇ ಕಂಡರು.
33 And as they were loosing the colt, the owners thereof said unto them, Why loose ye the colt?ಅವರು ಆ ಕತ್ತೇ ಮರಿ ಯನ್ನು ಬಿಚ್ಚುತ್ತಿರುವಾಗ ಆದರ ಯಜಮಾನರು ಅವರಿಗೆ--ನೀವು ಕತ್ತೇಮರಿಯನ್ನು ಯಾಕೆ ಬಿಚ್ಚುತ್ತೀರಿ ಎಂದು ಕೇಳಿದ್ದಕ್ಕೆ
34 And they said, The Lord hath need of him.ಅವರು--ಅದು ಕರ್ತನಿಗೆ ಬೇಕಾಗಿದೆ ಅಂದರು.
35 And they brought him to Jesus: and they threw their garments upon the colt, and set Jesus thereon.ಅವರು ಅದನ್ನು ಯೇಸು ವಿನ ಬಳಿಗೆ ತಂದು ತಮ್ಮ ಬಟ್ಟೆಗಳನ್ನು ಕತ್ತೇಮರಿಯ ಮೇಲೆ ಹಾಕಿ ಅದರ ಮೇಲೆ ಯೇಸುವನ್ನು ಕೂಡ್ರಿಸಿ ದರು.
36 And as he went, they spread their garments in the way.ಆತನು ಹೋಗುತ್ತಿರುವಾಗ ಅವರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು.
37 And as he was now drawing nigh, `even' at the descent of the mount of Olives, the whole multitude of the disciples began to rejoice and praise God with a loud voice for all the mighty works which they had seen;ಇದಲ್ಲದೆ ಆತನು ಎಣ್ಣೇಮರಗಳ ಗುಡ್ಡದಿಂದ ಇಳಿಯುವ ಸ್ಥಳಕ್ಕೆ ಸವಿಾಪಿಸಿದಾಗ ಶಿಷ್ಯ ಸಮೂಹವೆಲ್ಲಾ ತಾವು ನೋಡಿದ್ದ ಎಲ್ಲಾ ಮಹತ್ಕಾರ್ಯಗಳಿಗಾಗಿ ಸಂತೋಷ ಪಡುತ್ತಾ ಮಹಾಧ್ವನಿಯಿಂದ ದೇವರನ್ನು ಕೊಂಡಾಡ ಲಾರಂಭಿಸಿ--
38 saying, Blessed `is' the King that cometh in the name of the Lord: peace in heaven, and glory in the highest.ಕರ್ತನ ಹೆಸರಿನಲ್ಲಿ ಬರುವ ಅರ ಸನು ಸ್ತುತಿಹೊಂದಲಿ; ಪರಲೋಕದಲ್ಲಿ ಸಮಾಧಾನ, ಮತ್ತು ಅತ್ಯುನ್ನತದಲ್ಲಿ ಮಹಿಮೆ ಎಂದು ಹೇಳಿದರು.
39 And some of the Pharisees from the multitude said unto him, Teacher, rebuke thy disciples.ಜನಸಮೂಹದೊಳಗಿಂದ ಕೆಲವು ಫರಿಸಾಯರು ಆತನಿಗೆ--ಬೋಧಕನೇ, ನಿನ್ನ ಶಿಷ್ಯರನ್ನು ಗದರಿಸು ಅಂದರು.
40 And he answered and said, I tell you that, if these shall hold their peace, the stones will cry out.ಆಗ ಆತನು ಪ್ರತ್ಯುತ್ತರವಾಗಿ ಅವ ರಿಗೆ--ಇವರು ಸುಮ್ಮನಿರುವದಾದರೆ ಈ ಕಲ್ಲುಗಳು ಕೂಡಲೆ ಕೂಗುವವು ಎಂದು ನಾನು ನಿಮಗೆ ಹೇಳು ತ್ತೇನೆ ಅಂದನು.
