Luke 10 - DBY (Kannada)
1 Now after these things the Lord appointed seventy others also, and sent them two and two before his face into every city and place where he himself was about to come.ಇವುಗಳಾದ ಮೇಲೆ ಕರ್ತನು ಬೇರೆ ಎಪ್ಪತ್ತು ಮಂದಿಯನ್ನು ಸಹ ನೇಮಿಸಿ ತಾನೇ ಸ್ವತಃ ಹೋಗಬೇಕೆಂದಿದ್ದ ಪ್ರತಿಯೊಂದು ಪಟ್ಟಣಕ್ಕೂ ಸ್ಥಳಕ್ಕೂ ಇಬ್ಬಿಬ್ಬರನ್ನಾಗಿ ತನ್ನ ಮುಂದಾಗಿ ಕಳುಹಿಸಿದನು.
2 And he said to them, The harvest indeed [is] great, but the workmen few; supplicate therefore the Lord of the harvest that he may send out workmen into his harvest.ಆತನು ಅವರಿಗೆ--ಬೆಳೆಯು ನಿಜವಾಗಿಯೂ ಬಹಳ; ಆದರೆ ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ ಯಜಮಾನನು ತನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ನೀವು ಪ್ರಾರ್ಥನೆಮಾಡಿರಿ.
3 Go: behold *I* send you forth as lambs in the midst of wolves.ಹೋಗಿರಿ, ಇಗೋ, ತೋಳಗಳ ಮಧ್ಯದಲ್ಲಿ ಕುರಿಮರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ.
4 Carry neither purse nor scrip nor sandals, and salute no one on the way.ಹವ್ಮೆಾಣಿಯನ್ನಾಗಲೀ ಚೀಲವನ್ನಾಗಲೀ ಕೆರಗಳನ್ನಾಗಲೀ ತಕ್ಕೊಳ್ಳಬೇಡಿರಿ; ಮತ್ತು ದಾರಿಯಲ್ಲಿ ಯಾರನ್ನೂ ವಂದಿಸಬೇಡಿರಿ.
5 And into whatsoever house ye enter, first say, Peace to this house.ನೀವು ಯಾವ ಮನೆಯಲ್ಲಿಯಾದರೂ ಪ್ರವೇಶಿಸುವಾಗ ಮೊದಲು--ಈ ಮನೆಗೆ ಸಮಾಧಾನವಾಗಲಿ ಎಂದು ಹೇಳಿರಿ.
6 And if a son of peace be there, your peace shall rest upon it; but if not it shall turn to you again.ಅಲ್ಲಿ ಸಮಾಧಾನದ ಮಗನು ಇದ್ದರೆ ನಿಮ್ಮ ಸಮಾಧಾನವು ಅವರ ಮೇಲೆ ಇರುವದು; ಇಲ್ಲದಿದ್ದರೆ ಅದು ನಿಮಗೆ ಹಿಂದಿರು ಗುವದು.
7 And in the same house abide, eating and drinking such things as they have; for the workman is worthy of his hire. Remove not from house to house.ಅದೇ ಮನೆಯಲ್ಲಿದ್ದು ಅವರು ಕೊಟ್ಟದ್ದನ್ನು ತಿಂದು ಕುಡಿಯಿರಿ; ಯಾಕಂದರೆ ಕೆಲಸದವನು ತನ್ನ ಕೂಲಿಗೆ ಯೋಗ್ಯನು. ಮನೆಯಿಂದ ಮನೆಗೆ ಹೋಗ ಬೇಡಿರಿ;
8 And into whatsoever city ye may enter and they receive you, eat what is set before you,ಯಾವದಾದರೂ ಪಟ್ಟಣದೊಳಗೆ ನೀವು ಪ್ರವೇಶಿಸುವಾಗ ಅವರು ನಿಮ್ಮನ್ನು ಸೇರಿಸಿಕೊಂಡರೆ ನಿಮ್ಮ ಮುಂದೆ ಇಡುವಂಥವುಗಳನ್ನು ತಿನ್ನಿರಿ.
