Luke 1 - ASV (Kannada)
1 Forasmuch as many have taken in hand to draw up a narrative concerning those matters which have been fulfilled among us,ನಮ್ಮಲ್ಲಿ ಬಹು ನಿಶ್ಚಯವಾಗಿ ನಂಬಿ ಕೊಂಡಿರುವ ವಿಷಯಗಳ ಪ್ರಕಟನೆಯನ್ನು ಕ್ರಮವಾಗಿ ಬರೆಯುವದಕ್ಕೆ ಅನೇಕರು ಕೈಕೊಂಡು
2 even as they delivered them unto us, who from the beginning wer eyewitnesses and ministers of the word,ಮೊದಲಿನಿಂದಲೂ ಕಣ್ಣಾರೆ ಕಂಡ ಸಾಕ್ಷಿಗಳು ಮತ್ತು ವಾಕ್ಯಪರಿಚಾರಕರು ಅವುಗಳನ್ನು ನಮಗೆ ಒಪ್ಪಿಸಿಕೊ ಟ್ಟದ್ದರಿಂದ
3 it seemed good to me also, having traced the course of all things accurately from the first, to write unto thee in order, most excellent Theophilus;ಅತ್ಯುತ್ತಮನಾದ ಥೆಯೊಫಿಲನೇ, ಮೊದಲಿ ನಿಂದಲೂ ಎಲ್ಲವುಗಳನ್ನು ಪೂರ್ಣವಾಗಿ ತಿಳಿದುಕೊಂಡಿ ರುವ ನಾನು ಸಹ ಅವುಗಳನ್ನು ಕ್ರಮವಾಗಿ ನಿನಗೆ ಬರೆಯುವದು ಒಳ್ಳೇದೆಂದು ನನಗೆ ತೋಚಿತು;
4 that thou mightest know the certainty concerning the things wherein thou wast instructed.ಹೀಗೆ ನಿನಗೆ ಬೋಧಿಸಲ್ಪಟ್ಟವುಗಳು ಸ್ಥಿರವಾದವುಗಳೆಂದು ಇದರಿಂದ ನೀನು ತಿಳಿಯಬಹುದು.
5 There was in the days of Herod, king of Judaea, a certain priest named Zacharias, of the course of Abijah: and he had a wife of the daughters of Aaron, and her name was Elisabeth.ಯೂದಾಯದ ಅರಸನಾದ ಹೆರೋದನ ದಿನ ಗಳಲ್ಲಿ ಅಬೀಯನ ವರ್ಗಕ್ಕೆ ಸೇರಿದ ಜಕರಿಯನೆಂದು ಹೆಸರಿದ್ದ ಒಬ್ಬ ಯಾಜಕನಿದ್ದನು. ಅವನ ಹೆಂಡತಿಯು ಆರೋನನ ಕುಮಾರ್ತೆಯರಿಗೆ ಸಂಬಂಧಪಟ್ಟವಳು. ಆಕೆಯ ಹೆಸರು ಎಲಿಸಬೇತ್.
6 And they were both righteous before God, walking in all the commandments and ordinances of the Lord blameless.ಅವರಿಬ್ಬರೂ ಕರ್ತನ ಎಲ್ಲಾ ಆಜ್ಞೆಗಳನ್ನೂ ನ್ಯಾಯವಿಧಿಗಳನ್ನು ತಪ್ಪಿಲ್ಲದೆ ಕೈಕೊಂಡು ದೇವರ ಮುಂದೆ ನೀತಿವಂತರಾಗಿದ್ದರು.
7 And they had no child, because that Elisabeth was barren, and they both were `now' well stricken in years.ಎಲಿಸಬೇತಳು ಬಂಜೆಯಾದದರಿಂದ ಅವರಿಗೆ ಮಕ್ಕ ಳಿರಲಿಲ್ಲ; ಅವರಿಬ್ಬರೂ ಬಹಳ ಪ್ರಾಯಹೋದವರಾ ಗಿದ್ದರು.
8 Now it came to pass, while he executed the priest's office before God in the order of his course,ಹೀಗಿರಲಾಗಿ ಅವನು ತನ್ನ ವರ್ಗದ ಸರತಿಯ ಮೇರೆಗೆ ದೇವರ ಮುಂದೆ ಯಾಜಕನ ಉದ್ಯೋಗವನ್ನು ಮಾಡುತ್ತಿದ್ದಾಗ
9 according to the custom of the priest's office, his lot was to enter into the temple of the Lord and burn incense.ಯಾಜಕೋದ್ಯೋಗದ ಪದ್ಧತಿಯ ಪ್ರಕಾರ ಅವನು ಕರ್ತನ ಆಲಯದಲ್ಲಿ ಪ್ರವೇಶಿಸಿ ಧೂಪವನ್ನು ಸುಡುವದು ಅವನ ಪಾಲಿಗೆ ಬಂತು.