41 And when he drew nigh, he saw the city and wept over it,ತರುವಾಯ ಆತನು ಸವಿಾಪಿಸಿದಾಗ ಪಟ್ಟಣ ವನ್ನು ನೋಡಿ ಅದರ ವಿಷಯವಾಗಿ ಅತ್ತು--
42 saying, If thou hadst known in this day, even thou, the things which belong unto peace! but now they are hid from thine eyes.ನೀನು ಈ ನಿನ್ನ ದಿನದಲ್ಲಿಯಾದರೂ ನಿನ್ನ ಸಮಾ ಧಾನಕ್ಕೆ ಸಂಬಂಧಪಟ್ಟವುಗಳನ್ನು ತಿಳಿದುಕೊಳ್ಳಬೇಕಾ ಗಿತ್ತು; ಆದರೆ ಈಗ ಅವುಗಳು ನಿನ್ನ ಕಣ್ಣುಗಳಿಗೆ ಮರೆಯಾಗಿವೆ.
43 For the days shall come upon thee, when thine enemies shall cast up a bank about thee, and compass thee round, and keep thee in on every side,ಯಾಕಂದರೆ ನಿನ್ನ ಶತೃಗಳು ನಿನ್ನ ಸುತ್ತಲೂ ಕಂದಕವನ್ನು ತೋಡಿ ಎಲ್ಲಾ ಕಡೆಯಲ್ಲಿಯೂ ನಿನ್ನನ್ನು ಮುತ್ತಿಗೆ ಹಾಕಿ ಪ್ರತಿಯೊಂದು ಕಡೆಯಿಂದಲೂ ನಿನ್ನನ್ನು ಒಳಗೆ ಇರಿಸುವ ದಿನಗಳು ನಿನ್ನ ಮೇಲೆ ಬರುವವು.
44 and shall dash thee to the ground, and thy children within thee; and they shall not leave in thee one stone upon another; because thou knewest not the time of thy visitation.ಇದಲ್ಲದೆ ಅವರು ನಿನ್ನನ್ನೂ ನಿನ್ನೊಳ ಗಿರುವ ನಿನ್ನ ಮಕ್ಕಳನ್ನೂ ನೆಲಸಮ ಮಾಡುವರು; ಮತ್ತು ನಿನ್ನಲ್ಲಿ ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಇರದಂತೆ ಮಾಡುವರು; ಯಾಕಂದರೆ ನಿನ್ನನ್ನು ಸಂಧಿಸಿದ ಸಮಯವನ್ನು ನೀನು ತಿಳುಕೊಳ್ಳಲಿಲ್ಲ ಅಂದನು.
45 And he entered into the temple, and began to cast out them that sold,ಆತನು ದೇವಾಲಯದೊಳಕ್ಕೆ ಹೋಗಿ ಅದರಲ್ಲಿ ಮಾರುವವರನ್ನೂ ಕೊಂಡುಕೊಳ್ಳುವವರನ್ನೂ ಹೊರಗೆ ಹಾಕುವದಕ್ಕೆ ಪ್ರಾರಂಭಿಸಿ
46 saying unto them, It is written, And my house shall be a house of prayer: but ye have made it a den of robbers.ಅವರಿಗೆ--ನನ್ನ ಮನೆಯು ಪ್ರಾರ್ಥನೆಯ ಮನೆ ಎಂದು ಬರೆಯಲ್ಪಟ್ಟಿದೆ; ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ ಅಂದನು.
47 And he was teaching daily in the temple. But the chief priests and the scribes and the principal men of the people sought to destroy him:ಇದಲ್ಲದೆ ಆತನು ಪ್ರತಿದಿನವೂ ದೇವಾಲಯ ದಲ್ಲಿ ಬೋಧಿಸುತ್ತಿದ್ದನು. ಆದರೆ ಪ್ರಧಾನಯಾಜಕರೂ ಶಾಸ್ತ್ರಿಗಳೂ ಜನರ ಪ್ರಮುಖರೂ ಆತನನ್ನು ಕೊಲ್ಲು ವದಕ್ಕೆ ಹವಣಿಸುತ್ತಿದ್ದರು.
48 and they could not find what they might do; for the people all hung upon him, listening.ಆದರೆ ಅವರು ಏನು ಮಾಡಬೇಕೆಂಬದನ್ನು ಕಂಡುಕೊಳ್ಳದೆ ಹೋದರು; ಯಾಕಂದರೆ ಜನರೆಲ್ಲರೂ ಆತನು ಹೇಳುವದನು ಬಹಳ ಲಕ್ಷ್ಯಕೊಟ್ಟು ಆತನ ಉಪದೇಶ ವನ್ನು ಕೇಳುತ್ತಿದ್ದರು.
Kannada Bible