9 and heal the sick in it, and say to them, The kingdom of God is come nigh to you.ಅಲ್ಲಿರುವ ರೋಗಿಗಳನ್ನು ಸ್ವಸ್ಥಮಾಡಿರಿ; ಮತ್ತು ಅವರಿಗೆ--ದೇವರ ರಾಜ್ಯವು ನಿಮ್ಮ ಸವಿಾಪಕ್ಕೆ ಬಂದಿದೆ ಎಂದು ಹೇಳಿರಿ.
10 But into whatsoever city ye may have entered and they do not receive you, go out into its streets and say,ಆದರೆ ನೀವು ಪ್ರವೇಶಿ ಸುವ ಯಾವ ಪಟ್ಟಣದಲ್ಲಿಯಾದರೂ ಅವರು ನಿಮ್ಮನ್ನು ಸೇರಿಸಿಕೊಳ್ಳದಿದ್ದರೆ ನೀವು ಹೊರಟು ಅದೇ ಬೀದಿ ಗಳಲ್ಲಿ ಹೋಗಿ--
11 Even the dust of your city, which cleaves to us on the feet, do we shake off against you; but know this, that the kingdom of God is come nigh.ನಮ್ಮ ಮೇಲೆ ಅಂಟಿಕೊಂಡಿರುವ ನಿಮ್ಮ ಪಟ್ಟಣದ ಧೂಳನ್ನೇ ನಿಮಗೆ ವಿರೋಧವಾಗಿ ನಾವು ಝಾಡಿಸಿಬಿಡುತ್ತೇವೆ; ಆದಾಗ್ಯೂ ದೇವರ ರಾಜ್ಯವು ನಿಮ್ಮ ಸವಿಾಪಕ್ಕೆ ಬಂದಿದೆ ಎಂಬದು ನಿಮಗೆ ಖಚಿತವಾಗಿ ತಿಳಿದಿರಲಿ ಎಂದು ಹೇಳಿರಿ.
12 I say to you that it shall be more tolerable for Sodom in that day than for that city.ಆದರೆ ಆ ದಿನದಲ್ಲಿ ಆ ಪಟ್ಟಣಕ್ಕಿಂತಲೂ ಸೊದೋಮಿನ ಗತಿಯು ಹೆಚ್ಚಾಗಿ ತಾಳಬಹುದಾಗಿರುವದು ಎಂದು ನಾನು ನಿಮಗೆ ಹೇಳುತ್ತೇನೆ.
13 Woe to thee, Chorazin! woe to thee, Bethsaida! for if the works of power which have taken place in you had taken place in Tyre and Sidon, they had long ago repented, sitting in sackcloth and ashes.ಖೊರಾಜಿನೇ, ನಿನಗೆ ಅಯ್ಯೋ! ಬೇತ್ಸಾಯಿದವೇ, ನಿನಗೆ ಅಯ್ಯೋ! ನಿನ್ನಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಸೀದೋನ್‌ಗಳಲ್ಲಿ ನಡೆದಿದ್ದರೆ ಅಲ್ಲಿಯವರು ಬಹಳ ಕಾಲದ ಹಿಂದೆಯೇ ಗೋಣೀತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕೂತು ಮಾನಸಾಂತರ ಪಡುತ್ತಿದ್ದರು.
14 But it shall be more tolerable for Tyre and Sidon in the judgment than for you.ಆದರೆ ನ್ಯಾಯ ತೀರ್ಪಿನಲ್ಲಿ ನಿಮ್ಮ ಗತಿಗಿಂತಲೂ ತೂರ್ ಸೀದೋನ್‌ಗಳ ಗತಿಯು ಹೆಚ್ಚಾಗಿ ತಾಳಬಹು ದಾಗಿರುವದು.
15 And *thou*, Capernaum, who hast been raised up to heaven, shalt be brought down even to hades.ಆಕಾಶದವರೆಗೂ ಎತ್ತಲ್ಪಟ್ಟಿರುವ ಕಪೆರ್ನೌಮೇ, ನೀನು ಕೆಳಗೆ ಪಾತಾಳಕ್ಕೆ ದೊಬ್ಬ ಲ್ಪಡುವಿ.