10 And the whole multitude of the people were praying without at the hour of incense.ಧೂಪಾರ್ಪಣೆಯ ಸಮಯದಲ್ಲಿ ಜನ ಸಮೂಹ ವೆಲ್ಲಾ ಹೊರಗೆ ಪ್ರಾರ್ಥಿಸುತ್ತಿದ್ದರು.
11 And there appeared unto him an angel of the Lord standing on the right side of altar of incense.ಆಗ ಧೂಪ ವೇದಿಯ ಬಲಗಡೆಯಲ್ಲಿ ನಿಂತುಕೊಂಡಿದ್ದ ಕರ್ತನ ದೂತನು ಅವನಿಗೆ ಕಾಣಿಸಿಕೊಂಡನು.
12 And Zacharias was troubled when he saw `him', and fear fell upon him.ಜಕರೀ ಯನು ಅವನನ್ನು ನೋಡಿ ಕಳವಳದಿಂದ ಭಯಹಿಡಿ ದವನಾದನು.
13 But the angel said unto him, Fear not, Zacharias: because thy supplication is heard, and thy wife Elisabeth shall bear thee a son, and thou shalt call his name John.ಆದರೆ ಆ ದೂತನು ಅವನಿಗೆ--ಜಕರೀಯನೇ, ಭಯಪಡಬೇಡ; ಯಾಕಂದರೆ ನಿನ್ನ ಪ್ರಾರ್ಥನೆಯು ಕೇಳಲ್ಪಟ್ಟಿದೆ; ನಿನ್ನ ಹೆಂಡತಿಯಾದ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು. ನೀನು ಅವನನ್ನು ಯೋಹಾನನೆಂದು ಕರೆಯಬೇಕು.
14 And thou shalt have joy and gladness; and many shall rejoice at his birth.ನಿನಗೆ ಆನಂದವೂ ಉಲ್ಲಾಸವೂ ಆಗುವದು; ಅನೇಕರು ಅವನ ಜನನದಲ್ಲಿ ಆನಂದಿಸುವರು.
15 For he shall be great in the sight of the Lord, and he shall drink no wine nor strong drink; and he shall be filled with the Holy Spirit, even from his mother's womb.ಯಾಕಂದರೆ ಅವನು ಕರ್ತನ ದೃಷ್ಟಿಯಲ್ಲಿ ದೊಡ್ಡವ ನಾಗಿದ್ದು ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿ ಯುವದೇ ಇಲ್ಲ; ಅವನು ತಾಯಿಯ ಗರ್ಭದಿಂದಲೇ ಪರಿಶುದ್ಧಾತ್ಮಭರಿತನಾಗಿರುವನು.
16 And many of the children of Israel shall be turn unto the Lord their God.ಅವನು ಇಸ್ರಾ ಯೇಲಿನ ಮಕ್ಕಳಲ್ಲಿ ಅನೇಕರನ್ನು ಅವರ ದೇವರಾದ ಕರ್ತನ ಕಡೆಗೆ ತಿರುಗಿಸುವನು.
17 And he shall go before his face in the spirit and power of Elijah, to turn the hearts of the fathers to the children, and the disobedient `to walk' in the wisdom of the just; to make ready for the Lord a people prepared `for him'.ಅವನು ತಂದೆಗಳ ಹೃದಯಗಳನ್ನು ಮಕ್ಕಳಕಡೆಗೂ ಅವಿಧೇಯರನ್ನು ನೀತಿವಂತರ ಜ್ಞಾನಕ್ಕೂ ತಿರುಗಿಸಿ ಕರ್ತನಿಗೋಸ್ಕರ ಜನರನ್ನು ಸಿದ್ಧಮಾಡುವದಕ್ಕೆ ಎಲೀಯನ ಆತ್ಮದಲ್ಲಿ ಯೂ ಬಲದಲ್ಲಿಯೂ ಆತನ ಮುಂದೆ ಹೋಗುವನು ಎಂದು ಹೇಳಿದನು.
18 And Zacharias said unto the angel, Whereby shall I know this? for I am an old man, and my wife well stricken in years.ಆಗ ಜಕರೀಯನು ಆ ದೂತನಿಗೆ--ಇದನ್ನು ನಾನು ಯಾವದರಿಂದ ತಿಳು ಕೊಳ್ಳಲಿ? ಯಾಕಂದರೆ ನಾನು ಮುದುಕನು; ನನ್ನ ಹೆಂಡತಿಯೂ ಪ್ರಾಯಗತಿಸಿದವಳು ಅಂದನು.
19 And the angel answering said unto him, I am Gabriel, that stand in the presence of God; and I was sent to speak unto thee, and to bring thee these good tidings.ಅದಕ್ಕೆ ಆ ದೂತನು ಪ್ರತ್ಯುತ್ತರವಾಗಿ--ನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು, ಈಗ ನಿನ್ನ ಸಂಗಡ ಮಾತನಾಡುವದಕ್ಕೂ ಈ ಸಂತೋಷದ ವರ್ತಮಾನವನ್ನು ನಿನಗೆ ತಿಳಿಸುವದಕ್ಕೂ ಕಳುಹಿಸ ಲ್ಪಟ್ಟಿದ್ದೇನೆ.
20 And behold, thou shalt be silent and not able to speak, until the day that these things shall come to pass, because thou believedst not my words, which shall be fulfilled in their season.ಇಗೋ, ತಕ್ಕ ಕಾಲದಲ್ಲಿ ನೆರವೇರುವ ನನ್ನ ಮಾತುಗಳನ್ನು ನೀನು ನಂಬದೆ ಹೋದದರಿಂದ ಈ ಸಂಗತಿಗಳು ಈಡೇರುವ ದಿನದ ವರೆಗೆ ನೀನು ಮೂಕನಾಗಿದ್ದು ಮಾತನಾಡಲಾರದೆ ಇರುವಿ ಅಂದನು.
21 And the people were waiting for Zacharias, and they marvelled while he tarried in the temple.ಆಗ ಜಕರೀಯನಿಗಾಗಿ ಕಾದುಕೊಂಡಿದ್ದ ಜನರು ಅವನು ದೇವಾಲಯದಲ್ಲಿ ಬಹಳ ತಡಮಾಡಿದ್ದಕ್ಕೆ ಆಶ್ಚರ್ಯಪಟ್ಟರು.
22 And when he came out, he could not speak unto them: and they perceived that he had seen a vision in the temple: and he continued making signs unto them, and remained dumb.ಅವನು ಹೊರಗೆ ಬಂದಾಗ ಅವರೊಂದಿಗೆ ಮಾತನಾಡಲಾರದೆ ಇದ್ದನು; ಅದಕ್ಕ ವರು ಅವನು ದೇವಾಲಯದಲ್ಲಿ ಒಂದು ದರ್ಶನವನ್ನು ಕಂಡನೆಂದು ಗ್ರಹಿಸಿದರು; ಯಾಕಂದರೆ ಅವನು ಅವರಿಗೆ ಸನ್ನೆ ಮಾಡುತ್ತಾ ಮಾತಿಲ್ಲದವನಾಗಿದ್ದನು.
23 And it came to pass, when the days of his ministration were fulfilled, he departed unto his house.ಇದಾದ ಮೇಲೆ ತನ್ನ ಸೇವೆಯ ದಿನಗಳು ಮುಗಿದ ಕೂಡಲೆ ಅವನು ತನ್ನ ಸ್ವಂತ ಮನೆಗೆ ಹೊರಟು ಹೋದನು.
24 And after these days Elisabeth his wife conceived; and she hid herself five months, saying,ಆ ದಿವಸಗಳಾದ ಮೇಲೆ ಅವನ ಹೆಂಡತಿಯಾದ ಎಲಿಸಬೇತಳು ಗರ್ಭಿಣಿಯಾಗಿ ಐದು ತಿಂಗಳು ತನ್ನನ್ನು ಮರೆಮಾಡಿಕೊಂಡು--
25 Thus hath the Lord done unto me in the days wherein he looked upon `me', to take away my reproach among men.ಜನರಲ್ಲಿ ನನಗಿದ್ದ ಅವ ಮಾನವನ್ನು ತೆಗೆದುಹಾಕುವದಕ್ಕಾಗಿ ಕರ್ತನು ನನ್ನ ಮೇಲೆ ದೃಷ್ಟಿಯಿಟ್ಟ ದಿನಗಳಲ್ಲಿ ನನಗೆ ಹೀಗೆ ಮಾಡಿದನು ಎಂದು ಹೇಳಿದಳು.
26 Now in the sixth month the angel Gabriel was sent from God unto a city of Galilee, named Nazareth,ಆರನೆಯ ತಿಂಗಳಿನಲ್ಲಿ ಗಲಿಲಾಯ ಪಟ್ಟಣದ ನಜರೇತೆಂಬ ಊರಿಗೆ ದೇವರಿಂದ ಗಬ್ರಿಯೇಲನೆಂಬ ದೂತನು
27 to a virgin betrothed to a man whose name was Joseph, of the house of David; and the virgin's name was Mary.ದಾವೀದನ ಮನೆತನದವನಾದ ಯೋಸೇ ಫನಿಗೆ ನಿಶ್ಚಯಮಾಡಲ್ಪಟ್ಟ ಮರಿಯಳೆಂಬ ಒಬ್ಬ ಕನ್ಯೆಯ ಬಳಿಗೆ ಕಳುಹಿಸಲ್ಪಟ್ಟನು.