16 He that hears you hears me; and he that rejects you rejects me; and he that rejects me rejects him that sent me.ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನು ಕೇಳುತ್ತಾನೆ; ನಿಮ್ಮನ್ನು ತಿರಸ್ಕರಿಸುವವನು ನನ್ನನ್ನು ತಿರಸ್ಕರಿಸುತ್ತಾನೆ; ನನ್ನನ್ನು ತಿರಸ್ಕರಿಸುವವನು ನನ್ನನ್ನು ಕಳುಹಿಸಿದಾತನನ್ನು ತಿರಸ್ಕರಿಸುತ್ತಾನೆ ಅಂದನು.
17 And the seventy returned with joy, saying, Lord, even the demons are subject to us through thy name.ತರುವಾಯ ಆ ಎಪ್ಪತ್ತು ಮಂದಿ ಸಂತೋಷದಿಂದ ಹಿಂತಿರುಗಿ--ಕರ್ತನೇ, ನಿನ್ನ ಹೆಸರಿನಲ್ಲಿ ದೆವ್ವಗಳು ಸಹ ನಮಗೆ ಅಧೀನವಾದವು ಅಂದರು.
18 And he said to them, I beheld Satan as lightning falling out of heaven.ಆಗ ಆತನು ಅವರಿಗೆ--ಸೈತಾನನು ಮಿಂಚಿನ ಹಾಗೆ ಆಕಾಶದಿಂದ ಬೀಳುವದನ್ನು ನಾನು ನೋಡಿದೆನು.
19 Behold, I give you the power of treading upon serpents and scorpions and over all the power of the enemy, and nothing shall in anywise injure you.ಇಗೋ, ಸರ್ಪಗಳನ್ನೂ ಚೇಳುಗಳನ್ನೂ ತುಳಿಯುವದಕ್ಕೆ ಮತ್ತು ವಿರೋಧಿಯ ಎಲ್ಲಾ ಶಕ್ತಿಯ ಮೇಲೆ ನಾನು ನಿಮಗೆ ಅಧಿಕಾರ ಕೊಡುತ್ತೇನೆ; ಯಾವದೂ ಯಾವ ರೀತಿಯಲ್ಲಿಯೂ ನಿಮಗೆ ಕೇಡು ಮಾಡ ಲಾರದು.
20 Yet in this rejoice not, that the spirits are subjected to you, but rejoice that your names are written in the heavens.ಆದಾಗ್ಯೂ ದುರಾತ್ಮಗಳು ನಿಮಗೆ ಅಧೀನವಾದವೆಂದು ಸಂತೋಷಪಡಬೇಡಿರಿ; ಆದರೆ ನಿಮ್ಮ ಹೆಸರುಗಳು ಪರಲೋಕದಲ್ಲಿ ಬರೆಯಲ್ಪಟ್ಟಿರು ವದರಿಂದಲೇ ಸಂತೋಷಿಸಿರಿ ಅಂದನು.
21 In the same hour Jesus rejoiced in spirit and said, I praise thee, Father, Lord of the heaven and of the earth, that thou hast hid these things from wise and prudent, and hast revealed them to babes: yea, Father, for thus has it been well-pleasing in thy sight.ಆ ಗಳಿಗೆಯಲ್ಲಿ ಯೇಸು ಆತ್ಮದಲ್ಲಿ ಉಲ್ಲಾಸ ಗೊಂಡು -- ಓ ತಂದೆಯೇ, ಪರಲೋಕ, ಭೂಲೋಕ ಗಳ ಒಡೆಯನೇ, ನೀನು ಈ ಸಂಗತಿಗಳನ್ನು ಜ್ಞಾನಿ ಗಳಿಗೂ ಬುದ್ಧಿವಂತರಿಗೂ ಮರೆಮಾಡಿ ಕೂಸುಗಳಿಗೆ ಪ್ರಕಟಮಾಡಿರುವದರಿಂದ ನಿನ್ನನ್ನು ಕೊಂಡಾಡುತ್ತೇನೆ; ಹೌದು, ತಂದೆಯೇ, ಅದು ನಿನ್ನ ದೃ
22 All things have been delivered to me by my Father, and no one knows who the Son is but the Father, and who the Father is but the Son, and he to whomsoever the Son is pleased to reveal [him].ಎಲ್ಲವುಗಳು ನನ್ನ ತಂದೆಯಿಂದ ನನಗೆ ಒಪ್ಪಿಸಲ್ಪಟ್ಟಿವೆ; ತಂದೆಯ ಹೊರತು ಯಾರೂ ಮಗನನ್ನು ಅರಿಯರು. ಮಗನೂ ತಾನು ಯಾರಿಗೆ ತಂದೆಯನ್ನು ಪ್ರಕಟಮಾಡುವನೋ ಅವನೂ ಅಲ್ಲದೆ ಆತನನ್ನು (ತಂದೆಯನ್ನು) ಯಾರೂ ಅರಿತವರಲ್ಲ.
23 And having turned to the disciples privately he said, Blessed are the eyes which see the things that ye see.ಆತನು ತನ್ನ ಶಿಷ್ಯರ ಕಡೆಗೆ ತಿರುಗಿಕೊಂಡು--ನೀವು ನೋಡು ತ್ತಿರುವವುಗಳನ್ನು ನೋಡುವ ಕಣ್ಣುಗಳು ಧನ್ಯವಾದವು ಗಳು ಎಂದು ಪ್ರತ್ಯೇಕವಾಗಿ ಹೇಳಿದನು.
24 For I say to you that many prophets and kings have desired to see the things which ye behold, and did not see [them]; and to hear the things which ye hear, and did not hear [them].ಯಾಕಂದರೆ ಅನೇಕ ಪ್ರವಾದಿಗಳೂ ಅರಸರೂ ನೀವು ನೋಡು ವಂಥವುಗಳನ್ನು ನೋಡಬೇಕೆಂದು ಅಪೇಕ್ಷಿಸಿದರೂ ನೋಡಲಿಲ್ಲ ಮತ್ತು ನೀವು ಕೇಳುವಂಥವುಗಳನ್ನು ಕೇಳ ಬೇಕೆಂದು ಅಪೇಕ್ಷಿಸಿದರೂ ಅವರು ಕೇಳಲಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.
25 And behold, a certain lawyer stood up tempting him, and saying, Teacher, having done what, shall I inherit life eternal?ಆಗ ಇಗೋ, ಒಬ್ಬಾನೊಬ್ಬ ನ್ಯಾಯಶಾಸ್ತ್ರಿಯು ಎದ್ದು ನಿಂತು ಆತನನ್ನು ಶೋಧಿಸುವದಕ್ಕಾಗಿ-- ಬೋಧಕನೇ, ನಾನು ನಿತ್ಯಜೀವವನ್ನು ಬಾಧ್ಯವಾಗಿ ಹೊಂದುವದಕ್ಕೆ ಏನು ಮಾಡಬೇಕು ಎಂದು ಕೇಳಿದನು.
26 And he said to him, What is written in the law? how readest thou?ಆತನು ಅವನಿಗೆ-- ನ್ಯಾಯಪ್ರಮಾಣದಲ್ಲಿ ಏನು ಬರೆದದೆ? ನೀನು ಹೇಗೆ ಓದುತ್ತೀ ಎಂದು ಕೇಳಿದನು.
27 But he answering said, Thou shalt love the Lord thy God with all thy heart, and with all thy soul, and with all thy strength, and with all thine understanding; and thy neighbour as thyself.ಅದಕ್ಕೆ ಅವನು ಪ್ರತ್ಯುತ್ತರವಾಗಿ--ನೀನು ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣಹೃದಯ ದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣಮನಸ್ಸಿನಿಂ ದಲೂ ಪ್ರೀತಿಸಬೇಕು; ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಅಂದನು.
28 And he said to him, Thou hast answered right: this do and thou shalt live.ಆಗ ಆತನು ಅವನಿಗೆ--ನೀನು ಸರಿಯಾಗಿ ಉತ್ತರ ಕೊಟ್ಟಿದ್ದೀ; ಅದರಂತೆಯೇ ಮಾಡು, ಆಗ ನೀನು ಬದುಕುವಿ ಅಂದನು.
29 But he, desirous of justifying himself, said to Jesus, And who is my neighbour?ಆದರೆ ಅವನು ತನ್ನನ್ನು ತಾನೇ ನೀತಿವಂತನೆಂದು ತೋರಿಸು ವದಕ್ಕೆ ಅಪೇಕ್ಷೆಯುಳ್ಳವನಾಗಿ ಯೇಸುವಿಗೆ--ನನ ನೆರೆಯವನು ಯಾರು ಎಂದು ಕೇಳಿದನು.