28 And he came in unto her, and said, Hail, thou that art highly favored, the Lord `is' with thee.ಆ ದೂತನು ಆಕೆಗೆ--ಅಪಾರ ದಯೆ ಹೊಂದಿದವಳೇ, ನಿನಗೆ ವಂದನೆ; ಕರ್ತನು ನಿನ್ನೊಂದಿಗಿದ್ದಾನೆ; ಸ್ತ್ರೀಯರಲ್ಲಿ ನೀನು ಧನ್ಯಳೇ ಎಂದು ಹೇಳಿದನು.
29 But she was greatly troubled at the saying, and cast in her mind what manner of salutation this might be.ಆಕೆಯು ಅವನನ್ನು ನೋಡಿ ಅವನ ಮಾತಿಗೆ ಕಳವಳಗೊಂಡು ಇದು ಎಂಥಾತರವಾದ ವಂದನೆ ಎಂದು ತನ್ನ ಮನದಲ್ಲಿ ಯೋಚಿಸುತ್ತಿರುವಾಗ
30 And the angel said unto her, Fear not, Mary: for thou hast found favor with God.ಆ ದೂತನು ಆಕೆಗೆ-- ಮರಿಯಳೇ, ಹೆದರಬೇಡ; ಯಾಕಂದರೆ ನೀನು ದೇವರ ದಯೆಯನ್ನು ಹೊಂದಿದ್ದೀ;
31 And behold, thou shalt conceive in thy womb, and bring forth a son, and shalt call his name JESUS.ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸು ಎಂದು ಹೆಸರಿಡಬೇಕು.
32 He shall be great, and shall be called the Son of the Most High: and the Lord God shall give unto him the throne of his father David:ಆತನು ದೊಡ್ಡವನಾಗಿದ್ದು ಮಹೋನ್ನತನ ಕುಮಾರನೆಂದು ಕರೆಯಲ್ಪಡುವನು; ದೇವರಾದ ಕರ್ತನು ಆತನ ತಂದೆ ಯಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡು ವನು.
33 and he shall reign over the house of Jacob for ever; and of his kingdom there shall be no end.ಆತನು ಯಾಕೋಬನ ಮನೆತನವನ್ನು ಸದಾ ಕಾಲವೂ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ ಎಂದು ಹೇಳಿದನು.
34 And Mary said unto the angel, How shall this be, seeing I know not a man?ಆಗ ಮರಿಯಳು ಆ ದೂತ ನಿಗೆ--ಇದು ಹೇಗಾದೀತು? ನಾನು ಪುರುಷನನ್ನು ಅರಿತವಳಲ್ಲವಲ್ಲಾ ಅಂದಳು.
35 And the angel answered and said unto her, The Holy Spirit shall come upon thee, and the power of the Most High shall overshadow thee: wherefore also the holy thing which is begotten shall be called the Son of God.ಅದಕ್ಕೆ ಆ ದೂತನು ಪ್ರತ್ಯುತ್ತರವಾಗಿ ಆಕೆಗೆ--ಪವಿತ್ರಾತ್ಮನು ನಿನ್ನ ಮೇಲೆ ಬರುವನು, ಮಹೋನ್ನತನ ಶಕ್ತಿಯು ನಿನ್ನನ್ನು ಆವರಿಸಿ ಕೊಳ್ಳುವದು; ಆದದರಿಂದ ನಿನ್ನಿಂದ ಹುಟ್ಟುವ ಆ ಪವಿತ್ರವಾದ ಶಿಶುವು ದೇವರ ಮಗನೆಂದು ಕರೆಯ ಲ್ಪಡುವನು.
36 And behold, Elisabeth thy kinswoman, she also hath conceived a son in her old age; and this is the sixth month with her that was called barren.ಇಗೋ, ಬಂಜೆಯೆಂದು ಕರೆಯಲ್ಪಟ್ಟ ನಿನ್ನ ಬಂಧುವಾದ ಎಲಿಸಬೇತಳು ಸಹ ತನ್ನ ಮುಪ್ಪಿನ ಪ್ರಾಯದಲ್ಲಿ ಮಗನನ್ನು ಗರ್ಭಧರಿಸಿದ್ದಾಳೆ. ಆಕೆಗೆ ಇದು ಆರನೆಯ ತಿಂಗಳು.