30 And Jesus replying said, A certain man descended from Jerusalem to Jericho and fell into [the hands of] robbers, who also, having stripped him and inflicted wounds, went away leaving him in a half-dead state.ಆಗ ಯೇಸು ಪ್ರತ್ಯುತ್ತರವಾಗಿ--ಒಬ್ಬಾನೊಬ್ಬ ಮನುಷ್ಯನು ಯೆರೂಸಲೇಮಿನಿಂದ ಇಳಿದು ಯೆರಿಕೋವಿಗೆ ಹೋಗುತ್ತಿದ್ದಾಗ ಕಳ್ಳರ ಮಧ್ಯದಲ್ಲಿ ಸಿಕ್ಕಿಬಿದ್ದನು. ಅವರು ಅವನ ಬಟ್ಟೆಯನ್ನು ತೆಗೆದುಹಾಕಿ ಅವನನ್ನು ಗಾಯ ಪಡಿಸಿ ಅರೆಜೀವ ಮಾಡಿ ಬಿಟ್ಟು ಹೊರಟುಹೋದರು.
31 And a certain priest happened to go down that way, and seeing him, passed on on the opposite side;ಆಗ ಅನಿರೀಕ್ಷಿತವಾಗಿ ಒಬ್ಬಾನೊಬ್ಬ ಯಾಜಕನು ಆ ಮಾರ್ಗವಾಗಿ ಬಂದು ಅವನನ್ನು ನೋಡಿ ಓರೆ ಯಾಗಿ ಹೋದನು.
32 and in like manner also a Levite, being at the spot, came and looked [at him] and passed on on the opposite side.ಅದೇ ಪ್ರಕಾರ ಒಬ್ಬ ಲೇವಿ ಯೂ ಆ ಸ್ಥಳಕ್ಕೆ ಬಂದು ಅವನನ್ನು ನೋಡಿ ಓರೆಯಾಗಿ ಹೋದನು.
33 But a certain Samaritan journeying came to him, and seeing [him], was moved with compassion,ಆದರೆ ಒಬ್ಬಾನೊಬ್ಬ ಸಮಾರ್ಯದ ವನು ಪ್ರಯಾಣ ಮಾಡುತ್ತಾ ಅವನಿದ್ದಲ್ಲಿಗೆ ಬಂದನು; ಅವನನ್ನು ನೋಡಿ ಅವನ ಮೇಲೆ ಕನಿಕರಪಟು
34 and came up [to him] and bound up his wounds, pouring in oil and wine; and having put him on his own beast, took him to [the] inn and took care of him.ಅವನ ಬಳಿಗೆ ಹೋಗಿ ಎಣ್ಣೆಯನ್ನೂ ದ್ರಾಕ್ಷಾರಸ ವನ್ನೂ ಹೊಯ್ದು ಅವನ ಗಾಯಗಳನ್ನು ಕಟ್ಟಿ ತನ್ನ ಸ್ವಂತ ಪಶುವಿನ ಮೇಲೆ ಕೂಡ್ರಿಸಿ ವಸತಿ ಗೃಹಕ್ಕೆ ತಂದು ಅವನನ್ನು ಆರೈಕೆ ಮಾಡಿದನು.
35 And on the morrow [as he left], taking out two denarii he gave them to the innkeeper, and said to him, Take care of him, and whatsoever thou shalt expend more, *I* will render to thee on my coming back.ಮರುದಿವಸ ಅವನು ಹೊರಟು ಹೋಗುತ್ತಿದ್ದಾಗ ಎರಡು ನಾಣ್ಯ ಗಳನ್ನು ತೆಗೆದು ವಸತಿಗೃಹದ ಯಜಮಾನನಿಗೆ ಕೊಟ್ಟು ಅವನಿಗೆ--ಇವನನ್ನು ಆರೈಕೆ ಮಾಡು, ನೀನು ಏನಾ ದರೂ ಹೆಚ್ಚು ವೆಚ್ಚ ಮಾಡಿದರೆ ನಾನು ತಿರಿಗಿ ಬಂದಾಗ ಕೊಟ್ಟು ತೀರಿಸುತ್ತೇನೆ ಅಂದನು.