37 For no word from God shall be void of power.ಯಾಕಂದರೆ ದೇವರಿಗೆ ಅಸಾಧ್ಯವಾದದ್ದು ಯಾವದೂ ಇಲ್ಲ ಎಂದು ಹೇಳಿ ದನು.
38 And Mary said, Behold, the handmaid of the Lord; be it unto me according to thy word. And the angel departed from her.ಆಗ ಮರಿಯಳು--ನೋಡು, ನಾನು ಕರ್ತನ ದಾಸಿ; ನಿನ್ನ ಮಾತಿನಂತೆ ನನಗೆ ಆಗಲಿ ಅಂದಳು; ಆ ದೂತನು ಆಕೆಯ ಬಳಿಯಿಂದ ಹೊರಟುಹೋದನು.
39 And Mary arose in these days and went into the hill country with haste, into a city of Judah;ಆ ದಿವಸಗಳಲ್ಲಿ ಮರಿಯಳು ಎದ್ದು ಬೆಟ್ಟದ ಸೀಮೆಯ ಯೆಹೂದದ ಪಟ್ಟಣಕ್ಕೆ ಅವಸರದಿಂದ ಹೋಗಿ
40 and entered into the house of Zacharias and saluted Elisabeth.ಜಕರೀಯನ ಮನೆಯನ್ನು ಪ್ರವೇಶಿಸಿ ಎಲಿಸಬೇತಳನ್ನು ವಂದಿಸಿದಳು.
41 And it came to pass, when Elisabeth heard the salutation of Mary, the babe leaped in her womb; and Elisabeth was filled with the Holy Spirit;ಎಲಿಸಬೇತಳು ಮರಿಯಳ ವಂದನೆಯನ್ನು ಕೇಳಿದಾಗ ಅವಳ ಗರ್ಭ ದಲ್ಲಿದ್ದ ಕೂಸು ಹಾರಾಡಿತು; ಎಲಿಸಬೇತಳು ಪರಿಶುದ್ಧಾ ತ್ಮಭರಿತಳಾಗಿ
42 and she lifted up her voice with a loud cry, and said, Blessed `art' thou among women, and blessed `is' the fruit of thy womb.ಗಟ್ಟಿಯಾದ ಧ್ವನಿಯಿಂದ ಮಾತ ನಾಡಿ--ಸ್ತ್ರೀಯರಲ್ಲಿ ನೀನು ಧನ್ಯಳೇ; ನಿನ್ನ ಗರ್ಭಫಲವು ಆಶೀರ್ವದಿಸಲ್ಪಟ್ಟದ್ದೇ.
43 And whence is this to me, that the mother of my Lord should come unto me?ನನ್ನ ಕರ್ತನ ತಾಯಿಯು ನನ್ನ ಬಳಿಗೆ ಬರುವದು ನನಗೆಲ್ಲಿಂದಾಯಿತು?
44 For behold, when the voice of thy salutation came into mine ears, the babe leaped in my womb for joy.ಇಗೋ, ನಿನ್ನ ವಂದನೆಯ ಧ್ವನಿಯು ನನ್ನ ಕಿವಿ ಗಳಲ್ಲಿ ಬಿದ್ದ ಕೂಡಲೆ ಕೂಸು ನನ್ನ ಗರ್ಭದಲ್ಲಿ ಉಲ್ಲಾಸದಿಂದ ಹಾರಾಡಿತು.
45 And blessed `is' she that believed; for there shall be a fulfilment of the things which have been spoken to her from the Lord.ಕರ್ತನಿಂದ ತನಗೆ ಹೇಳಲ್ಪಟ್ಟವುಗಳು ನೆರವೇರುವವೆಂದು ನಂಬಿದವಳು ಧನ್ಯಳು ಎಂದು ಹೇಳಿದಳು.
46 And Mary said, My soul doth magnify the Lord,ಆಗ ಮರಿಯಳು--ನನ್ನ ಪ್ರಾಣವು ಕರ್ತನನ್ನು ಘನಪಡಿಸುತ್ತದೆ;
47 And my spirit hath rejoiced in God my Saviour.ನನ್ನ ಆತ್ಮವು ನನ್ನ ರಕ್ಷಕನಾದ ದೇವರಲ್ಲಿ ಉಲ್ಲಾಸಗೊಂಡಿದೆ;
48 For he hath looked upon the low estate of his handmaid: For behold, from henceforth all generations shall call me blessed.ಆತನು ತನ್ನ ದಾಸಿಯ ದೀನಸ್ಥಿತಿಯನ್ನು ಲಕ್ಷಿಸಿದ್ದಾನೆ. ಇಗೋ, ಇಂದಿನಿಂದ ತಲತಲಾಂತರಗಳವರು ನನ್ನನ್ನು ಧನ್ಯಳೆಂದು ಕರೆಯುವರು.