36 Which [now] of these three seems to thee to have been neighbour of him who fell into [the hands of] the robbers?ಈ ಮೂವರಲ್ಲಿ ಯಾರು ಆ ಕಳ್ಳರ ನಡುವೆ ಸಿಕ್ಕಿ ಬಿದ್ದವನಿಗೆ ನೆರೆಯವ ನಾದನೆಂದು ನೀನು ಯೋಚಿಸುತ್ತೀ ಎಂದು ಕೇಳಿದ್ದಕ್ಕೆ
37 And he said, He that shewed him mercy. And Jesus said to him, Go, and do *thou* likewise.ಅವನು-- ಯಾವನು ಅವನ ಮೇಲೆ ಕನಿಕರ ತೋರಿಸಿದನೋ ಅವನೇ ಅಂದನು. ಆಗ ಯೇಸು ಅವನಿಗೆ--ಹೋಗು, ನೀನೂ ಅದರಂತೆಯೇ ಮಾಡು ಎಂದು ಹೇಳಿದನು.
38 And it came to pass as they went that *he* entered into a certain village; and a certain woman, Martha by name, received him into her house.ಇದಾದ ಮೇಲೆ ಅವರು ಹೋಗುತ್ತಿದ್ದಾಗ ಆತನು ಒಂದಾನೊಂದು ಹಳ್ಳಿಯನ್ನು ಪ್ರವೇಶಿಸಿದನು; ಆಗ ಮಾರ್ಥಳೆಂಬ ಒಬ್ಬ ಸ್ತ್ರೀಯು ಆತನನ್ನು ತನ್ನ ಮನೆಯೊಳಗೆ ಅಂಗೀಕರಿಸಿಕೊಂಡಳು.
39 And she had a sister called Mary, who also, having sat down at the feet of Jesus was listening to his word.ಆಕೆಗೆ ಮರಿಯಳೆಂಬ ಒಬ್ಬ ಸಹೋದರಿ ಇದ್ದಳು. ಆಕೆಯು ಯೇಸುವಿನ ಪಾದಗಳ ಬಳಿಯಲ್ಲಿ ಕೂತು ಆತನ ವಾಕ್ಯವನ್ನು ಕೇಳುತ್ತಿದ್ದಳು.
40 Now Martha was distracted with much serving, and coming up she said, Lord, dost thou not care that my sister has left me to serve alone? Speak to her therefore that she may help me.ಆದರೆ ಮಾರ್ಥಳು ಬಹಳ ಕೆಲಸದ ನಿಮಿತ್ತವಾಗಿ ಬೇಸರಗೊಂಡು ಆತನ ಬಳಿಗೆ ಬಂದು--ಕರ್ತನೇ, ಕೆಲಸ ಮಾಡುವದಕ್ಕೆ ನನ್ನ ಸಹೋದರಿಯು ನನ್ನೊಬ್ಬಳನ್ನೇ ಬಿಟ್ಟಿರುವದು ನಿನಗೆ ಚಿಂತೆಯಿಲ್ಲವೋ? ಆದದರಿಂದ ನನಗೆ ಸಹಾಯಮಾಡುವದಕ್ಕಾಗಿ ಅವಳಿಗೆ ಹೇಳು ಅಂದಳು.
41 But Jesus answering said to her, Martha, Martha, thou art careful and troubled about many things;ಆದರೆ ಯೇಸು ಪ್ರತ್ಯುತ್ತರವಾಗಿ ಆಕೆಗೆ--ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯಗಳಿಗಾಗಿ ಚಿಂತಿಸಿ ತೊಂದರೆಗೆ ಒಳಗಾಗಿದ್ದೀ;
42 but there is need of one, and Mary has chosen the good part, the which shall not be taken from her.ಆದರೆ ಅವಶ್ಯವಾದದ್ದು ಒಂದೇ; ಮರಿಯಳು ಆ ಒಳ್ಳೇಭಾಗವನ್ನೇ ಆರಿಸಿ ಕೊಂಡಿದ್ದಾಳೆ. ಅದು ಆಕೆಯಿಂದ ತೆಗೆಯಲ್ಪಡುವದಿಲ್ಲ ಅಂದನು.
Kannada Bible