49 For he that is mighty hath done to me great things; And holy is his name.ಪರಾಕ್ರಮಿಯಾದಾತನು ನನಗೆ ಮಹತ್ತಾದವುಗಳನ್ನು ಮಾಡಿದ್ದಾನೆ; ಆತನ ಹೆಸರು ಪರಿಶುದ್ಧವಾದದ್ದು.
50 And his mercy is unto generations and generations On them that fear him.ಆತನಿಗೆ ಭಯಪಡು ವವರ ಮೇಲೆ ಆತನ ಕರುಣೆಯು ತಲತಲಾಂತರ ಗಳಿಗೂ ಇರುವದು.
51 He hath showed strength with his arm; He hath scattered the proud in the imagination of their heart.ಆತನು ತನ್ನ ಬಾಹುಬಲವನ್ನು ತೋರಿಸಿ ಗರ್ವಿಷ್ಠರನ್ನು ಅವರ ಹೃದಯದ ಕಲ್ಪನೆಗಳ ನಿಮಿತ್ತವಾಗಿ ಅವರನ್ನು ಚದರಿಸಿಬಿಟ್ಟಿದ್ದಾನೆ;
52 He hath put down princes from `their' thrones, And hath exalted them of low degree.ಬಲಿಷ್ಠ ರನ್ನು ಅವರ ಸ್ಥಾನಗಳಿಂದ ಕೆಳಗೆ ದೊಬ್ಬಿ ದೀನರನ್ನು ಮೇಲಕ್ಕೆ ಎತ್ತಿದ್ದಾನೆ.
53 The hungry he hath filled with good things; And the rich he hath sent empty away.ಹಸಿದವರನ್ನು ಒಳ್ಳೆಯವು ಗಳಿಂದ ತೃಪ್ತಿಪಡಿಸಿ ಐಶ್ವರ್ಯವಂತರನ್ನು ಬರಿದಾಗಿ ಕಳುಹಿಸಿಬಿಟ್ಟಿದ್ದಾನೆ.
54 He hath given help to Israel his servant, That he might remember mercyತನ್ನ ಕರುಣೆಯ ಜ್ಞಾಪಕಾರ್ಥ ವಾಗಿ ತನ್ನ ಸೇವಕನಾದ ಇಸ್ರಾಯೇಲನಿಗೆ ಸಹಾಯ ಮಾಡಿದ್ದಾನೆ.
55 (As he spake unto our fathers) Toward Abraham and his seed for ever.ಇದಲ್ಲದೆ ನಮ್ಮ ಪಿತೃಗಳಿಗೂ ಅಬ್ರ ಹಾಮನಿಗೂ ಅವನ ಸಂತತಿಗೂ ಸದಾಕಾಲಕ್ಕೆ ಆತನು ಹೇಳಿದಂತೆ ಮಾಡಿದ್ದಾನೆ ಅಂದಳು.
56 And Mary abode with her about three months, and returned unto her house.ಮರಿ ಯಳು ಸುಮಾರು ಮೂರು ತಿಂಗಳು ಅವಳ ಜೊತೆ ಯಲ್ಲಿದ್ದು ತನ್ನ ಸ್ವಂತ ಮನೆಗೆ ಹಿಂದಿರುಗಿಹೋದಳು.
57 Now Elisabeth's time was fulfilled that she should be delivered; and she brought forth a son.ಇದಲ್ಲದೆ ಎಲಿಸಬೇತಳಿಗೆ ಹೆರಿಗೆಯ ಸಮಯವು ಪೂರ್ಣವಾದಾಗ ಆಕೆಯು ಒಬ್ಬ ಮಗನನ್ನು ಹೆತ್ತಳು.
58 And her neighbors and her kinsfolk heard that the Lord had magnified his mercy towards her; and they rejoiced with her.ಆಗ ಕರ್ತನು ತನ್ನ ಮಹಾಕರುಣೆಯನ್ನು ಆಕೆಯ ಮೇಲೆ ತೋರಿಸಿದ್ದನ್ನು ಆಕೆಯ ನೆರೆಹೊರೆಯವರೂ ಬಂಧುಗಳೂ ಕೇಳಿ ಆಕೆಯ ಕೂಡ ಸಂತೋಷಪಟ್ಟರು.
59 And it came to pass on the eighth day, that they came to circumcise the child; and they would have called him Zacharias, after the name of the father.ತರುವಾಯ ಅವರು ಎಂಟನೇ ದಿನದಲ್ಲಿ ಆ ಮಗುವಿಗೆ ಸುನ್ನತಿ ಮಾಡಿಸುವದಕ್ಕಾಗಿ ಬಂದು ಅವನ ತಂದೆಯ ಹೆಸರಿನಂತೆ ಅವನನ್ನು ಜಕರೀಯನೆಂದು ಕರೆದರು.
60 And his mother answered and said, Not so; but he shall be called John.ಅದಕ್ಕೆ ಅವನ ತಾಯಿಯು ಪ್ರತ್ಯುತ್ತರ ವಾಗಿ--ಹಾಗಲ್ಲ. ಅವನು ಯೋಹಾನನೆಂದು ಕರೆಯ ಲ್ಪಡಬೇಕು ಅಂದಳು.
61 And they said unto her, There is none of thy kindred that is called by this name.ಅದಕ್ಕವರು ಆಕೆಗೆ--ನಿನ್ನ ಬಂಧುಗಳಲ್ಲಿ ಈ ಹೆಸರಿನಿಂದ ಕರೆಯಲ್ಪಟ್ಟವರು ಒಬ್ಬರೂ ಇಲ್ಲ ಅಂದರು.
62 And they made signs to his father, what he would have him called.ಅವನು ಯಾವ ಹೆಸರಿ ನಿಂದ ಕರೆಯಲ್ಪಡಬೇಕೆಂದು ಅವನ ತಂದೆಗೆ ಅವರು ಸನ್ನೆ ಮಾಡಿದರು.
63 And he asked for a writing tablet, and wrote, saying, His name is John. And they marvelled all.ಆಗ ಅವನು ಒಂದು ಬರೆಯುವ ಹಲಗೆಯನ್ನು ಕೇಳಿ ಅವನ ಹೆಸರು ಯೋಹಾನನು ಎಂದು ಬರೆದನು. ಆಗ ಅವರೆಲ್ಲರೂ ಆಶ್ಚರ್ಯಪಟ್ಟರು.
64 And his mouth was opened immediately, and his tongue `loosed', and he spake, blessing God.ಕೂಡಲೆ ಅವನ ಬಾಯಿ ತೆರೆಯಲ್ಪಟ್ಟು ಅವನ ನಾಲಿಗೆಯು ಸಡಿಲವಾಯಿತು ಮತ್ತು ಅವನು ಮಾತ ನಾಡಿ ದೇವರನ್ನು ಕೊಂಡಾಡಿದನು.
65 And fear came on all that dwelt round about them: and all these sayings were noised abroad throughout all the hill country of Judaea.ಆಗ ಅವರ ಸುತ್ತಲೂ ಮತ್ತು ಎಲ್ಲಾ ಯೂದಾಯದ ಬೆಟ್ಟದ ಸೀಮೆಯಲ್ಲಿಯೂ ಈ ಸಂಗತಿಗಳೆಲ್ಲಾ ಹರಡಿದವು.
66 And all that heard them laid them up in their heart, saying, What then shall this child be? For the hand of the Lord was with him.ಕೇಳಿದವರೆಲ್ಲರೂ ಅವುಗಳನ್ನು ತಮ್ಮ ಹೃದಯದಲ್ಲಿ ಇಟ್ಟುಕೊಂಡು--ಈ ಕೂಸೂ ಎಂಥದ್ದಾಗುವನೊ ಎಂದು ಅಂದುಕೊಂಡರು. ಕರ್ತನ ಹಸ್ತವು ಅವನ ಸಂಗಡ ಇತ್ತು.
67 And his father Zacharias was filled with the Holy Spirit, and prophesied, saying,ಅವನ ತಂದೆಯಾದ ಜಕರೀಯನು ಪವಿತ್ರಾತ್ಮ ಭರಿತನಾಗಿ ಪ್ರವಾದಿಸುತ್ತಾ--
68 Blessed `be' the Lord, the God of Israel; For he hath visited and wrought redemption for his people,ಇಸ್ರಾಯೇಲಿನ ದೇವರಾದ ಕರ್ತನು ಸ್ತುತಿ ಹೊಂದಲಿ, ಯಾಕಂದರೆ ಆತನು ತನ್ನ ಜನರನ್ನು ಸಂಧಿಸಿ ಅವರನ್ನು ವಿಮೋಚಿ ಸಿದ್ದಾನೆ.
69 And hath raised up a horn of salvation for us In the house of his servant Davidಆತನು ತನ್ನ ಸೇವಕನಾದ ದಾವೀದನ ಮನೆತನದಲ್ಲಿ ನಮಗಾಗಿ ರಕ್ಷಣೆಯ ಕೊಂಬನ್ನು ಎತ್ತಿ ದ್ದಾನೆ.
70 (As he spake by the mouth of his holy prophets that have been from of old),ಲೋಕಾದಿಯಿಂದ ಆತನು ತನ್ನ ಪರಿಶುದ್ಧ ಪ್ರವಾದಿಗಳ ಬಾಯಿಂದ ಮಾತನಾಡಿದ ಪ್ರಕಾರ
71 Salvation from our enemies, and from the hand of all that hate us;ನಾವು ನಮ್ಮ ಶತ್ರುಗಳಿಂದಲೂ ನಮ್ಮನ್ನು ಹಗೆ ಮಾಡುವವರ ಕೈಯಿಂದಲೂ ರಕ್ಷಿಸಲ್ಪಡುವಂತೆ
72 To show mercy towards, our fathers, And to remember his holy covenant;ನಮ್ಮ ಪಿತೃಗಳಿಗೆ ವಾಗ್ದಾನ ಮಾಡಿದ ಕರುಣೆಯನು ನೆರವೇರಿಸಲು ತನ್ನ ಪರಿಶುದ್ಧ ಒಡಂಬಡಿಕೆಯನ್ನು ನೆನಪಿಗೆ ತಂದು
73 The oath which he spake unto Abraham our father,ನಮ್ಮ ಪಿತೃವಾದ ಅಬ್ರಹಾಮನಿಗೆ ಆಣೆಯಿಟ್ಟು ಪ್ರಮಾಣ ಮಾಡಿದಂತೆ
74 To grant unto us that we being delivered out of the hand of our enemies Should serve him without fear,ನಾವು ನಮ್ಮ ಶತ್ರುಗಳ ಕೈಯಿಂದ ಬಿಡಿಸಲ್ಪಟ್ಟು ಭಯವಿಲ್ಲದವರಾಗಿ
75 In holiness and righteousness before him all our days.ನಮ್ಮ ಜೀವಮಾನದ ಎಲ್ಲಾ ದಿನಗಳಲ್ಲಿ ಆತನ ಮುಂದೆ ಪರಿಶುದ್ಧತೆಯಿಂದಲೂ ನೀತಿಯಿಂದಲೂ ಆತನನ್ನು ಸೇವಿಸುವವರಾಗುವದಕ್ಕೆ ಆತನು ಅನುಗ್ರಹಿ ಸುವನು.
76 Yea and thou, child, shalt be called the prophet of the Most High: For thou shalt go before the face of the Lord to make ready his ways;ಇದಲ್ಲದೆ ಮಗುವೇ, ನೀನಾದರೋ ಮಹೋನ್ನತನ ಪ್ರವಾದಿ ಎಂದು ಕರೆಯಲ್ಪಡುವಿ; ಯಾಕಂದರೆ ಕರ್ತನ ಮಾರ್ಗಗಳನ್ನು ಸಿದ್ಧಮಾಡು ವದಕ್ಕೆ ಆತನ ಮುಂದೆ ಹೋಗುವಿ.
77 To give knowledge of salvation unto his people In the remission of their sins,ಹೇಗೆಂದರೆ ಆತನು ತನ್ನ ಜನರಿಗೆ ಪಾಪಗಳ ಪರಿಹಾರದಿಂದ ರಕ್ಷಣೆಯ ತಿಳುವಳಿಕೆಯನ್ನು ಕೊಡುವನು.
78 Because of the tender mercy of our God, Whereby the dayspring from on high shall visit us,ನಮ್ಮ ದೇವರ ಮಮತೆಯ ಕರುಣೆಯಿಂದ ಅದು ಆಗುವದ ಲ್ಲದೆ ಮೇಲಣದಿಂದ ಅರುಣೋದಯವು ಉಂಟಾಗಿ ನಮ್ಮನ್ನು ಸಂಧಿಸಿ
79 To shine upon them that sit in darkness and the shadow of death; To guide our feet into the way of peace.ಕತ್ತಲೆಯಲ್ಲಿಯೂ ಮರಣದ ನೆರಳಿನಲ್ಲಿಯೂ ಕೂತವರಿಗೆ ಬೆಳಕನ್ನು ಕೊಡುವದಕ್ಕೂ ನಮ್ಮ ಪಾದಗಳನ್ನು ಸಮಾಧಾನದ ಮಾರ್ಗದಲ್ಲಿ ನಡಿಸುವದಕ್ಕೂ ಆಗುವದು ಎಂದು ಹೇಳಿದನು.
80 And the child grew, and waxed strong in spirit, and was in the deserts till the day of his showing unto Israel.ಆ ಬಾಲಕನು ಬೆಳೆದು ಆತ್ಮದಲ್ಲಿ ಬಲಗೊಂಡನು. ತನ್ನನ್ನು ಇಸ್ರಾಯೇಲಿಗೆ ತೋರ್ಪಡಿಸಿಕೊಳ್ಳುವ ದಿನದವರೆಗೆ ಅರಣ್ಯದಲ್ಲಿದ್ದನು.
Kannada Bible